ಸಂಕ್ರಾಂತಿ ಅಥವಾ ಪೊಂಗಲ್ ಎಂದರೆ ಅದು ಬಣ್ಣ ಬಣ್ಣದ ಸೀರೆಗಳ ಸಂಭ್ರಮ. ಈ ಹಬ್ಬದ ಆಚರಣೆ ಈಗ ಕೇವಲ ಕೇರಳ ಅಥವಾ ತಮಿಳುನಾಡಿಗೆ ಸೀಮಿತವಾಗಿಲ್ಲ, ಇಡೀ ದಕ್ಷಿಣ ಭಾರತದ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಲು ಈ ಹಬ್ಬವೂ ಕಾರಣ. ಮಾರುಕಟ್ಟೆಯಲ್ಲಿ ಈಗಾಗಲೇ ಪೊಂಗಲ್ ಸಂಭ್ರಮಕ್ಕೆ ಪೂರಕವಾಗಿ ನಾನಾ ಬಗೆಯ ಸೀರೆಗಳು ಲಗ್ಗೆ ಇಟ್ಟಿವೆ. ಈ ಹಬ್ಬಕ್ಕೆ ಯಾವ ರೀತಿ ಸಂಪ್ರಾದಾಯಿಕವಾಗಿ ತಯಾರಾಗಬೇಕು ಎಂಬುದಕ್ಕೆ ಸಲಹೆ ಇಲ್ಲಿದೆ ನೋಡಿ.
1. ಪೊಂಗಲ್ ಸ್ಪೆಷಲ್
ಪೊಂಗಲ್ ಎಂದ ಕೂಡಲೇ ನೆನಪಿಗೆ ಬರುವುದು ಬಿಳಿ ಬಣ್ಣದ ಕಸವು ಸೀರೆಗಳು. ಇವು ಸಾಂಪ್ರದಾಯಿಕವಾಗಿದ್ದರೂ, ಇಂದಿನ ಜನರೇಷನ್‌ಗೆ ತಕ್ಕಂತೆ ನವನವೀನ ವಿನ್ಯಾಸಗಳಲ್ಲಿ ಲಭ್ಯವಿದೆ. ಚಿನ್ನದ ಬಣ್ಣದ ಬಾರ್ಡರ್ ಇರುವ ಈ ಸೀರೆಗಳು ನಿಮ್ಮ ಹಬ್ಬದ ಲುಕ್ ಅನ್ನು ಪರಿಪೂರ್ಣಗೊಳಿಸುತ್ತವೆ.
2. ಬಣ್ಣಗಳ ಆಯ್ಕೆ
ನಿಮ್ಮ ಬಳಿ ಕೇರಳದ ಕಸವು ಸೀರೆ ಇಲ್ಲದಿದ್ದರೆ ಚಿಂತಿಸಬೇಡಿ. ಆಫ್-ವೈಟ್, ಕ್ರೀಮ್ ಅಥವಾ ಐವರಿ ಶೇಡ್‌ನ ಕಾಟನ್ ಸಿಲ್ಕ್ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಿ. ತಿಳಿ ಬಣ್ಣದ ಸೀರೆಗಳಿಗೆ ದಪ್ಪನಾದ ಕೆಂಪು ಅಥವಾ ಹಸಿರು ಬಣ್ಣದ ಬಾರ್ಡರ್ ಇದ್ದರೆ ಅದು ಪೊಂಗಲ್ ಹಬ್ಬಕ್ಕೆ ಅತ್ಯಂತ ಮೆರುಗನ್ನು ನೀಡುತ್ತದೆ.
3. ಆಭರಣಗಳ ಆಯ್ಕೆ
ಸೀರೆಗೆ ತಕ್ಕಂತೆ ಆಭರಣಗಳ ಆಯ್ಕೆ ಬಹಳ ಮುಖ್ಯ. ಜಂಕ್ ಜ್ಯುವೆಲರಿ ಅಥವಾ ಮಾಡರ್ನ್ ಆಭರಣಗಳು ಈ ಟ್ರೆಡಿಷನಲ್ ಲುಕ್‌ಗೆ ಅಷ್ಟಾಗಿ ಹೊಂದುವುದಿಲ್ಲ. ಬಂಗಾರದ ಒಡವೆಗಳು ಅಥವಾ ಚಿನ್ನದ ಬಣ್ಣದ ಇಮಿಟೇಷನ್ ಜ್ಯುವೆಲರಿಗಳನ್ನು ಧರಿಸುವುದು ಉತ್ತಮ. ಟೆಂಪಲ್ ಜ್ಯುವೆಲರಿ ಅಥವಾ ಲಕ್ಷ್ಮಿ ಕಾಸಿನ ಸರಗಳು ಈ ಸೀರೆಗಳ ಮೇಲೆ ಸಖತ್ ಆಗಿ ಕಾಣಿಸುತ್ತವೆ. ಹೀಗಾಗಿ ನೀವು ತಯಾರಾಗುವಾಗ ಹೆಚ್ಚು ಈ ಆಭರಣಗಳ ಕಡೆ ಗಮನಹರಿಸಿ.
ಇನ್ನೂ ಹೇರ್ ಸ್ಟೈಲ್ ವಿಷಯಕ್ಕೆ ಬಂದರೆ, ಅತಿ ಹೆಚ್ಚು ಅಲಂಕಾರಕ್ಕಿಂತ ಸಿಂಪಲ್ ಆದ ನೀರಜಡೆ ಅಥವಾ ಲೂಸ್ ಜಡೆಗೆ ಆದ್ಯತೆ ನೀಡಿ. ಮುಖ್ಯವಾಗಿ ಮಲ್ಲಿಗೆ ಹೂವಿನ ಅಲಂಕಾರ ಮರೆಯಬೇಡಿ. ಉದ್ದನೆಯ ಮಲ್ಲಿಗೆ ಮಾಲೆ ಸುತ್ತಿದ ಜಡೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಪೊಂಗಲ್ ಲುಕ್‌ಗೆ ಹೆವಿ ಮೇಕಪ್ ಬೇಡ. ಕಣ್ಣಿಗೆ ದಟ್ಟವಾದ ಕಾಡಿಗೆ, ಮಸ್ಕರಾ ಮತ್ತು ಹಣೆಗೆ ಕೆಂಪು ಬಣ್ಣದ ಬಿಂದಿ ಇರಲಿ. ತುಟಿಗೆ ಲೈಟ್ ಕಲರ್ ಇರುವ ಲಿಪ್‌ಸ್ಟಿಕ್ ಹಚ್ಚಿ ಸಾಂಪ್ರದಾಯಿಕ ಮೇಕಪ್ ಪೂರ್ಣಗೊಳಿಸಿ.





