ಬಿಗ್ ಬಾಸ್ ಕನ್ನಡ ಸೀಸನ್ 12 (BBK 12 Grand Finale) ಕೊನೆಯ ಹಂತಕ್ಕೆ ತಲುಪಿದ್ದು, ಗ್ರ್ಯಾಂಡ್ ಫಿನಾಲೆ ಶೂಟಿಂಗ್ ಈಗಾಗಲೇ ಮುಗಿದಿದೆ ಎನ್ನಲಾಗಿದೆ. ಅಧಿಕೃತವಾಗಿ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲವಾದರೂ, ವಿನ್ನರ್ ಯಾರು? ರನ್ನರ್ ಅಪ್ ಯಾರಾಗಬಹುದು? ಟಾಪ್ 6 ಸ್ಪರ್ಧಿಗಳಿಗೆ ಯಾವ ಸ್ಥಾನ ಸಿಕ್ಕಿದೆ? ಎಂಬ ಕುತೂಹಲ ಪ್ರೇಕ್ಷಕರಲ್ಲಿ ತಾರಕಕ್ಕೇರಿದೆ. ಮಾಹಿತಿಗಳ ಪ್ರಕಾರ
ಯಾರು ಮೊದಲು ಎಲಿಮಿನೇಟ್ ಆಗುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದ್ದು, ಹೀಗಿರುವಾಗಲೇ ಮೊದಲ ಎಲಿಮಿನೇಷನ್ ನಡೆದಿದೆ. ಅತಿ ಕಡಿಮೆ ವೋಟ್ ಪಡೆದು ಇಬ್ಬರು ಹೊರ ಬಂದಿದ್ದಾರೆ. ಮೊದಲ ಎಲಿಮಿನೇಷನ್ನಲ್ಲಿ ಧನುಶ್ ಹೊರ ಹೋಗಿದ್ದಾರೆ ಎನ್ನಲಾಗಿದೆ.
ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ರಘು, ಅಶ್ವಿನಿ ಗೌಡ, ಕಾವ್ಯ ಶೈವ, ಗಿಲ್ಲಿ ನಟ, ಧನುಷ್ ಗೌಡ ಹಾಗೂ ರಕ್ಷಿತಾ ಶೆಟ್ಟಿ ಟಾಪ್ 6 ಸ್ಥಾನಕ್ಕೇರಿದ್ದರು. ಫಿನಾಲೆಗೂ ಮುನ್ನ ನಡೆದ ಎಲಿಮಿನೇಶನ್‌ಗಳ ಆಧಾರದ ಮೇಲೆ, ಸ್ಪರ್ಧಿಗಳ ಅಂತಿಮ ಸ್ಥಾನಗಳ ಬಗ್ಗೆ ಲೀಕ್ ಮಾಹಿತಿಗಳು ಹರಿದಾಡುತ್ತಿವೆ.
ಮೊದಲ ಎಲಿಮಿನೇಶನ್: ಐದನೇ ಸ್ಥಾನಕ್ಕೆ ಧನುಷ್ ಗೌಡ
ಧನುಷ್ ಗೌಡ ಅವರನ್ನು ಈ ಸೀಸನ್‌ನ ‘ಟಾಸ್ಕ್ ಮಾಸ್ಟರ್’ ಎಂದೇ ಕರೆಯಲಾಗುತ್ತಿತ್ತು. ಆರಂಭದಲ್ಲಿ ಹೆಚ್ಚು ಕಾಣಿಸಿಕೊಳ್ಳದಿದ್ದರೂ, ಆಟ ಮುಂದುವರಿದಂತೆ ತಮ್ಮ ಶಾಂತ ಸ್ವಭಾವದಿಂದ ಗಮನ ಸೆಳೆದಿದ್ದರು. ಅನಗತ್ಯ ಜಗಳಗಳಿಂದ ದೂರವಿದ್ದು, ಕಡಿಮೆ ಮಾತನಾಡಿ ಪರಿಣಾಮಕಾರಿಯಾಗಿ ಆಟ ಆಡಿದ ಧನುಷ್, ಐದನೇ ಸ್ಥಾನ ಪಡೆದುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಎರಡನೇ ಎಲಿಮಿನೇಶನ್: ರಘು ಔಟ್ ?
ಫಿನಾಲೆಯ ಮೊದಲ ಎಲಿಮಿನೇಶನ್‌ನಲ್ಲಿ ರಘು ಹೊರಬಿದ್ದಿದ್ದಾರೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಶಾಂತ ಸ್ವಭಾವ, ಸಭ್ಯ ನಡೆ, ಎಲ್ಲರ ಜೊತೆಗೂ ಹೊಂದಾಣಿಕೆ ಇಟ್ಟುಕೊಂಡು ಆಡಿದ ಸ್ಪರ್ಧಿ ಎಂದೇ ರಘು ಗುರುತಿಸಿಕೊಂಡಿದ್ದರು. ಅಡುಗೆ ಜವಾಬ್ದಾರಿ ಹಿಡಿದು, ಟಾಸ್ಕ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಅವರು, ತಪ್ಪು ಕಂಡಾಗ ಧೈರ್ಯವಾಗಿ ಪ್ರಶ್ನೆ ಕೂಡ ಮಾಡುತ್ತಿದ್ದರು. ಆದರೆ ಫಿನಾಲೆ ಹಂತದಲ್ಲಿ ಅವರಿಗೆ ಬೆಂಬಲ ಕಡಿಮೆಯಾದ ಕಾರಣ ಮೊದಲಿಗರಾಗಿ ಔಟ್ ಆಗಿದ್ದಾರೆ ಎನ್ನಲಾಗಿದೆ.
ಮೂರನೇ ಎಲಿಮಿನೇಶನ್: ಕಾವ್ಯ ಶೈವ ನಾಲ್ಕನೇ ಸ್ಥಾನ
ಕಾವ್ಯ ಶೈವ ಅವರ ಆಟಕ್ಕೆ ಸಂಬಂಧಿಸಿದಂತೆ ಮನೆಯಿಂದ ಹೊರಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಕೆಲ ಸಂದರ್ಭಗಳಲ್ಲಿ ಗಿಲ್ಲಿ ನಟ ಅವರ ನೆರಳಿನಲ್ಲಿ ಕಾವ್ಯ ಕಾಣಿಸಿಕೊಂಡಿದ್ದಾರೆ ಎನ್ನುವ ಟೀಕೆಗಳು ಕೂಡ ಬಂದಿದ್ದವು. ಅಂತಿಮವಾಗಿ ಕಾವ್ಯ ಶೈವ ನಾಲ್ಕನೇ ಸ್ಥಾನಕ್ಕೇರಿದ್ದಾರೆ ಎನ್ನಲಾಗಿದೆ.
ನಾಲ್ಕನೇ ಎಲಿಮಿನೇಶನ್: ಮೂರನೇ ಸ್ಥಾನಕ್ಕೆ ಅಶ್ವಿನಿ ಗೌಡ
ಸೀಸನ್ ಆರಂಭದಲ್ಲಿ ಅಶ್ವಿನಿ ಗೌಡ ಅವರ ನಡೆ-ನುಡಿ, ವರ್ತನೆಗೆ ವಿಭಿನ್ನ ಪ್ರತಿಕ್ರಿಯೆಗಳು ಹೆಚ್ಚಾಗಿದ್ದವು. ಆದರೆ ಆಟ ಮುಂದುವರಿದಂತೆ ತಮ್ಮ ಧೈರ್ಯ, ಸ್ಪಷ್ಟ ಮಾತು ಮತ್ತು ಟಾಸ್ಕ್‌ಗಳಲ್ಲಿ ತೋರಿದ ಹಠದಿಂದ ಅಭಿಮಾನಿಗಳನ್ನು ಸಂಪಾದಿಸಿದರು. ‘ಮಹಿಳಾಮಣಿ’ಯಾಗಿ ಸಖತ್ ಆಟ ಆಡಿದ ಅಶ್ವಿನಿ, ಫಿನಾಲೆಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ವಿನ್ನರ್ ಯಾರು?
ಎಲ್ಲರ ಕುತೂಹಲಕ್ಕೆ ಕಾರಣವಾಗಿರುವ ಪ್ರಶ್ನೆ ಇದೇ BBK 12 ವಿನ್ನರ್ ಯಾರು? ಎನ್ನುವುದು. ಬಹುತೇಕ ಲೀಕ್ ಮಾಹಿತಿ ಹಾಗೂ ಪ್ರೇಕ್ಷಕರ ಅಭಿಪ್ರಾಯದಂತೆ ಗಿಲ್ಲಿ ನಟ ಈ ಸೀಸನ್‌ನ ವಿನ್ನರ್ ಆಗಿದ್ದಾರೆ ಎನ್ನಲಾಗುತ್ತಿದೆ. ಆರಂಭದಿಂದಲೂ ತಮ್ಮ ಆಟ, ಸ್ಟ್ರಾಟೆಜಿ ಮತ್ತು ಮನರಂಜನೆಯ ಮೂಲಕ ಗಿಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದರು. ಇನ್ನು ರಕ್ಷಿತಾ ಶೆಟ್ಟಿ ರನ್ನರ್ ಅಪ್ ಸ್ಥಾನಕ್ಕೆ ತಲುಪಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿನ್ನರ್‌ಗೆ ₹50 ಲಕ್ಷ ನಗದು ಬಹುಮಾನ, ಒಂದು ಕಾರ್ ಸೇರಿದಂತೆ ಹಲವು ವಿಶೇಷ ಉಡುಗೊರೆಗಳು ಸಿಗಲಿವೆ. ಆದರೆ ಈ ಎಲ್ಲವೂ ಅಧಿಕೃತ ಘೋಷಣೆ ಬರುವವರೆಗೆ ಕೇವಲ ಊಹಾಪೋಹಗಳಷ್ಟೇ. ಇಂದಿನ ಅಥವಾ ನಾಳೆಯ ಗ್ರ್ಯಾಂಡ್ ಫಿನಾಲೆ ಸಂಚಿಕೆಯಲ್ಲಿ ಸತ್ಯಾಸತ್ಯತೆ ಬಹಿರಂಗವಾಗಲಿದೆ.





