ಬಿಗ್ ಬಾಸ್ ಮನೆಯಲ್ಲಿ ಪ್ರತೀ ವಾರ ಹೊಸ ವಿವಾದಗಳು ನಡೆಯುತ್ತಲೇ ಇವೆ. ಈ ಬಾರಿ ಗಿಲ್ಲಿ ನಟ ಮತ್ತು ರಿಷಾ ನಡುವಿನ ಜಗಳವೇ ದೊಡ್ಡ ವಿಷಯವಾಗಿದೆ. ಬಾತ್‌ರೂಮ್ ವಿಚಾರಕ್ಕೆ ಆರಂಭವಾದ ಚರ್ಚೆ, ಹೊಡೆಯುವ ಮಟ್ಟಿಗೆ ಬಂದು ನಿಂತಿದ್ದು, ಈಗ ರಿಷಾ ಮನೆಯಿಂದ ಹೊರ ಹೋಗ್ತಾರಾ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಿಸಿದೆ.
ಜಗಳ ಹೇಗೆ ಶುರುವಾಯ್ತು?
ಒಂದು ಸಣ್ಣ ಬಕೆಟ್ ವಿಚಾರದಿಂದಲೇ ಬಿಗ್ ಬಾಸ್ ಮನೆಯಲ್ಲಿ ಬಿರುಕು ಬಿತ್ತು. ಗಿಲ್ಲಿ ನಟ ರಿಷಾ ಅವರ ಬಳಿ ಬಕೆಟ್ ಕೇಳಿದರು. ರಿಷಾ ಅವರು ಅದನ್ನು ತಕ್ಷಣ ಕೊಡದೆ ಇದ್ದ ಕಾರಣ, ಗಿಲ್ಲಿ ಸ್ವಲ್ಪ ತಮಾಷೆಯಾಗಿ ಅವರ ಬಟ್ಟೆಗಳನ್ನು ಬಾತ್‌ರೂಮ್ ಬಳಿ ಇಟ್ಟರು. ಆದರೆ ಈ ಕೃತ್ಯ ರಿಷಾ ಅವರಿಗೆ ತುಂಬಾ ಕೋಪ ತರಿಸಿತು.
ರಿಷಾ ರೊಚ್ಚಿಗೆದ್ದು ಬಾತ್‌ರೂಮ್‌ನಿಂದ ಬಂದು ಗಿಲ್ಲಿಯ ಮೇಲೆ ಕೂಗಿ, ಹೊಡೆದು ಹೋದರು. ಅಲ್ಲದೇ, ಕೆಲವು ವಸ್ತುಗಳನ್ನು ಎಸೆದಿದ್ದರು ಎಂಬುದೂ ವೀಕ್ಷಕರು ಗಮನಿಸಿದ್ದಾರೆ. ರಕ್ಷಿತಾ ಶೆಟ್ಟಿ ಅವರು ಮಧ್ಯಪ್ರವೇಶಿಸಿ ಶಾಂತಗೊಳಿಸಲು ಪ್ರಯತ್ನಿಸಿದರೂ, ರಿಷಾ ಅವರ ಕೋಪ ತಣ್ಣಗಾಗಲಿಲ್ಲ. ಈ ಘಟನೆಯ ವಿಡಿಯೋ ಭಾಗ ವೀಕ್ಷಕರ ಮಧ್ಯೆ ವೈರಲ್ ಆಗಿದ್ದು, “ಹುಡುಗಿ ಹುಡುಗನ ಮೇಲೆ ಕೈ ಎತ್ತಿದ್ರೆ ಏನಾಗುತ್ತೆ?” ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.
ಶನಿವಾರದ ಸಂಚಿಕೆಯಲ್ಲಿ ಸುದೀಪ್ ಅವರು ಈ ವಿಷಯವನ್ನು ಸೀರಿಯಸ್ ಆಗಿ ತೆಗೆದುಕೊಂಡರು.
“ಒಬ್ಬರ ಮೇಲೆ ಕೈ ಎತ್ತುವುದು ಬಿಗ್ ಬಾಸ್ ಮನೆಯಲ್ಲಿ ಇದು ಒಪ್ಪಿಗೆ ಇಲ್ಲ. ದೇವರು ಕೊಟ್ಟ ಕೈಗಳನ್ನು ಒಳ್ಳೆಯದಕ್ಕೆ ಬಳಸಬೇಕು. ಗೆಲ್ಲೋಕೆ, ಕೆಲಸಕ್ಕೆ, ಸಹಾಯಕ್ಕೆ ಬಳಸಿ. ಆದರೆ ಕೋಪಕ್ಕೆ ಬಳಸೋದು ತಪ್ಪು.” ಎಂದು ಬುದ್ದಿ ಮಾತು ಹೇಳಿದರು.
ನಂತರ ಸುದೀಪ್ ಅವರು ಸ್ಪರ್ಧಿಗಳ ಮುಂದೆ ಎರಡು ಕಾರ್ಡ್‌ಗಳನ್ನು ಇಟ್ಟರು. ಹಳದಿ (ವಾರ್ನಿಂಗ್) ಮತ್ತು ಕೆಂಪು (ಎಲಿಮಿನೇಷನ್). “ಈಗ ನಿರ್ಧಾರ ನಿಮ್ಮದು, ವಾರ್ನಿಂಗ್ ಕೊಡ್ತೀರಾ ಅಥವಾ ಮನೆಯಿಂದ ಹೊರಹಾಕ್ತೀರಾ?” ಎಂದು ಕಿಚ್ಚ ಸ್ಪರ್ಧಿಗಳಿಗೆ ಪ್ರಶ್ನೆ ಕೇಳಿದರು.
ಈ ವೇಳೆ ಮನೆಯಲ್ಲಿ ಕೆಲ ಸ್ಪರ್ಧಿಗಳು ರಿಷಾ ಅವರ ನಡೆ ತಪ್ಪೇ ಎಂದು ಅಭಿಪ್ರಾಯಪಟ್ಟರು. ಇನ್ನು ಕೆಲವರು “ಅವಳಿಗೆ ಕೋಪ ಬಂದದ್ದು ಸಹಜ, ಆದರೆ ಹೊಡೆಯೋದು ತಪ್ಪು” ಎಂದು ಹೇಳಿದರು. ಈ ವಾದ-ವಿವಾದದ ನಂತರ ಬಿಗ್ ಬಾಸ್ ಮನೆಯಲ್ಲಿ ಮತದಾನ ನಡೆಯಿತು. ಯಾರು ಹಳದಿ ಕಾರ್ಡ್ ಕೊಡುತ್ತಾರೆ, ಯಾರು ಕೆಂಪು ಎಂಬ ಕುತೂಹಲ ಇಂದು ರಾತ್ರಿ ಸಂಚಿಕೆಯಲ್ಲಿ ಕ್ಲೈಮ್ಯಾಕ್ಸ್ ಆಗಲಿದೆ.
ಈಗಾಗಲೇ Colors Kannada ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಸುದೀಪ್ ಅವರ ಗಂಭೀರ ಮುಖ ಮತ್ತು ಸ್ಪರ್ಧಿಗಳ ತಲೆತಗ್ಗಿಸಿದ ದೃಶ್ಯಗಳು ಕಾಣಿಸಿಕೊಂಡಿವೆ.





