• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, July 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜಿಮ್ ರವಿಗೆ “ವಿಶ್ವ ಶ್ರೇಷ್ಠ ಕ್ರೀಡಾ ಸಾಧಕ 2025” ಪ್ರಶಸ್ತಿ ಪ್ರದಾನ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
December 30, 2025 - 8:05 am
in ಸಿನಿಮಾ
0 0
0
Untitled design 2025 12 30T080237.974

ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡು ದಾಖಲೆ ನಿರ್ಮಿಸಿರುವುದ್ದಲ್ಲದೆ, 100 ಕ್ಕೂ ಹೆಚ್ಚಿನ ಬಂಗಾರದ ಪದಕಗಳನ್ನು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗಳಿಸಿರುವ, ಭಾರತದ ಪ್ರಮುಖ ಪ್ರಶಸ್ತಿಗಳಾದ ಮಿಸ್ಟರ್ ಇಂಡಿಯಾ, ಭಾರತ ಶ್ರೀ, ಭಾರತ ಶ್ರೇಷ್ಠ ಹಾಗೂ ಕರ್ನಾಟಕದ ಪ್ರಮುಖ ಪ್ರಶಸ್ತಿ ಕರ್ನಾಟಕ ಶ್ರೇಷ್ಠ, ಕರ್ನಾಟಕ ಶ್ರೀ ಸೇರಿದಂತೆ ಏಕಲವ್ಯ ಪ್ರಶಸ್ತಿಯನ್ನು ಪಡೆದುಕೊಂಡಿರುವ ಜಿಮ್ ರವಿ ಅವರು ಭಾರತ ತಂಡದ ನಾಯಕ ಹಾಗೂ ಕೋಚ್ ಆಗಿ ಕೂಡ ಸೇವೆ ಸಲ್ಲಿಸಿದ್ದಾರೆ.

ಸಮಾಜಮುಖಿ ಕಾರ್ಯಗಳಲ್ಲೂ ಗುರುತಿಸಿಕೊಂಡಿರುವ ಜಿಮ್ ರವಿ, ದಕ್ಷಿಣ ಭಾರತದ ಹೆಸರಾಂತ ನಟರೂ ಹೌದು. ಅಷ್ಟೇ ಅಲ್ಲದೇ ಅಮೇರಿಕಾ, ಆಸ್ಟ್ರೇಲಿಯಾ, ಇಟಲಿ, ಸ್ಪೇನ್, ಟರ್ಕಿ, ಜರ್ಮನಿ, ಜಪಾನ್, ಫಿಲಿಪೈನ್ಸ್, ಫ್ರಾನ್ಸ್ ಮುಂತಾದ ದೇಶಗಳಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿರುವ ಜಿಮ್ ರವಿ ವಿದೇಶಗಳಲ್ಲೂ ಕೂಡ ಸಾಕಷ್ಟು ಪ್ರಶಸ್ತಿ ಪಡೆದು ಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ರವಿ ಜಿಮ್ ಅನ್ನು ನಡೆಸುತ್ತಿರುವ ಜಿಮ್ ರವಿ ಅವರು ಇವರೆಗೂ ಒಂದು ಲಕ್ಷ ಎಂಭತ್ತು ಸಾವಿರ ಜನರಿಗೆ ಟ್ರೈನಿಂಗ್ ನೀಡಿದ್ದಾರೆ.

RelatedPosts

ಮತ್ತೊಮ್ಮೆ ಕಿರುತೆರೆಗೆ ಅಮಿತಾಬ್ ಬಚ್ಚನ್ ಎಂಟ್ರಿ: ಆಗಸ್ಟ್ 10ರಿಂದ ಕೆಬಿಸಿ 18 ಸೀಸನ್ ಆರಂಭ..!

ನೋಲನ್‌ಗೆ ಮತ್ತೊಂದು ಗೆಲುವು: ‘ದಿ ಆಡಸ್ಸಿ’ ವಿಶ್ವದಾದ್ಯಂತ ಭರ್ಜರಿ ಓಪನಿಂಗ್

ಕಾನೂನು ಸಮರದಲ್ಲಿ ‘ಬಾಸ್’ ಸಿನಿಮಾಗೆ ಭರ್ಜರಿ ಜಯ..!

ಪ್ರಿಯಾಂಕಾ ಹುಟ್ಟುಹಬ್ಬದಂದು ‘ಮಂದಾಕಿನಿ’ ಫಸ್ಟ್ ಲುಕ್ ಬಿಡುಗಡೆ

ADVERTISEMENT
ADVERTISEMENT

ಇವರ ಸಾಧನೆಯನ್ನು ಗುರುತಿಸಿರುವ ಹೆಮ್ಮೆಯ ಕನ್ನಡ ಸಂಘ ದುಬೈ, ಯು.ಎ.ಇ ಅವರು ರವಿ ಅವರಿಗೆ “ವಿಶ್ವ ಶ್ರೇಷ್ಠ ಕ್ರೀಡಾ ಪ್ರಶಸ್ತಿ 2025 ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪೂಜ್ಯ ನಂಜಾವಧೂತ ಸ್ವಾಮಿಗಳು, ಮಾಜಿ ಸಂಸದ ಪ್ರತಾಪ್ ಸಿಂಹ, ನಟ ಕೋಮಲ್, ಮಾಜಿ ಸಂಸದ ಮುನಿಸ್ವಾಮಿ, ನಿರ್ಮಾಪಕ ಶಂಕರ್ ಗೌಡ ಹಾಗೂ ದುಬೈ ಕನ್ನಡ ಸಂಘದ ಅಧ್ಯಕ್ಷರಾದ ವರದರಾಜೇ ಗೌಡ ಮುಂತಾದವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

101ಜನರೊಂದಿಗೆ ಯಶಸ್ವಿಯಾಗಿ ಕಾಶಿಯಾತ್ರೆ ಮಾಡಿದ ಜಿಮ್ ರವಿ

ಕೋಲಾರ ಮೂಲದ ಎ.ವಿ.ರವಿ, ಜಿಮ್ ರವಿ ಎಂದೇ ಖ್ಯಾತಿ ಪಡೆದವರು. ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟುವಾಗಿ ದೇಶ ಹಾಗೂ ವಿದೇಶಗಳಲ್ಲೂ ಪ್ರಸಿದ್ದರಾಗಿರುವ ಜಿಮ್ ರವಿ, ಮಿಸ್ಟರ್ ಇಂಡಿಯಾ ಹಾಗೂ ಕರ್ನಾಟಕದ ಏಕಲವ್ಯ ಪ್ರಶಸ್ತಿ ವಿಜೇತರು ಕೂಡ. ಇತ್ತೀಚೆಗೆ “ಪುರುಷೋತ್ತಮ” ಎಂಬ ಚಿತ್ರದಲ್ಲಿ ನಾಯಕನಾಗೂ ರವಿ ನಟಿಸಿದ್ದರು. ಇದೆಲ್ಲಾ ಒಂದು ಕಡೆಯಾದರೆ, ರವಿ ಅವರು ಸಾಮಾಜಿಕ ಕಾರ್ಯಗಳ ಮೂಲಕವೂ ಹೆಸರುವಾಸಿ. ಆದರೆ ಒಂದು ದಿನ ಆದರೆ ತಾವು ಮಾಡುವ ಸಾಮಾಜಿಕ ಕೆಲಸದ ಬಗ್ಗೆ ಒಂದು ದಿನವೂ ಪ್ರಚಾರ ಬಯಸಿದವರಲ್ಲಾ.‌

ಆದರೆ ಎ.ವಿ ರವಿ ಅವರು ಈಗ ಅನೇಕ ಜನರಿಗೆ ಆದರ್ಶವಾಗುವಂತಹ ಮಹತ್ತರ ಕಾರ್ಯ ಮಾಡಿದ್ದಾರೆ. ರವಿ ಅವರ ತಂದೆಗೆ ಕಾಶಿಯಾತ್ರೆ ಮಾಡುವ ಆಸೆ ಇತ್ತಂತೆ. ಆದರೆ ಕಾರಾಣಾಂತರದಿಂದ ಅದು ಸಾಧ್ಯವಾಗಿರಲಿಲ್ಲ. ತಂದೆಗೆ ಕಾಶಿಯಾತ್ರೆ ಮಾಡಿಸಲಿಲ್ಲ. ಎಂಬ ಕೊರಗು ರವಿ ಅವರನ್ನು ಸದಾ ಕಾಡುತ್ತಿತ್ತಂತೆ. ಹಾಗಾಗಿ ರವಿ ಅವರು ಹದಿನಾಲ್ಕು ವರ್ಷಗಳ ಹಿಂದೆಯೇ ಒಂದು ಸಂಕಲ್ಪ ಮಾಡಿದರಂತೆ. ನಮ್ಮ ಅಪ್ಪನ ಹೆಸರಿನಲ್ಲಿ ಕೈಲಾದಷ್ಟು ಜನ ಅಶಕ್ತರಿಗೆ ಕಾಶಿಯಾತ್ರೆ ಮಾಡಿಸುತ್ತೇನೆ ಅಂತ. ಅಂದುಕೊಂಡ ಹಾಗೆ ಎ.ವಿ.ರವಿ ಮಾಡಿದ್ದಾರೆ. ಐದಲ್ಲ, ಹತ್ತಲ್ಲ.. ಬರೋಬರಿ 101 ಜನರಿಗೆ ವಿಮಾನದ ಮೂಲಕ ಕಾಶಿಯಾತ್ರೆ ಮಾಡಿಸಿಕೊಂಡು ಬಂದಿದ್ದಾರೆ.

ಕರ್ನಾಟಕ ಸೇರಿದಂತೆ ಆಂದ್ರ ಹಾಗೂ ತಮಿಳುನಾಡಿನಿಂದ ಸುಮಾರು 101 ಜನ ಈವರೆಗೂ ಕಾಶಿಯಾತ್ರೆ ಮಾಡದ ಅಶಕ್ತರನ್ನು ಆಯ್ಕೆ ಮಾಡಿ ಯಾವುದೇ ತೊಂದರೆ ಬಾರದ ಹಾಗೆ ಕಾಶಿಯಾತ್ರೆಯನ್ನು ಅದ್ದೂರಿಯಾಗಿ ಮಾಡಿಸಿದ್ದಾರೆ. ಅವರವರ ಊರುಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲು ವಾಹನದ ವ್ಯವಸ್ಥೆ ಮಾಡಿ, ವಿಮಾನ ನಿಲ್ದಾಣದಲ್ಲಿ ಉಪಹಾರ ಮುಗಿಸಿ ನೇರವಾಗಿ ಅಯೋಧ್ಯೆಗೆ ತೆರಳಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಎಲ್ಲರಿಗೂ ಲಘು ಉಪಾಹಾರ ಹಾಗೂ ನೀರಿನ ಬಾಟಲ್ ನೀಡಲಾಯಿತು ಹಾಗೂ ದೇವರ ದರ್ಶನಕ್ಕಾಗಿ ಮಹಿಳೆಯರಿಗೆ ಎರಡು ಹೊಸ ಸೀರೆ, ಪುರುಷರಿಗೆ ಎರಡು ಹೊಸ ಪಂಚೆ ಉಡುಗೊರೆಯಾಗಿ ಕೊಡಲಾಯಿತು.

ಅಯೋಧ್ಯೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡದವರಾದ ಚೆನ್ನಪ್ಪ ಅವರು ಇಷ್ಟು ಜನರಿಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಿಸಿದ್ದರು. ಪೊಲೀಸ್ ಸಿಬ್ಬಂದಿಗಳು ಸಹ ಇವರೆಲ್ಲರು ಸುಲಭವಾಗಿ ದೇವರ ದರ್ಶನ ಮಾಡಲು ಸಹಕಾರ ನೀಡಿದ್ದಾರೆ. ಅಲ್ಲಿಂದ ವಿಶೇಷ ಬಸ್ ಮೂಲಕ ಕಾಶಿಗೆ ಬಂದ 101 ಜನರ ತಂಡಕ್ಕೆ ಪ್ರಸಿದ್ದ ಜಂಗಮವಾಡಿ ಮಠದಲ್ಲಿ 45 AC room ಗಳನ್ನು ವಾಸ್ತವ್ಯಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲೇ ಉಪಹಾರ ಹಾಗೂ ಭೋಜನದ ವ್ಯವಸ್ಥೆ ಕೂಡ ಆಯೋಜಿಸಲಾಗಿತ್ತು. ಕಾಶಿ ವಿಶ್ವನಾಥನ ಮಂದಿರದ ಹತ್ತಿರವಿರುವ ಕರ್ನಾಟಕದ ಈ ಮಠ, ಶಿಸ್ತು, ಸಂಯಮಕ್ಕೆ ಹೆಸರುವಾಸಿ. ಅಲ್ಲಿನ ಆತಿಥ್ಯ ಬಹು ಚೆಂದ.‌

ಮಠದಲ್ಲಿ ಉಳಿದುಕೊಂಡ ಯಾತ್ರಾರ್ಥಿಗಳ ತಂಡವನ್ನು ಕಾಶಿಯಲ್ಲೂ ಸಹ ಚೆನ್ನಪ್ಪ ಅವರ ಸಹಕಾರದಿಂದ ವಿಶೇಷ ದರ್ಶನ ಮಾಡಿಸಲಾಯಿತು. ಸಂಜೆ ನಡೆಯುವ ಗಂಗಾರತಿಯಲ್ಲೂ ಭಾಗವಹಿಸಲಾಯಿತು. ಕಾಶಿಯಲ್ಲಿರುವ ಅನ್ನಪೂರ್ಣ ಮಂದಿರ ಸೇರಿದಂತೆ ವಿವಿಧ ಮಂದಿಗಳಿಗೆ ಭೇಟಿ ನೀಡಲಾಯಿತು. ಗಂಗೆಯ ತಟದಲ್ಲೇ ಯಾತ್ರಾರ್ಥಿಗಳಿಂದ ತೀರ್ಥವಿಧಿ(ಪಿಂಡಪ್ರದಾನ) ಸಹ ಮಾಡಿಸಲಾಯಿತು. ಮಾರನೇ ದಿವಸ ವಿಶ್ರಾಂತಿಯ ದಿವಸವಾಗಿದ್ದು, ಅಂದು ರವಿ ಮತ್ತು ತಂಡದವರು ಯಾತ್ರಾರ್ಥಿಗಳನ್ನು ಶುಶ್ರೂಷೆ ಮಾಡಿದರು. ಆನಂತರ ಶಾಪಿಂಗ್ ಗೆ ಕರೆದುಕೊಂಡು ಹೋಗಲಾಯಿತು.

ಶಾಪಿಂಗ್ ಖರ್ಚಿಗೂ ಸ್ವಲ್ಪ ಹಣವನ್ನು ರವಿ ಅವರೆ ನೀಡಿದ್ದರು. ಈ ಸುಸ್ಸಜಿತ ವ್ಯವಸ್ಥೆಯನ್ನು ಕಂಡು ಭಾವುಕರಾದ ಯಾತ್ರಾರ್ಥಿಗಳು ಆನಂದಭಾಷ್ಪ ಸುರಿಸಿದರು. ರವಿ ಹಾಗೂ ಕಟುಂಬದವರಿಗೆ ತುಂಬು ಹೃದಯದಿಂದ ಆಶೀರ್ವಾದ ಮಾಡಿದರು. ರವಿ ಅವರ ತಂದೆಯ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡಿದರು. ಯಾತ್ರಾರ್ಥಿಗಳು ಎಲ್ಲಾ ಕಡೆ ಓಡಾಡಲು ಎಸಿ ವಾಹನದ ವ್ಯವಸ್ಥೆಯನ್ನೇ ಮಾಡಲಾಗಿತ್ತು. ಪುನಃ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಮೇಲೂ ಅವರವರ ಊರುಗಳಿಗೆ ತೆರಳಲು ಅನುಕೂಲವಿರುವ ವಾಹನ ವ್ಯವಸ್ಥೆ ಮಾಡಲಾಗಿತ್ತು. ದೇವರ ದಯೆಯಿಂದ ಇಷ್ಟು ದೊಡ್ಡ ತಂಡದ ಪ್ರಯಾಣದಲ್ಲಿ ಯಾರೊಬ್ಬರಿಗೂ ಆರೋಗ್ಯ ಸೇರಿದಂತೆ ಯಾವುದೇ ತೊಂದರೆ ಆಗಿಲ್ಲ.

ತಂದೆಯ ಆಸೆಯನ್ನು ಈಡೇರಿಸಿ, ಎಲ್ಲರ ಆಶೀರ್ವಾದದಿಂದ ಬಹಳ ಭಾವುಕರಾದ ಎ.ವಿ.ರವಿ ಅವರು ಯಾತ್ರೆ ಸುಸಜ್ಜಿತವಾಗಿ ಮುಗಿಯಲು ಸಹಕಾರ ನೀಡಿದ income tax ಕಮೀಷನರ್ ಜನಾರ್ದನ್,‌ ಅಯೋಧ್ಯೆಯಲ್ಲಿ ಸಹಕಾರ ಸುಲಲಿತವಾಗಿ ದರ್ಶನದ ವ್ಯವಸ್ಥೆ ಮಾಡಿದ ಸೋಮಣ್ಣ ಅವರಿಗೆ, ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ, ತುರುವೆಕೆರೆ ಕ್ಷೇತ್ರದ ಮಾಜಿ ಶಾಸಕರಾದ ಮಸಾಲೆ ಜಯರಾಮ್ ಅವರಿಗೆ, ನವರತನ್ ಪ್ಯಾಲೆಸ್ ಮದನ್ ಅವರಿಗೆ, ಚಸ್ಕಾಂ ಎಂ.ಡಿ ಶಿಲಾ ಅವರಿಗೆ ಹಾಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

101 ಜನರ ಅತೀ ದೊಡ್ಡ ತಂಡವನ್ನು ಕಾಶಿಯಾತ್ರೆ ಮಾಡಿಸಿರುವುದು ಇದೇ ಮೊದಲು. ಈವರೆಗೂ ಕರ್ನಾಟಕದಲ್ಲಾಗಲಿ ಅಥವಾ ಭಾರತದಲ್ಲಾಗಲಿ ಈ ರೀತಿ ಯಾರು ಈ ಪ್ರಯತ್ನ ಮಾಡಿಲ್ಲ ಎನ್ನಬಹುದು. ಜಿಮ್ ರವಿ ಅವರ ಈ ಕಾರ್ಯ ಎಲ್ಲರಿಗೂ ಆದರ್ಶ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 07 18T195637.567

ದೇವೇಗೌಡರ ಕುಟುಂಬದ ಬೆನ್ನೆಲುಬಾಗಿದ್ದ ಚೆನ್ನಮ್ಮ: ಸಿಎಂ ಡಿಕೆ ಶಿವಕುಮಾರ್ ಸಂತಾಪ

by ದಿಶಾ ಕೆ. ಎಸ್.
July 18, 2026 - 8:04 pm
0

Untitled design 2026 07 18T193249.222

HD ದೇವೇಗೌಡರ ಹುಟ್ಟೂರಲ್ಲಿ ನಾಳೆ ಚೆನ್ನಮ್ಮ ಅಂತ್ಯಕ್ರಿಯೆ

by ದಿಶಾ ಕೆ. ಎಸ್.
July 18, 2026 - 7:33 pm
0

Untitled design 2026 07 18T190508.552

ಚೆನ್ನಮ್ಮ ನಿಧನಕ್ಕೆ ರಾಜಕೀಯ ಗಣ್ಯರ ಕಂಬನಿ: ಸಿದ್ದರಾಮಯ್ಯ, ಯಡಿಯೂರಪ್ಪ ಸೇರಿ ಅನೇಕ ನಾಯಕರಿಂದ ಸಂತಾಪ

by ದಿಶಾ ಕೆ. ಎಸ್.
July 18, 2026 - 7:06 pm
0

Untitled design 2026 07 18T184447.416

ಎಫ್‌ಐಎಚ್ ಮಹಿಳಾ ಹಾಕಿ ವಿಶ್ವಕಪ್‌ಗೆ ಭಾರತ ತಂಡ ಪ್ರಕಟ

by ದಿಶಾ ಕೆ. ಎಸ್.
July 18, 2026 - 6:47 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಕಿ
    ಮತ್ತೊಮ್ಮೆ ಕಿರುತೆರೆಗೆ ಅಮಿತಾಬ್ ಬಚ್ಚನ್ ಎಂಟ್ರಿ: ಆಗಸ್ಟ್ 10ರಿಂದ ಕೆಬಿಸಿ 18 ಸೀಸನ್ ಆರಂಭ..!
    July 18, 2026 | 0
  • ವ
    ನೋಲನ್‌ಗೆ ಮತ್ತೊಂದು ಗೆಲುವು: ‘ದಿ ಆಡಸ್ಸಿ’ ವಿಶ್ವದಾದ್ಯಂತ ಭರ್ಜರಿ ಓಪನಿಂಗ್
    July 18, 2026 | 0
  • ಜ್ಞಾನಪೀಠ ಪ್ರಶಸ್ತಿ (11)
    ಕಾನೂನು ಸಮರದಲ್ಲಿ ‘ಬಾಸ್’ ಸಿನಿಮಾಗೆ ಭರ್ಜರಿ ಜಯ..!
    July 18, 2026 | 0
  • ಜ್ಞಾನಪೀಠ ಪ್ರಶಸ್ತಿ (9)
    ಪ್ರಿಯಾಂಕಾ ಹುಟ್ಟುಹಬ್ಬದಂದು ‘ಮಂದಾಕಿನಿ’ ಫಸ್ಟ್ ಲುಕ್ ಬಿಡುಗಡೆ
    July 18, 2026 | 0
  • ಜ್ಞಾನಪೀಠ ಪ್ರಶಸ್ತಿ
    ಹಂಸಲೇಖರಿಗೆ ಪದ್ಮ ಅಥವಾ ಜ್ಞಾನಪೀಠ ನೀಡಿ: ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೇಮ್ ಮನವಿ
    July 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version