ನ್ಯಾಷನಲ್ ಕ್ರಶ್ ರಶ್ಮಿಕಾ ಜೊತೆಗಿನ ದಿ ಗರ್ಲ್‌ಫ್ರೆಂಡ್ ಚಿತ್ರದ ಸಕ್ಸಸ್ ಖುಷಿಯಲ್ಲಿರೋ ದೀಕ್ಷಿತ್ ಶೆಟ್ಟಿ, ಇದೀಗ ಮತ್ತೊಂದು ಭಿನ್ನ ಅಲೆಯ ಚಿತ್ರದ ಮೂಲಕ ಪ್ರೇಕ್ಷಕರನ್ನ ಎಂಟರ್‌ಟೈನ್ ಮಾಡೋಕೆ ಬರ್ತಿದ್ದಾರೆ. ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಸಿನಿಮಾ ಈ ವಾರ ತೆರೆಗೆ ಬರ್ತಿದ್ದು, ಅದಕ್ಕೂ ಮುನ್ನ ಮೈಸೂರು, ಬೆಂಗಳೂರು, ದಾವಣಗೆರೆ ಸೇರಿದಂತೆ ಎಲ್ಲೆಡೆ ಪ್ರೀಮಿಯರ್ ಶೋಗಳಿಂದ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.
- ಸ್ಯಾಂಡಲ್ವುಡ್ ಮನಿ ಹೀಸ್ಟ್ BOB.. ದೀಕ್ಷಿತ್‌ಗೆ ಡಬಲ್ ಸಕ್ಸಸ್
- ದಿ ಗರ್ಲ್ ಫ್ರೆಂಡ್ ಬೆನ್ನಲ್ಲೇ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ರಿಲೀಸ್
- ಗೆದ್ದ ಸುನಿ-ರಕ್ಷಿತ್ ಶಿಷ್ಯ.. ಬ್ಯಾಂಕ್ ಸುತ್ತ ಅನುಮಾನದ ಹುತ್ತ
- U/A ಸರ್ಟಿಫಿಕೇಟ್.. ಹೌಸ್‌ಫುಲ್ ಪ್ರೀಮಿಯರ್ ಧಮಾಕ..!
ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ.. ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್‌ನಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಸಿನಿಮಾ. ಮೇಕಿಂಗ್‌ನಿಂದ ಭಿನ್ನ ಅಲೆಯ ಸಿನಿಮಾ ಅನಿಸಿಕೊಂಡಿದ್ದ ಈ ಸಿನಿಮಾ ಇದೇ ಗುರುವಾರ ಅಂದ್ರೆ ನವೆಂಬರ್ 27ಕ್ಕೆ ಎಲ್ಲೆಡೆ ಗ್ರ್ಯಾಂಡ್ ರಿಲೀಸ್ ಆಗ್ತಿದೆ. ಸಿಂಪಲ್ ಸುನಿ ಹಾಗೂ ರಕ್ಷಿತ್ ಶೆಟ್ಟಿ ಗರಡಿಯಲ್ಲಿ ಪಳಗಿರೋ VFX ಪಿನಾಕ ಕಂಪೆನಿಯ ಅಭಿಷೇಕ್ ನಿರ್ದೇಶನದ ಚೊಚ್ಚಲ ಚಿತ್ರ.
ದಿಯಾ, ದಸರಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಟನೆಯ ಮತ್ತೊಂದು ಕಂಟೆಂಟ್ ಬೇಸ್ಡ್ ಸಿನಿಮಾ ಇದಾಗಿದ್ದು, ಸ್ಯಾಂಡಲ್‌ವುಡ್ ಏಂಜಲ್ ಬೃಂದಾ ಆಚಾರ್ಯ ಈ ಚಿತ್ರದಲ್ಲಿ ನಾಯಕಿಯಾಗಿ ಮಿಂಚು ಹರಿಸಲಿದ್ದಾರೆ. ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಚಿತ್ರಗಳ ನಿರ್ಮಾಪಕ ಹೆಚ್ ಕೆ ಪ್ರಕಾಶ್ ಈ ಚಿತ್ರದ ಮೂಲಕ ಮತ್ತೊಂದು ಹಿಟ್ ಸಿನಿಮಾ ನೀಡಿದಂತೆ ಆಗ್ತಿದೆ. ಇತ್ತೀಚೆಗೆ ಸಿನಿಮಾಗೆ ಸೆನ್ಸಾರ್‌ನಿಂದ ಯು/ಎ ಸರ್ಟಿಫಿಕೇಟ್ ಕೂಡ ದೊರೆತಿದೆ.
ಸಾಮಾನ್ಯವಾಗಿ ಸಿನಿಮಾ ರಿಲೀಸ್‌ಗೆ ಒಂದು ದಿನದ ಮುಂಚೆ ಪ್ರೀಮಿಯರ್ ಆಗಲಿದೆ. ಆದ್ರೆ ಈ ಸಿನಿಮಾದ ಕಂಟೆಂಟ್ ಮೇಲೆ ಇರೋ ಭರವಸೆಯಿಂದ ಚಿತ್ರತಂಡ, ಒಂದು ವಾರ ಮೊದಲೇ ಮೈಸೂರಿನ ಡಿಆರ್‌ಸಿನಲ್ಲಿ ಪೇಯ್ಡ್ ಪ್ರೀಮಿಯರ್ ನಡೆಸಿತ್ತು. ಇಡೀ ಥಿಯೇಟರ್ ಹೌಸ್‌ಫುಲ್ ಆಗಿತ್ತು. ಅಲ್ಲದೆ, ಚಿತ್ರ ನೋಡಿದ ಪ್ರತಿಯೊಬ್ಬರೂ ಸಹ ಚಿತ್ರವನ್ನು ಪ್ರಶಂಸಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕೂಡ ಮಾಧ್ಯಮದವರಿಗೆ ಸ್ಪೆಷಲ್ ಪ್ರೀಮಿಯರ್ ಆಯ್ತು. ಬೆಣ್ಣೆ ನಗರಿ ದಾವಣಗೆರೆಯಲ್ಲಿ ಕೂಡ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಪ್ರೀಮಿಯರ್ ಕಂಡು ಭರ್ಜರಿ ರೆಸ್ಪಾನ್ಸ್ ಪಡೆದಿದೆ.
ನಾಳೆಯಿಂದ ಬೆಂಗಳೂರಿನಲ್ಲಿ ಸಾಕಷ್ಟು ಪೇಯ್ಡ್ ಪ್ರೀಮಿಯರ್ ಶೋಗಳು ನಡೆಯಲಿದ್ದು, ಸಿನಿಮಾ ಮನಿ ಹೀಸ್ಟ್ ವಬ್ ಸೀರೀಸ್‌ನಷ್ಟೇ ಮಜಬೂತಾಗಿದೆ. ಹೌದು.. ಇದು ಸ್ಯಾಂಡಲ್‌ವುಡ್ ಮನಿ ಹೀಸ್ಟ್ ಅಂದ್ರೆ ತಪ್ಪಾಗಲ್ಲ. ಅಷ್ಟರ ಮಟ್ಟಿಗೆ ಕಥೆ ಇಂಪ್ರೆಸ್ಸೀವ್ ಆಗಿದೆ. ದೀಕ್ಷಿತ್ ಶೆಟ್ಟಿ ತನ್ನ ಮನೋಜ್ಞ ಅಭಿನಯದಿಂದ ಸಿನಿಮಾದಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗ್ತಾರೆ. ಬ್ಯಾಂಕ್ ರಾಬರಿಗೆ ತೆರಳುವ ಅವರು, ಹಣ ದೋಚುತ್ತಾರಾ ಇಲ್ವಾ..? ಎಲೆಕ್ಷನ್ ಸಮಯದಲ್ಲಿ ಪೊಲೀಸ್ ಇಲಾಖೆ ಹಾಗೂ ರಾಜಕಾರಣಿಗಳಿಗೆ ತಲೆ ನೋವಾಗುವ ಆ ರಾಬರರ್ಸ್ ಏನೆಲ್ಲಾ ಕಾನ್ಸಿಕ್ವೆನ್ಸಸ್ ಫೇಸ್ ಮಾಡ್ತಾರೆ ಅನ್ನೋದೇ ಸಿನಿಮಾ.
ಜೂಡಾ ಸ್ಯಾಂಡಿ ಮ್ಯೂಸಿಕ್, ಅಭಿಷೇಕ್ ಕಾಸರಗೋಡು ಸಿನಿಮಾಟೋಗ್ರಫಿ ಚಿತ್ರಕ್ಕೆ ಸಾಥ್ ನೀಡಿದ್ದು, ಭರತ್ ಚಿತ್ರಕ್ಕೆ ದೊಡ್ಡ ಟ್ವಿಸ್ಟ್ ನೀಡ್ತಾರೆ. ಇನ್ನು ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರ ಪೋಷಿಸಿದ್ದು, ಹಾಸ್ಟೆಲ್ ಹುಡುಗರು ಚಿತ್ರದ ಕಲಾವಿದರ ದಂಡು ಇಲ್ಲಿಯೂ ದೀಕ್ಷಿತ್ ಜೊತೆ ರಾಬರರ್ಸ್ ಆಗಿ ಸಾಥ್ ನೀಡಿದ್ದಾರೆ.
- ಬೃಂದಾ ಆಚಾರ್ಯ ಮೂವೀಸ್ ಬ್ಯಾಕ್ ಟು ಬ್ಯಾಕ್ ತೆರೆಗೆ
- ಮೊನ್ನೆ ಮಾರುತ.. ಈಗ ಬ್ಯಾಂಕ್ ಅಫ್ ಭಾಗ್ಯಲಕ್ಷ್ಮೀ ಕಮಿಂಗ್
ಬ್ಯಾಂಕ್ ಅಕೌಂಟೆಂಟ್ ಆಗಿ ಬೃಂದಾ ಆಚಾರ್ಯ ಈ ಚಿತ್ರದಲ್ಲಿ ಗಮನ ಸೆಳೆಯುತ್ತಾರೆ. ಎಲ್ಲರಲ್ಲೂ ಒಬ್ಬ ಕಳ್ಳ ಇರ್ತಾನೆ. ಆದ್ರೆ ಅದನ್ನ ಯಾರೂ ಒಪ್ಪಿಕೊಳ್ಳಲು ತಯಾರು ಇರಲ್ಲ. ಮನುಷ್ಯ ಸಮಯ ಸಂದರ್ಭಕ್ಕೆ ತಕ್ಕನಾಗಿ ಬದಲಾಗ್ತಾನೆ. ಸಮಯಪ್ರಜ್ಞೆಯಿಂದ ಅದನ್ನ ಬಳಸಿಕೊಳ್ತಾನೆ. ಚಿತ್ರಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡೋ ಪಾತ್ರದಲ್ಲಿ ಬೃಂದಾ ಮಸ್ತ್ ಮನರಂಜನೆ ನೀಡ್ತಾರೆ.
ಮೊದಲಾರ್ಧ ಕಂಪ್ಲೀಟ್ ಫನ್‌ನಿಂದ ಕೂಡಿದ್ದು, ದ್ವಿತಿಯಾರ್ಧ ಅಸಲಿ ಪಿಕ್ಚರ್ ಓಪನ್ ಆಗಲಿದೆ. ಸೀರಿಯಸ್ ಆಗಿ ವಿಷಯಗಳನ್ನ ನೋಡುಗರ ತಲೆಗೆ ಹಾಕುವ ಕಾರ್ಯ ಮಾಡಿದ್ದಾರೆ ಡೈರೆಕ್ಟರ್. ಅಲ್ಲದೆ ಶಿವನ ಸಾಂಗ್ ಮೂಲಕ ಜಾನಪದ ಟಚ್ ಕೂಡ ನೀಡಲಾಗಿದೆ. ಆ ಹಾಡಿನಲ್ಲೇ ಸಾಕಷ್ಟು ಸಾರ ತುಂಬಿದೆ ಅನ್ನೋದು ಮತ್ತೊಂದು ಕಥೆ.
ಇನ್ನು ಕಳೆದ ವಾರ ಮಾರುತ ಸಿನಿಮಾ ರಿಲೀಸ್‌ನಿಂದ ಬೃಂದಾ ಬ್ಯುಸಿಯಾಗಿದ್ರು. ಈ ವಾರ ಬಿಓಬಿ ಬರ್ತಿದ್ದು ಅದ್ರ ಪ್ರಮೋಷನ್ಸ್‌ನಲ್ಲಿ ತೊಡಗಿಸಿಕೊಳ್ತಿದ್ದಾರೆ.
ಒಟ್ಟಾರೆ ಮೊದಲಾರ್ಧ ಸಿನಿಮಾ ಕೊಂಚ ಲ್ಯಾಗ್ ಅನಿಸ್ತಿದ್ದು, ದ್ವಿತಿಯಾರ್ಧ ಎಂಗೇಜಿಂಗ್ ಆಗಿದೆ. ಒಂದು ಹತ್ತರಿಂದ ಹದಿನೈದು ನಿಮಿಷ ಟ್ರಿಮ್ ಆದ್ರೆ ಹೆಚ್ಚು ಮಂದಿ ಪ್ರೇಕ್ಷಕರಿಗೆ ರುಚಿಸಲಿದೆ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ. ಸಾಮಾನ್ಯ ಜನ ದುಡ್ಡಿಗಾಗಿ ಪರದಾಡುವ ಸ್ಥಿತಿ, ರಾಜಕಾರಣಿಗಳು ನಮ್ಮ ಹಣದಿಂದಲೇ ಕೋಟ್ಯಂತರ ರೂಪಾಯಿ ಬ್ಲ್ಯಾಕ್ ಮನಿ ಮಾಡಿ ನಮ್ಮನ್ನ ಆಳುವುದು, ಪೊಲೀಸ್ ವ್ಯವಸ್ಥೆ, ಅದಕ್ಕೆ ಬ್ರಿಡ್ಜ್ ಆಗುವ ಬ್ಯಾಂಕ್‌ಗಳು ಹೀಗೆ ಸಾಕಷ್ಟು ವಿಷಯಗಳ ಮೇಲೆ ಸಿನಿಮಾ ಬೆಳಕು ಚೆಲ್ಲಿದೆ. ಹಾಗಾಗಿ ಈ ಗುರುವಾರ ಬಿಓಬಿ ನಿಮ್ಮ ಚಾಯ್ಸ್ ಆದ್ರೆ ಮಕ್ಕಳಿಂದ ಮುದುಕರವರೆಗೆ ಇದು ರುಚಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





