ನ್ಯಾಷನಲ್ ಕ್ರಶ್ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಫೆಬ್ರವರಿಯಲ್ಲಿ ಸತಿ-ಪತಿ ಆಗ್ತಿದ್ದು, ಅದಕ್ಕೂ ಮುನ್ನ ಮತ್ತೊಮ್ಮೆ ಒಬ್ಬರೂ ಒಟ್ಟೊಟ್ಟಿಗೆ ಒಂದೇ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರಾಜಮೌಳಿಯ ಬಾಹುಬಲಿ ಟೈಟಲ್‌ನಂತಿರೋ ರಣಬಾಲಿ ಚಿತ್ರ, ಸ್ವತಂತ್ರ್ಯ ಸಂಗ್ರಾಮದ ಐತಿಹಾಸಿಕ ಕಥೆ ಹೇಳ್ತಿದ್ದು, ಫಸ್ಟ್ ಲುಕ್ ಹುಬ್ಬೇರಿಸಿದೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಂದಾಕ್ಷಣ ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಚಿತ್ರಗಳು ನೆನಪಾಗುತ್ತವೆ. ಅವ್ರ ಆ ಆನ್ ಅಂಡ್ ಆಫ್ ಸ್ಕ್ರೀನ್ ಕೆಮಿಸ್ಟ್ರಿ ರೀಲ್‌ನಿಂದ ರಿಯಾಲಿಟಿವರೆಗೆ ಬಂದಿದೆ. ಇದೇ ಫೆಬ್ರವರಿ 26ಕ್ಕೆ ಉದಯಪುರದ ಪ್ಯಾಲೆಸ್‌ನಲ್ಲಿ ಸತಿ-ಪತಿಯಾಗಿ ಸಪ್ತಪದಿ ತುಳಿಯೋಕೆ ಸಜ್ಜಾಗಿದೆ ಈ ತಾರಾ ಜೋಡಿ. ಇದರ ನಡುವೆ ತಮ್ಮ ಕಾಂಬಿನೇಷನ್‌ನ ಮತ್ತೊಂದು ಹೊಚ್ಚ ಹೊಸ ಸಿನಿಮಾ ಅನೌನ್ಸ್ ಮಾಡಿದೆ. ಅದೇ ರಣಬಾಲಿ.

ಸ್ವತಂತ್ರ್ಯ ಸಂಗ್ರಾಮದ ಕಥೆಯಲ್ಲಿ ರಶ್ಮಿಕಾ-ವಿಜಯ್ ಕಮಾಲ್
ಗೀತ ಗೋವಿಂದಂ, ಡಿಯರ್ ಕಾಮ್ರೇಡ್ ನಂತ್ರ ಹ್ಯಾಟ್ರಿಕ್ ಚಿತ್ರ
ರಾಜಮೌಳಿಯ ಬಾಹುಬಲಿ ಟೈಟಲ್‌ನಂತಿರೋ ಈ ಚಿತ್ರ ಐತಿಹಾಸಿಕ ನೈಜ ಘಟನೆಗಳನ್ನ ಆಧರಿಸಿದ ಚಿತ್ರವಾಗಿದೆ. ಅಂದಹಾಗೆ ಸ್ವತಂತ್ರ್ಯ ಪೂರ್ವ ಭಾರತ ಎಷ್ಟು ಸಮೃದ್ಧವಾಗಿತ್ತು..? ಎಷ್ಟು ಮಿಲಿಯನ್ ಸಂಪತ್ತು ಹೊಂದಿತ್ತು..? ಅದನ್ನ ಬ್ರಿಟಿಷರು ಹೇಗೆ ದೋಚಿದ್ರು..? 40 ಮಿಲಿಯನ್‌ಗೂ ಅಧಿಕ ಮಂದಿ ಭಾರತೀಯರು ಅವ್ರ ಆಡಳಿತಾವಸ್ಥೆಯಲ್ಲಿ ಹಸಿವಿನಿಂದ ಸತ್ತಿದ್ಹೇಗೆ ಅನ್ನೋ ಹಿಡನ್ ಸ್ಟೋರಿಯನ್ನ ತೆರೆಗೆ ತರೋಕೆ ಸಜ್ಜಾಗಿದ್ದಾರೆ.

ಮುಂದಿನ ತಿಂಗಳು ಸತಿ-ಪತಿ ಆಗ್ತಿರೋ ರಶ್ಮಿಕಾ- ರೌಡಿ ಬಾಯ್
1878ರ ಐತಿಹಾಸಿಕ ಕಥೆಯಲ್ಲಿ ರಣಬಾಲಿಗೆ ಜಯಮ್ಮನ ಬಲ..!

ಇದು ವಿಜಯ್-ರಶ್ಮಿಕಾ ಹ್ಯಾಟ್ರಿಕ್ ಕಾಂಬೋ ಆಗಿದ್ದು, ಜಯಮ್ಮನ ಪಾತ್ರದಲ್ಲಿ ರಣಬಾಲಿಗೆ ಸಾಥ್ ಕೊಡಲಿದ್ದಾರೆ ಕನ್ನಡತಿ ರಶ್ಮಿಕಾ ಮಂದಣ್ಣ. ಅಂದಹಾಗೆ ಇದು ಹಿಟ್ಲರ್‌ನ ಸರ್ವಾಧಿಕಾರವನ್ನೇ ಮೀರಿಸೋ ಅಂತಹ ನರಮೇಧದ ಕಥಾನಕ. ದಬ್ಬಾಳಿಕೆ ನಡೆಸ್ತಿದ್ದ ಬ್ರಿಟಿಷ್ ನಾಯಿಗೆ ಹಗ್ಗ ಕಟ್ಟಿ, ಜಲ್ಲಿ ಕಲ್ಲುಗಳಿಂದ ತುಂಬಿರೋ ರೈಲ್ವೇ ಟ್ರ್ಯಾಕ್‌ನಲ್ಲಿ ನಾಯಕನಟ ಕುದುರೆ ಮೇಲೆಯಿಂದ ಎಳೆದೊಯ್ಯುವ ಫಸ್ಟ್‌ಲುಕ್ ಕ್ರಾಂತಿಯ ಕಿಡಿ ಹೊತ್ತಿಸಿದಂತಿದೆ. ರಾಹುಲ್ ನಿರ್ದೇಶನದ ಈ ಪಂಚಭಾಷಾ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡುತ್ತಿದ್ದಾರೆ.





