ಆ ದಿನಗಳು ಡೈರೆಕ್ಟರ್ ಕೆ.ಎಂ.ಚೈತನ್ಯ ಬತ್ತಳಿಕೆಯಿಂದ ಮತ್ತೊಂದು ಅಂಥದ್ದೇ ಅಂಡರ್ವರ್ಲ್ಡ್ ಕಮ್ ಪ್ರೇಮ್ ಕಹಾನಿ ಕಥಾನಕದ ಬಲರಾಮನ ದಿನಗಳು ಸಿನಿಮಾ ತೆರೆಗೆ ಬರೋಕೆ ಸಜ್ಜಾಗಿದೆ. ಸ್ಟಾರ್ಕಾಸ್ಟ್ನಿಂದಲೇ ಅತೀವ ಕ್ಯೂರಿಯಾಸಿಟಿ ಮೂಡಿಸಿದ್ದ ಈ ಸಿನಿಮಾ, ಸದ್ಯ ಹಾಡೊಂದರ ಮೂಲಕ ಗಮನ ಸೆಳೆದಿದೆ.
ಬಲರಾಮನ ಜೊತೆ ಅಪ್ಪು ರಾಜಕುಮಾರಿ ಪ್ರಿಯಾ ಆನಂದ್
ಪ್ರಿಯಾ-ವಿನೋದ್ ಪ್ರಭಾಕರ್ 80ರ ಪ್ರೇಮ್ ಕಹಾನಿ ಶುರು
ಬರೀ ಟೈಟಲ್ ಹಾಗೂ ತಾರಾಬಳಗದಿಂದಲೇ ಚಿತ್ರರಂಗದಲ್ಲಿ ಟಾಕ್ ಕ್ರಿಯೇಟ್ ಮಾಡಿದ್ದ ಬಲರಾಮನ ದಿನಗಳು ಸಿನಿಮಾದ ಆಲ್ಬಮ್ನಿಂದ ಫಸ್ಟ್ ಸಿಂಗಲ್ ಹೊರಬಂದಿದೆ. ಇದು ತಮಿಳಿನ ಖ್ಯಾತ ಸಂಗೀತ ಸಂಯೋಜಕ ಸಂತೋಷ್ ನಾರಾಯಣನ್ ಕಂಪೋಸ್ ಮಾಡಿರೋ ಹಾಡಾಗಿದ್ದು, ಜಯಂತ್ ಕಾಯ್ಕಿಣಿ ಸಂಗೀತ ಸಂಯೋಜಿಸಿದ್ದಾರೆ. ಸಂಜಿತ್ ಹೆಗ್ಡೆ ಹಾಗೂ ಪುಣ್ಯ ಕಂಠದಲ್ಲಿ ಹಾಡು ಅಷ್ಟೇ ಸೊಗಸಾಗಿ ಮೂಡಿಬಂದಿದೆ.
ವಿನೋದ್ ಪ್ರಭಾಕರ್ ಹಾಗೂ ರಾಜಕುಮಾರ, ಜೇಮ್ಸ್ ಸಿನಿಮಾಗಳ ಖ್ಯಾತಿಯ ನಾಯಕನಟಿ ಪ್ರಿಯಾ ಆನಂದ್ ಕಾಂಬೋನ ಸಿನಿಮಾ ಇದಾಗಿದ್ದು, ಮೆಲೋಡಿ ಲವ್ ಟ್ರ್ಯಾಕ್ನಿಂದ ಗಾನಬಜಾನ ಶುರುವಿಟ್ಟಿದೆ ಚಿತ್ರತಂಡ. 80ರ ದಶಕದ ಲವ್ ಕಮ್ ಕ್ರೈಂ ಸ್ಟೋರಿ ಇದಾಗಿದ್ದು, ನೈಜ ಘಟನೆಗಳನ್ನ ಆಧರಿಸಿ ಚಿತ್ರಿಸಲಾಗಿದೆ. ವಿನೋದ್-ಪ್ರಿಯಾ ಕೆಮಿಸ್ಟ್ರಿ ತುಂಬಾ ಚೆನ್ನಾಗಿದ್ದು, ಹಾಡು ಕೇಳೋಕೂ ಇಂಪಾಗಿದೆ, ನೋಡೋ ನಯನಗಳಿಗೂ ತಂಪೆರೆಯುತ್ತಿದೆ. ಅಷ್ಟು ಸೊಗಸಾಗಿ ಅದನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ ಖ್ಯಾತ ಸಿನಿಮಾಟೋಗ್ರಾಫರ್ ಹೆಚ್ ಸಿ ವೇಣುಗೋಪಾಲ್. ಅಪ್ಪುಗಾಗಿ ಕನ್ನಡ ಕಲಿತೆ ಎಂದ ಪ್ರಿಯಾ ಆನಂದ್, ಅವರು ಕನ್ನಡ ಸಿನಿಮಾಗಳನ್ನ ಜಾಸ್ತಿ ಮಾಡೋಕೆ ಹೇಳಿದ್ರು ಎಂದು ಪ್ರಿಯಾ ಆನಂದ್ ಹೇಳಿದ್ದಾರೆ.
ಕಾಯ್ಕಿಣಿ ಪದಪುಂಜ.. ಸಂತೋಷ್ ಸಂಗೀತ.. ಸಂಜಿತ್ ಗಾನ
ಆ ದಿನಗಳು ಸಾರಥಿ ಹೊಸ ಪ್ರಯೋಗ ಬಲರಾಮನ ದಿನಗಳು
ಆ ದಿನಗಳು ಅನ್ನೋ ಎವರ್ಗ್ರೀನ್ ಸಿನಿಮಾ ಮಾಡಿದ್ದ ಕೆ ಎಂ ಚೈತನ್ಯ ಅವರೇ ಈ ಬಲರಾಮನ ದಿನಗಳು ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿರೋದು ವಿಶೇಷ. ಈ ಬಾರಿ ಕೂಡ 80 ರ ದಶಕದ ರೆಟ್ರೋ ಕಥೆಯನ್ನ ತೆರೆಗೆ ತರ್ತಿರೋ ಚೈತನ್ಯ, ಆಲ್ಮೋಸ್ಟ್ ಆಲ್ ಆ ದಿನಗಳು ಚಿತ್ರದಲ್ಲಿದ್ದ ಕಲಾವಿದರುಗಳಿಗೆಲ್ಲಾ ಇಲ್ಲಿಯೂ ಬಣ್ಣ ಹಚ್ಚಿಸಿದ್ದಾರೆ. ಆಶೀಶ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ ಬಲರಾಮನ ದಿನಗಳು ತಾರಾಗಣದಲ್ಲಿದ್ದಾರೆ. ಅಲ್ಲದೆ, ಡೆವಿಲ್, ಮಾರ್ಕ್ ಚಿತ್ರಗಳಿಂದ ಒಳ್ಳೆಯ ಸ್ಕೋರ್ ಮಾಡ್ತಿರೋ ಬಿಗ್ಬಾಸ್ ಆನೆ ವಿನಯ್ ಈ ಚಿತ್ರದಲ್ಲಿ ನಟಿಸಿದ್ದಾರೆ.
ಒಟ್ಟಾರೆ ಈ ಮೆಲೋಡಿ ಹಾಡಿನಿಂದ ಬಲರಾಮನ ದಿನಗಳು ಚಿತ್ರದ ಪ್ರಮೋಷನ್ಸ್ ಕಿಕ್ಸ್ಟಾರ್ಟ್ ಮಾಡಿರೋ ಪದ್ಮಾವತಿ ಜಯರಾಮ್ ಹಾಗೂ ಶ್ರೇಯಸ್, ಈ ಸಿನಿಮಾನ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ನಟಿ ಲೇಖಾಚಂದ್ರ ಕೈ ಹಿಡಿದ ಯಂಗೆಸ್ಟ್ ನಿರ್ಮಾಪಕ ಶ್ರೇಯಸ್, ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಒಳ್ಳೊಳ್ಳೆ ಸಿನಿಮಾಗಳನ್ನ ನಿರ್ಮಿಸೋ ಭರವಸೆ ನೀಡಿದ್ದಾರೆ.





