ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಆರೇ ಆರು ನಿಮಿಷ ಸೊಂಟ ಬಳುಕಿಸಿ, ಬರೋಬ್ಬರಿ ಆರು ಕೋಟಿ ಜೇಬಿಗಿಳಿಸಿರೋ ಮಿಲ್ಕಿಬ್ಯೂಟಿ ತಮನ್ನಾ ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಓ ಮೈ ಗಾಡ್.. ನಟಿಮಣಿಯರ ಒಂದು ಸಿನಿಮಾದ ರೆಮ್ಯುನರೇಷನ್ನೇ ಅಷ್ಟಿರಲ್ಲ, ಅಂಥದ್ದು ಒಂದು ಡ್ಯಾನ್ಸ್ ಗೆ ಅಷ್ಟು ಚಾರ್ಜ್ ಮಾಡಿದ್ರಾ ತಮನ್ನಾ..? ಅವ್ರು ಮಾಡಿದ್ದು 6 ಕ್ರೋರ್ ಚಾರ್ಜೋ ಅಥ್ವಾ ಮೋಜು ಮಸ್ತಿಯಲ್ಲಿದ್ದವ್ರ ರೀ-ಚಾರ್ಜೋ ಅನ್ನೋ ಕುತೂಹಲ ಎಲ್ಲಿರಿಗೂ ಇದೆ ಆದರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಒಂದು ದಶಕಕ್ಕೂ ಹೆಚ್ಚು ಕಾಲ ಸಿನಿರಂಗದಲ್ಲಿ ಸಕ್ರಿಯವಾಗಿರುವ ತಮನ್ನಾ ಭಾಟಿಯಾ, ಇಂದಿಗೂ ಸ್ಟೇಜ್ ಶೋ, ಐಟಂ ನಂಬರ್, ಸ್ಪೆಷಲ್ ಅಪಿಯರೆನ್ಸ್‌ಗಳಲ್ಲಿ ಭಾರೀ ಡಿಮ್ಯಾಂಡ್ ಹೊಂದಿದ್ದಾರೆ. ಹೊಸ ನಟಿಯರ ಪ್ರವಾಹ ಇದ್ದರೂ, ತಮನ್ನಾ ಹೆಸರು ಕೇಳಿದರೆ ಕಾರ್ಯಕ್ರಮ ಆಯೋಜಕರು ಹಿಂದೆ ಮುಂದೆ ನೋಡೋದಿಲ್ಲ. ಕಣ್ಣು ಮುಚ್ಚಿ ತಮನ್ನಾ ಜೇಬಿಗೆ ದುಡ್ಡು ಹಾಕ್ತಾರೆ.
ಸೊಂಟ ಬಳುಕಿಸಿದ್ದು 6 ನಿಮಿಷ.. ಜೇಬಿಗಿಳಿಸಿದ್ದು 6ಕೋಟಿ
ಅಬ್ಬಬ್ಬಾ.. ನ್ಯೂ ಇಯರ್ ಕಿಕ್ಕೇರಿಸಿದ ಮಿಲ್ಕಿ ಬ್ಯೂಟಿ ತಮನ್ನಾ
ಗ್ಲಾಮರ್ ಗೆ ಕೇರ್ ಆಫ್ ಅಡ್ರೆಸ್ ತಮನ್ನಾ ಡ್ಯಾನ್ಸ್‌ನಲ್ಲಿ ಕೇವಲ ಸ್ಟೆಪ್ಸ್ ಮಾತ್ರವಲ್ಲ, ಎಮೋಷನ್, ಎಲಿಗನ್ಸ್ ನೋಡುಗರ ಮನಸನ್ನ ಅಟ್ರಾಕ್ಟ್ ಮಾಡುತ್ತೆ. ಜೊತೆಗೆ ಅವರ ನ್ಯಾಚುರಲ್ ಬ್ಯೂಟಿ, ಗ್ಲಾಮರ್ ಮತ್ತು ಸ್ಮೈಲ್ ಪ್ರೇಕ್ಷಕರನ್ನು ಸೆಳೆಯದೇ ಬಿಡುವುದಿಲ್ಲ. ಇದೆ ಕಾರಣಕ್ಕೆ ವಯಸ್ಸು ಕೇವಲ ನಂಬರ್ ಎಂದು ನಟಿಮಣಿಯರು ಸಾಭಿತು ಮಾಡಿಬಿಡ್ತಾರೆ. ಅಂದಹಾಗೆ ಗೋವಾದ ಪ್ರಸಿದ್ಧ ಬಾಗಾ ಬೀಚ್… ಅಲೆಗಳ ಸದ್ದು, ನೈಟ್ ಲೈಟ್ಸ್ ಮಿನುಗು ಈ ವಾತಾವರಣದ ನಡುವೆ ಸಿನಿರಂಗದ ಟಾಪ್ ನಟಿ ತಮನ್ನಾ ಭಾಟಿಯಾ ತಮ್ಮ ಡ್ಯಾನ್ಸ್ ಮೂಲಕ ವೇದಿಕೆಯನ್ನು ಬೆಂಕಿಯಂತೆ ಉರಿಸಿದ್ದಾರೆ.
ಸೌತ್ ಇಂಡಸ್ಟ್ರಿಯಿಂದ ಬಾಲಿವುಡ್‌ವರೆಗೆ ಯಶಸ್ವಿ ಪಯಣ ಕಂಡ ತಮನ್ನಾ, ಇಂದು ಡ್ಯಾನ್ಸ್ ನಂಬರ್‌ಗಳಲ್ಲಿಯೂ ಕೋಟಿ ಕೋಟಿ ಸಂಭಾವನೆ ಪಡೆಯುವ ಸ್ಟಾರ್ ನಟಿ ಆಗಿ ಮಿಂಚುತ್ತಿದ್ದಾರೆ. ಗೋವಾದ ಬಾಗಾ ಬೀಚ್‌ನಲ್ಲಿ ನಡೆದ ಈ 6 ನಿಮಿಷಗಳ ಡ್ಯಾನ್ಸ್ ಡ್ಯಾನ್ಸ್ ಪರ್ಫಾರ್ಮೆನ್ಸ್‌ಗೆ ತಮನ್ನಾ 6 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಈಗ ಇಂಡಸ್ಟ್ರಿಯಲ್ಲಿ ಭಾರೀ ಚರ್ಚೆ ಆಗ್ತಿದೆ. ನಿಮಿಷಕ್ಕೆ ಒಂದು ಕೋಟಿ ಸಂಭಾವನೆ ಇದು ಕೇವಲ ಡ್ಯಾನ್ಸ್ ಅಲ್ಲ, ತಮನ್ನಾ ಅವರ ಬ್ರಾಂಡ್ ವ್ಯಾಲ್ಯೂಗೆ ಸಿಕ್ಕಿರುವ ದೊಡ್ಡ ಮಾನ್ಯತೆ.
ಗ್ಲಾಮರ್‌ಗೆ c/o ಅಡ್ರೆಸ್ ಈ ಹಾಟ್ & ಕ್ಯೂಟ್ ಚೆಲುವೆ..!
ಗೋವಾ ಸಮುದ್ರ ತೀರದಲ್ಲಿ ಮಿಲ್ಕಿ ಬ್ಯೂಟಿ ಮಸ್ತ್ ಡ್ಯಾನ್ಸ್
ಅಂದಹಾಗೆ ಕನ್ನಡದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿಮಾನಯದ ಜಾಗ್ವಾರ್ ಚಿತ್ರದ ಮೂಲಕ ಕನ್ನಡ ಹಾಡಿಗೆ ಮೊದಲ ಭಾರಿ ಸ್ಟೆಪ್ ಹಾಕಿದ್ದ ತಮನ್ನಾ ನಂತರ ಯಶ್ ಅವರ ಕೆಜಿಎಫ್ ಜೋಕೆ ಹಾಡಿಗೆ ಬೋಲ್ಡ್ ಆಗಿ ಸೊಂಟ ಕುಣಿಸಿದ್ರು. ಸದ್ಯ ತಮನ್ನಾ ನಟನೆಗಿಂತ ಹೆಚ್ಚು ಸಂಭಾವನೆಯನ್ನು ತಮ್ಮ ಡ್ಯಾನ್ಸ್ ಗೆ ಪಡೆಯುತ್ತಿದ್ದಾರೆ.





