ಕಿರುತೆರೆ ಲೋಕ ಝೀ ಕನ್ನಡದ ರಿಯಾಲಿಟಿ ಶೋಗೆ ಗುಡ್ ಬೈ ಹೇಳುವ ಮೂಲಕ ಶಾಕ್ ನೀಡಿದ್ರು ಸ್ಯಾಂಡಲ್‌ವುಡ್‌ನ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್. ಆದ್ರೀಗ ಹೊಚ್ಚ ಹೊಸ ಪ್ರೊಡಕ್ಷನ್ ಬ್ಯಾನರ್ ಆರಂಭಿಸುವ ಮೂಲಕ ಯಂಗ್ ನ್ಯೂ ಟ್ಯಾಲೆಂಟ್ಸ್‌ಗೆ ವೇದಿಕೆ ಆಗ್ತಿದ್ದಾರೆ. ಪತಿ ಜೋಗಿ ಪ್ರೇಮ್ ಜೊತೆಗೂಡಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅದೇನು, ಎತ್ತ ಅನ್ನೋದಕ್ಕೆ ಉತ್ತರ ಇಲ್ಲಿದೆ.
- ಕ್ರೇಜಿ ಕ್ವೀನ್ ರಕ್ಷಿತಾ ಹೊಸ ಅಧ್ಯಾಯ.. ಫಿನಿಕ್ಸ್ ಪ್ರೇಮ್ಸ್ ಶುರು
- ಝೀ ಕನ್ನಡಕ್ಕೆ ಗುಡ್ ಬೈ ಹೇಳಿ.. ನ್ಯೂ ಸ್ಟಾರ್ಟಪ್ ಶುಭಾರಂಭ
- ನ್ಯೂ ಟ್ಯಾಲೆಂಟ್ಸ್‌ಗೆ ವೇದಿಕೆ ‘ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್’
- ರಕ್ಷಿತಾಗೆ ಜೋಗಿ ಪ್ರೇಮ್ ಸಾಥ್.. ಬರ್ತ್ ಡೇಗೆ ಸರ್‌ಪ್ರೈಸ್
ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಚಿತ್ರರಂಗದಲ್ಲಿ ಈಗ ಹೊಸ ಅಧ್ಯಾಯವೊಂದನ್ನು ಆರಂಭಿಸಿದ್ದಾರೆ. ಶ್ರೀರಾಮನವಮಿ ಹಬ್ಬದ ಸುದಿನದಂದು ತಮ್ಮ ಕನಸಿನ ಹೊಸ ನಿರ್ಮಾಣ ಸಂಸ್ಥೆ ‘ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್’ನ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ. ಅಂದಹಾಗೆ ಇದು ಹೊಸ ಪ್ರತಿಭೆಗಳಿಗೆ ಒಂದೊಳ್ಳೆ ವೇದಿಕೆ. ಹೌದು.. ಕೇವಲ ದೊಡ್ಡ ಸಿನಿಮಾಗಳನ್ನು ಮಾಡುವುದಷ್ಟೇ ಅಲ್ಲದೆ, ಹೊಸ ಆಲೋಚನೆ ಮತ್ತು ಅದ್ಭುತ ಪ್ರತಿಭೆ ಹೊಂದಿರೋ ಯುವಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಬ್ಯಾನರ್ ಪ್ರಾರಂಭಿಸಲಾಗಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಲು ಪ್ರೇಮ್-ರಕ್ಷಿತಾ ದಂಪತಿ ಮುಂದಾಗಿದ್ದಾರೆ.
ಶಿಷ್ಯನ ಚಿತ್ರಕ್ಕೆ ಗುರುಗಳೇ ಹಾಕ್ತಿದ್ದಾರೆ ಬಂಡವಾಳ. ಈ ನೂತನ ಬ್ಯಾನರ್‌ನ ಮೊದಲ ಚಿತ್ರವನ್ನು ಪ್ರೇಮ್ ಅವರ ಗರಡಿಯಲ್ಲಿ ಪಳಗಿದ ಶಿಷ್ಯ ಮಂಜುನಾಥ್ ಬಿ.ಎಸ್. ನಿರ್ದೇಶಿಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಪ್ರೇಮ್ ಜೊತೆ ಸಹ-ನಿರ್ದೇಶಕರಾಗಿ ಹಾಗೂ ಚಿತ್ರಸಾಹಿತಿಯಾಗಿ ಗುರುತಿಸಿಕೊಂಡಿರೋ ಮಂಜುನಾಥ್‌ಗೆ ಇದು ಚೊಚ್ಚಲ ನಿರ್ದೇಶನದ ಚಿತ್ರವಾಗಲಿದೆ.
’ಏಕ್ ಲವ್ ಯಾ’ ಖ್ಯಾತಿಯ ಯುವ ನಟ ರಾಣಾ ಈ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿರೋದು ಇಂಟರೆಸ್ಟಿಂಗ್. ಹೌದು.. ರಕ್ಷಿತಾರ ಸಹೋದರ ರಾಣಾರನ್ನ ಖುದ್ದು ಪ್ರೇಮ್ ಅವರೇ ಇಂಟ್ರಡ್ಯೂಸ್ ಮಾಡಿದ್ರು. ಆ ನಂತ್ರ ರಾಣಾ ಏಳಮಲೆ ಚಿತ್ರದ ಮೂಲಕ ಒಳ್ಳೆಯ ಮಾರ್ಕ್ಸ್ ಸ್ಕೋರ್ ಮಾಡಿದ್ರು. ಇದೀಗ ಒನ್ಸ್ ಅಗೈನ್ ಅಕ್ಕ, ಬಾವನ ಜೊತೆ ಕೈ ಜೋಡಿಸ್ತಿದ್ದಾರೆ ರಾಣಾ.
ಸ್ಟಾರ್ ಸಿನಿಮಾಟೋಗ್ರಾಫರ್ ವಿಲಿಯಂ ಡೇವಿಡ್ ಕ್ಯಾಮರಾ ಕಣ್ಣಲ್ಲಿ ಈ ಚಿತ್ರ ಮೂಡಿಬರಲಿದೆ. ಯಂಗ್ ಟ್ಯಾಲೆಂಟ್ ರೋಮಿಯೋ ಸಿನಿಮಾಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಶ್ರೀರಾಮನವಮಿ ಪ್ರಯುಕ್ತ ವಿಶೇಷ ವಿಡಿಯೋ ಬಿಡುಗಡೆ ಮಾಡುವ ಮೂಲಕ ಈ ಹೊಸ ಸಾಹಸದ ಬಗ್ಗೆ ಪ್ರೇಮ್ ಹಾಗೂ ಸ್ಯಾಂಡಲ್‌ವುಡ್‌ನ ಕ್ರೇಜಿ ಕ್ವೀನ್ ರಕ್ಷಿತಾ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದ ಶೀರ್ಷಿಕೆ ಹಾಗೂ ಹೆಚ್ಚಿನ ತಾಂತ್ರಿಕ ವರ್ಗದ ವಿವರಗಳನ್ನು ಚಿತ್ರತಂಡ ಶೀಘ್ರದಲ್ಲೇ ಪ್ರಕಟಿಸಲಿದೆ.
ಝೀ ಕನ್ನಡದ ಖಾಯಂ ಅತಿಥಿಯಾಗಿದ್ದ ರಕ್ಷಿತಾ ಪ್ರೇಮ್, ಅದ್ಯಾಕೋ ಸಡನ್ ಆಗಿ ಝೀ ಕುಟುಂಬದಿಂದ ಹೊರಬಂದಿದ್ರು. ಸದ್ಯದಲ್ಲೇ ನನ್ನ ಮುಂದಿನ ನಡೆ ಅನೌನ್ಸ್ ಮಾಡ್ತೀನಿ ಅಂದಿದ್ರು. ಅದ್ರಂತೆ ಪ್ರೊಡಕ್ಷನ್ ಹೌಸ್ ಅನೌನ್ಸ್ ಮಾಡಿದ್ದಾರೆ. ಅದರಡಿ ತಯಾರಾಗ್ತಿರೋ ಈ ಚೊಚ್ಚಲ ಸಿನಿಮಾದ ಟೈಟಲ್‌ನ ರಕ್ಷಿತಾ ಪ್ರೇಮ್ ಬರ್ತ್ ಡೇ ವಿಶೇಷ ಇದೇ ಮಾರ್ಚ್ 31ಕ್ಕೆ ಅಫಿಶಿಯಲಿ ಘೋಷಿಸಲಿದ್ದಾರೆ ರಕ್ಷಿತಾ ದಂಪತಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





