ಇತ್ತೀಚೆಗಷ್ಟೇ ನಾಯಕನಟಿಯನ್ನ ಇಂಟ್ರಡ್ಯೂಸ್ ಮಾಡಿದ್ದ ಲಕ್ಷ್ಮೀಪುತ್ರ ಟೀಂ, ಇದೀಗ ನ್ಯಾಷನಲ್ ಅವಾರ್ಡ್ ವಿನ್ನಿಂಗ್ ಹಿರಿಯನಟಿ ತಾರಮ್ಮನ ಪರಿಚಯಿಸೋ ಟೀಸರ್ ಬಿಡುಗಡೆ ಮಾಡಿದೆ. ಚಿಕ್ಕಣ್ಣನ ಖದರ್, ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಪವರ್, ಶಿವು ಕೆಆರ್ ಪೇಟೆ ಕಾಮಿಡಿ ಸೂಪರ್ ಅನ್ನುವಂತಿರೋ ಲಕ್ಷ್ಮೀಪುತ್ರದ ಟೀಸರ್ ಝಲಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಲಕ್ಷ್ಮೀಪುತ್ರ.. ಹಾಸ್ಯ ಕಲಾವಿದ ಚಿಕ್ಕಣ್ಣ ಹೀರೋ ಆಗಿ ನಟಿಸ್ತಿರೋ ಎರಡನೇ ಸಿನಿಮಾ. ಉಪಾಧ್ಯಕ್ಷ ಬಳಿಕ ಮತ್ತೊಮ್ಮೆ ಹಳ್ಳಿ ಹೈದನಾಗಿ ಚಿಕ್ಕಣ್ಣ ಬಣ್ಣ ಹಚ್ಚಿದ್ದು, ಸ್ಯಾಂಪಲ್ಸ್‌ನಿಂದ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದ್ದಾರೆ. ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಾಯಕನಟ ಚಿಕ್ಕಣ್ಣ ಅವರ ತಾಯಿಯ ಪಾತ್ರವನ್ನು ಪರಿಚಯಿಸೋ ಟೀಸರ್ ರಿಲೀಸ್ ಆಗಿದ್ದು, ತಾರಮ್ಮ ಎಲ್ಲರ ಗಮನ ಸೆಳೆದಿದ್ದಾರೆ.
ಶಿವಣ್ಣ ಹೋರಿ ಕದ್ದ ಚಿಕ್ಕಣ್ಣ.. ತಾರಮ್ಮನ ಮಗ ‘ಲಕ್ಷ್ಮೀಪುತ್ರ’
ಸಂಕ್ರಾಂತಿ ಟೀಸರ್‌ನಲ್ಲಿ ‘ಗವಿ ಸಿದ್ದೇಶ್ವರ ಜಾತ್ರೆ’ಯ ಝಲಕ್
ಹಳ್ಳಿ ಸೊಗಡು-ಸೊಬಗಿನ ಬೇರು.. ಹಿಂದೂ ಸಂಸ್ಕೃತಿಯ ತೇರು
ಚಿಕ್ಕಣ್ಣನ ತಾಯಿ ಪಾತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯನಟಿ ಡಾ. ತಾರಾ ಬಣ್ಣ ಹಚ್ಚಿದ್ದು, ಹಳ್ಳಿ ಸೊಗಡು-ಸೊಬಗು ಈ ಟೀಸರ್‌ನ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣ್ತಿದೆ. ಶಿವರಾಜ್ ಕೆ ಆರ್ ಪೇಟೆ ಎತ್ತುಗಳನ್ನ ಕದ್ದಿರೋ ಆರೋಪ ಇಟ್ಕೊಂಡು ಲಕ್ಷ್ಮೀಪುತ್ರನ ಮೇಲೆ ತಾಯಿಗೆ ಕಂಪ್ಲೆಂಟ್ ಹೇಳೋಕೆ ಬರೋ ಗ್ರಾಮಸ್ಥರು, ಜಾತ್ರಾ ಮಹೋತ್ಸವ ಝಲಕ್ ಜೊತೆ ಸಂಕ್ರಾಂತಿಗೆ ಕಿಚ್ಚು ಹಾಯಿಸಿ ಹೋರಿಗಳನ್ನ ಬೆಂಕಿ ದಾಟಿಸೋ ದೃಶ್ಯ ಮೆಚ್ಚುವಂತಿದೆ.
ಅಂದಹಾಗೆ ಈ ಸಿನಿಮಾ ನಮ್ಮ ಹಿಂದೂ ಸಂಸ್ಕೃತಿಯ ತೇರಿನಂತಿದೆ. ಅದಕ್ಕೆ ದಕ್ಷಿಣದ ಕುಂಭಮೇಳ ಅಂತಲೇ ಫೇಮಸ್ ಆಗಿರೋ ಕೊಪ್ಪಳದ ಗವಿ ಸಿದ್ದೇಶ್ವರ ಜಾತ್ರೆ.
ಲಕ್ಷ್ಮೀಪುತ್ರ ಚಿತ್ರವನ್ನು ಗವಿ ಸಿದ್ದೇಶ್ವರ ಜಾತ್ರೆಯಲ್ಲಿ ಕೂಡ ಚಿತ್ರಿಸಿದ್ದು, ಬೇರೇನನ್ನೋ ಹೇಳಲು ಹೊರಟಂತಿದ್ದಾರೆ ಡೈರೆಕ್ಟರ್ ವಿಜಯ್ ಎಸ್ ಸ್ವಾಮಿ. ಅಂದಹಾಗೆ ಸಕ್ಸಸ್‌ಫುಲ್ ಚಿತ್ರಗಳ ನಿರ್ದೇಶಕ ಎಪಿ ಅರ್ಜುನ್ ತಮ್ಮ ಹೋಮ್ ಬ್ಯಾನರ್‌ನಡಿ ಈ ಸಿನಿಮಾನ ನಿರ್ಮಾಣ ಮಾಡ್ತಿದ್ದು, ಶೂಟಿಂಗ್ ಬಹುತೇಕ ಮುಕ್ತಾಯದ ಹಂತ ತಲುಪಿದೆ.





