‘ಬಿಗ್ ಬಾಸ್ ಕನ್ನಡ ಸೀಸನ್ 12’ ಕಾರ್ಯಕ್ರಮವು ಪ್ರೇಕ್ಷಕರನ್ನು ಸ್ವಾಗತಿಸಿದ ದಿನದಿಂದಲೇ ವಿವಾದಗಳು ಮತ್ತು ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್ ಕೊಡ್ತಿದೆ. ಇದರಲ್ಲಿ ಕುತೂಹಲ ಮೂಡಿಸಿರುವ ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಅವರು ಮನೆಯಿಂದ ಹೊರಗುಳಿದಿದ್ದಾರೆಯೇ ಅಥವಾ ಮರಳಿದ್ದಾರೆಯೇ ಎಂಬುದರ ಬಗ್ಗೆ ಗೊಂದಲ ಮೂಡಿಸಿದ್ದಾರೆ.
ರಕ್ಷಿತಾ ಶೆಟ್ಟಿ ಮನೆಗೆ ಪ್ರವೇಶಿಸಿದ ಎರಡನೇ ದಿನವೇ ‘ಕಿಚ್ಚನ ವಾರದ ಪಂಚಾಯಿತಿ’ಯಲ್ಲಿ ಎಲಿಮಿನೇಟ್ ಆಗಿದ್ದರು. ಇದರ ನಂತರ ಅವರು ಮನೆಯಿಂದ ಹೊರಬಂದಿದ್ದಾರೆಂದು ಭಾವಿಸಲಾಗಿತ್ತು. ಆದರೆ, ಕಲರ್ಸ್ ಕನ್ನಡ ವಾಹಿನಿಯು ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರಕ್ಷಿತಾ ಅವರು ಎಲಿಮಿನೇಟ್ ಆಗಿದ್ದಾರೆಂದು ಫೋಟೋ ಸಮೇತ ಘೋಷಿಸಿದ್ದರು. ಆದರೆ ರಕ್ಷಿತಾ ಹೊರಬಂದ ಬಗ್ಗೆ ಯಾವುದೇ ಸೂಚನೆ ಕೂಡ ಇರಲಿಲ್ಲ. ಇದು ಪ್ರೇಕ್ಷಕರ ಮಧ್ಯೆ ‘ಇದು ಏನೋ ಪ್ರಾಂಕ್ ಆಗಿರಬಹುದು’ ಎಂಬ ಅನುಮಾನಗಳನ್ನು ಉಂಟುಮಾಡಿತ್ತು.
ಈ ಗೊಂದಲಕ್ಕೆ ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಉತ್ತರ ಸಿಗಲಿದೆ. ಕಾರ್ಯಕ್ರಮದ ನಡುವೆ, ಬಿಗ್ ಬಾಸ್ ಮನೆಗೆ ಮರಳಲು ಇಚ್ಛಿಸುವ ರಕ್ಷಿತಾ ಅವರನ್ನು ಸುದೀಪ್ ಅವರು ವೇದಿಕೆಗೆ ಆಹ್ವಾನಿಸಿದ್ದರು. ಈ ಸಂಭಾಷಣೆಯು ಸುದೀಪ್ ಅವರ ತಮಾಷೆಯ ಪ್ರಶ್ನೆಗಳಿಂದ ಕೂಡಿತ್ತು. “ಇದು ಏನು ಉಡುಪಿ ಅಂದುಕೊಂಡಿದ್ದಿರಾ? ಬರೋದು, ಹೋಗೋದು ಅಂತಾ?” ಎಂದು ಸುದೀಪ್ ಕೇಳಿದ್ದರು. ಇದಕ್ಕೆ ರಕ್ಷಿತಾ, “ಹೊರಗೆ ಹಾಕಿಟ್ಟಿದ್ದಾರೆ. ಈಗ ಒಳಗಡೆ ವಾಪಸ್ ಬಿಡ್ತೀವಿ,” ಎಂದು ಪ್ರತಿಕ್ರಿಯಿಸಿದ್ದಾರೆ.
ನಂತರ ಸುದೀಪ್ ಅವರು ಗಂಭೀರವಾದ ಸ್ವರದಲ್ಲಿ, “ಪ್ರಾಪರ್ ರೀಸನ್ ಕೇಳ್ತಿನಿ. ಒಳಗಡೆ ಹೋಗಿ ಏನ್ ಮಾಡ್ತೀರಿ?” ಎಂದು ಪ್ರಶ್ನಿಸಿದರು. ಈ ಸಮಯದಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ ರಕ್ಷಿತಾ ಅವರು, “ಹೋಗುವಾಗ ಬಂದಿದ್ರು, ಆದರೆ ಯಾರು ಸ್ಟ್ಯಾಂಡ್ ತೆಗೋಳೋಕೆ ಬಂದಿಲ್ಲ. ನಾನು ಹೇಗೆ ಆಡ್ತೀನಿ, ಅವರು ಜಸ್ಟ್ ನೋಡಿ ಜಡ್ಜ್ ಮಾಡಿದ್ರು. ನನಗೆ ಯೋಗ್ಯತೆ ಉಂಟು,” ಎಂದು ದೃಢವಾಗಿ ಉತ್ತರಿಸಿದ್ದಾರೆ.
ರಕ್ಷಿತಾ ಅವರ ಈ ನಿಲವು ಮತ್ತು ಸುದೀಪ್ ಅವರ ಸೂಚನೆಯಿಂದಾಗಿ, ರಕ್ಷಿತಾ ಅವರನ್ನು ಮತ್ತೆ ಬಿಗ್ ಬಾಸ್ ಮನೆಗೆ ಮರಳಲು ಅವಕಾಶ ನೀಡಲಾಗುವುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಲರ್ಸ್ ಕನ್ನಡವು ಈ ಸಂಭಾಷಣೆಯ ಪ್ರೋಮೋವನ್ನು ಬಿಡುಗಡೆ ಮಾಡಿದೆ, ಇದು ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲವನ್ನು ಉಂಟುಮಾಡಿದೆ.





