ಲೇಖಕರು :ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
ಅಪ್ಪು ಕನಸು ನನಸಾಗಿದೆ. ದಕ್ಷಿಣ ಭಾರತವನ್ನ 200 ವರ್ಷ ಆಳಿದ ಕದಂಬರ ನಿಧಿ ಹುಡುಕವ ಕಥೆ ಮಾರಿಗಲ್ಲು ವೆಬ್ ಸೀರೀಸ್. ಕದಂಬರ ಮೊಟ್ಟ ಮೊದಲ ಕನ್ನಡದ ರಾಜಾ ಮಯೂರ ವರ್ಮಾ ಪಾತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಬ್ಬರಿಸಿದ್ದಾರೆ. ಅರೆ ಅದ್ಹೆಗೆ ಅನ್ನೋ ಆಶ್ಚರ್ಯನಾ ಹೇಳ್ತಿವಿ ಈ ಸ್ಟೋರಿ ನೋಡಿ
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ. ಇದೀಗ ಅದನ್ನು ಅಶ್ವಿನಿ ಪುನೀತ್ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಸದ್ಯ ಅಶ್ವಿನಿ ತಮ್ಮ ಬ್ಯಾನರ್‌ನಿಂದ ಮೊದಲ ಬಾರಿಗೆ ವೆಬ್ ಸರಣಿಯನ್ನು ನಿರ್ಮಾಣ ಮಾಡಿದ್ದಾರೆ.ಅದುವೇ ಮಾರಿಗಲ್ಲು ವೆಬ್ ಸೀರೀಸ್. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ನ ಮತ್ತು ಜೀ 5 ಒಟಿಟಿ ಸಹಯೋಗದಲ್ಲಿ ಈ ‘ಮಾರಿಗಲ್ಲು’ ವೆಬ್ ಸೀರೀಸ್ ಸಿದ್ಧಗೊಂಡಿದೆ.

‘ಮಾರಿಗಲ್ಲು’ವೆಬ್ ಸರಣಿಯಲ್ಲಿ ಪುನೀತ್ ರಾಜ್‌ಕುಮಾರ್
ರಾಜ ಮಯೂರ ವರ್ಮನ ಪಾತ್ರದಲ್ಲಿ ಅಪ್ಪು ..ಫ್ಯಾನ್ಸ್ ಖುಷ್
4ನೇ ಶತಮಾನದ ಕದಂಬರ ಆಳ್ವಿಕೆ ಕಾಲದ ಕಥೆಯನ್ನು ‘ಮಾರಿಗಲ್ಲು’ ವೆಬ್ ಸರಣಿಯಲ್ಲಿ ಇದ್ದು, ಕದಂಬರ ಕಾಲದ ನಿಧಿ ಹುಡುಕಲು ಹೊರಡುವ ಶಿರಸಿ ಮೂಲದ ಹುಡುಗರ ಕಥೆಯನ್ನು ರೋಚಕವಾಗಿ ಹೇಳುವ ಪ್ರಯತ್ನ ಮಾಡಲಾಗಿದಯಂತೆ. ನಂಬಿಕೆ, ಸ್ವಾರ್ಥ, ದುರಾಸೆ ಕುರಿತು ಈ ಸಾಗಲಿದ್ದು, ಸದ್ಯ ಟೀಸರ್‌ನಲ್ಲಿ ಪುನೀತ್ ಅವರನ್ನು ಎಐ ಮೂಲಕ ತೋರಿಸಿರುವುದು ಅಚ್ಚರಿ ಮೂಡಿಸಿದೆ. ಈ ಟೀಸರ್‌ಗೆ ಡಾಲಿ ಧನಂಜಯ ಅವರು ಧ್ವನಿ ನೀಡಿದ್ದಾರೆ
ಕದಂಬರು ಕನ್ನಡದ ಮೊದಲ ರಾಜರು. ದಕ್ಷಿಣ ಭಾರತವನ್ನ 200 ವರ್ಷ ಆಳಿದ್ದಾರೆ. ಇವರ ಮೊದಲ ರಾಜ ಮಯೂರ ವರ್ಮಾ ಹೀಗಾಗಿ ಈ ಪಾತ್ರದಲ್ಲಿ ಪುನೀತ್ ರಾಜಕುಮಾರ್ ಅವರನ್ನು ಎಐ ಮೂಲಕ ತೋರಿಸಿದ್ದಾರೆ. ಸದ್ಯ ರಿಲೀಸ್ ಆಗಿರೋ ಟೀಸರ್ ನೋಡ್ತಿದ್ರೆ ಅಪ್ಪು ಸಿಕ್ಸ್ ಪ್ಯಾಕ್ ಫಿಜಿಕ್, ಅದ್ಭುತ ಅನಿಸೋ ರೂಪವೇ ಇಲ್ಲಿದೆ. ಇದೆಲ್ಲ ಎಐ ಟೆಕ್ನಾಲಜಿ ಕಮಾಲ್
AI ಮೂಲಕ ಪುನೀತ್ ರಾಜ್‌ಕುಮಾರ್ ಪ್ರತ್ಯಕ್ಷ..!
ಅ.31ರಿಂದ ಮಾರಿಗಲ್ಲು ವೆಬ್ ಸರಣಿ ಪ್ರಸಾರ..!
ವೆಬ್ ಸರಣಿಯಯ ಪಿಆರ್‌ಕೆ ಪ್ರೊಡಕ್ಷನ್ಸ್‌ನ ತುಂಬಾ ವಿಶೇಷವಾದ ಪ್ರಾಜೆಕ್ಟ್. ಇದು ಅಪ್ಪು ಅವರ ಕನಸುಗಳಲ್ಲಿ ಒಂದಾಗಿತ್ತು. ಪುನೀತ್ ಯಾವಾಗಲೂ ನಮ್ಮ ಕಥೆಗಳನ್ನು ವೆಬ್ ಸರಣಿಗಳಾಗಿ ಮಾಡಬೇಕು ಎಂದು ಬಯಸುತ್ತಿದ್ದರು. ಈ ಮಾರಿಗಲ್ಲು ಮೂಲಕ ನಾವು ಅಪ್ಪು ಅವರ ಕನಸನ್ನು ಜೀವಂತಗೊಳಿಸಲು ಪ್ರಯತ್ನಿಸಿದ್ದೇವೆ. ಇದು ನಿಗೂಢತೆ, ಭಕ್ತಿ ಮತ್ತು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಸಾರವನ್ನು ಹೊಂದಿರುವ ವೆಬ್ ಸರಣಿಯಾಗಿದೆ” ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದಾರೆ

ಇನ್ನು ಮಾರಿಗಲ್ಲು ವೆಬ್ ಸರಣಿಯಲ್ಲಿ ರಂಗಾಯಣ ರಘು, ಗೋಪಾಲ್ ಕೃಷ್ಣ ದೇಶಪಾಂಡೆ ಮತ್ತು ಪ್ರವೀಣ್ ತೇಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಡ್ರಾಮಾ ಜೂನಿಯರ್ಸ್ ಖ್ಯಾತಿಯ ಎ. ಎಸ್. ಸೂರಜ್, ನಟ ಪ್ರಶಾಂತ್ ಸಿದ್ದಿ, ನಿನಾದ ಹೃತ್ಸಾ ಮುಂತಾದವರು ನಟಿಸಿದ್ದಾರೆ. 7 ಎಪಿಸೋಡ್‌ಗಳ ಈ ಒಂದು ವೆಬ್ ಸರಣಿಯ ಪ್ರತಿ ಎಪಿಸೋಡ್ 25 ನಿಮಿಷ ಇರುತ್ತವೆ. ಇದೇ ತಿಂಗಳ 31ರಿಂದ ಜೀ 5ನಲ್ಲಿ ಸ್ಟ್ರೀಮಿಂಗ್ ಆಗಲಿರೊ ಮಾರಿಗಲ್ಲುಗೆ ದೇವರಾಜ್ ಪೂಜಾರಿ ಆಕ್ಷನ್ ಕಟ್, ಎಸ್.ಕೆ. ರಾವ್ ಕ್ಯಾಮರಾವರ್ಕ್, ಎಲ್.ವಿ. ಮುತ್ತು ಮತ್ತು ಎಲ್.ವಿ. ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ ಅಪ್ಪು ನಿಧನದ ಬಳಿಕ ಅವರ ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳು ಈ ವೆಬ್ ಸೀರೀಸ್ ಮೂಲಕ ಡಾ. ಪುನೀತ್ ರಾಜ್‌ಕುಮಾರ್ ಅವರನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದು





