ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
ಬಾದ್ ಶಾ ಕಿಚ್ಚ ಸುದೀಪ್ ಅಭಿನಯಿಸಿ ನಿರ್ಮಾಣ ಮಾಡಿರೋ ಮಾರ್ಕ್ ಸಿನಿಮಾ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆ ಆಗಿ ಹೊಸ ವರ್ಷಕ್ಕೆ ಕಾಲಿಟ್ಟಿದೆ. ಸದ್ಯ ಮಾರ್ಕ್ ಸಿನಿಮಾನ ಫ್ಯಾನ್ಸ್ ಜೊತೆ ನೋಡೋ ಮೂಲಕ ಸುದೀಪ್ ನ್ಯೂ ಇಯರ್ ವೆಲ್ ಕಮ್ ಮಾಡಿದ್ದಾರೆ. ಹಾಗಾದ್ರೆ ಕಿಚ್ಚನ ನೆಕ್ಸ್ಟ್ ಥೀಯೇಟರ್ ವಿಸಿಟ್ ಯಾವ್ದು, ಫ್ಯಾನ್ಸ್ ಜೊತೆ ಡಬಲ್ ಮಸ್ತಿ ಮಾಡೋಕೆ ಕಿಚ್ಚನ ಜೋಶ್ ಹೇಗಿದೆ ಅನ್ನೋ ಎಲ್ಲವುದರ ಮಾಹಿತಿ ಇಲ್ಲಿದೆ ನೋಡಿ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೊಸ ವರ್ಷವನ್ನು ಅಭಿಮಾನಿಗಳ ಜೊತೆಗೆ ತಮ್ಮ ಬ್ಲಾಕ್‌ಬಸ್ಟರ್ ಸಿನಿಮಾ ‘ಮಾರ್ಕ್’ ನೋಡುವ ಮೂಲಕ ಸೆಲೆಬ್ರೇಟ್ ಮಾಡಿದ್ದಾರೆ. ಅಂದಹಾಗೆ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಮಾರ್ಕ್ ಸಿನಿಮಾ ಗ್ರಾಂಡ್ ಓಪನಿಂಗ್ ಪಡೆದುಕೊಂಡಿತ್ತು. ಮಗಳು ಸಾನ್ವಿ ಹಾಗು ಪತ್ನಿ ಪ್ರಿಯಾ ಫಸ್ಟ್ ಡೇ ಫಸ್ಟ್ ಶೋ ಇದೆ ಥಿಯೇಟರ್ ನಲ್ಲಿ ವೀಕ್ಷಣೆ ಮಾಡಿದ್ರು. ಇದೀಗ ಸುದೀಪ್ ಆದೆ ಥಿಯೇಟರ್ ಗೆ ಬಂದು ಫ್ಯಾನ್ಸ್ ಮಧ್ಯದಲ್ಲಿ ಸಿನಿಮಾ ನೋಡಿದ್ದಾರೆ.
ಸಂತೋಷ್ ಥಿಯೇಟರ್‌ನಲ್ಲಿ ಕಿಚ್ಚ ಗ್ರ್ಯಾಂಡ್ ಎಂಟ್ರಿ, ಫ್ಯಾನ್ಸ್ ಕ್ರೇಜ್
ಫ್ಯಾನ್ಸ್ ಜೊತೆ ಅಭಿನಯ ಚಕ್ರವರ್ತಿ.. ನ್ಯೂ ಇಯರ್ ರೌಂಡ್ಸ್
ಉತ್ತರ ಕರ್ನಾಟಕದ ಹುಬ್ಬಳ್ಳಿ ಸೇರಿ ಹಲವು ಕಡೆ ಥಿಯೇಟರ್ ವಿಸಿಟ್ ಮಾಡ್ತೀನಿ ಅಂತ ಸುದೀಪ್ ಹೇಳಿಕೊಂಡಿದ್ದಾರೆ. ಇನ್ನು ಸುದೀಪ್ ಥಿಯೇಟರ್ ವಿಸಿಟ್ ಮಾಡ್ತಿದ್ದಾರೆ ಅಂದ್ರೆ ಜನ ಸುಮ್ನೆ ಇರ್ತಾರ..? ಕಿಚ್ಚ ಸುದೀಪ್ ಥಿಯೇಟರ್ ಆವರಣಕ್ಕೆ ಕಾಲಿಡೋದೇ ತಡ, ಅಭಿಮಾನಿಗಳ ಖುಷಿಗೆ ಪಾರವೇ ಇರಲಿಲ್ಲ. ಅಷ್ಟೊಂದು ಅಭಿಮಾನಿಗಳ ಮಧ್ಯೆದಲ್ಲಿಯೇ ಸುದೀಪ್ ಥಿಯೇಟರ್ ಒಳಗೆ ಕಾಲಿಟ್ಟರು. ಸಂತೋಷ್ ಥಿಯೇಟರ್‌ಗೆ ಆಗಮಿಸಿದ ಕಿಚ್ಚ ಅವರನ್ನು ಸಾವಿರಾರು ಅಭಿಮಾನಿಗಳು ಸ್ವಾಗತಿಸಿದರು.
ಥಿಯೇಟರ್ ಒಳಗೆ ಹೋಗಲು ಸಾಕಷ್ಟು ಹರಸಾಹಸ ಪಡಬೇಕಾಯಿತು. ಫ್ಯಾನ್ಸ್ ಜೊತೆ ಸಿನಿಮಾ ನೋಡಿ ಖುಷಿಪಟ್ಟ ಕಿಚ್ಚ, ಪೈರಸಿ ಬಗ್ಗೆ ಕಟುವಾಗಿ ಮಾತನಾಡಿದರು. ಈಗಾಗಲೇ ಪೈರಸಿ ಲಿಂಕ್‌ಗಳ ವಿರುದ್ಧ ಕ್ರಮ ಕೈಗೊಂಡಿರುವ ಸುದೀಪ್, ಸಿನಿಮಾ ಥಿಯೇಟರ್‌ನಲ್ಲಿ ನೋಡಿ ಬೆಂಬಲಿಸಿ ಎಂದು ಫ್ಯಾನ್ಸ್‌ಗೆ ಕರೆ ನೀಡಿದ್ದಾರೆ.
ಪೈರಸಿ ಅಂದ್ರೆ ಕ್ರೈಂ ..ಕೊಲೆ ಮಾಡಿದಂಗೆ ಎಂದ ಕಿಚ್ಚ..!
ಥಿಯೇಟರ್ ರೌಂಡ್ಸ್‌ಗೆ ಕಿಚ್ಚ ರೆಡಿ ಫ್ಯಾನ್ಸ್ ಡಬಲ್ ಜಾಯ್
ಕ್ರಿಸ್‌ಮಸ್‌ಗೆ ರಿಲೀಸ್ ಆದ ‘ಮಾರ್ಕ್’ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮಾಸ್ ಆಕ್ಷನ್ ಥ್ರಿಲ್ಲರ್ ಆಗಿ ಮೂಡಿಬಂದಿರುವ ಈ ಚಿತ್ರದಲ್ಲಿ ಸುದೀಪ್ ಸ್ವ್ಯಾಗ್ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಫ್ಯಾನ್ಸ್ ನ ಥ್ರಿಲ್ ಮಾಡುತ್ತಿದೆ. ಹೊಸ ವರ್ಷದ ಸಂಭ್ರಮದಲ್ಲಿ ಸುದೀಪ್ ಫ್ಯಾನ್ಸ್ ಜೊತೆಗೂಡಿ ‘ಮಾರ್ಕ್’ ಸಿನಿಮಾ ವೀಕ್ಷಿಸಿ ಥೀಯೇಟರ್ ರೌಂಡ್ಸ್ ಹಾಕೋಕೆ ರೆಡಿಯಾಗಿದ್ದಾರೆ.
ಹೊಸ ವರ್ಷ 2026ರ ಸಂಭ್ರಮವನ್ನು ಮಾರ್ಕ್ ಸಿನಿಮಾ ಮೂಲಕ ಫ್ಯಾನ್ಸ್ ಜೊತೆ ಸೆಲೆಬ್ರೇಟ್ ಮಾಡುತ್ತಿರುವ ಕಿಚ್ಚ ಸುದೀಪ್ ಗೆ ಫ್ಯಾನ್ಸ್ ಶುಭಾಶಯ ತಿಳಿಸುತ್ತಿದ್ದಾರೆ. ‘ಮಾರ್ಕ್’ ಚಿತ್ರ ಇನ್ನಷ್ಟು ದೊಡ್ಡ ಸಕ್ಸೆಸ್ ಆಗಲಿ ಎಂದು ಬಾದ್ ಫ್ಯಾನ್ಸ್ ಹಾರೈಸುತ್ತಿದ್ದಾರೆ.





