ಕರ್ನಾಟಕದ ರಾಜಕಾರಣದಲ್ಲಿ ಸಿಎಂ ಕುರ್ಚಿಯ ಆಟ ಇದೀಗ ತಾರಕಕ್ಕೇರಿದೆ. ಆರು ತಿಂಗಳಿಂದ ಸುಮ್ಮನೆ ಗುನುಗುತ್ತಿದ್ದ ಚರ್ಚೆ ಈಗ ತೀವ್ರ ಸ್ವರೂಪ ಪಡೆದಿದೆ. ದೆಹಲಿಯಿಂದ ಡಿಕೆಶಿ ಬೆಂಬಲಿಗರು ದಾಳಿ ಆರಂಭಿಸಿದ್ರೆ, ಸಿದ್ದು ಆಪ್ತರು ಔತಣಕೂಟ ನೆಪದಲ್ಲಿ ಪ್ರತಿದಾಳ ಶುರು ಮಾಡಿದ್ದಾರೆ. ಇಬ್ಬರೂ ಮುಖ್ಯಮಂತ್ರಿಗಳು ಈಗ ಮಾಧ್ಯಮದ ಮುಂದೆ ಬಂದು “ಬದಲಾವಣೆ”ಯ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಆದರೆ ತಮ್ಮದೇ ಲೆಕ್ಕಾಚಾರದ ಭಾಷೆಯಲ್ಲಿ.
ಈ ಎಲ್ಲಾ ರಾಜಕೀಯ ಕಾವಿನ ನಡುವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಂದು ಮಾಸ್ಟರ್ ಸ್ಟ್ರೋಕ್ ಆಡಿದ್ದಾರೆ. ದಿಢೀರ್ ಎಂದು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ತೆರಳಿ, ಧಾರವಾಡ ಶಾಸಕ ವಿನಯ್ ಕುಲಕರ್ಣಿ ಮತ್ತು ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಭೇಟಿಯಾಗಿದ್ದಾರೆ.
ಈ ಭೇಟಿಯ ಹಿಂದಿನ ರಾಜಕೀಯ ಲೆಕ್ಕಾಚಾರ ಸ್ಪಷ್ಟ:
- ಇಬ್ಬರು ಶಾಸಕರು ಪಕ್ಷದಲ್ಲಿ ಡಿಕೆಶಿ ಪಾಳಯಕ್ಕೆ ಹತ್ತಿರವಾದವರು
- ಜೈಲಿನಲ್ಲಿರುವ ತಮ್ಮ ನಾಯಕನನ್ನು ಭೇಟಿಯಾಗಿ ವಿಶ್ವಾಸ ಗಳಿಸಿದ್ರೆ, ಮುಂದಿನ ದಿನಗಳಲ್ಲಿ ಸಂಖ್ಯಾಬಲದ ಆಟ ಬಂದರೆ ದೊಡ್ಡ ಪ್ಲಸ್ ಪಾಯಿಂಟ್.
- ಸಿದ್ದು ಬಣ vs ಡಿಕೆ ಬಣದಲ್ಲಿ “ಜೈಲಿನಲ್ಲಿರುವ ನನ್ನವರನ್ನೂ ನಾನು ಕೈಬಿಟ್ಟಿಲ್ಲ” ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ಕೊಡುವ ತಂತ್ರ.
ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆಯ ಚರ್ಚೆ ತಾರಕಕ್ಕೇರಿದ ಈ ಸಂದರ್ಭದಲ್ಲಿ ಡಿಕೆಶಿಯವರ ಈ ದಿಢೀರ್ ಜೈಲು ಭೇಟಿ ಕೇವಲ ಸೌಜನ್ಯ ಭೇಟಿಯಲ್ಲ ಬದಲಿಗೆ ಸಂಖ್ಯಾಬಲದ ಆಟಕ್ಕೆ ಒಂದು ದೊಡ್ಡ ಚೆಕ್‌ಮೇಟ್ ಎನ್ನುವುದು ರಾಜಕೀಯ ವೀಕ್ಷಕರ ಅಭಿಪ್ರಾಯ.





