ಸ್ಯಾಂಪಲ್ಸ್‌ನಿಂದಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿರೋ ಗತವೈಭವ ಸಿನಿಮಾ ರಿಲೀಸ್‌ಗೂ ಮೊದಲೇ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಕನ್ನಡದ ಜೊತೆ ತೆಲುಗಿನಲ್ಲೂ ಹುಬ್ಬೇರಿಸುತ್ತಿರೋ ಈ ಚಿತ್ರ ಹತ್ತು, ಹಲವು ವಿಶೇಷತೆಗಳಿಂದ ಕೂಡಿದ್ದು, ಓಟಿಟಿ ರೈಟ್ಸ್‌ಗೆ ಡಿಮ್ಯಾಂಡ್ ಹೆಚ್ಚಿಸಿಕೊಂಡಿದೆ. ಈ ಕುರಿತ ಒಂದು ಎಕ್ಸ್‌ಕ್ಲೂಸಿವ್ ರಿಪೋರ್ಟ್ ಇಲ್ಲಿದೆ.
- ರಿಲೀಸ್‌ಗೂ ಮೊದ್ಲೇ ‘ಗತವೈಭವ’ OTTಗೆ ಡಿಮ್ಯಾಂಡ್
- ಟೀಸರ್, ಸಾಂಗ್ಸ್ & ಮೇಕಿಂಗ್‌ನಿಂದ ಹೈಪ್ ಕ್ರಿಯೇಟ್
- 4 ಜನ್ಮಗಳ ಕಥೆ.. ಇಂಡಸ್ಟ್ರಿಗೆ ದುಷ್ಯಂತ್ ಗ್ರ್ಯಾಂಡ್ ಎಂಟ್ರಿ
- ಸಿಂಪಲ್ ಸುನಿಯ ಪ್ರಯೋಗ.. ಆಶಿಕಾ ಗ್ಲಾಮರ್ ರಂಗು
ಗತ ವೈಭವ.. ಟೀಸರ್ ಹಾಗೂ ಸಾಂಗ್ಸ್‌ನಿಂದ ಭರವಸೆ ಮೂಡಿಸಿರೋ ಬಹುನಿರೀಕ್ಷಿತ ಸಿನಿಮಾ. ದುಷ್ಯಂತ್ ಹಾಗೂ ಆಶಿಕಾ ರಂಗನಾಥ್ ಮುಖ್ಯ ಭೂಮಿಕೆಯ ಈ ಚಿತ್ರದ ಕಥೆ, ಪಾತ್ರಗಳು ಹಾಗೂ ಮೇಕಿಂಗ್ ಎಲ್ಲರೂ ಮಾತನಾಡಿಕೊಳ್ಳುವಂತೆ ಮಾಡಿದೆ. ಹೌದು.. ಸಕ್ಸಸ್‌ಫುಲ್ ಸಿನಿಮಾಗಳ ಡೈರೆಕ್ಟರ್ ಸಿಂಪಲ್ ಸುನಿ, ಈ ಬಾರಿ ಕೂಡ ಪ್ರೇಕ್ಷಕರಿಗೆ ರುಚಿಸೋ ಅಂತಹ ಮನರಂಜನಾತ್ಮಕ ಅಂಶಗಳ ಕಥೆಯೊಂದಿಗೆ ಹೊಸ ಪ್ರಯೋಗ ಮಾಡಿದ್ದಾರೆ.
ಸುಮಾರು ನಾಲ್ಕು ಜನ್ಮಗಳ ಕಥಾನಕ ಹೊಂದಿರೋ ಗತವೈಭವ, ವೆರೈಟಿ ಆಫ್ ಶೇಡ್ಸ್‌ನಲ್ಲಿ ನಾಯಕ, ನಾಯಕಿಯನ್ನ ತೋರಿಸೋ ಪ್ರಯತ್ನ ಮಾಡಿದ್ದಾರೆ. ಸ್ಯಾಂಪಲ್ ಝಲಕ್‌ಗಳೇ ಅದಕ್ಕೆ ಸಾಕ್ಷಿ. ಇನ್ನು ಆಶಿಕಾ ಗ್ಲಾಮರ್ ರಂಗಿನ ಜೊತೆ ಚಿತ್ರದ ಸೆಂಟರ್ ಆಫ್ ದಿ ಅಟ್ರ್ಯಾಕ್ಷನ್ ದುಷ್ಯಂತ್. ತಾನೊಬ್ಬ ರಾಜಕಾರಣಿ ಮಗ ಆಗಿದ್ರೂ ಕೂಡ, ಅದನ್ನೆಲ್ಲಾ ಪಕ್ಕಕ್ಕಿಟ್ಟು, ಸಿನಿಮಾ ಮೇಲಿರೋ ಪ್ಯಾಷನ್‌ನಿಂದ ಒಬ್ಬ ಕಲಾವಿದನಿಗೆ ಇರಬೇಕಾದ ಎಲ್ಲಾ ಕಲೆಗಳನ್ನ ಕರಗತ ಮಾಡಿಕೊಂಡು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ.
ಹಾವ ಭಾವ ಹಾಗೂ ಅಭಿನಯದಲ್ಲಿ ದುಷ್ಯಂತ್ ಸಿನಿರಸಿಕರನ್ನ ಹುಬ್ಬೇರಿಸೋದು ಗ್ಯಾರಂಟಿ. ಅಷ್ಟು ಪ್ರಾಮಿಸಿಂಗ್ ಹಾಗೂ ಇಂಪ್ರೆಸ್ಸೀವ್ ಆಗಿದೆ ದುಷ್ಯಂತ್ ಪಾತ್ರ ಹಾಗೂ ಅಭಿನಯ. ಸ್ಯಾಂಡಲ್‌ವುಡ್‌ಗೆ ಭವಿಷ್ಯದ ಭರವಸೆಯ ಸ್ಟಾರ್ ಆಗೋ ಎಲ್ಲಾ ಲಕ್ಷಣಗಳಿದ್ದು, ಕನ್ನಡದ ಜೊತೆ ತೆಲುಗು ಚಿತ್ರರಂಗಕ್ಕೂ ಕಾಲಿಡ್ತಿದ್ದಾರೆ. ಹೌದು.. ಕನ್ನಡದ ಜೊತೆ ತೆಲುಗಿನಲ್ಲೂ ಸಿನಿಮಾ ತಯಾರಾಗಿದ್ದು, ಇತ್ತೀಚೆಗೆ ನಡೆದ ಸಾಂಗ್ ಲಾಂಚ್ ಇವೆಂಟ್‌ನಿಂದ ಸಿನಿಮಾ ಹಾಗೂ ದುಷ್ಯಂತ್ ಮೇಲೆ ಆಂಧ್ರ ಮಂದಿಗೂ ನಿರೀಕ್ಷೆ ಹೆಚ್ಚಿದೆ.
ಕ್ವಾಲಿಟಿ ಮೇಕಿಂಗ್ ಹಾಗೂ ಪಾತ್ರಗಳಲ್ಲಿರೋ ಜೀವಂತಿಕೆಯಿಂದ ಈ ಸಿನಿಮಾ ರಿಲೀಸ್‌ಗೂ ಮೊದಲೇ ಓಟಿಟಿ ರೈಟ್ಸ್‌ಗೆ ಡಿಮ್ಯಾಂಡ್ ಹೆಚ್ಚಿಸಿಕೊಂಡಿದೆ. ದುಷ್ಯಂತ್ ಅವರ ಕುಚಿಕು ಗೆಳೆಯ ದೀಪಕ್ ತಿಮ್ಮಯ್ಯ ನಿರ್ಮಾಣ ಮಾಡಿರೋ ಚೊಚ್ಚಲ ಚಿತ್ರ ಇದಾಗಿದ್ದು, ಮೈತ್ರಿ ಮೂವಿ ಮೇಕರ್ಸ್ ಅಂತಹ ಟಾಲಿವುಡ್‌ನ ಬಿಗ್ ಬ್ಯಾನರ್‌ನಿಂದ ಎನ್‌ಕ್ವೈರಿ ಬಂದಿರೋದು ಕೂಡ ಚಿತ್ರಕ್ಕೆ ಪ್ಲಸ್ ಆಗ್ತಿದೆ. ಸಾಮಾನ್ಯವಾಗಿ ಇತ್ತೀಚೆಗೆ ರಿಲೀಸ್ ಆದ ಸಿನಿಮಾಗಳಿಗೇ ಓಟಿಟಿ ರೈಟ್ಸ್ ಸೇಲ್ ಆಗ್ತಿಲ್ಲ. ಅಂಥದ್ರಲ್ಲಿ ಗತವೈಭವ ಬಿಡುಗಡೆಗೂ ಮೊದಲೇ ಇಂಥದ್ದೊಂದು ಬೇಡಿಕೆ ಹೆಚ್ಚಿಸಿಕೊಂಡಿರೋದು ನಿಜಕ್ಕೂ ಗ್ರೇಟ್. ಅಂದಹಾಗೆ ಸಿನಿಮಾ ಇದೇ ನವೆಂಬರ್ 14ಕ್ಕೆ ಥಿಯೇಟರ್‌ಗೆ ಎಂಟ್ರಿ ಕೊಡ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





