ರಾಕಿಭಾಯ್ ಯಶ್ ಟಾಕ್ಸಿಕ್ ಅಡ್ಡಾದಿಂದ ನ್ಯೂ ಅಪ್ಡೇಟ್ ಹೊರಬಿದ್ದಿದೆ. ಸಾಮಾನ್ಯವಾಗಿ ಚಿತ್ರ ರಿಲೀಸ್ ಆದ ಬಳಿಕ ಹಂಡ್ರೆಡ್ ಡೇಸ್ ಅಂತ ಪ್ರಮೋಷನ್ಸ್ ಮಾಡ್ತಾರೆ. ಆದ್ರೆ ರಿಲೀಸ್‌ಗೂ ನೂರು ದಿನ ಮೊದಲೇ ಟಾಕ್ಸಿಕ್ ಪ್ರಮೋಷನ್ಸ್ ಕಿಕ್‌ಸ್ಟಾರ್ಟ್ ಮಾಡಿದೆ. ಬೀಸ್ಟ್ ಲುಕ್‌ನಲ್ಲಿ ಹೊಸ ಅವತಾರದಲ್ಲಿ ಕಿಕ್ ಕೊಡ್ತಿದ್ದಾರೆ ಹೆಮ್ಮೆಯ ಕನ್ನಡಿಗ ಯಶ್.
- ಟಾಕ್ಸಿಕ್ ನ್ಯೂ ಪೋಸ್ಟರ್.. ಹೊಸ ಅವತಾರದಲ್ಲಿ ರಾಕಿಭಾಯ್
- ರಿಲೀಸ್‌ಗೆ 100 ದಿನ ಬಾಕಿ.. ಎಲ್ಲೆಡೆ ಭರ್ಜರಿ ಪ್ರಮೋಷನ್ಸ್..!!
- ಟಾಕ್ಸಿಕ್ ಸಕ್ಸಸ್ ಬಗ್ಗೆ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ
- ಬಿಗ್ ಹಿಟ್ ಆಗುತ್ತೆ ಎಂದ ಕಿಣಿ.. ಶಾಕಿಂಗ್ ನ್ಯೂಸ್ ಕೊಟ್ಟರೇಕೆ?
ಟಾಕ್ಸಿಕ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ.. ಭಾರತೀಯ ಚಿತ್ರರಂಗ್ ಮೋಸ್ಟ್ ಎಕ್ಸಪೆಕ್ಟೆಡ್ ಸಿನಿಮಾ ಕೂಡ.. ಟಾಕ್ಸಿಕ್ ಸಿನಿಮಾ ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ ಎನಿಸಿಕೊಂಡಿದೆ. ಯಶ್ ಸಾಕಷ್ಟು ಸಮಯ ಮತ್ತು ಶ್ರಮ ಹಾಕಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಟಾಕ್ಸಿಕ್ ಸಿನಿಮಾಕ್ಕಾಗಿ ಭಾರಿ ದೊಡ್ಡ ತಂಡವನ್ನೇ ಜೊತೆಗೆ ಸೇರಿಸಿಕೊಂಡಿದ್ದಾರೆ ನಟ ಯಶ್. ಸಿನಿಮಾದ ಚಿತ್ರೀಕರಣದ ಬಗ್ಗೆ ಹೆಚ್ಚಿನ ಅಪ್ಡೇಟ್ಗಳನ್ನು ಬಿಟ್ಟುಕೊಟ್ಟಿರಲಿಲ್ಲ ಚಿತ್ರತಂಡ. ಆದ್ರೆ ಇದೀಗ ಹೊಸ ಪೋಸ್ಟರ್ ಒಂದನ್ನು ಚಿತ್ರತಂಡ ಹಂಚಿಕೊಂಡಿದೆ.
ಹೌದು.. ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಬಗ್ಗೆ ಹೆಚ್ಚಿನ ಅಪ್ಡೇಟ್ಗಳನ್ನು ಬಿಟ್ಟುಕೊಟ್ಟಿರಲಿಲ್ಲ ಚಿತ್ರತಂಡ. ಸಿನಿಮಾದ ಬಿಡುಗಡೆ ಹತ್ತಿರ ಆಗುತ್ತಿದ್ದಂತೆ ಒಂದೊಂದಾಗಿ ಅಪ್ಡೇಟ್ಗಳನ್ನು ಹೊರ ಹಾಕುತ್ತಿದೆ. ಈ ಹಿಂದೆ ಸಣ್ಣ ಟೀಸರ್ ಒಂದನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೊಂದು ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಟಾಕ್ಸಿಕ್ ಸಿನಿಮಾದ ಹೊಸ ಪೋಸ್ಟರ್ ಅನ್ನು ಯಶ್ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ವ್ಯಕ್ತಿಯೊಬ್ಬ ಬಾತ್ಟಬ್ನಲ್ಲಿ ಕೂತಿದ್ದಾನೆ, ಆ ಬಾತ್ ಟಬ್ನ ಅಂಚುಗಳಲ್ಲಿ ರಕ್ತ ಹರಿಯುತ್ತಿದೆ. ಆ ವ್ಯಕ್ತಿ ರಕ್ತ ತುಂಬಿದ ಬಾತ್ಟಬ್ನಲ್ಲಿ ಕೂತಿದ್ದಾನೆ ಎಂಬುದನ್ನು ಚಿತ್ರ ಹೇಳುತ್ತಿದೆ. ಪೋಸ್ಟರ್ ಮೂಲಕ ಯಶ್ ಪಾತ್ರ ‘ಟಾಕ್ಸಿಕ್’ ಸಿನಿಮಾನಲ್ಲಿ ಅತ್ಯಂತ ವೈಲೆಂಟ್ ಪಾತ್ರ ಆಗಿರಲಿದೆ ಎಂಬುದನ್ನು ಹೇಳಲಾಗುತ್ತಿದೆ. ಆದ್ರೆ ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ ಯಶ್ ತಮ್ಮ ಮುಖ ತೋರಿಸಿಲ್ಲ.. ಆದ್ರೆ ಅದು ಯಶ್ ಅಂತ ಫ್ಯಾನ್ಸ್ ಫಿಕ್ಸ್ ಆಗಿದ್ದಾರೆ.
ಇನ್ನೂ ಪೋಸ್ಟರ್ ಹಂಚಿಕೊಂಡಿರುವ ಯಶ್, ಕಾಲ್ಪನಿಕ ಕಥೆ ಬಿಡುಗಡೆ ಆಗಲು 100 ದಿನ ಬಾಕಿ ಇದೆ ಎಂದು ಕ್ಯಾಪ್ಷನ್ ನಲ್ಲಿ ಬರೆದಿದ್ದಾರೆ. ಪೋಸ್ಟರ್ನಲ್ಲಿಯೂ ಸಹ ಸಿನಿಮಾ ಬಿಡುಗಡೆಗೆ ಇನ್ನು ನೂರು ದಿನಗಳಷ್ಟೆ ಬಾಕಿ ಇದೆ ಎಂದು ಹೇಳಲಾಗಿದೆ. ಬಿಡುಗಡೆ ಆಗಿರುವ ಪೋಸ್ಟರ್ ಸಕತ್ ಇಂಟೆರೆಸ್ಟಿಂಗ್ ಆಗಿದ್ದು, ಹಾಲಿವುಡ್ ಸಿನಿಮಾಗಳ ಫೀಲ್ ನೀಡುತ್ತಿದೆ. ಯಶ್ ಬೆನ್ನಮೇಲಿನ ಟ್ಯಾಟೂ ಸಹ ಗಮನ ಸೆಳೆಯುತ್ತಿದೆ.
ಟಾಕ್ಸಿಕ್ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ 75% ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ. ಸಿನಿಮಾಕ್ಕೆ ಸ್ವತಃ ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಇದು ಕರ್ನಾಟಕದ ಈ ವರೆಗಿನ ಅತಿ ದೊಡ್ಡ ಬಜೆಟ್ನ ಸಿನಿಮಾ ಆಗಿದೆ. ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





