ದಕ್ಷಿಣ ಭಾರತದ ಸಿನಿಪ್ರೇಮಿಗಳ ‘ನ್ಯಾಚುರಲ್ ಬ್ಯೂಟಿ’ ಸಾಯಿ ಪಲ್ಲವಿ ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಅವರು ರಣ್‌ಬೀರ್ ಕಪೂರ್ ಮತ್ತು ಯಶ್ ಅವರೊಂದಿಗೆ ನಟಿಸುತ್ತಿರುವ ‘ರಾಮಾಯಣ’ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಆದರೆ, ಎಲ್ಲರೂ ಭಾವಿಸಿರುವಂತೆ ‘ರಾಮಾಯಣ’ ಸಾಯಿ ಪಲ್ಲವಿ ನಟಿಸಿರುವ ಮೊದಲ ಹಿಂದಿ ಸಿನಿಮಾವಲ್ಲ. ಅದಕ್ಕೂ ಮೊದಲೇ ಅವರು ಬಾಲಿವುಡ್ ಸೂಪರ್ ಸ್ಟಾರ್ ಆಮಿರ್ ಖಾನ್ ಅವರ ಪುತ್ರ ಜುನೈದ್ ಖಾನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
ಚಿತ್ರೀಕರಣ ಮುಗಿದರೂ ಬಿಡುಗಡೆ ಭಾಗ್ಯ ಕಾಣದ ‘ಮೇರೆ ರಹೊ’
ಜುನೈದ್ ಖಾನ್ ಪದಾರ್ಪಣೆಯ ಚಿತ್ರವಾದ ‘ಮೇರೆ ರಹೊ’ (Mere Raho) ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿದ್ದಾರೆ. 2024ರ ಆರಂಭದಲ್ಲೇ ಭಾರತ ಮತ್ತು ಜಪಾನ್‌ನ ಸುಂದರ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದರೂ, ಆಮಿರ್ ಖಾನ್ ಅವರು ಡೇಟ್ ಲಾಕ್ ಮಾಡುವ ವಿಚಾರದಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಆಮಿರ್ ಖಾನ್ ಅವರು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಅಲ್ಲದೆ, ಬಾಕ್ಸ್ ಆಫೀಸ್‌ನಲ್ಲಿ ಯಾವುದೇ ದೊಡ್ಡ ಸಿನಿಮಾಗಳ ಪೈಪೋಟಿ ಇಲ್ಲದ ಸಂದರ್ಭದಲ್ಲಿ ಜುನೈದ್ ಮತ್ತು ಸಾಯಿ ಪಲ್ಲವಿ ಚಿತ್ರವನ್ನು ಬಿಡುಗಡೆ ಮಾಡಲು ಅವರು ಯೋಜಿಸುತ್ತಿದ್ದಾರೆ. ಇದೇ ಕಾರಣಕ್ಕೆ ಕಳೆದ ಹಲವು ತಿಂಗಳಿಂದ ಸಿನಿಮಾ ಬಿಡುಗಡೆ ಮುಂದೂಡಲ್ಪಡುತ್ತಿದೆ. ಸದ್ಯದ ಮಾಹಿತಿಯಂತೆ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಸಿನಿಮಾ ತೆರೆಗೆ ಬರಬಹುದು ಎನ್ನಲಾಗಿದ್ದರೂ, ಚಿತ್ರತಂಡದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಸಾಯಿ ಪಲ್ಲವಿ ಕೈಯಲ್ಲಿವೆ ಬಹುನಿರೀಕ್ಷಿತ ಸಿನಿಮಾಗಳು
ಹಿಂದಿ ಚಿತ್ರದ ವಿಳಂಬದ ನಡುವೆಯೂ ಸಾಯಿ ಪಲ್ಲವಿಗೆ ಹಲವಾರು ಸಿನಿಮಾಗಲು ಅವರ ಡೆಟ್ ಕೋಟ್ಟಿದ್ದಾರೆ. ಹಾಗೂ ಹಲವಾರು ಸಿನಿಮಾದ ಚಿತ್ರೀಕರಣವೂ ಈಗಾಗಲೇ ಪ್ರಾರಂಭವಾಗಿವೆ. ರಾಮಯಣದಲ್ಲಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದು, ಇಡೀ ಭಾರತೀಯ ಚಿತ್ರರಂಗವೇ ಈ ಚಿತ್ರಕ್ಕಾಗಿ ಕಾಯುತ್ತಿದೆ. ಎಂ.ಎಸ್. ಸುಬ್ಬಲಕ್ಷ್ಮಿ ಬಯೋಪಿಕ್‌ನಲ್ಲಿ ಅವರು ಸಂಗೀತ ದಿಗ್ಗಜ ಎಂ.ಎಸ್. ಸುಬ್ಬಲಕ್ಷ್ಮಿ ಅವರ ಜೀವನ ಆಧರಿತ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಮಹಿಳಾ ಪ್ರಧಾನ ಚಿತ್ರದಲ್ಲಿ ಸಾಯಿ ಪಲ್ಲವಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಇನ್ನೂ ಶೇಖರ್ ಕಮ್ಮುಲ ನಿರ್ದೇಶನದ ಹೊಸ ಚಿತ್ರದಲ್ಲೂ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಒಟ್ಟಾರೆಯಾಗಿ, ಸಾಯಿ ಪಲ್ಲವಿ ಅವರ ಬಾಲಿವುಡ್ ಪದಾರ್ಪಣೆಯ ಚಿತ್ರವು ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಅಮಿರ್ ಖಾನ್ ಅವರ ನಿರ್ಧಾರದ ಮೇಲೆ ನಿಂತಿದೆ. ಅವರ ಮೊದಲ ಹಿಂದಿ ಸಿನಿಮಾ ಯಾವುದು ಎಂಬುದು ಸದ್ಯದ ಕುತೂಹಲವಾಗಿದೆ.





