ಕನ್ನಡದಲ್ಲಿ ಒಳ್ಳೆಯ ಕಂಟೆಂಟ್ ಬೇಸ್ಡ್ ಸಿನಿಮಾಗಳು ಬರ್ತಿಲ್ಲ ಅಂತಾರೆ ಜನ. ಸನಾತನ ಧರ್ಮದ ಸಂಸ್ಕೃತಿಯನ್ನ ಸಾರುವಂತಹ 45 ಸಿನಿಮಾವನ್ನು ಕೊಟ್ರೆ ಅದನ್ನೇ ಪೈರಸಿ ಮಾಡ್ತಾರೆ. ಒಂದಲ್ಲ ಎರಡಲ್ಲ.. ನೂರೆಂಟು ವಿಘ್ನಗಳು. ಒಂದ್ಕಡೆ ಅನ್ನದಾತ ರಮೇಶ್ ರೆಡ್ಡಿ ಪೈರಸಿ ಮಾಡಿರೋರ ವಿರುದ್ಧ ಕಿಡಿ ಕಾರುತ್ತಿದ್ರೆ, ಮತ್ತೊಂದ್ಕಡೆ ಥಿಯೇಟರ್‌ಗಳೇ ದೇವಾಲಯಗಳಾಗಿ ಬದಲಾಗ್ತಿವೆ. ನೂರಾರು ಹೆಣ್ಣು ಮಕ್ಕಳು ಸ್ಕ್ರೀನ್‌ಗಳ ಮುಂದೆ ದೀಪ ಬೆಳಗುವ ಮೂಲಕ ಗರುಡ ಪುರಾಣವನ್ನ ಕಣ್ತುಂಬಿಕೊಳ್ತಿದ್ದಾರೆ.
ಅನಾರೋಗ್ಯದ ನಡುವೆಯೂ ಬಣ್ಣ ಹಚ್ಚಿದ್ದ ಶಿವಣ್ಣನ ಸಿನಿಮಾ
ಸನಾತನ ಧರ್ಮ ಸಾರಿದ ತ್ರಿಮೂರ್ತಿ ಶಿವಣ್ಣ-ರಾಜ್-ಉಪ್ಪಿ..!
45.. ಮೊನ್ನೆಯಷ್ಟೇ ತೆರೆಕಂಡ ಸಿನಿಮಾ. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಂತಹ ಕಲಾವಿದರನ್ನ ಇಟ್ಕೊಂಡು ಅರ್ಜುನ್ ಜನ್ಯ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರೋ ಚಿತ್ರವಿದು. ಅಂದಹಾಗೆ ಇದು ಪ್ರತೀ ವಾರ ಬರುವ ಸಿನಿಮಾಗಳಂತಹ ಸಿನಿಮಾ ಅಲ್ಲವೇ ಅಲ್ಲ. ಒನ್ಸ್ ಇನ್ ಎ ಲೈಫ್ ಟೈಮ್ ತೆಗೆಯಬಲ್ಲಂತಹ ಚಿತ್ರ. ಹೌದು.. ಇಲ್ಲಿಯವರೆಗೆ ಯಾರೋ ಮಾಡಲಾಗದಂತಹ ಗರುಡ ಪುರಾಣದ ಕಥೆಗೆ ದೃಶ್ಯರೂಪ ಕೊಡಲಾಗಿದೆ.
ಅನಾರೋಗ್ಯದ ನಡುವೆಯೂ ನಟ ಶಿವರಾಜ್‌ಕುಮಾರ್ ಬಂದು ಶೂಟಿಂಗ್ ಮುಗಿಸಿಕೊಟ್ಟಿರೋ ಚಿತ್ರವಿದು. ನಮ್ಮ ಸನಾತನ ಹಿಂದೂ ಧರ್ಮದ ಸಂಸ್ಕೃತಿಯನ್ನ ಸಾರುವ ಕಥಾನಕದ ಈ ಚಿತ್ರ ಮನುಷ್ಯನ ಪಾಪ-ಪುಣ್ಯಗಳ ಲೆಕ್ಕವನ್ನ ಹೇಳುತ್ತೆ. ಸಾವಿನ ಬಳಿಕ ಆತ್ಮದ ಪಯಣದ ಬಗ್ಗೆ ತಿಳಿಸುತ್ತೆ. ಆ ನಿಟ್ಟಿನಲ್ಲಿ ಶಿವಣ್ಣ ಜೊತೆ ಉಪೇಂದ್ರ ಹಾಗೂ ರಾಜ್ ಶೆಟ್ಟಿ ಜನಕ್ಕೆ ಬಹುದೊಡ್ಡ ಸಂದೇಶ ಸಾರಿದ್ದಾರೆ.
ಆಲಯಗಳಾದ ಥಿಯೇಟರ್ಸ್.. ಶಿವ ತಾಂಡವಕ್ಕೆ ದೀಪದಾರತಿ
ಗರುಡ ಪುರಾಣ ತೆರೆಗೆ ತರೋಕೆ ಒಂದಲ್ಲ 2 ಗುಂಡಿಗೆ ಬೇಕು..!
ಪುಸ್ತಕ ಓದಲ್ಲ.. ತತ್ವ ಕೇಳಲ್ಲ.. ಸಿನಿಮಾನೂ ನೋಡದಿದ್ರೆ ಹೇಗೆ ?
ಜನ ಪುಸ್ತಕಗಳ ಮೂಲಕ ಓದಿ ತಿಳಿದುಕೊಳ್ಳಲ್ಲ.. ತತ್ವಗಳನ್ನ ಹೇಳ್ತೀವಿ ಬನ್ನಿ ಅಂದ್ರೂ ಬರಲ್ಲ. ಅದೇ.. ಸಿನಿಮಾ ಮೂಲಕ ತೋರಿಸ್ತೀವಿ ಬನ್ನಿ ಅಂದಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ. ಈಗ ಅದನ್ನ ಕಣ್ತುಂಬಿಕೊಂಡು, ಗರುಡ ಪುರಾಣವನ್ನು ಫೀಲ್ ಮಾಡುವ ಸಮಯ ಪ್ರೇಕ್ಷಕರದ್ದು. ಈ ಗರುಡ ಪುರಾಣ ಮಾಡಲು ಒಂದಲ್ಲ ಎರಡೆರಡು ಗುಂಡಿಗೆ ಇರಬೇಕು. ಅದು ತಮಗಿದೆ ಅನ್ನೋದನ್ನ ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ಪ್ರೂವ್ ಮಾಡಿ ತೋರಿಸಿದ್ದಾರೆ.
ಎಲ್ಲೆಡೆ 45 ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಇಂಟರೆಸ್ಟಿಂಗ್ ಅಂದ್ರೆ ಥಿಯೇಟರ್‌ಗಳು ಅಕ್ಷರಶಃ ದೇವಾಲಯಗಳಾಗಿ ಮಾರ್ಪಟ್ಟಿವೆ. ಅದಕ್ಕೆ ಕಾರಣ ಒನ್ ಅಂಡ್ ಓನ್ಲಿ ಶಿವರಾಜ್‌ಕುಮಾರ್. ಯೆಸ್.. ಶಿವಪ್ಪ ಪಾತ್ರದಲ್ಲಿ ಶಿವಣ್ಣ ಶಿವತಾಂಡವ ಆಡಿದ್ದಾರೆ. ಶಿವನ ಬರೋಬ್ಬರಿ 11 ಅವತಾರಗಳು ನೋಡುಗರನ್ನ ಮಂತ್ರಮುಗ್ಧಗೊಳಿಸುತ್ತವೆ. ಹಾಗಾಗಿಯೇ ಸಾವಿರಾರು ಮಂದಿ ಮಹಿಳೆಯರು ಸ್ಕ್ರೀನ್‌ಗೆ ದೀಪ ಬೆಳಗಿ, ಆರತಿ ಎತ್ತುತ್ತಿದ್ದಾರೆ. ದೀಪ ಬೆಳಗುತ್ತಲೇ ಶಿಳ್ಳೆ ಹೊಡೆಯುತ್ತಾ ಸಂಭ್ರಮಿಸ್ತಿದ್ದಾರೆ. ಇದೇ ಸಿನಿಮಾದ ರಿಯಲ್ ಸಕ್ಸಸ್.
45 ಅನ್ನದಾತನ ಅಳಲು.. ಮೋಸ ಮಾಡಿದವ್ರಿಗೆ ದೇವರೇ ಶಿಕ್ಷೆ..!
ಕೋಟಿ ಕೋಟಿ ಸುರಿದ ನಿರ್ಮಾಪಕರ ಮೊಬೈಲ್‌ಗೆ ಪೈರಸಿ ಫಿಲ್ಮ್
ಯೆಸ್.. ಕನ್ನಡದ ಜೊತೆ ಹಿಂದಿ, ಮಲಯಾಳಂನಲ್ಲೂ ಸಿನಿಮಾಗಳನ್ನ ಮಾಡಿ ಅನುಭವ ಇರುವ ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ 45 ಸಿನಿಮಾದ ಪೈರಸಿ ಇನ್ನಿಲ್ಲದೆ ಕಾಡಿದೆ. ಕೋಟ್ಯಂತರ ರೂಪಾಯಿ ಸುರಿದು ಒಂದೊಳ್ಳೆ ಸಿನಿಮಾ ಮಾಡಿದ್ರೆ, ರಿಲೀಸ್ ಆದ ದಿನವೇ ತಮ್ಮದೇ ಮೊಬೈಲ್‌ಗೆ ಪೈರಸಿ ಕಾಪಿ ಬಂದ್ರೆ ಎಷ್ಟು ನೋವಾಗಬೇಡ ಅಲ್ಲವೇ..? ನನಗೆ ಈ ರೀತಿ ಮೋಸ ಮಾಡದವರಿಗೆ ಆ ದೇವರೇ ಶಿಕ್ಷೆ ಕೊಡ್ತಾರೆ. ಅವರೇ ನೋಡಿಕೊಳ್ತಾರೆ ಅಂತ ನೋವಿನಿಂದ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡರು ರಮೇಶ್ ರೆಡ್ಡಿ.
ರಿಲೀಸ್ ದಿನವೇ ಪೈರಸಿ ಆದ 45.. ಪ್ರೊಡ್ಯೂಸರ್ ಕೆಂಡಾಮಂಡಲ
ಕೋರ್ಟ್‌ನಿಂದ ಆರ್ಡರ್.. ಚಿತ್ರಕ್ಕೆ ಹಾನಿ ಮಾಡಿದ್ರೆ ಬೀಳುತ್ತೆ ಕೇಸ್
ಇವೆಲ್ಲಾ ಬೆಳವಣಿಗೆಗಳ ನಡುವೆ ನಿರ್ಮಾಪಕರು ಕೋರ್ಟ್ ನಿಂದ ಪೈರಸಿ ಮಾಡುವವರ ಹಾಗೂ ಸಿನಿಮಾಗೆ ನಗೆಟೀವ್ ಕಮೆಂಟ್ಸ್ ಹಾಕಿ, ಅಪಪ್ರಚಾರ ಮಾಡಿ, ಸಿನಿಮಾದ ಗಳಿಕೆಗೆ ಚ್ಯುತಿ ತರುವವರ ವಿರುದ್ಧ ಸ್ಟೇ ಆರ್ಡರ್ ತಂದಿದ್ದಾರೆ. ಸೋ.. 45 ಸಿನಿಮಾಗೆ ನೆಗೆಟೀವ್ ಮಾಡೋಕೆ ಮುನ್ನ ಹತ್ತು ಸಲ ಯೋಚಿಸಿ.
ಒಂದಷ್ಟು ಮಂದಿ ಈ ಸಿನಿಮಾಗೆ ಉದ್ದೇಶಪೂರ್ವಕವಾಗಿ ಕೆಲಕ್ಷನ್‌ಗೆ ಹೊಡೆತ ಬೀಳುವಂತಹ ಕೆಲಸಗಳನ್ನ ಮಾಡ್ತಿದ್ದಾರೆ. ಅಂತವರಿಗೆ ಈ ನೋಟಿಸ್ ಎಚ್ಚರಿಕೆ ಗಂಟೆಯಾಗಲಿದೆ.





