• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, June 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ಧುರಂಧರ್ ದಿ ರಿವೆಂಜ್.. ಎಷ್ಟು ರಿಯಲ್..? ಎಷ್ಟು ರೀಲ್..?

ಮೋದಿ, ದಾವೂದ್ ಇಬ್ರಾಹಿಂ ಪಾತ್ರಗಳೇ ಸಖತ್ ಸೆನ್ಸೇಷನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 21, 2026 - 8:45 pm
in ಬಾಲಿವುಡ್, ಸಿನಿಮಾ, ಸಿನಿಮಾ ವಿಮರ್ಶೆ
0 0
0
Untitled design 2026 03 21T203232.011

ಧುರಂಧರ್.. ದಿ ಕಾಶ್ಮೀರ್ ಫೈಲ್ಸ್, ದಿ ಕೇರಳ ಸ್ಟೋರಿ ಚಿತ್ರಗಳ ಬಳಿಕ ಸಿಕ್ಕಾಪಟ್ಟೆ ಸಂಚಲನ ಮೂಡಿಸಿರೋ ಇಂಡಿಯನ್ ಮೂವಿ. ಸಾಕಷ್ಟು ಮಂದಿ ಇದೊಂದು ಮಾಸ್ಟರ್‌ಪೀಸ್, ಮಾಸ್ಟರ್‌ಕ್ಲಾಸ್ ಚಿತ್ರ ಅಂತಿದ್ರೆ, ಒಂದಷ್ಟು ಮಂದಿ ಇದು ಹಂಡ್ರೆಡ್ ಪರ್ಸೆಂಟ್ ಪ್ರೊಪಗಾಂಡ ಮೂವಿ ಅಂತಿದ್ದಾರೆ. ಟೀಕೆ ಟೀಪ್ಪಣಿಗಳ ನಡುವೆ ಬಾಕ್ಸ್‌ ಆಫೀಸ್‌‌ನಲ್ಲಿ ಸುನಾಮಿ ಸುಂಟರಗಾಳಿ ಎಬ್ಬಿಸಿದೆ ಧುರಂಧರ್ ಸೀಕ್ವೆಲ್. ಹಾಗಾದ್ರೆ ದಾವೂದ್ ಡಿ ಕಂಪನಿ, ಪ್ರಧಾನಿ ಮೋದಿ, ಅಜಿತ್ ದೋವಲ್‌ಗೂ ಈ ಸಿನಿಮಾಗೂ ಏನು ಲಿಂಕ್ ಅಂತೀರಾ..? ಈ ಡಿಟೈಲ್ಡ್ ರಿಪೋರ್ಟ್ ಒಮ್ಮೆ ನೋಡಿ.

RelatedPosts

ಗೆಳೆಯ ವೈಶಾಕ್‌ ಅಂತ್ಯಕ್ರಿಯೆ: ಗೆಳೆಯನನ್ನು ನೋಡಲಾಗದೇ ಅಳುತ್ತಲೇ ಹೋದ ಕೃಷಿ ತಾಪಂಡ

ಆಗಸ್ಟ್ 26ಕ್ಕೆ ರೀ-ಡಿಫೈನ್ ಆಗಲಿದೆ ಭಾರತೀಯ ಚಿತ್ರರಂಗ!

ತವರಿಗೆ ತಿರುಗಿ ಬಂದ ಕನ್ನಡತಿ ನಭಾ ನಟೇಶ್!

ಸ್ಯಾಂಡಲ್​ವುಡ್ ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಕ್ ಆತ್ಮಹತ್ಯೆ

ADVERTISEMENT
ADVERTISEMENT

ಧುರಂಧರ್ ದಿ ರಿವೆಂಜ್.. ಎಷ್ಟು ರಿಯಲ್..? ಎಷ್ಟು ರೀಲ್..?

ಮೋದಿ, ದಾವೂದ್ ಇಬ್ರಾಹಿಂ ಪಾತ್ರಗಳೇ ಸಖತ್ ಸೆನ್ಸೇಷನ್

ರಣ್ವೀರ್ ಸಿಂಗ್ ನಟನೆಯ ಹಾಗೂ ಆದಿತ್ಯ ಧರ್ ನಿರ್ದೇಶನದ ಬ್ಲಾಕ್ ಬಸ್ಟರ್ ಹಿಟ್ ಧುರಂಧರ್ ಚಿತ್ರದ ಸೀಕ್ವೆಲ್ ಧುರಂಧರ್ ದಿ ರಿವೆಂಜ್ ಕೂಡ ಪ್ರೇಕ್ಷಕರಿಗೆ ನಿರೀಕ್ಷೆಗೂ ಮೀರಿ ರುಚಿಸುತ್ತಿದೆ. ರಿಲೀಸ್‌ಗೂ ಮುನ್ನ ಪೇಯ್ಡ್ ಪ್ರೀಮಿಯರ್ ಶೋಗಳಿಂದಲೇ 52 ಕೋಟಿ ಗಳಿಸಿ, ಎಲ್ಲರ ಹುಬ್ಬೇರಿಸಿತ್ತು ಧುರಂಧರ್-2. ಇದೀಗ ಮೊದಲ ದಿನ ಬರೋಬ್ಬರಿ 240 ಕೋಟಿ ರೂಪಾಯಿ ಕಲೆಕ್ಷನ್ ಮಾಡೋ ಮೂಲಕ ಭಾರತೀಯ ಚಿತ್ರರಂಗದ ಒಂದಷ್ಟು ದಾಖಲೆಗಳನ್ನ ಸರಿಗಟ್ಟಿದೆ.

ಅಂದಹಾಗೆ ಧುರಂಧರ್ ದಿ ರಿವೆಂಜ್ ಚಿತ್ರ ಕಣ್ತುಂಬಿಕೊಂಡಂತಹ ಬಹುತೇಕ ಮಂದಿ, 113 ವರ್ಷಗಳ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದೊಂದು ಮಾಸ್ಟರ್‌ಪೀಸ್ ಹಾಗೂ ಮಾಸ್ಟರ್‌ಕ್ಲಾಸ್ ಮೂವಿ ಅಂತ ಬಹುಪರಾಕ್ ಹೇಳ್ತಿದ್ದಾರೆ. ಸಾಮಾನ್ಯ ಪ್ರೇಕ್ಷಕಪ್ರಭುಗಳಷ್ಟೇ ಅಲ್ಲ, ಜೂನಿಯರ್‌ ಎನ್‌ಟಿಆರ್, ಅಲ್ಲು ಅರ್ಜುನ್, ಮಹೇಶ್ ಬಾಬು, ವಿಜಯ್ ದೇವರಕೊಂಡ, ರಾಮ್ ಗೋಪಾಲ್ ವರ್ಮಾ, ಎಸ್ ಎಸ್ ರಾಜಮೌಳಿ ಅಂತಹ ಸ್ಟಾರ್‌ಗಳೇ ಈ ಸಿನಿಮಾನ ಕೊಂಡಾಡಿ, ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಪ್ರಶಂಸೆ ವ್ಯಕ್ತಪಡಿಸಿ ಪೋಸ್ಟ್‌‌ ಹಾಕಿದ್ದಾರೆ.

ಅಜಿತ್ ದೋವಲ್, ಸ್ಪೈ ಏಜೆಂಟ್ ಜಸ್ಕಿರತ್ ಕಾಲ್ಪನಿಕವೇ..?!

ನಿಜಕ್ಕೂ ಇದು ಪ್ರೊಪಗಾಂಡ ಮೂವಿನಾ..? ಟೀಕೆಗಳು ಏಕೆ..?!

ಪ್ರಧಾನಿ ನರೇಂದ್ರ ಮೋದಿ ಹಾಗೂ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಕಮ್ ಡ್ರಗ್ ಡೀಲರ್ ದಾವೂದ್ ಇಬ್ರಾಹಿಂ ಪಾತ್ರಗಳೇ ಧುರಂಧರ್ ದಿ ರಿವೆಂಜ್‌‌ನ ಬಿಗ್ಗೆಸ್ಟ್ ಸೆನ್ಸೇಷನ್. ಇಂಡಿಯಾದ ರಕ್ಷಾ ಕವಚ, ಬಹುದೊಡ್ಡ ಸ್ಪೈ ಮಾಸ್ಟರ್ ಅಜಿತ್ ದೋವಲ್ ಹಾಗೂ ಸ್ಪೈ ಏಜೆಂಟ್ ಹಮ್ಜಾ ಕಮ್ ಜಸ್ಕಿರತ್ ಸಿಂಗ್ ಈ ಚಿತ್ರದ ಅಸಲಿ ಮಾಸ್ಟರ್‌ಮೈಂಡ್ಸ್. ಆದ್ರೆ ಈ ಸಿನಿಮಾ ಬರೀ ಕಾಲ್ಪನಿಕವಾ ಅಥ್ವಾ ನೈಜ ಘಟನೆ ಆಧಾರಿತ ಅಂಶಗಳಿಂದ ಕೂಡಿರೋ ಸತ್ಯ ದರ್ಶನವಾ ಅನ್ನೋ ಪ್ರಶ್ನೆ ಮೂಡಲಿದೆ.

ಎಲ್ಲಕ್ಕಿಂತ ಮಿಗಿಲಾಗಿ ಇದೊಂದು ಬಿಜೆಪಿ ಪ್ರೊಪಗಾಂಡ ಮೂವಿ ಅನ್ನೋದು ಹಲವರ ವಾದವಾಗಿದೆ. ಅದಕ್ಕೆ ಪೂರಕವಾಗಿ ಸಾಕಷ್ಟು ಟೀಕೆ, ಟಿಪ್ಪಣಿಗಳು ವ್ಯಕ್ತವಾಗ್ತಿವೆ. ಎಡಪಂಥೀಯ ಧೋರಣೆಗಳನ್ನ ಬೆಂಬಲಿಸೋ ಮಂದಿ ಹಾಗೂ ಕಾಂಗ್ರೆಸ್ ಪಕ್ಷದವರು ಇದನ್ನ ಪಕ್ಕಾ ಪ್ರೊಪಗಾಂಡ ಮೂವಿ ಅಂತ ಲೇಬಲ್ ಮಾಡಿ, ನೆಗೆಟೀವ್ ಕ್ಯಾಂಪೇನ್ ಶುರು ಮಾಡಿದ್ದಾರೆ. ಅದಕ್ಕೆ ನಮ್ಮ ಮಂಡ್ಯದ ಮಾಜಿ ಸಂಸದೆ ಕಮ್ ಮೋಹಕತಾರೆ ರಮ್ಯಾ ಹಾಗೂ ಬಹುಭಾಷಾ ನಟ ಪ್ರಕಾಶ್ ರೈ ಅವ್ರ ಅಭಿಪ್ರಾಯಗಳೇ ಪ್ರತ್ಯಕ್ಷ ಸಾಕ್ಷಿ.

ಧುರಂಧರ್-2 ಪ್ರೊಪಗಾಂಡ ಮೂವಿ ಎಂದ ನಟಿ ರಮ್ಯಾ

ಹಣ, ಸಮಯ ವೇಸ್ಟ್ ಮಾಡ್ಬೇಡಿ ಎಂದ ಮಾಜಿ ಸಂಸದೆ

ಮೋಹಕತಾರೆ, ಮಾಜಿ ಸಂಸದೆ ರಮ್ಯಾ ಈ ಬಗ್ಗೆ ನೆಗೆಟಿವ್ ಆಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೊಂದು ಪ್ರೊಪಗಾಂಡ ಮೂವಿ ಎಂದಿರೋ ರಮ್ಯಾ, ಗನ್, ಬಾಂಬ್ ವಯಲೆನ್ಸ್ ಬಿಟ್ಟು ಬೇರೇನೂ ಇಲ್ಲ. ಥಿಯೇಟರ್‌ನಲ್ಲಿ ಜನ ಶಿಳ್ಳೆ, ಚಪ್ಪಾಳೆ ಹೊಡೆಯುತ್ತಿಲ್ಲ. ಸಿಕ್ಕಾಪಟ್ಟೆ ಬೋರ್ ಆಗುತ್ತೆ. ಬೋರಿಂಗ್ ಟೆಕ್ಸ್ಟ್‌ ಬುಕ್‌‌ನ ನೆವರ್ ಎಂಡಿಂಗ್ ಚಾಪ್ಟರ್‌ ಓದಿದಂತಿದೆ ಧುರಂಧರ್ 2. ನಿಮ್ಮ ಸಮಯ ಹಾಗೂ ಹಣವನ್ನು ವ್ಯರ್ಥ ಮಾಡಿಕೊಳ್ಳಬೇಡಿ ಎಂದಿದ್ದಾರೆ.

‘ನಾ ಧುರಂಧರ್‌ನಿಂದ ದೂರ.. ನೀವು?’ ಎಂದ ಪ್ರಕಾಶ್ ರೈ

NTR, ಅಲ್ಲು, ಮಹೇಶ್, ವಿಜಯ್, ಮೌಳಿ ಕಾಲೆಳೆದ ನಟ

ಬಹುಭಾಷಾ ನಟ ಪ್ರಕಾಶ್ ರೈ ಕೂಡ ಈ ಧುರಂಧರ್ ಸಿನಿಮಾದ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ನಾನು ಧುರಂಧರ್‌ನಿಂದ ದೂರ. ನೀವು..? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಧುರಂಧರ್ ದಿ ರಿವೆಂಜ್ ಪ್ರೀಮಿಯರ್ ಶೋ ಬಳಿಕ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರೋ ತೆಲುಗಿನ ಸೂಪರ್ ಸ್ಟಾರ್‌ಗಳಾದ ಅಲ್ಲು ಅರ್ಜುನ್, ಜೂನಿಯರ್ ಎನ್‌ಟಿಆರ್, ವಿಜಯ್ ದೇವರಕೊಂಡ ಹಾಗೂ ಮಹೇಶ್ ಬಾಬು ಬಗ್ಗೆ ಲೇವಡಿ ಮಾಡಿದ್ದಾರೆ. ಪ್ರೊಪಗಾಂಡದ ಗುರುತುಗಳು ಸೌತ್‌ಗೂ ಹರಡುತ್ತಿವೆ ಎಂದಿದ್ದಾರೆ.

ಎಲೆಕ್ಷನ್‌‌ಗೆ ಫಂಡಿಂಗ್ ಮಾಡ್ತಿದ್ರಾ ದಾವೂದ್ ಇಬ್ರಾಹಿಂ..?

ಬಾಲಿವುಡ್‌ನ ನಿಯಂತ್ರಿಸಿದವ್ರು ಫಂಡ್ ಮಾಡಿರಲಾರರೇ..?!

ಧುರಂಧರ್-2ನಲ್ಲಿ ಯುಪಿ ಎಲೆಕ್ಷನ್ಸ್‌‌ಗೆ ದಾವೂದ್ ಇಬ್ರಾಹಿಂ ಫಂಡಿಂಗ್ ಮಾಡೋದ್ರ ದೃಶ್ಯವಿದೆ. ಅದು ನೇಪಾಳದ ಮೂಲಕ ಇಂಡಿಯಾಗೆ ಸೇರುವ ರೂಟ್ ಮ್ಯಾಪ್ ಕೂಡ ಇದೆ. ಆದ್ರೆ ಭಾರತದಲ್ಲಿ ಮೋದಿ ಸರ್ಕಾರ ಬರೋಕೂ ಮುನ್ನ ಎಲೆಕ್ಷನ್ಸ್‌‌ಗೆ ದಾವೂದ್ ಹಾಗೂ ಟೆರರಿಸ್ಟ್ ಗ್ರೂಪ್‌‌ಗಳು ಫಂಡ್ ಮಾಡ್ತಿದ್ವಾ ಅನ್ನೋ ಚರ್ಚೆ ಈಗ ದೊಡ್ಡ ಮಟ್ಟದಲ್ಲಿ ಶುರುವಾಗಿದೆ.

ಅಂದಹಾಗೆ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಕಮ್ ಡ್ರಗ್ ಡೀಲರ್ ದಾವೂದ್ ಇಬ್ರಾಹಿಂ, ಪಾಕಿಸ್ತಾನದಲ್ಲಿ ಅಡಗಿಕೊಂಡೇ ಭಯೋತ್ಪಾದನೆಗೆ ಸಾಥ್ ನೀಡಿದವನು. ಆತ ತನ್ನ ಡಿ ಕಂಪನಿ ಮೂಲಕ ಇಡೀ ಬಾಲಿವುಡ್‌ನ ಬರೋಬ್ಬರಿ ಒಂದೂವರೆ ದಶಕದ ಕಾಲ ಆಳಿದವನು. ಬಿಟೌನ್ ನಿರ್ಮಾಪಕರುಗಳು ಬ್ಯಾಂಕ್‌ನಿಂದ ಸಾಲ ಸಿಗದೇ ಇದ್ದಾಗ, ದಾವೂದ್ ಡಿ ಕಂಪನಿಯಿಂದ ದುಡ್ಡು ತಂದು ಸಿನಿಮಾ ಮಾಡಿದ ನಿದರ್ಶನಗಳಿವೆ. ಹಣ ಹಿಂದಿರುಗಿಸಲಾಗದವ ಮೇಲೆ ಅಟ್ಯಾಕ್‌‌, ಬೆದರಿಕೆಗಳು ಸರ್ವೇ ಸಾಮಾನ್ಯ. ಅದಕ್ಕೆ ಟಿ ಸೀರೀಸ್‌ನ ಗುಲ್ಶನ್ ಕುಮಾರ್ ಪ್ರಕರಣಕ್ಕಿಂತ ಮತ್ತೊಂದು ಪ್ರತ್ಯಕ್ಷ ಸಾಕ್ಷಿ ಬೇಕಿಲ್ಲ. ಒಂದು ಕಾಲದಲ್ಲಿ ಇಡೀ ಬಾಲಿವುಡ್‌ನ ಕಂಟ್ರೋಲ್ ಮಾಡ್ತಿದ್ದ ದಾವೂದ್ ಇಬ್ರಾಹಿಂ, ಇಂಡಿಯಾದಲ್ಲಿನ ಎಲೆಕ್ಷನ್‌ಗಳಿಗೆ ಫಂಡ್ ಮಾಡಿರಲ್ಲ ಅನ್ನೋ ಗ್ಯಾರಂಟಿ ಏನಿದೆ ಅಲ್ಲವೇ..? ಅನ್ನೋದು ಕೂಡ ಹಲವರ ವಾದವಾಗಿದೆ.

ಎಲ್ಲಾ ಟೆರರಿಸ್ಟ್ ಗ್ರೂಪ್‌‌ಗಳಿಗೆ ಬಡೇ ಸಾಬ್ ದಾವೂದ್

ಇನ್ನೂ ಸಿನಿಮಾದ ಮೊದಲ ಭಾಗದಲ್ಲಿ ಬಡೇ ಸಾಬ್‌ ಯಾರು ಅನ್ನೋದನ್ನ ತೋರಿಸಿರಲಿಲ್ಲ. ಆದ್ರೀಗ ದಿ ರಿವೆಂಜ್‌‌ನಲ್ಲಿ ಐಎಸ್‌ಐ ಮೇಜರ್, ರಾಜಕಾರಣಿಗಳು, ಸ್ಪೆಷಲ್ ಟಾಸ್ಕ್ ಫೋರ್ಸ್ ಆಫೀಸರ್, ಬಲೂಚಿ ಲೀಡರ್ಸ್ ಸೇರಿದಂತೆ ಎಲ್ಲರೂ ದಾವೂದ್ ಇಬ್ರಾಹಿಂ ಅನ್ನೋ ಬಡೇ ಸಾಬ್ ಕುಣಿಸಿದಂತೆ ಕುಣಿಯುವ ಗೊಂಬೆಗಳು ಅನ್ನೋದನ್ನ ತೋರಿಸಲಾಗಿದೆ.

ಡಿಮಾನಿಟೈಸೇಷನ್‌ಗೆ ಆಪರೇಷನ್ ಗ್ರೀನ್ ಲೀಫ್ ಲಿಂಕ್

ದಾವೂದ್ ದಾಳಿಗೆ.. ಮೋದಿ ನೋಟ್ ಬ್ಯಾನ್ ಪ್ರತಿದಾಳಿ..!

ಯಾವಾಗ ಬಡೇ ಸಾಬ್ ದಾವೂದ್ ಇಬ್ರಾಹಿಂ ಇಂಡಿಯಾದಲ್ಲಿನ ಚುನಾವಣೆಗೆ 60 ಸಾವಿರ ಕೋಟಿ ಹಣವನ್ನ ಪಾಕಿಸ್ತಾನದಿಂದ ಕಳಿಸಲು ಸಜ್ಜಾಗ್ತಾರೋ, ಆಗ ಆಪರೇಷನ್ ಗ್ರೀನ್ ಲೀಫ್‌ನ ತರ್ತಾರೆ ಅಜಿತ್ ದೋವಲ್. ಆಗಲೇ ಪ್ರಧಾನಿ ಮೋದಿ ನೋಟ್ ಬ್ಯಾನ್ ಘೋಷಣೆ ಮಾಡುವುದು ಅನ್ನೋ ತರಹ ಚಿತ್ರದಲ್ಲಿ ಬಿಂಬಿಸಲಾಗಿದೆ. ಅದು ಎಷ್ಟರ ಮಟ್ಟಿಗೆ ರೀಲ್ ಅಥ್ವಾ ರಿಯಲ್ ಅನ್ನೋದು ಕೂಡ ಚರ್ಚೆಗೆ ಕಾರಣವಾಗ್ತಿದೆ.

ದಾವೂದ್ ಇಬ್ರಾಹಿಂನ ಮುಗಿಸದೆ ಇಂಡಿಯಾಗೆ ವಾಪಸ್ ಆಗ್ತಿದ್ದೇನೆ ಅಂತ ಪಚ್ಚಾತ್ತಾಪ ಪಡುವ ಇಂಡಿಯನ್ ಸ್ಪೈ ಏಜೆಂಟ್ ಜಸ್ಕಿರತ್ ಸಿಂಗ್‌ ಪಾತ್ರಧಾರಿ ರಣ್ವೀರ್‌ಗೆ ಅಲ್ಲಿನ PAP ರಾಜಕಾರಣಿ ಜಮೀಲ್ ಜಮಾಲಿ ಕೊಡೋ ಟ್ವಿಸ್ಟ್ ಇಂಟರೆಸ್ಟಿಂಗ್ ಆಗಿದೆ. ನಾನು ಈಗಾಗ್ಲೇ ಅವನಿಗೆ ಡ್ರಗ್ ನೀಡಿ ಆಗಿದೆ. ಅದೊಂದು ಸ್ಲೋ ಪಾಯಿಸನ್. ಅದ್ರಿಂದಲೇ ಆತ ಇಂದು ಹಾಸಿಗೆ ಹಿಡಿಯುವಂತಾಗಿದೆ ಅಂತಾರೆ. ಅಷ್ಟೇ ಅಲ್ಲ, ಆ ಜಮೀಲ್ ಜಮಾಲಿ ಪಾತ್ರಧಾರಿ ರಾಕೇಶ್ ಬೇಡಿ ಬರೋಬ್ಬರಿ 45 ವರ್ಷಗಳಿಂದಲೇ ಪಾಕ್‌ನಲ್ಲಿ ಗೂಢಚರ್ಯೆ ಮಾಡಿಕೊಂಡು, ಭಾರತ ದೇಶದ ಪರ ಸೇವೆ ಸಲ್ಲಿಸುತ್ತಿದ್ದಾರೆ ಅನ್ನೋದು ಕೂಡ ಚರ್ಚಾ ವಿಷಯವಾಗಿದೆ.

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 25T211407.768

ಜುಲೈ 1ರಿಂದ ಪಾಸ್‌ಪೋರ್ಟ್ ಶುಲ್ಕ ಹೆಚ್ಚಳ: ತತ್ಕಾಲ್ ಪಾಸ್‌ಪೋರ್ಟ್ ದರ ₹5,000ರೂ.ಗೆ ಏರಿಕೆ

by ಶಾಲಿನಿ ಕೆ. ಡಿ
June 25, 2026 - 9:15 pm
0

Untitled design 2026 06 25T203605.952

ವೆನೆಜುವೆಲಾ ಭೂಕಂಪಕ್ಕೆ ಪ್ರಧಾನಿ ಮೋದಿ ಸಂತಾಪ: ಭಾರತದಿಂದ ಅಗತ್ಯ ನೆರವು ನೀಡುವುದಾಗಿ ಘೋಷಣೆ

by ಶಾಲಿನಿ ಕೆ. ಡಿ
June 25, 2026 - 8:38 pm
0

Untitled design 2026 06 25T200240.688

ಉತ್ತರ ಕರ್ನಾಟಕದ ಕಲಾವಿದರಿಗೆ ಹೆಚ್ಚಿನ ಅವಕಾಶ ದೊರೆಯಲಿ: ಡಾ. ವಿ.ಎಸ್.ವಿ ಪ್ರಸಾದ್

by ಶಾಲಿನಿ ಕೆ. ಡಿ
June 25, 2026 - 8:05 pm
0

Untitled design 2026 06 25T194615.732

ಸಚಿವ ಸತೀಶ್ ಜಾರಕಿಹೊಳಿ ಬಾಮೈದನ ಮನೆ ಮೇಲೆ ಇಡಿ ದಾಳಿ: ₹13.3 ಕೋಟಿ ಆಸ್ತಿ ಜಪ್ತಿ

by ಶಾಲಿನಿ ಕೆ. ಡಿ
June 25, 2026 - 7:48 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 21T140407.848
    ಗೌರಿ ಜೊತೆ ಆಮಿರ್ ಖಾನ್ 3ನೇ ಮದುವೆ: ಮನೆಯಲ್ಲೇ ನಡೆಯಲಿದೆ ರಿಜಿಸ್ಟರ್ ಮ್ಯಾರೇಜ್
    June 21, 2026 | 0
  • Untitled design (68)
    ರಾಷ್ಟ್ರಪತಿ ಮುರ್ಮು ಜೀವನ ಪಯಣಕ್ಕೆ ಡಾಕ್ಯುಮೆಂಟರಿ ರೂಪ
    June 20, 2026 | 0
  • Untitled design 2026 06 12T174712.765
    ಆಲಿಯಾ ಭಟ್ ಆಲ್ಫಾ 100% ಕಾಪಿ..ಇದು ಫ್ರೆಂಚ್ ಕ್ಲಾಸಿಕ್ ಚಿತ್ರ
    June 12, 2026 | 0
  • Untitled design 2026 05 30T185424.093
    ಹಸು ನಮ್ಮ ತಾಯಿ, ಬೀಫ್ ಮುಟ್ಟಲ್ಲ..ಸಲ್ಮಾನ್ ಖಾನ್‌ಗೆ ಹಿಂದೂ ಕನೆಕ್ಷನ್
    May 30, 2026 | 0
  • BeFunky collage 2026 05 28T214624.180
    49ರ ಹರೆಯದಲ್ಲೂ 20ರಂತೆ ಕಂಗೊಳಿಸುವ ಮಲ್ಲಿಕಾ ಶೆರಾವತ್: ಫಿಟ್‌ನೆಸ್ ರಹಸ್ಯ ಬಹಿರಂಗ!
    May 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version