ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಸ್ಟಾರ್ ಹೀರೋಯಿನ್… ಗ್ಲಾಮರ್ ಕ್ವೀನ್… ಮಿಲಿಯನ್ ಫ್ಯಾನ್ಸ್‌ಗಳ ಕ್ರಶ್…ಕ್ಯಾಮೆರಾ ಮುಂದೆ ಮಿಂಚಿದ ಈ ಕಿಸ್ ಬ್ಯೂಟಿ, ಈಗ ಸ್ಟೆತಸ್ಕೋಪ್ ಹಿಡಿದು ವೈದ್ಯೆಯಾಗಿದ್ದಾರೆ. ಲೈಟ್… ಕ್ಯಾಮೆರಾ… ಆಕ್ಷನ್ ನಡುವೆಯೇ ಲೆಕ್ಚರ್ ಹಾಲ್, ಎಕ್ಸಾಮ್ ಹಾಲ್ ಅಂತ ಯಾವ ಗ್ಯಾಪ್ ನಲ್ಲಿ ಓದಿ ಎಕ್ಸಾಮ್ ಬರೆದ್ರು..? ಸಿನಿರಂಗಕ್ಕೂ ವಿದ್ಯಾರ್ಥಿ ಲೋಕಕ್ಕೂ ಒಂದೇ ಸಾರಿ ಸರ್ಪ್ರೈಸ್ ಕೊಟ್ಟಿದ್ದಾರೆ ಶ್ರೀಲೀಲಾ.
ಸ್ಟಾರ್ ನಟಿಯಿಂದ ಸ್ಟೆತಸ್ಕೋಪ್ ಹಿಡಿದ ವೈದ್ಯೆಯವರೆಗೆ ಇದು ಸಾಮಾನ್ಯ ಸಾಧನೆ ಅಲ್ಲ. ಕಿಸ್ ಬ್ಯೂಟಿ ಶ್ರೀಲೀಲಾ ಈಗ ಅಧಿಕೃತವಾಗಿ ಡಾಕ್ಟರ್. ಸಿಲ್ವರ್ ಸ್ಕ್ರೀನ್‌ನಲ್ಲಿ ಮಿನುಗುತ್ತಿದ್ದ ಶ್ರೀಲೀಲಾ ಮುಖ, ಇದೀಗ ವೈದ್ಯರ ಪ್ರತಿಜ್ಞೆ ಸ್ವೀಕರಿಸಿದ ಗರ್ವದ ಹೊಳಪಿನಲ್ಲಿ ಮತ್ತಷ್ಟು ಕಂಗೊಳಿಸಿದೆ. ಟಾಪ್ ಹೀರೋಯಿನ್ ಆಗಿ ಸದ್ದು ಮಾಡುತ್ತಿದ್ದ ಮಧ್ಯೆಯೇ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿ, ಸಿನಿ ಜಗತ್ತಿಗೆ ಹೊಸ ಸಂದೇಶ ನೀಡಿದ್ದಾರೆ ಈ ಪ್ರತಿಭಾವಂತ ನಟಿ.
ಶ್ರೀಲೀಲಾ ಇನ್ಮೇಲೆ ಡಾಕ್ಟರ್ ಶ್ರೀಲೀಲಾ.. ಯಾಕೆ ಗೊತ್ತಾ..?
ಶ್ರೀಲೀಲಾ’s ಡಬಲ್ ಡೋಸ್ ಅಚೀವ್‌ಮೆಂಟ್
ಸ್ಯಾಂಡಲ್‌ವುಡ್‌ನ ಕಿಸ್ ಚಿತ್ರದ ಮೂಲಕ ಗ್ರಾಂಡ್ ಎಂಟ್ರಿ ಕೊಟ್ಟ ಶ್ರೀಲೀಲಾ, ಮೊದಲ ಚಿತ್ರದಲ್ಲೇ ಯುವ ಮನಸ್ಸುಗಳನ್ನು ಕದ್ದವರು. ಅಲ್ಲಿಂದ ಟಾಲಿವುಡ್‌ಗೆ ಜಿಗಿದು ಪೆಲ್ಲಿ ಸಂಡಾಡ್ ಮೂಲಕ ಭಾರೀ ಸಕ್ಸಸ್ ಕಂಡರು. ಧಮಾಕಾ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಸ್ಟಾರ್ ಹೀರೋಗಳ ಜೊತೆ ನಟಿಸಿ, ಗ್ಲಾಮರ್ ಮತ್ತು ಟ್ಯಾಲೆಂಟ್ ಎರಡರಲ್ಲೂ ತಮ್ಮದೇ ಮುದ್ರೆ ಬಿತ್ತಿದರು. ಕಡಿಮೆ ಅವಧಿಯಲ್ಲೇ ಟಾಪ್ ಲೀಗ್‌ಗೆ ಎಂಟ್ರಿ ಪಡೆದ ಶ್ರೀಲೀಲಾ, ಸೌತ್ ಸಿನಿರಂಗದ ಹಾಟ್ ಫೇವರಿಟ್ ಹೀರೋಯಿನ್ ಆಗಿ ಸ್ಥಾನ ಪಡೆದಿದ್ದಾರೆ.
ಆದರೆ ಕ್ಯಾಮೆರಾ ಲೈಟ್‌ಗಳ ಮಧ್ಯೆ ಓದಿನ ಮೇಲೆ ಫೋಕಸ್ ಕಡಿಮೆ ಮಾಡಲಿಲ್ಲ ಈ ನಟಿ. ಶೂಟಿಂಗ್, ಸಾಂಗ್ ರಿಹರ್ಸಲ್, ಟ್ರಾವೆಲ್ ಇವೆಲ್ಲದರ ನಡುವೆ ವೈದ್ಯಕೀಯ ಅಧ್ಯಯನವನ್ನು ಸಮರ್ಪಕವಾಗಿ ಬ್ಯಾಲನ್ಸ್ ಮಾಡಿ, ತಮ್ಮ ಎಂಬಿಬಿಎಸ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಪದವಿ ಪ್ರದಾನ ಸಮಾರಂಭದಲ್ಲಿ ನೀವು ಈಗ ಅಧಿಕೃತವಾಗಿ ವೈದ್ಯರು ಎಂಬ ಘೋಷಣೆ ಕೇಳುತ್ತಿದ್ದಂತೆಯೇ ಮುಖದಲ್ಲಿ ಮೂಡಿದ ಆ ಸಂತೋಷ… ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿನಿಮಾ ನಟಿಯರು ಓದಿನಲ್ಲಿ ಹಿಂದುಳಿದವರು ಎಂಬ ಟ್ಯಾಗ್‌ಗೆ ಶ್ರೀಲೀಲಾ ಗಟ್ಟಿಯಾದ ಉತ್ತರ ನೀಡಿದ್ದಾರೆ.
ಸ್ಟಾರ್‌ನಿಂದ ಸ್ಟೆತಸ್ಕೋಪ್‌ವರೆಗೆ ಕಿಸ್ ಬ್ಯೂಟಿ ಈಗ ಡಾಕ್ಟರ್
ಗ್ಲಾಮರ್ ಜೊತೆಗೆ ಗುರಿ ಶ್ರೀಲೀಲಾ’s ಸಕ್ಸಸ್ ಸೀಕ್ರೆಟ್
ಇದೀಗ ಒಂದು ಕಡೆ ಪವನ್ ಕಲ್ಯಾಣ್ ಜೊತೆಗಿನ ಉಸ್ತಾದ್ ಭಗತ್ ಸಿಂಗ್, ಬಾಲಿವುಡ್ ಡೇಬ್ಯು ‘ತೂ ಮೇರಿ ಜಿಂದಗಿ ಹೇ’, ಸೇರಿದಂತೆ ಮೆಗಾ ಪ್ರಾಜೆಕ್ಟ್‌ಗಳು… ಮತ್ತೊಂದು ಕಡೆ ವೈದ್ಯೆಯ ಹೆಗ್ಗಳಿಕೆ. ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲೂ ಬ್ಯುಸಿ ಶೆಡ್ಯೂಲ್ ನಡುವೆ ಡಾಕ್ಟರ್ ಪಟ್ಟಕ್ಕೇರಿದ ಈ ಸ್ಟಾರ್ ನಟಿ ದ್ವಿಪಾತ್ರ ಯಶಸ್ಸಿನ ಪ್ರತಿರೂಪವಾಗಿದ್ದಾರೆ. ಗ್ಲಾಮರ್ ಜೊತೆಗೂ ಗುರಿ ಇದ್ದರೆ ಏನು ಸಾಧ್ಯವಿಲ್ಲ ಎನ್ನುವುದಕ್ಕೆ ಶ್ರೀಲೀಲಾ ಜೀವಂತ ಉದಾಹರಣೆ





