• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, June 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

‘ಅಕ್ಕಿ ಇಲ್ಲ..ಸರ್ಕಾರವನ್ನೇ ಹೋಗಿ ಕೇಳು”: ಗ್ರಾಹಕರ ಬಳಿ ನ್ಯಾಯಬೆಲೆ ಅಂಗಡಿ ಮಾಲೀಕನ ದರ್ಪ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
January 22, 2026 - 4:07 pm
in Flash News, ಕರ್ನಾಟಕ, ಜಿಲ್ಲಾ ಸುದ್ದಿಗಳು, ಮೈಸೂರು
0 0
0
Untitled design 2026 01 22T160236.526

ಮೈಸೂರು: ಅಕ್ಕಿ ವಿತರಣೆಯಲ್ಲಿ ವಿಳಂಬವಾಗಿದ್ದನ್ನು ಪ್ರಶ್ನಿಸಿದ ಗ್ರಾಹಕರ ಮೇಲೆ ಅಂಗಡಿ ಮಾಲೀಕ ದುರ್ವರ್ತನೆ ತೋರಿದ ಘಟನೆ ಮೈಸೂರಿನ ಮಂಚೇಗೌಡನ ಕೊಪ್ಪಲಿನಲ್ಲಿ ನಡೆದಿದೆ.

ಪ್ರತಿಮಾ ನ್ಯಾಯಬೆಲೆ ಅಂಗಡಿ ಮಾಲೀಕ ರಾಮಚಂದ್ರಪ್ಪ ಎಂಬುವವರು ದುರ್ವರ್ತನೆ ತೋರಿದ್ದು, ‘ಸರ್ಕಾರದಲ್ಲೇ ಅಕ್ಕಿ ಇಲ್ಲ… ಹೋಗಿ ಸರ್ಕಾರವನ್ನೇ ಕೇಳು’ ಎಂಬ ಅಹಂಕಾರದ ಮಾತುಗಳನ್ನು ಆಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

RelatedPosts

ಬದುಕಿರುವಾಗಲೇ ಶ್ರದ್ಧಾಂಜಲಿ ಪೋಸ್ಟರ್..ದೊಡ್ಡಣ್ಣನಿಗೆ ಶಾಕ್

ಯಾದಗಿರಿಯಲ್ಲಿ ಕೂಲ್ ಡ್ರಿಂಕ್ಸ್ ಕುಡಿದು ಯುವಕ ಸಾ*ವು

ಆಲಿಯಾ ಭಟ್ ಆಲ್ಫಾ 100% ಕಾಪಿ..ಇದು ಫ್ರೆಂಚ್ ಕ್ಲಾಸಿಕ್ ಚಿತ್ರ

ಸರ್ಕಾರಿ ಕಾಲೇಜಿನಲ್ಲಿ ಕುಸಿದು ಬಿದ್ದ ಛಾವಣಿ: ಐವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

ADVERTISEMENT
ADVERTISEMENT

‘ಯಾಕೆ ಸರ್ ಇಷ್ಟು ದಿನ ಲೇಟ್ ಮಾಡ್ತಿದ್ದೀರಿ? ನಮಗೆ ತಿಂಗಳ ಅಕ್ಕಿ ಇನ್ನೂ ಸಿಗಲಿಲ್ಲ’ ಎಂದು ಗ್ರಾಹಕರು ಕೇಳಿದಾಗ, ‘ನನ್ನ ಬಳಿ ಅಕ್ಕಿ ಇಲ್ಲ. ಸರ್ಕಾರದಲ್ಲೇ ಅಕ್ಕಿ ಇಲ್ಲ, ಹೋಗಿ ಅವರನ್ನೇ ಕೇಳಿ’ ಎಂದು ಮಾಲೀಕ ರಾಮಚಂದ್ರಪ್ಪ ಗರಂ ಆಗಿದ್ದಾರೆ. ಅಲ್ಲದೆ, ‘ಅಂಗಡಿ ಓಪನ್ ಆಗಿಲ್ಲ ಅಂತ ಸರ್ಕಾರದ ಬಳಿ ಹೇಳಿ’ ಎಂಬ ಮಾತುಗಳನ್ನು ಆಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯ ಮಹಿಳೆಯರು ಮತ್ತು ಗ್ರಾಹಕರು ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ತಿಂಗಳು ಸರ್ಕಾರದಿಂದ ಪಡಿತರವಾಗಿ ನೀಡಬೇಕಾದ ಅಕ್ಕಿ, ಗೋಧಿ ಹಾಗೂ ಇತರೆ ಅಗತ್ಯ ವಸ್ತುಗಳ ವಿತರಣೆಯನ್ನು ಈ ಅಂಗಡಿಯಲ್ಲಿ ನಿರಂತರವಾಗಿ ವಿಳಂಬ ಮಾಡಲಾಗುತ್ತಿದೆ ಎನ್ನಲಾಗಿದೆ. ತಿಂಗಳ ಮೊದಲ ವಾರದಲ್ಲೇ ವಿತರಣೆ ಆರಂಭವಾಗಬೇಕಿದ್ದರೂ, ವಾರಗಳು ಕಳೆದರೂ ಅಂಗಡಿ ತೆರೆದೇ ಇಲ್ಲ ಎಂಬ ದೂರುಗಳು ಗ್ರಾಹಕರಿಂದ ಕೇಳಿಬರುತ್ತಿವೆ. ಈ ಹಿನ್ನೆಲೆ ಮಹಿಳೆಯೊಬ್ಬರು ಅಂಗಡಿ ಮಾಲೀಕನನ್ನು ಪ್ರಶ್ನಿಸಿದಾಗ, ಅವರು ತಾಳ್ಮೆ ಕಳೆದುಕೊಂಡು ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ.

ರೇಷನ್ ಕಾರ್ಡ ಬಳಕೆದಾರರೇ ಎಚ್ಚರ..? ಇ-ಕೆವೈಸಿ ಮಾಡಿಸಿಲ್ಲವೆಂದರೆ ಕಾರ್ಡ್‌ ರದ್ದು..!

 

ಬೆಂಗಳೂರು: ಕರ್ನಾಟಕ ಸರ್ಕಾರದ ಪ್ರತಿಯೊಂದು ಕಲ್ಯಾಣ ಯೋಜನೆಯ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಕೇವಲ ಪಡಿತರ ವಿತರಣೆಗೆ ಮಾತ್ರವಲ್ಲದೇ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಆದಾಯ ಪ್ರಮಾಣಪತ್ರ ಮತ್ತು ಇತರ ಸರ್ಕಾರಿ ಸೇವೆಗಳಿಗೂ ರೇಷನ್ ಕಾರ್ಡ್ ಮೂಲಭೂತ ಗುರುತಿನ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ನಾಗರಿಕನೂ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ಕಾರ್ಡ್ ರದ್ದುಗೊಳ್ಳುವ ಅಪಾಯವಿದೆ.

ಸರ್ಕಾರ ರೇಷನ್ ಕಾರ್ಡ್‌ಗಳಿಗೆ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಇದರ ಮೂಲಕ ನಿಜವಾದ ಫಲಾನುಭವಿಗಳು ಮಾತ್ರ ಸೌಲಭ್ಯ ಪಡೆಯುವಂತೆ ಖಾತ್ರಿಪಡಿಸಲಾಗುತ್ತದೆ. ಇ-ಕೆವೈಸಿ ಮೂಲಕ ಆಧಾರ್ ಸಂಖ್ಯೆಯನ್ನು ರೇಷನ್ ಕಾರ್ಡ್‌ಗೆ ಲಿಂಕ್ ಮಾಡಬೇಕು. ಇದನ್ನು ಮಾಡದಿದ್ದರೆ ಕಾರ್ಡ್ ಸ್ವಯಂಚಾಲಿತವಾಗಿ ರದ್ದಾಗುವ ಸಾಧ್ಯತೆಯಿದೆ. ನಕಲಿ ರೇಷನ್ ಕಾರ್ಡ್‌ಗಳು, ಡೂಪ್ಲಿಕೇಟ್ ದಾಖಲೆಗಳು ಮತ್ತು ಅನರ್ಹ ಫಲಾನುಭವಿಗಳನ್ನು ಗುರುತಿಸಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಇ-ಕೆವೈಸಿ ಪ್ರಕ್ರಿಯೆಯನ್ನು ನ್ಯಾಯಬೆಲೆ ಅಂಗಡಿಗಳಲ್ಲಿ, ಆನ್‌ಲೈನ್ ಪೋರ್ಟಲ್ ಮೂಲಕ ಅಥವಾ ನಿಮ್ಮ ಸಮೀಪದ ಆಹಾರ ಇಲಾಖೆ ಕಚೇರಿಯಲ್ಲಿ ಪೂರ್ಣಗೊಳಿಸಬಹುದು. ಬಯೋಮೆಟ್ರಿಕ್ ದೃಢೀಕರಣ (ಫಿಂಗರ್‌ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್) ಮೂಲಕ ಇದನ್ನು ಮಾಡಲಾಗುತ್ತದೆ. ಈಗಾಗಲೇ ಅನೇಕ ಕುಟುಂಬಗಳು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ. ಆದರೆ ಇನ್ನೂ ಕೆಲವರು ನಿರ್ಲಕ್ಷ್ಯ ತೋರಿದ್ದಾರೆ. ತಕ್ಷಣ ಇ-ಕೆವೈಸಿ ಮಾಡಿಸಿ, ಇಲ್ಲದಿದ್ದರೆ ಪಡಿತರ ಮತ್ತು ಇತರ ಸೌಲಭ್ಯಗಳಿಂದ ವಂಚಿತರಾಗುತ್ತೀರಿ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ಮತ್ತು ಇತರ ಪಡಿತರಗಳನ್ನು ಪಡೆಯದೇ ಇರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಿದೆ. ಕನಿಷ್ಠ 6 ತಿಂಗಳುಗಳ ಕಾಲ ಪಡಿತರ ಪಡೆಯದ ಕುಟುಂಬಗಳ ಕಾರ್ಡ್‌ಗಳ ಮೇಲೆ ಸಮೀಕ್ಷೆ ನಡೆಸಲಾಗುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಈ ಕಾರ್ಯವನ್ನು ಕೈಗೊಂಡಿದೆ.

ಕೆಲವರು ಪಡಿತರ ಪಡೆಯದೇ ಕೇವಲ ಸರ್ಕಾರಿ ಯೋಜನೆಗಳಾದ ವಸತಿ, ಉದ್ಯೋಗ ಭರವಸೆ, ಆರೋಗ್ಯ ಯೋಜನೆಗಳಲ್ಲಿ ಬಿಪಿಎಲ್ ಕಾರ್ಡ್ ಬಳಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಸರ್ಕಾರದ ಗಮನಕ್ಕೆ ಬಂದಿವೆ. ಇದರಿಂದ ನಿಜವಾದ ಬಡವರಿಗೆ ಸೌಲಭ್ಯ ತಲುಪುತ್ತಿಲ್ಲ. ಆದ್ದರಿಂದ, ಪಡಿತರ ಚೀಟಿಯ ದುರ್ಬಳಕೆ ತಡೆಯಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆಯಲ್ಲಿ ಅನರ್ಹರೆಂದು ಕಂಡುಬಂದಲ್ಲಿ ಕಾರ್ಡ್ ತಕ್ಷಣ ರದ್ದಾಗುತ್ತದೆ. ಆದರೆ ನಿಜವಾದ ಫಲಾನುಭವಿಗಳು ತಮ್ಮ ಕಾರ್ಡ್ ಉಳಿಸಿಕೊಳ್ಳಲು ಪ್ರತಿ ತಿಂಗಳು ಪಡಿತರ ಪಡೆಯುವುದು ಕಡ್ಡಾಯ.

ಅನ್ನಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡೆಯುವ ಅಕ್ಕಿ, ಗೋಧಿ ಮತ್ತು ಇತರ ಪಡಿತರಗಳನ್ನು ಕಪ್ಪುಮಾರುಕಟ್ಟೆಯಲ್ಲಿ ಅಥವಾ ತೆರೆದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದು ಗಂಭೀರ ಅಪರಾಧವಾಗಿದೆ. ಇಂತಹ ಪ್ರಕರಣಗಳು ಪತ್ತೆಯಾದಲ್ಲಿ ಆಹಾರ ಇಲಾಖೆಯು ದೂರು ದಾಖಲಿಸಿ, ಪ್ರಕರಣ ರಿಜಿಸ್ಟರ್ ಮಾಡುತ್ತದೆ. ದಂಡ, ಜೈಲು ಶಿಕ್ಷೆ ಅಥವಾ ಕಾರ್ಡ್ ರದ್ದು ಸೇರಿದಂತೆ ಕಠಿಣ ಕ್ರಮಗಳು ಜಾರಿಯಾಗುತ್ತವೆ.

 
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 06 12T190826.754

ಜೂನ್ 20ರಿಂದ ರಚಿತಾ ರಾಮ್‌-ಸತೀಶ್ ಅಯೋಗ್ಯ-2 ಗಾನಬಜಾನ

by ಶಾಲಿನಿ ಕೆ. ಡಿ
June 12, 2026 - 7:09 pm
0

Untitled design 2026 06 12T185346.768

ಬದುಕಿರುವಾಗಲೇ ಶ್ರದ್ಧಾಂಜಲಿ ಪೋಸ್ಟರ್..ದೊಡ್ಡಣ್ಣನಿಗೆ ಶಾಕ್

by ಶಾಲಿನಿ ಕೆ. ಡಿ
June 12, 2026 - 6:54 pm
0

Untitled design 2026 06 12T181043.725

ಯಾದಗಿರಿಯಲ್ಲಿ ಕೂಲ್ ಡ್ರಿಂಕ್ಸ್ ಕುಡಿದು ಯುವಕ ಸಾ*ವು

by ಶಾಲಿನಿ ಕೆ. ಡಿ
June 12, 2026 - 6:12 pm
0

Untitled design 2026 06 12T174712.765

ಆಲಿಯಾ ಭಟ್ ಆಲ್ಫಾ 100% ಕಾಪಿ..ಇದು ಫ್ರೆಂಚ್ ಕ್ಲಾಸಿಕ್ ಚಿತ್ರ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 12, 2026 - 5:47 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 12T185346.768
    ಬದುಕಿರುವಾಗಲೇ ಶ್ರದ್ಧಾಂಜಲಿ ಪೋಸ್ಟರ್..ದೊಡ್ಡಣ್ಣನಿಗೆ ಶಾಕ್
    June 12, 2026 | 0
  • Untitled design 2026 06 12T181043.725
    ಯಾದಗಿರಿಯಲ್ಲಿ ಕೂಲ್ ಡ್ರಿಂಕ್ಸ್ ಕುಡಿದು ಯುವಕ ಸಾ*ವು
    June 12, 2026 | 0
  • Untitled design 2026 06 12T174712.765
    ಆಲಿಯಾ ಭಟ್ ಆಲ್ಫಾ 100% ಕಾಪಿ..ಇದು ಫ್ರೆಂಚ್ ಕ್ಲಾಸಿಕ್ ಚಿತ್ರ
    June 12, 2026 | 0
  • Untitled design 2026 06 12T171411.763
    ಸರ್ಕಾರಿ ಕಾಲೇಜಿನಲ್ಲಿ ಕುಸಿದು ಬಿದ್ದ ಛಾವಣಿ: ಐವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ
    June 12, 2026 | 0
  • Untitled design 2026 06 12T165337.792
    ರಜನಿ ಆಯ್ತು..ಈಗ ಮೆಗಾಸ್ಟಾರ್ ಚಿರಂಜೀವಿ ಜೊತೆ ರಚಿತಾ ರಾಕಿಂಗ್
    June 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version