• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, May 29, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಣ್‌ಬೀರ್ ರಾಮಾಯಣ 4 ಸಾವಿರ ಕೋಟಿ ಗ್ಯಾಂಬಲಿಂಗ್..?

ಟೀಸರ್‌‌ಗೆ ಟೀಕೆ, ಟಿಪ್ಪಣಿಗಳು.. ರಿಯಾಲಿಟಿಗಿಂತ AI ಅತಿರೇಕ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 3, 2026 - 4:17 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 04 03T161632.664

ಇಲ್ಲಿಯ ತನಕ ಬಹಳ ಗುಟ್ಟಾಗಿದ್ದ ರಾಮಾಯಣ ಚಿತ್ರದ ರಹಸ್ಯ ಟೀಸರ್ ಲಾಂಚ್ ಬಳಿಕ ಕಂಪ್ಲೀಟ್ ಆಗಿ ರಟ್ಟಾಗಿದೆ. ಯೆಸ್.. ರಣ್‌ಬೀರ್-ರಾಕಿಂಗ್ ಸ್ಟಾರ್ ರಾಮಾಯಣ 4 ಸಾವಿರ ಕೋಟಿ ಗ್ಯಾಂಬಲಿಂಗ್ ಎನ್ನಲಾಗ್ತಿದ್ದು, ಟೀಸರ್‌ಗೆ ಟೀಕೆ, ಟಿಪ್ಪಣಿಗಳ ಮಹಾಪೂರವೇ ಹರಿದುಬರ್ತಿದೆ. ನಿಜಕ್ಕೂ ಈ ಸಿನಿಮಾ ಅಷ್ಟು ಬಜೆಟ್‌‌ನ ರಿಕವರ್ ಮಾಡುತ್ತಾ..? ಹಾಗಾದ್ರೆ ಕಲಾವಿದರು ಹಾಗೂ ತಂತ್ರಜ್ಞರ ರೆಮ್ಯುನರೇಷನ್ ಎಷ್ಟು ಕೋಟಿ..? ಸಿನಿ ಪಂಡಿತರ ಲೆಕ್ಕಾಚಾರಗಳು ಹೇಗಿವೆ..? ಅನ್ನೋದ್ರ ಫುಲ್‌ ಡಿಟೇಲ್ಸ್‌ ಇಲ್ಲಿದೆ…

  • ರಣ್‌ಬೀರ್ ರಾಮಾಯಣ 4 ಸಾವಿರ ಕೋಟಿ ಗ್ಯಾಂಬಲಿಂಗ್..?
  • ಟೀಸರ್‌‌ಗೆ ಟೀಕೆ, ಟಿಪ್ಪಣಿಗಳು.. ರಿಯಾಲಿಟಿಗಿಂತ AI ಅತಿರೇಕ
  • ನೈಜತೆ ನಾಪತ್ತೆ.. ಸ್ಟುಡಿಯೋದಲ್ಲಿ 90 ದಿನಕ್ಕೆ ರಾಮಾಯಣ ರೆಡಿ
  • 8 ಆಸ್ಕರ್ ಅವಾರ್ಡ್ ಪಡೆದ VFX ಕಂಪನಿಯಿಂದ ಎಡವಟ್!

ಹನುಮ ಜಯಂತಿ ವಿಶೇಷ ರಿಲೀಸ್ ಆಗಿರೋ ರಾಮಾಯಣ ಚಿತ್ರದ ರಾಮ ಟೀಸರ್‌‌ ಸದ್ಯ ವಿಶ್ವ ಸಿನಿದುನಿಯಾದ ಗಮನ ಸೆಳೆದಿದೆ. ಭಾರತೀಯರಾದ ನಾವುಗಳು ಪ್ರಭಾಸ್ ಆದಿಪುರುಷ್‌‌ಗಿಂತ ಚೆನ್ನಾಗಿದೆ ಅಂತ ಖುಷಿ ಪಡ್ತಿದ್ದೀವಷ್ಟೇ. ಆದ್ರೆ ರಣ್‌‌ಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ನಟನೆಯ ಈ ರಾಮಾಯಣ ಚಿತ್ರಕ್ಕೆ ಎಲ್ಲೆಡೆಯಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಅದಕ್ಕೆ ಕಾರಣಗಳು ಹತ್ತು ಹಲವು. ಅವೆಲ್ಲವನ್ನ ಇಂದಿನ ನಮ್ಮ ಗ್ಯಾರಂಟಿ ಪಿಚ್ಚರ್ ಎಪಿಸೋಡ್‌‌ನಲ್ಲಿ ಡಿಟೈಲ್ಡ್ ಆಗಿ ನಿಮ್ಮ ಮುಂದೆ ಬಿಚ್ಚಿಡುವ ಪ್ರಯತ್ನ ಮಾಡ್ತಿದ್ದೀವಿ.

RelatedPosts

49ರ ಹರೆಯದಲ್ಲೂ 20ರಂತೆ ಕಂಗೊಳಿಸುವ ಮಲ್ಲಿಕಾ ಶೆರಾವತ್: ಫಿಟ್‌ನೆಸ್ ರಹಸ್ಯ ಬಹಿರಂಗ!

ರವಿಚಂದ್ರನ್ ವಿರುದ್ಧ ಅ**ತ್ಯಾಚಾರ ಆರೋಪ..ನಟಿ ಬಿಂದಿಯಾ ಕಣ್ಣೀರು

ಸ್ಯಾಂಡಲ್‌ವುಡ್‌ಗೆ ಅಮಿತಾಬ್ ಬಚ್ಚನ್ ಕುಟುಂಬದ ಕುಡಿ

ವಿಜಯ್ ಸುಖವಾಗಿ CM ಆಗಿಬಿಟ್ಟ: ಪವನ್ ಕಲ್ಯಾಣ್

ADVERTISEMENT
ADVERTISEMENT

ಅಯೋಧ್ಯೆಯ ಶ್ರೀರಾಮ ಬರೀ ವ್ಯಕ್ತಿಯಲ್ಲ. ಅದೊಂದು ಅಭೂತಪೂರ್ವ ಶಕ್ತಿ. ಲಂಕೇಶ್ವರ ರಾವಣನಿಗೆ ಮುಕ್ತಿ ನೀಡಲು ಬರುವ ವಿಷ್ಣುವಿನ ಅಪರಾವತಾರ. ಅಲ್ಲಿ ಸೀತೆ, ವನವಾಸ, ಹನುಮಂತ, ಲಕ್ಷ್ಮಣನಂತಹ ಸಹೋದರ, ಜಟಾಯು, ಪುಷ್ಪಕ ವಿಮಾನ, ಲಂಕೆ, ರಾವಣ.. ಹೀಗೆ ಸಾಕಷ್ಟು ವಿಷಯಗಳು ಬರಲಿವೆ ಇದೆಲ್ಲಾ ಗೊತ್ತಿರುವ ವಿಷಯವೇ ಆದ್ರೂ ಸಹ, ಅದನ್ನ ನೋಡುಗರಿಗೆ ಪ್ರಸ್ತುತ ಪಡಿಸೋ ವಿಧಾನ ಬಹಳ ವಿಭಿನ್ನವಾಗಿರಬೇಕಾಗುತ್ತೆ.

ತಂತ್ರಜ್ಞಾನ ಇಲ್ಲದ ಆ ಕಾಲದಲ್ಲೇ ರಾಮಾಯಣ ಕುರಿತ ಸಿನಿಮಾ ಹಾಗೂ ಸೀರೀಸ್‌‌ಗಳು ಕಣ್ಣಿಗೆ ಕಟ್ಟಿದಂತೆ ಕಟ್ಟಿಕೊಟ್ಟಿದ್ದಾರೆ. ಇದೀಗ ಟೆಕ್ನಾಲಜಿ ಸಾಕಷ್ಟು ಬೆಳೆದಿದ್ದು, ಈಗ ಅದನ್ನ ಮತ್ತಷ್ಟು ಚಂದವಾಗಿಸೋ ಕಾರ್ಯ ಮಾಡಬೇಕಾಗುತ್ತೆ. ಆದ್ರೆ ನಿಜಕ್ಕೂ ರಾಮಾಯಣ ಚಿತ್ರದ ಟೀಸರ್ ವ್ಹಾವ್ ಫೀಲ್ ತರಿಸುತ್ತಿದೆಯೇ..? ನೋ ವೇ.. ಚಾನ್ಸೇ ಇಲ್ಲ. ಇದು ರಾಮಾಯಣ ಟೀಸರ್‌ನ ಟೀಕಿಸ್ತಿರೋರ ಅಭಿಪ್ರಾಯವಾಗಿದೆ.

ಬರೋಬ್ಬರಿ 4 ಸಾವಿರ ಕೋಟಿ ಬಿಗ್ ಬಜೆಟ್‌‌ನಲ್ಲಿ ತಯಾರಾಗ್ತಿರೋ ರಾಮಾಯಣ ಚಿತ್ರದ ಕ್ವಾಲಿಟಿ, ಔಟ್‌ಪುಟ್ ನೋಡಿ ಒಂದಷ್ಟು ಮಂದಿ ಬೇಸರಗೊಂಡಿದ್ದಾರೆ. ಯಾಕಂದ್ರೆ ನಾಲ್ಕು ಸಾವಿರ ಕೋಟಿ ಬಜೆಟ್‌‌ನ ಸಿನಿಮಾದ ದೃಶ್ಯಗಳು ತುಂಬಾ ನೈಜ, ಸಹಜ ಹಾಗೂ ಸ್ವಾಭಾವಿಕವಾಗಿ ಕಾಣಬೇಕು. ಆದರೆ ಇಲ್ಲಿ ನೈಜತೆ ನಾಪತ್ತೆಯಾಗಿದೆ. ಅತಿರೇಕದ AIನಿಂದಾಗಿ ಆ ಒರಿಜಿನಲ್ ಫ್ಲೇವರ್ ಕಾಣ್ತಿಲ್ಲ ಅನ್ನೋದು ಸ್ಪಷ್ಟ.

ಹೌದು.. ಬರೋಬ್ಬರಿ 8 ಆಸ್ಕರ್ ಅಕಾಡೆಮಿ ಅವಾರ್ಡ್‌‌ಗಳನ್ನ ಮುಡಿಗೇರಿಸಿಕೊಂಡಿರೋ DNEG ವಿಎಫ್‌ಎಕ್ಸ್ ಕಂಪನಿಯಿಂದ ರಾಮಾಯಣ ಚಿತ್ರ ತಯಾರಾಗ್ತಿದೆ. ಆದ್ರೆ ಇಲ್ಲಿ ರಿಯಾಲಿಟಿಗಿಂತ ಟೆಕ್ನಾಲಜಿಯೇ ಹೆಚ್ಚಾಗಿ ಕಾಣಿಸ್ತಿದೆ. ನೈಜವಾದ ಲೊಕೇಷನ್ಸ್‌ಗೆ ಹೋಗಿ ಚಿತ್ರೀಕರಿಸೋ ಬದಲಿಗೆ 90 ದಿನಗಳಲ್ಲಿ ಸ್ಟುಡಿಯೋಗಳಲ್ಲೇ ಗ್ರೀನ್‌ಮ್ಯಾಟ್‌‌ನಲ್ಲಿ ಚಿತ್ರಿಸಿಬಿಟ್ಟಿದ್ದಾರೆ ಎನ್ನಲಾಗ್ತಿದೆ. ಆದಿಪುರುಷ್‌‌ಗಿಂತ ಗ್ರಾಫಿಕ್ಸ್, ವಿಎಫ್‌ಎಕ್ಸ್ ಹಾಗೂ ವಿಶ್ಯುವಲ್ ಟ್ರೀಟ್ ಚೆನ್ನಾಗಿದೆ. ಆದ್ರೆ ಇನ್ ಡಿಟೈಲ್ಡ್ ನೋಡಿದಾಗ ಅಲ್ಲಿ ಸಾಕಷ್ಟು ಮಿಸ್ಟೇಕ್ಸ್ ಎದ್ದು ಕಾಣ್ತಿವೆ. ಅರೇ ಇದು 8 ಆಸ್ಕರ್ ಅವಾರ್ಡ್ ಪಡೆದಂತಹ ಸಂಸ್ಥೆ ಮಾಡಿದ ವಿಎಫ್‌‌ಎಕ್ಸ್‌ ರೀತಿ ಇಲ್ಲವಲ್ಲ ಅನಿಸ್ತಿದೆ.

ಶ್ರೀರಾಮ ಮುಂದಕ್ಕೆ ಹೋದ ಬಳಿಕ ಹುಡುಗನೊಬ್ಬ ಕ್ಯಾಮೆರಾ ಕಡೆ ಮುಖ ಮಾಡಿ ಕೈ ಮುಗಿಯೋ ದೃಶ್ಯ ಆಡಿಕೊಳ್ಳೋರ ಬಾಯಿಗೆ ಆಹಾರವಾಗಿದೆ. ಕತ್ತಲ ಶಾಟ್ಸ್ ಬೇಕಿರಲಿಲ್ಲ ಅನ್ನೋದು ಹಲವರ ವಾದ. ಅಷ್ಟೇ ಯಾಕೆ..? ಇದು ಹಂಡ್ರೆಡ್ ಪರ್ಸೆಂಟ್ ಎಐ ಟೀಸರ್‌‌ನಂತಿದೆ ಅಂತಿದ್ದಾರೆ.

ಇಷ್ಟಕ್ಕೂ 4 ಸಾವಿರ ಕೋಟಿ ಬಜೆಟ್ ಈ ಸಿನಿಮಾಗೆ ನಿಜಕ್ಕೂ ಅವಶ್ಯಕತೆ ಇದೆಯಾ..? ಅಷ್ಟು ಹಾಕಿದ್ರೆ ಅದನ್ನ ವಾಪಸ್ ಪಡೆಯೋದು ಸುಲಭನಾ ಅನ್ನೋ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಸದ್ಯ ಕಲಾವಿದರು ಹಾಗೂ ತಂತ್ರಜ್ಞರಿಗೆ ಟೀಂ ನೀಡ್ತಿರೋ ರೆಮ್ಯುನರೇಷನ್ ಎಷ್ಟು..? ಗ್ಲೋಬಲ್ ಮಾರ್ಕೆಟಿಂಗ್‌ಗೆ ಖರ್ಚಾಗುವ ಅಂದಾಜು ವೆಚ್ಚ ಎಷ್ಟು ಅನ್ನೋದನ್ನ ಗ್ರಾಫಿಕಲ್ ಪ್ರೆಸೆಂಟೇಷನ್‌‌ ಮೂಲಕ ತೋರಿಸ್ತೀವಿ ನೋಡಿ.

ಗ್ಯಾರಂಟಿಯಲ್ಲಿ  ರಾಮಾಯಣ ಟೀಂ ರೆಮ್ಯುನರೇಷನ್

ಹೆಸರು                                                              ಸಂಭಾವನೆ

ರಣ್‌ಬೀರ್ ಕಪೂರ್                                          150 ಕೋಟಿ

ಯಶ್                                                               150 ಕೋಟಿ

ಸನ್ನಿ ಡಿಯೋಲ್                                              50 ಕೋಟಿ

ಸಾಯಿ ಪಲ್ಲವಿ                                                  12 ಕೋಟಿ 

ಹನ್ಸ್ ಝಿಮ್ಮರ್                                                80 ಕೋಟಿ

ಎ ಆರ್ ರೆಹಮಾನ್                                          50 ಕೋಟಿ

ನೋಡಿದ್ರಲ್ಲಾ ರಾಮಾಯಣ ಚಿತ್ರದ ಬಿಗ್ಗೆಸ್ಟ್ ಸ್ಟಾರ್ಸ್ ಅಂದ್ರೆ ಇವರುಗಳೇ.. ಇವರೆಲ್ಲರ ರೆಮ್ಯುನರೇಷನ್ ಅಂದ್ರೂ ಜಸ್ಟ್ 500 ಕೋಟಿ. ಗ್ಲೋಬಲ್ ಲೆವೆಲ್‌‌ನಲ್ಲಿ ಪುಶ್ ಮಾಡೋಕೆ ಇಂಡಿಯಾದಲ್ಲಿ ಮಾರ್ಕೆಟಿಂಗ್ ಮಾಡಲು 250 ಕೋಟಿ ಬಜೆಟ್. ವಿದೇಶಗಳಲ್ಲಿ ಕ್ಯಾಂಪೇನ್‌‌ಗಳನ್ನ ಮಾಡಲು 550 ಕೋಟಿ ಬೇಕಾಗುತ್ತೆ. ಯಾಕಂದ್ರೆ ರಾಮಾಯಣ ಸಿನಿಮಾ ಇಂಡಿಯನ್ ಲಾಂಗ್ವೇಜಸ್ ಬಿಟ್ಟು ವಿಶ್ವದಾದ್ಯಂತ ಸುಮಾರು 30 ರಿಂದ 50 ಭಾಷೆಗಳಿಗೆ ಎಐ ಡಬ್ಬಿಂಗ್ ಮಾಡಲಾಗ್ತಿದೆ.

  • ವಾಲ್ಮೀಕಿ ರಾಮಾಯಣಕ್ಕೆ ನಮಿತ್ ಮಲ್ಹೋತ್ರಾ ಹೆಸರೇಕೆ..?
  • ನಿತೇಶ್ ತಿವಾರಿ ಇಂತಹ ಬಿಗ್ ಸ್ಕೇಲ್ ಮೂವಿ ಮಾಡಿಲ್ಲ..!!

ಆಮೀರ್ ಖಾನ್‌ ನಟನೆಯ ದಂಗಲ್ ಚಿತ್ರದ ಡೈರೆಕ್ಟರ್ ನಿತೇಶ್ ತಿವಾರಿ ಈ ರಾಮಾಯಣಕ್ಕೆ ದೃಶ್ಯರೂಪ ಕೊಡ್ತಿದ್ದಾರೆ. ಆದ್ರೆ ನಿತೇಶ್ ಹಿಂದೆಂದೂ ಇಷ್ಟೊಂದು ಬಿಗ್ ಸ್ಕೇಲ್ ಮೂವಿಯನ್ನ ಹ್ಯಾಂಡಲ್ ಮಾಡಿ ಅಭ್ಯಾಸವಿಲ್ಲ. ಹಾಗಾಗಿಯೇ ಟೀಸರ್‌ನಲ್ಲಿ ಪಕ್ವತೆಯಿಲ್ಲ ಅನ್ನೋ ಮಾತುಗಳು ಕೇಳಿಬರ್ತಿವೆ.

ಅಲ್ಲದೆ, ನಮಿತ್  ಮಲ್ಹೋತ್ರಾ ಈ ಸಿನಿಮಾನ ನಿರ್ಮಾಣ ಮಾಡ್ತಿದ್ದಾರೆ ಓಕೆ. ಆದ್ರೆ ವಾಲ್ಮೀಕಿ ರಾಮಾಯಣಕ್ಕೆ ನಮಿತ್ ಮಲ್ಹೋತ್ರಾ ರಾಮಾಯಣ ಅಂತ ಟೈಟಲ್ ಕೊಟ್ಟಿರೋದೇ ಅಚ್ಚರಿ. ಅಬ್ಬಬ್ಬಾ.. ಈ ನಮಿತ್ ಮಲ್ಹೋತ್ರಾ ಯಾವಾಗ ರಾಮಾಯಣ ಬರೆದ್ರು ಅಂತ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಅಂದಹಾಗೆ ನಮಿತ್ ಸದ್ಯ DNEG ವಿಎಫ್‌‌ಎಕ್ಸ್ ಕಂಪನಿಯ ಮಾಲೀಕರೂ ಹೌದು. ವಿಎಫ್‌‌ಎಕ್ಸ್ ಜೀನಿಯಸ್, ಮಾಸ್ಟರ್‌ಮೈಂಡ್ ಅಂತೆಲ್ಲಾ ಕರೆಸಿಕೊಳ್ಳೋ ನಮಿತ್, ಹೀಗೆ ತಪ್ಪು ಹೆಜ್ಜೆ ಇಟ್ಟಿದ್ದಾದ್ರೂ ಹೇಗೆ ಅನಿಸ್ತಿದೆ. ಇನ್‌ಸೆಪ್ಷನ್, ಡ್ಯೂನ್ ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವ ಇರೋ ವಿಎಫ್‌ಎಕ್ಸ್ ಕಂಪಬಿ ರಾಮಾಯಣಕ್ಕೆ ಹೀಗ್ಯಾಕೆ ಮಾಡ್ತು ಅನ್ನೋ ಅಪವಾದ ಹೊತ್ತುಕೊಳ್ಳುವಂತಾಗಿದೆ.

ಒಟ್ಟಾರೆ ಈ ದೀಪಾವಳಿಗೆ ಮೊದಲ ಭಾಗ, 2027ರ ದೀಪಾವಳಿಗೆ 2ನೇ ಭಾಗವನ್ನ ಬೆಳ್ಳಿಪರದೆಗೆ ತರುವ ಯೋಜನೆಯಲ್ಲಿರೋ ರಾಮಾಯಣ ಟೀಂ, ಎಚ್ಚೆತ್ತುಕೊಳ್ಳಬೇಕಿದೆ. ತಾಂತ್ರಿಕ ದೋಷಗಳನ್ನ ಸರಿಪಡಿಸಿಕೊಂಡೇ ಪ್ರೇಕ್ಷಕರ ಮುಂದೆ ಬರಬೇಕಿದೆ. ಇಲ್ಲವಾದಲ್ಲಿ ರಿಲೀಸ್ ಬಳಿಕ ಸಿನಿಮಾಗೂ ಇದೇ ಬಗೆಯ ಟೀಕೆ, ಟಿಪ್ಪಣಿಗಳ ರಿವ್ಯೂಗಳು ಬರೋದ್ರಲ್ಲಿ ಯಾವುದೇ ಸಂದೇಹವಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 05 28T231948.397

30 ಕೋಟಿಗೆ ಹರಾಜಾಗ್ತಾರೆ ವೈಭವ್ ಸೂರ್ಯವಂಶಿ! ಸೆಹ್ವಾಗ್ ಭವಿಷ್ಯ

by ಶ್ರೀದೇವಿ ಬಿ. ವೈ
May 28, 2026 - 11:29 pm
0

BeFunky collage 2026 05 28T225823.500

ಹಾಸನದಲ್ಲಿ ಮನಕಲಕುವ ಘಟನೆ: ಬಕ್ರೀದ್ ದಿನವೇ ಪತ್ನಿಯನ್ನು ಕೊಂದ ಪಾಪಿ ಪತಿ!

by ಶ್ರೀದೇವಿ ಬಿ. ವೈ
May 28, 2026 - 10:59 pm
0

BeFunky collage 2026 05 28T223105.372

ಮಹಿಳೆಯರಲ್ಲಿ ಹಾರ್ಮೋನ್ ಅಸಮತೋಲನ ಆಗೋದು ಏಕೆ? ಕಾರಣಗಳು ಮತ್ತು ಪರಿಹಾರಗಳು

by ಶ್ರೀದೇವಿ ಬಿ. ವೈ
May 28, 2026 - 10:31 pm
0

BeFunky collage 2026 05 28T220233.004

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಅಭಿಮಾನಿಗಳ ಬೇಸರ

by Hemanth Kumar S
May 28, 2026 - 10:03 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 05 28T214624.180
    49ರ ಹರೆಯದಲ್ಲೂ 20ರಂತೆ ಕಂಗೊಳಿಸುವ ಮಲ್ಲಿಕಾ ಶೆರಾವತ್: ಫಿಟ್‌ನೆಸ್ ರಹಸ್ಯ ಬಹಿರಂಗ!
    May 28, 2026 | 0
  • Untitled design 2026 05 28T143843.580
    ರವಿಚಂದ್ರನ್ ವಿರುದ್ಧ ಅ**ತ್ಯಾಚಾರ ಆರೋಪ..ನಟಿ ಬಿಂದಿಯಾ ಕಣ್ಣೀರು
    May 28, 2026 | 0
  • BeFunky collage 2026 05 27T174339.383
    ಸ್ಯಾಂಡಲ್‌ವುಡ್‌ಗೆ ಅಮಿತಾಬ್ ಬಚ್ಚನ್ ಕುಟುಂಬದ ಕುಡಿ
    May 27, 2026 | 0
  • BeFunky collage 2026 05 27T173313.497
    ವಿಜಯ್ ಸುಖವಾಗಿ CM ಆಗಿಬಿಟ್ಟ: ಪವನ್ ಕಲ್ಯಾಣ್
    May 27, 2026 | 0
  • BeFunky collage 2026 05 27T171331.763
    ‘ಹಲ್ಕಾ ಡಾನ್‌’ ಅಡ್ಡಾಗೆ ಜಾನ್ ವಿಜಯ್ ಖಡಕ್ ಎಂಟ್ರಿ
    May 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version