ಬಿಗ್‌ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಆರಂಭದಿಂದಲೂ ಎಲ್ಲರ ಗಮನ ಸೆಳೆದಿರುವ ಒಂದು ಜೋಡಿ ಎಂದರೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ (ಹನುಮಂತು). ಈ ಇಬ್ಬರ ನಡುವೆ ಟಾಸ್ಕ್‌ನಲ್ಲಿ ಜಗಳ, ವರ್ಡ್ ವಾರ್ ನಡೆಯುವುದು ಖಚಿತ. ಆದರೆ ಬಿಡುಗಡೆಯಾದ ಹೊಸ ಪ್ರೋಮೋದಲ್ಲಿ ಇವರಿಬ್ಬರ ಈ ಜಗಳವನ್ನು ಕಾಣಬಹುದು
ಪ್ರೋಮೋದಲ್ಲಿ ಗಿಲ್ಲಿ ನಟ, “ಎಲ್ಲಾ ವೃದ್ಧಾಪ್ಯದವರೇ ಸೇರಿಕೊಂಡು ಕಷ್ಟಪಡ್ತಾ ಇದ್ದಾರೆ. ಹಾಗಾಗಿ ಅವರನ್ನೆಲ್ಲ ಕಳುಹಿಸಿಬಿಡೋಣ… ಯೋಗ್ಯತೆ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ನಿಮಗಿಲ್ಲ” ಎಂದು ಅಶ್ವಿನಿ ಗೌಡಗೆ ಟಾಂಗ್ ಕೊಡುತ್ತಾರೆ. ಈ ಒಂದು ವಾಕ್ಯ ಅಶ್ವಿನಿಯನ್ನು ಆಳವಾಗಿ ನೋಯಿಸಿದೆ. ವಾಷ್‌ರೂಮ್ ಬಳಿ ಏಕಾಂಗಿಯಾಗಿ ನಿಂತು ಗಲಗಲ ಕಣ್ಣೀರು ಹಾಕುತ್ತಾ “ಒಬ್ಬ ಕಾಮಿಡಿಯನ್ ಆದ್ರೆ ಏನೇ ಬೇಕಾದರೂ ಮಾತನಾಡಬಹುದಾ? ಒಬ್ಬರನ್ನ ತೇಜೋವಧೆ ಮಾಡೋದು ಎಷ್ಟು ಸರಿ?” ಎಂದು ಪ್ರಶ್ನಿಸುತ್ತಾರೆ ರಾಜಮಾತೆ.
ಈ ಸಂದರ್ಭದಲ್ಲಿ ಧನುಷ್ ಧಾವಿಸಿ ಬಂದು ಅಶ್ವಿನಿಯನ್ನು ಸಂತ್ವಾನ ಮಾಡುತ್ತಾರೆ. “ವ್ಯಾಲ್ಯೂ ಇರುವವರ ಬಗ್ಗೆ ಮಾತ್ರ ಕಣ್ಣೀರು ಹಾಕಿ” ಎಂದು ಸ್ಪಷ್ಟವಾಗಿಯೇ ಗಿಲ್ಲಿ ನಟನಿಗೆ ವ್ಯಾಲ್ಯೂ ಇಲ್ಲ ಎಂಬಂತೆ ಮಾತನಾಡುತ್ತಾರೆ. ಅಶ್ವಿನಿ ಮುಂದುವರೆದು “ನಮ್ಮನ್ನು ಯಾರಾದರೂ ಅಗೌರವದಿಂದ ನೋಡಿದರೆ ಆ ಜಾಗದಲ್ಲಿ ಒಂದು ಕ್ಷಣವೂ ಇರಬೇಕೆನಿಸುವುದಿಲ್ಲ. ನಾವು ಬದುಕಿರುವುದೇ ಮರ್ಯಾದೆಗಾಗಿ” ಎಂದು ಭಾವುಕವಾಗಿ ಹೇಳುತ್ತಾರೆ.
ಆದರೆ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಈಗ ಎರಡೂ ಕಡೆ ತೀವ್ರ ಚರ್ಚೆ ನಡೆಯುತ್ತಿದೆ. ಗಿಲ್ಲಿ ನಟ ಈ ಹಿಂದೆ “ಧ್ರುವಂತ್ ಜೊತೆಗೆ ಕ್ಲೋಸ್ ಆದವರೆಲ್ಲ ಮನೆಯಿಂದ ಕ್ಲೋಸ್ ಆಗ್ತಾರೆ. ನೀವಿಬ್ಬರು (ಜಾಹ್ನವಿ & ಅಶ್ವಿನಿ) ಈಗ ತುಂಬಾ ಕ್ಲೋಸ್ ಆಗಿದ್ದೀರಿ, ಆಲ್ ದಿ ಬೆಸ್ಟ್” ಎಂದು ಟಾಂಗ್ ಕೊಟ್ಟಾಗ, ಅಶ್ವಿನಿ ಕೋಪದಿಂದ “ಅಮಾವಾಸ್ಯೆಯನ್ನೇ ಜೊತೆಯಲ್ಲಿಟ್ಟುಕೊಂಡಿದ್ದೀಯಾ… ಹೋಗು” ಎಂದು ಉತ್ತರಿಸಿದ್ದರು. ಆ ಮಾತು ಪರೋಕ್ಷವಾಗಿ ಗಿಲ್ಲಿ ಜೊತೆಗಿರುವ ರಕ್ಷಿತಾ ಶೆಟ್ಟಿ ಅವರನ್ನೇ ಉದ್ದೇಶಿಸಿದ್ದು ಎಂದು ಅನೇಕರು ಭಾವಿಸಿದ್ದಾರೆ. “ಅಮಾವಾಸ್ಯೆ” ಎಂಬ ಪದವೇ ತೀರಾ ಕಿರಿಕಿರಿ ಮೂಡಿಸಿದೆ. ಹೀಗಾಗಿ “ಗಿಲ್ಲಿ ಮಾತ್ರ ತಪ್ಪಾ? ಅಶ್ವಿನಿ ಕೂಡ ಅಗೌರವದ ಮಟ್ಟಕ್ಕೆ ಇಳಿದಿದ್ದಾರೆ” ಎಂಬ ಆರೋಪಗಳೂ ಕೇಳಿಬರುತ್ತಿವೆ.
ಈಗಾಗಲೇ ಕಿಚ್ಚ ಸುದೀಪ್ ಅವರಿಂದ ಪದೇಪದೇ ವಾರ್ನಿಂಗ್ ಪಡೆದಿರುವ ಗಿಲ್ಲಿ ನಟಗೆ ಈ ಬಾರಿ ಮತ್ತೊಂದು ಕ್ಲಾಸ್ ಸಿಗುವ ಸಾಧ್ಯತೆ ಇದೆ. ಆದರೆ ವೀಕೆಂಡ್ ಎಪಿಸೋಡ್‌ನಲ್ಲಿ ಸುದೀಪ್ ಈ ವಿಷಯವನ್ನು ಎತ್ತಿ, ಎರಡೂ ಕಡೆಯವರನ್ನೂ ತರಾಟೆಗೆ ತೆಗೆದುಕೊಳ್ಳುತ್ತಾರೋ ಅಥವಾ ಒಂದು ಕಡೆಗೆ ಸಪೋರ್ಟ್ ಮಾಡುತ್ತಾರೋ ಎಂಬ ಕುತೂಹಲವೂ ಎದ್ದಿದೆ.





