• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಚಿಂದಿ ಆಯುವವರಲ್ಲಿ ಶೇ.84ರಷ್ಟು SC, ST, OBC ಸಮುದಾಯಗಳು: ಕೇಂದ್ರ ಸರ್ಕಾರದಿಂದ ಮಾಹಿತಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 4, 2026 - 6:24 pm
in Flash News, ದೇಶ
0 0
0
Untitled design 2026 02 04T182247.151

ನವದೆಹಲಿ (ಫೆ.4): ದೇಶಾದ್ಯಂತ ಚಿಂದಿ ಆಯುವವರ (Waste Pickers) ಕುರಿತು ಕೇಂದ್ರ ಸರ್ಕಾರ ಮೊದಲ ಬಾರಿಗೆ  ಅಧಿಕೃತ ಡೇಟಾವನ್ನು ಬಿಡುಗಡೆ ಮಾಡಿದೆ. ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತ್ಯಾಜ್ಯ ಆಯುವವರಲ್ಲಿ ಶೇ.84.5ರಷ್ಟು ಮಂದಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಗಳಿಗೆ ಸೇರಿದವರು ಎಂಬ ಅಂಶ ಗಮನ ಸೆಳೆದಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ಈ ದತ್ತಾಂಶ, 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಗರ ಪ್ರದೇಶಗಳಲ್ಲಿ ನಡೆಸಿದ ಗಣತಿಯ ಆಧಾರಿತವಾಗಿದೆ. ಜನವರಿ 23, 2026ರವರೆಗೆ ಒಟ್ಟು 1.52 ಲಕ್ಷ ತ್ಯಾಜ್ಯ ಆಯುವ ಕಾರ್ಮಿಕರನ್ನು ನಗರ ಸ್ಥಳೀಯ ಸಂಸ್ಥೆಗಳು ಪ್ರೊಫೈಲ್ ಮಾಡಿ ಮೌಲ್ಯೀಕರಿಸಿರುವುದಾಗಿ ಸರ್ಕಾರ ತಿಳಿಸಿದೆ.

RelatedPosts

U19 World Cup: ಅಫ್ಘಾನಿಸ್ತಾನಕ್ಕೆ ಶಾಕ್ ನೀಡಿ ಫೈನಲ್‌ಗೆ ಹಾರಿದ ಭಾರತ

ಮಣಿಪುರದ ಮುಖ್ಯಮಂತ್ರಿಯಾಗಿ ಯುನ್ಮಮ್‌ ಖೇಮ್‌ಚಂದ್ ಸಿಂಗ್ ಪ್ರಮಾಣ ವಚನ

ಬಿಜಿಎಸ್‌‌ನಲ್ಲಿ ಶ್ರೀ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿಗಳ ಜನ್ಮದಿನದ ಸಂಭ್ರಮ

ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ: ಕೇಂದ್ರಕ್ಕೆ ಹೆಚ್.ಡಿ. ದೇವೇಗೌಡರ ಮನವಿ

ADVERTISEMENT
ADVERTISEMENT
ಸಾಮಾಜಿಕ ವರ್ಗಗಳ ಸ್ಥಿತಿ

ಡೇಟಾ ಪ್ರಕಾರ, ಒಟ್ಟು ತ್ಯಾಜ್ಯ ಆಯುವವರಲ್ಲಿ

  • 60.3% (92,089) ಮಂದಿ ಎಸ್‌ಸಿ ಸಮುದಾಯಕ್ಕೆ

  • 13.7% (20,954) ಮಂದಿ ಒಬಿಸಿ ಸಮುದಾಯಕ್ಕೆ

  • 10.5% (16,037) ಮಂದಿ ಎಸ್‌ಟಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಇನ್ನು 10.7% (16,329) ಮಂದಿ ಮಾತ್ರ ಸಾಮಾನ್ಯ ವರ್ಗದ ಸಮುದಾಯಗಳಿಂದ ಬಂದವರಾಗಿದ್ದಾರೆ. ಇದಲ್ಲದೆ, 7,402 ಕಾರ್ಮಿಕರು ‘ಇತರೆ’ ವರ್ಗದ ಅಡಿಯಲ್ಲಿ ದಾಖಲಾಗಿದ್ದಾರೆ.

ಲಿಂಗ ಆಧಾರಿತ ವಿವರ

ತ್ಯಾಜ್ಯ ಆಯುವವರಲ್ಲಿ ಮಹಿಳೆಯರ ಪಾಲೂ ಇದೆ. ಒಟ್ಟು ಪ್ರೊಫೈಲ್ ಮಾಡಿದ ಕಾರ್ಮಿಕರಲ್ಲಿ

  • 48.7% ಮಹಿಳೆಯರು (74,427)

  • 51.3% ಪುರುಷರು (78,374)

  • 12 ತೃತೀಯಲಿಂಗಿಗಳು (0.007%) ಇದ್ದಾರೆ.

ರಾಜ್ಯವಾರು ತ್ಯಾಜ್ಯ ಆಯುವವರ ವರದಿ

ರಾಷ್ಟ್ರೀಯ ಮಟ್ಟದಲ್ಲಿ ಎಸ್‌ಸಿ–ಎಸ್‌ಟಿ–ಒಬಿಸಿ ಸಮುದಾಯಗಳ ಪ್ರಾಬಲ್ಯ ಇದ್ದರೂ, ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಭಿನ್ನ ಚಿತ್ರ ಕಂಡುಬಂದಿದೆ. ದೆಹಲಿ ಮತ್ತು ಗೋವಾಗಳಲ್ಲಿ ಸಾಮಾನ್ಯ ವರ್ಗದ ತ್ಯಾಜ್ಯ ಆಯುವವರ ಸಂಖ್ಯೆ, ಹಿಂದುಳಿದ ವರ್ಗಗಳ ಒಟ್ಟಾರೆ ಸಂಖ್ಯೆಯನ್ನು ಮೀರಿಸಿದೆ.

  • ದೆಹಲಿಯಲ್ಲಿ, 6,500ಕ್ಕೂ ಹೆಚ್ಚು ತ್ಯಾಜ್ಯ ಆಯುವವರಲ್ಲಿ 4,289 ಮಂದಿ ಸಾಮಾನ್ಯ ವರ್ಗದವರು

  • ಗೋವಾದಲ್ಲಿ, ಒಟ್ಟು 1,286 ಕಾರ್ಮಿಕರಲ್ಲಿ 729 ಮಂದಿ ಸಾಮಾನ್ಯ ವರ್ಗಕ್ಕೆ ಸೇರಿದವರು

ಪಶ್ಚಿಮ ಬಂಗಾಳದಲ್ಲಿಯೂ ಸಾಮಾನ್ಯ ವರ್ಗದ ತ್ಯಾಜ್ಯ ಆಯುವವರ ಪ್ರಮಾಣ 42.4% ಎಂದು ದಾಖಲಾಗಿದೆ.

ನಮಸ್ತೆ ಯೋಜನೆಯ ಹಿನ್ನೆಲೆ

ಈ ಗಣತಿ ಕಾರ್ಯವು ‘ನಮಸ್ತೆ’ (NAMASTE – National Action for Mechanised Sanitation Ecosystem) ಯೋಜನೆಯ ಭಾಗವಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ,

  • ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳ ಅಪಾಯಕಾರಿ ಕೈಚಾಲಿತ ಸ್ವಚ್ಛತೆಯನ್ನು ನಿರ್ಮೂಲನೆ ಮಾಡುವುದು

  • ತ್ಯಾಜ್ಯ ಆಯುವವರು ಮತ್ತು ಒಳಚರಂಡಿ ಕಾರ್ಮಿಕರನ್ನು  ಗುರುತಿಸುವುದು

  • ಅವರಿಗೆ ಸುರಕ್ಷತಾ ಸಾಧನಗಳು, ಸಾಮಾಜಿಕ ಭದ್ರತೆ ಮತ್ತು ಪರ್ಯಾಯ ಜೀವನೋಪಾಯ ಒದಗಿಸುವುದು

ಎಂಬುದಾಗಿದೆ.

ನಮಸ್ತೆ ಯೋಜನೆಯ ವ್ಯಾಖ್ಯಾನದಂತೆ, ತ್ಯಾಜ್ಯ ಆಯುವವರು ಎಂದರೆ ಬೀದಿಗಳು, ತೊಟ್ಟಿಗಳು, ರಿಸೈಕ್ಲಿಂಗ್ ಘಟಕಗಳು, ಸಂಸ್ಕರಣೆ ಹಾಗೂ ತ್ಯಾಜ್ಯ ವಿಲೇವಾರಿ ಕೇಂದ್ರಗಳಿಂದ ಮರುಬಳಕೆ ಮಾಡಬಹುದಾದ ಘನತ್ಯಾಜ್ಯವನ್ನು ಅನೌಪಚಾರಿಕವಾಗಿ ಸಂಗ್ರಹಿಸುವವರು.

ಒಳಚರಂಡಿ ಕಾರ್ಮಿಕರ ಮಾಹಿತಿ

ಈ ಯೋಜನೆಯಡಿ ಇದುವರೆಗೆ ಸುಮಾರು 89,000 ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರನ್ನು ಎಣಿಸಲಾಗಿದೆ. ಇವರಲ್ಲಿ

  • 95.8% ಪುರುಷರು

  • ಡಿಸೆಂಬರ್ 2024ರ ಡೇಟಾ ಪ್ರಕಾರ, 91.95% ಮಂದಿ ಎಸ್‌ಸಿ–ಎಸ್‌ಟಿ–ಒಬಿಸಿ ಸಮುದಾಯಗಳಿಂದ

  • ಕೇವಲ 8.05% ಸಾಮಾನ್ಯ ವರ್ಗದವರು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 04T205941.369

U19 World Cup: ಅಫ್ಘಾನಿಸ್ತಾನಕ್ಕೆ ಶಾಕ್ ನೀಡಿ ಫೈನಲ್‌ಗೆ ಹಾರಿದ ಭಾರತ

by ಶಾಲಿನಿ ಕೆ. ಡಿ
February 4, 2026 - 9:01 pm
0

Untitled design 2026 02 04T202027.254

ಮಣಿಪುರದ ಮುಖ್ಯಮಂತ್ರಿಯಾಗಿ ಯುನ್ಮಮ್‌ ಖೇಮ್‌ಚಂದ್ ಸಿಂಗ್ ಪ್ರಮಾಣ ವಚನ

by ಶಾಲಿನಿ ಕೆ. ಡಿ
February 4, 2026 - 8:26 pm
0

Untitled design 2026 02 04T195518.335

ಬಿಜಿಎಸ್‌‌ನಲ್ಲಿ ಶ್ರೀ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿಗಳ ಜನ್ಮದಿನದ ಸಂಭ್ರಮ

by ಶಾಲಿನಿ ಕೆ. ಡಿ
February 4, 2026 - 8:05 pm
0

Untitled design 2026 02 04T191243.390

ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ: ಕೇಂದ್ರಕ್ಕೆ ಹೆಚ್.ಡಿ. ದೇವೇಗೌಡರ ಮನವಿ

by ಶಾಲಿನಿ ಕೆ. ಡಿ
February 4, 2026 - 7:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 04T205941.369
    U19 World Cup: ಅಫ್ಘಾನಿಸ್ತಾನಕ್ಕೆ ಶಾಕ್ ನೀಡಿ ಫೈನಲ್‌ಗೆ ಹಾರಿದ ಭಾರತ
    February 4, 2026 | 0
  • Untitled design 2026 02 04T202027.254
    ಮಣಿಪುರದ ಮುಖ್ಯಮಂತ್ರಿಯಾಗಿ ಯುನ್ಮಮ್‌ ಖೇಮ್‌ಚಂದ್ ಸಿಂಗ್ ಪ್ರಮಾಣ ವಚನ
    February 4, 2026 | 0
  • Untitled design 2026 02 04T195518.335
    ಬಿಜಿಎಸ್‌‌ನಲ್ಲಿ ಶ್ರೀ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿಗಳ ಜನ್ಮದಿನದ ಸಂಭ್ರಮ
    February 4, 2026 | 0
  • Untitled design 2026 02 04T191243.390
    ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ: ಕೇಂದ್ರಕ್ಕೆ ಹೆಚ್.ಡಿ. ದೇವೇಗೌಡರ ಮನವಿ
    February 4, 2026 | 0
  • Untitled design 2026 02 04T183205.279
    “ಸಂಪಾಯಿತಲೇ ಪರಾಕ್”: ಮೈಲಾರ ಕಾರ್ಣಿಕ 2026ರ ಭವಿಷ್ಯವಾಣಿ
    February 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version