• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಹೈದ್ರಾಬಾದ್‌‌‌ನಲ್ಲಿ ಜಗಮಗಿಸಿದ ಕಾಂತಾರ ಇವೆಂಟ್

NTR ಅಜ್ಜಿ ಹೇಳಿದ್ದ ಕಥೆಗಳಿಗೆ ರಿಷಬ್ ಶೆಟ್ಟಿ ದೃಶ್ಯರೂಪ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 29, 2025 - 3:08 pm
in ಸಿನಿಮಾ
0 0
0
Web (29)

ಆಂಧ್ರದಲ್ಲಿ ದಾಖಲೆ 100 ಕೋಟಿ ರೂಪಾಯಿ ಪ್ರೀ-ರಿಲೀಸ್ ಬ್ಯುಸಿನೆಸ್ ಮಾಡಿರೋ ರಿಷಬ್ ಶೆಟ್ಟಿಯ ಕಾಂತಾರ-1 ಚಿತ್ರಕ್ಕೆ ಅಲ್ಲಿನ ತೆಲುಗು ಮಂದಿ ಬಾಯ್ಕಾಟ್ ಕ್ಯಾಂಪೇನ್ ಮಾಡ್ತಿದ್ದಾರೆ. ಜೂನಿಯರ್ ಎನ್‌ಟಿಆರ್ ಇದ್ದ ಕಾಂತಾರ ಪ್ರೀ-ರಿಲೀಸ್ ಇವೆಂಟ್‌‌ನಲ್ಲಿ ಅಂಥದ್ದೇನಾಯ್ತು..? ಟಾಲಿವುಡ್ ಮಂದಿಗೆ ನಿಜಕ್ಕೂ ಅಭದ್ರತೆ ಕಾಡ್ತಿದೆಯಾ..? ಇದರ ಹಿಂದಿನ ಅಸಲಿ ಉದ್ದೇಶವೇನು ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ ನೋಡಿ.

ಇದು ವಿಜಯದಶಮಿ ಹಬ್ಬದ ಹಿನ್ನೆಲೆ ಇದೇ ಅಕ್ಟೋಬರ್ 2ಕ್ಕೆ ತೆರೆಗೆ ಬರ್ತಿರೋ ಕಾಂತಾರ ಚಾಪ್ಟರ್-1 ಚಿತ್ರದ ತೆಲುಗು ಪ್ರೀ- ರಿಲೀಸ್ ಇವೆಂಟ್. ಹೈದ್ರಾಬಾದ್‌‌ನ JRC ಕನ್ವೆಂಷನ್‌‌ನಲ್ಲಿ ನಡೆದ ಫಂಕ್ಷನ್‌‌‌ ಸಾವಿರಾರು ಮಂದಿ ತೆಲುಗು ಚಿತ್ರಪ್ರೇಮಿಗಳಿಂದ ರಂಗೇರಿತ್ತು. ಅದ್ರಲ್ಲೂ ತ್ರಿಬಲ್ ಆರ್ ಚಿತ್ರದಿಂದ ಗ್ಲೋಬಲ್ ಸ್ಟಾರ್ ಪಟ್ಟಕ್ಕೇರಿರೋ ಜೂನಿಯರ್ ಎನ್‌ಟಿಆರ್ ಆಗಮನದಿಂದ ವೇದಿಕೆ ಮಗದಷ್ಟು ಕಲರ್‌‌ಫುಲ್ ಹಾಗೂ ಅರ್ಥಪೂರ್ಣ ಅನಿಸಿಕೊಂಡಿತ್ತು.

RelatedPosts

‘ಬಾರ್ಡರ್‌ ಡೈರೀಸ್‌’ ಚಿತ್ರದ ‘ಯಾರೋ ನೀನು’ ಮೆಲೋಡಿ ಹಾಡು ರಿಲೀಸ್‌: ಕವಿರಾಜ್ ಮೆಚ್ಚುಗೆ

‘ರಣಬಾಲಿ’ ಚಿತ್ರದ ‘ಎಂದಯ್ಯಾ ಸಾಮಿ’ ಲಿರಿಕಲ್ ಸಾಂಗ್ ರಿಲೀಸ್

ಯಶ್ ‘ಟಾಕ್ಸಿಕ್ ಡಿಸಾಸ್ಟರ್’.. ಆಡಿಕೊಂಡವ್ರ ವಿರುದ್ಧ ಕವಿರಾಜ್ ಕಿಡಿ

155 ಕೋಟಿಗೆ ಡ್ರ್ಯಾಗನ್ OTT ರೈಟ್ಸ್.. NTR-ನೀಲ್ ಬಿಗ್ ಡೀಲ್

ADVERTISEMENT
ADVERTISEMENT

555584706 1371468744536672 9026368267515393235 n

ಹೈದ್ರಾಬಾದ್‌‌ನಲ್ಲಿ ಜಗಮಗಿಸಿದ ಕಾಂತಾರ ಇವೆಂಟ್

ಟೀಂ ಕಾಂತಾರಗೆ ಕುಂದಾಪುರ ಕುವರಿ ಪುತ್ರನ ಸಾಥ್

ಅಂದಹಾಗೆ ಜೂನಿಯರ್ ಎನ್‌ಟಿಆರ್ ಹಾಗೂ ನಮ್ಮ ರಿಷಬ್ ಶೆಟ್ಟಿ ನಡುವೆ ಒಂದು ಸ್ಪೆಷಲ್ ಕನೆಕ್ಷನ್ ಇದೆ. ಅದೇ ಕುಂದಾಪುರ.  ಎನ್‌ಟಿಆರ್ ಅವ್ರ ತಾಯಿ ಶಾಲಿನಿ ನಂದಮೂರಿ ಅವ್ರ ತವರು ನಮ್ಮ ಕನ್ನಡದ ಕುಂದಾಪುರ. ಹಾಗಾಗಿ ನಮ್ಮ ಕುಂದಾಪುರದ ಕುವರಿಯ ಮಗನಾದ ಜೂನಿಯರ್ ಎನ್‌ಟಿಆರ್ ಈ ಕಾಂತಾರ-1 ಇವೆಂಟ್‌ಗೆ ಮುಖ್ಯ ಅತಿಥಿಯಾಗಿ ಬಂದದ್ದು ನಿಜಕ್ಕೂ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್.

555812691 1329336732111752 2807137995698940862 n

NTR ಅಜ್ಜಿ ಹೇಳಿದ್ದ ಕಥೆಗಳಿಗೆ ರಿಷಬ್ ಶೆಟ್ಟಿ ದೃಶ್ಯರೂಪ

ಶೆಟ್ರಲ್ಲಿರೋ ನಟ, ನಿರ್ದೇಶಕನಿಗೆ ತಾರಕ್ ಬಹುಪರಾಕ್

ತಮ್ಮ ಅಜ್ಜಿ ಹೇಳ್ತಿದ್ದ ಪಂಜುರ್ಲಿ ದೈವ ಹಾಗೂ ಗುಳಿಗ ಕಥೆಗಳನ್ನ ಕೇಳಿದ್ದ ಜೂನಿಯರ್ ಎನ್‌ಟಿಆರ್, ಇದೀಗ ಅವುಗಳಿಗೆ ದೃಶ್ಯರೂಪ ಕೊಡ್ತಿರೋ ರಿಷಬ್‌ನ ಸಿಕ್ಕಾಪಟ್ಟೆ ಕೊಂಡಾಡಿದ್ರು. ರಿಷಬ್‌‌ರಲ್ಲಿರೋ ನಟ ಹಾಗೂ ನಿರ್ದೇಶಕನ ಜೊತೆಗೆ ಅವರಲ್ಲಿ ಅಡಗಿರೋ 24 ಸಿನಿಮಾ ಕ್ರಾಫ್ಟ್‌‌ಗಳನ್ನ ಇನ್ನಿಲ್ಲದೆ ಪ್ರಶಂಸಿಸಿದರು ಜೂನಿಯರ್ ಎನ್‌ಟಿಆರ್.

557595905 1329211592124266 9211677965809491752 n

ಇನ್ನು ಅದೇ ವೇದಿಕೆಯಲ್ಲಿ ಅಂದರಿಕಿ ನಮಸ್ಕಾರಂ ಅಂತ ತೆಲುಗಿನಲ್ಲಿ ನಮಸ್ಕಾರ ಮಾಡಿದಂತಹ ರಿಷಬ್, ಅದಾದ ಬಳಿಕ ನನಗೆ ತೆಲುಗು ಅಷ್ಟಾಗಿ ಬರಲ್ಲ. ಕನ್ನಡದಲ್ಲೇ ಮಾತಾಡ್ತೀನಿ. ನನ್ನ ಸಹೋದರ ಸಮಾನರಾದ ಎನ್‌ಟಿಆರ್ ಅವರು ನಿಮಗೆ ಬೇಕಾದಲ್ಲಿ ಅದನ್ನ ಟ್ರಾನ್ಸ್‌‌ಲೇಟ್ ಮಾಡ್ತಾರೆ ಎಂದರು ಡಿವೈನ್ ಸ್ಟಾರ್. ಅಲ್ಲದೆ, ಉಳಿದ ಮಾತುಗಳೆಲ್ಲವನ್ನ ಕನ್ನಡದಲ್ಲೇ ಮಾತನಾಡಿದ್ರು.

ತಾರಕ್ ಹಾಗೂ ರಿಷಬ್ ನಡುವಿನ ಬಾಂಡಿಂಗ್ ಇತ್ತೀಚಿನದ್ದು ಅಲ್ಲ. ಉಡುಪಿ ಶ್ರೀಕೃಷ್ಣನ ದರ್ಶನ ಪಡೆಯಬೇಕೆಂಬ ತನ್ನ ತಾಯಿಯ ಆಸೆಯನ್ನ ಈಡೇರಿಸಿದ ರಿಷಬ್‌‌ ಫ್ಯಾಮಿಲಿಗಿಂತ ಹೆಚ್ಚು ಎಂದರು ಯಂಗ್ ಟೈಗರ್.

ಹೈದ್ರಾಬಾದ್ ಇವೆಂಟ್‌ನ ಅಚ್ಚುಕಟ್ಟಾಗಿ ಮುಗಿಸಿ, ಉತ್ತರ ಭಾರತದಲ್ಲಿ ಪ್ರಮೋಷನ್ಸ್‌ಗಾಗಿ ಮಹಾನಗರಿ ಮುಂಬೈಗೆ ತೆರಳಿದೆ ಟೀಂ ಕಾಂತಾರ. ಆದ್ರೀಗ ಆಂಧ್ರದಲ್ಲಿ ನಟ ರಿಷಬ್ ಶೆಟ್ಟಿ ಹಾಗೂ ಕಾಂತಾರ ಚಿತ್ರದ ವಿರುದ್ಧ ನೆಗೆಟೀವ್ ಕ್ಯಾಂಪೇನ್ ಮಾಡ್ತಿದ್ದಾರೆ ತೆಲುಗು ಮಂದಿ. ಅಷ್ಟೇ ಅಲ್ಲ ಬಾಯ್ಕಾಟ್ ಕಾಂತಾರ ಅಂತಲೂ ಅಭಿಯಾನ ಮಾಡ್ತಿದ್ದಾರೆ ಕೆಲ ನೆಟ್ಟಿಗರು. ಸೋಶಿಯಲ್ ಮೀಡಿಯಾದಲ್ಲಿನ ಆ ಪೋಸ್ಟ್‌‌ಗಳ ಹಿಂದೆ ದೊಡ್ಡ ಸಂಚು, ಹುನ್ನಾರ ಇರೋದು ಸ್ಪಷ್ಟವಾಗ್ತಿದೆ.

555741750 1329348178777274 6143482646056344857 n

ಪವನ್ OGಗೆ ಎಫೆಕ್ಟ್..? ಬಾಯ್ಕಾಟ್ ಕ್ಯಾಂಪೇನ್ ಏಕೆ..?

100ಕೋಟಿ ಪ್ರೀ-ಬ್ಯುಸಿನೆಸ್.. ಕನ್ನಡ ಮಾತಾಡಿದ್ದೇ ತಪ್ಪಾ ?

ರಿಷಬ್ ಶೆಟ್ಟಿ ತೆಲುಗಿನಲ್ಲಿ ಮಾತನಾಡಿಲ್ಲ. ಅವರು ಕನ್ನಡದಲ್ಲಿ ಮಾತಾಡಿದ್ರು ಅಂತ ಬೇಕು ಅಂತಲೇ ಕ್ಯಾತೆ ತೆಗೆಯುತ್ತಿದ್ದಾರೆ. ಭಾಷೆ ಬಾರದಿದ್ರೂ ತೆಲುಗು ಮಾತಾಡಿ ಅಂದ್ರೆ ರಿಷಬ್ ಹೇಗೆ ಮಾತಾಡೋಕೆ ಸಾಧ್ಯ ನೀವೇ ಹೇಳಿ. ಎಲ್ಲಕ್ಕಿಂತ ಮಿಗಿಲಾಗಿ ಅಲ್ಲಿ ಕಳೆದ ವಾರ ತೆರೆಕಂಡ ಡಿಸಿಎಂ ಪವನ್ ಕಲ್ಯಾಣ್‌ರ ಓಜಿ ಸಿನಿಮಾ ಒಂದೇ ದಿನದಲ್ಲಿ 154 ಕೋಟಿ ಗಳಿಸಿದೆ. ಹಾಗಾಗಿ ಕಾಂತಾರ ಬಂದ್ರೆ ಓಜಿ ಬಾಕ್ಸ್ ಆಫೀಸ್‌ಗೆ ಪೆಟ್ಟು ನೀಡಲಿದೆ ಅನ್ನೋ ಅಭದ್ರತೆ ಅವರಿಗೆ ಶುರುವಾಗಿದೆ. ಅದೇ ಕಾರಣದಿಂದ ಈ ರೀತಿ ನೆಗೆಟೀವ್ ಕ್ಯಾಂಪೇನ್‌ ಮಾಡ್ತಿದ್ದಾರೆ.

ಅಂದಹಾಗೆ ರಿಷಬ್ ಶೆಟ್ಟಿ ಈ ಹಿಂದೆ ಪುಷ್ಪ ಸಿನಿಮಾದ ಪ್ರಮೋಷನ್ಸ್ ವೇಳೆ ಅಲ್ಲು ಅರ್ಜುನ್ ಇವೆಂಟ್‌ಗೆ ತಡವಾಗಿ ತೆರಳಿದ ಹಾಗೆ ಏನೂ ಮಾಡಲಿಲ್ಲ. ಅಥ್ವಾ ಕನ್ನಡ ಭಾಷೆಯನ್ನ ಕಮಲ್ ಹಾಸನ್ ಕಡಿಮೆ ಮಾಡಿ ಮಾತನಾಡಿದ ಹಾಗೆ ತೆಲುಗಿಗೆ ಅಪಮಾನ ಮಾಡುವ ಹಾಗೆಯೂ ಮಾತನಾಡಲಿಲ್ಲ. ಹಾಗಿದ್ದರೂ ಸಹ ಹೀಗೆ ನೆಗೆಟೀವ್ ಕ್ಯಾಂಪೇನ್ ಮಾಡೋದು ಎಷ್ಟು ಸರಿ. ಕಾಂತಾರ ತೆಲುಗು ಟ್ರೈಲರ್ ಲಾಂಚ್ ಮಾಡಿದ್ದೇ ಡಾರ್ಲಿಂಗ್ ಪ್ರಭಾಸ್. ಈಗ ಪ್ರೀ ರಿಲೀಸ್ ಇವೆಂಟ್‌‌ ಗ್ರ್ಯಾಂಡ್ ಆಗಿ ಆಗೋದಕ್ಕೆ ಕಾರಣೀಭೂತರಾಗಿದ್ದು ಕೂಡ ಮತ್ತೊಬ್ಬ ತೆಲುಗು ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್.

ಕೇವರ ಎರಡೂವರೆ ಮೂರು ಕೋಟಿ ರೂಪಾಯಿಗೆ ಕಾಂತಾರ ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಖರೀದಿಸಿದ್ದ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್, ಗೀತಾ ಆರ್ಟ್ಸ್ ಬ್ಯಾನರ್‌‌‌ನಿಂದ ಬರೋಬ್ಬರಿ 30 ಕೋಟಿ ಗಳಿಸಿದ್ರು. ಇದೀಗ ಕಾಂತಾರ-1 ಸಿನಿಮಾದ ಆಂಧ್ರ-ತೆಲಂಗಾಣ ಡಿಸ್ಟ್ರಿಬ್ಯೂಷನ್ ರೈಟ್ಸ್ ಬರೋಬ್ಬರಿ 100 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಸೋಲ್ಡ್ ಔಟ್ ಆಗಿವೆ. ಎಲ್ಲೋ ಒಂದು ಕಡೆ ಕಾಂತಾರ-1 ಪ್ರೀ ರಿಲೀಸ್ ಬ್ಯುಸಿನೆಸ್ ಕೆಲ ತೆಲುಗು ಭಾಷಿಗರಿಗೆ ಹೊಟ್ಟೆಯುರಿ ತರಿಸಿದಂತಿದೆ.

555535007 1371468751203338 545795233829659417 n

ಕನ್ನಡಿಗರಾಗಿದ್ದುಕೊಂಡು ಭಾಷೆ ಬಾರದ ಹಿನ್ನೆಲೆ ಕನ್ನಡದಲ್ಲೇ ಮಾತಾಡಿದ್ದೇ ತಪ್ಪಾಯ್ತಾ..? ಅಲ್ಲು ಅರ್ಜುನ್ ಬಂದಾಗೆಲ್ಲಾ ತೆಲುಗಲ್ಲೇ ಮಾತಾಡ್ತಾರೆ. ಆಗೆಲ್ಲಾ ನಾವು ಬಾಯ್ಕಾಟ್ ಅಂದಿದ್ರೆ ಅವರಿಗೆ ಕರ್ನಾಟಕದಿಂದ ಬಹುದೊಡ್ಡ ನಷ್ಟ ಆಗ್ತಿತ್ತು. ಕನ್ನಡಿಗರು ವಿಶಾಲ ಹೃದಯದವರು ಅಂತ ಹೇಳಿ ಕನ್ನಡಿಗರನ್ನ ಅಥ್ವಾ ಕರ್ನಾಟಕವನ್ನು ಟೇಕನ್ ಫಾರ್ ಗ್ರಾಂಟೆಡ್ ಮಾಡ್ಕೊಂಡ್ರೆ ಪರಿಣಾಮ ನೆಟ್ಟಗೆ ಇರಲ್ಲ. ಅದು ಎಲ್ಲಾ ಭಾಷೆಯ ಚಿತ್ರರಂಗಗಳಿಗೂ ಗೊತ್ತೇಯಿದೆ. ಕಮಲ್ ಹಾಸನ್ ಥಗ್ ಲೈಫ್ ಅದಕ್ಕೆ ಜ್ವಲಂತ ನಿದರ್ಶನ.

ಆದ್ರೆ ಸಿನಿಮಾಗೆ ಭಾಷೆ, ಗಡಿಯ ಹಂಗಿಲ್ಲ. ಸಿನಿಮಾ ಅನ್ನೋದು ಮನರಂಜನೆ. ಕಲಾವಿದ ಭಾವನೆಗಳ ಮೂಲಕ ಪಾತ್ರಕ್ಕೆ ಭಾವ ತುಂಬುವ ಆರ್ಟಿಸ್ಟ್. ಹಾಗಾಗಿ ಇದಕ್ಕೆ ಭಾಷೆ, ಕುಲ, ಗೋತ್ರ, ಗಡಿ, ಪ್ರಾಂತ್ಯದ ಲೇಬಲ್ ಏಕೆ..? ನಿಮ್ಮ ಸಿನಿಮಾಗಳನ್ನ ನಮ್ಮಲ್ಲಿ ಅಕ್ಸೆಪ್ಟ್ ಮಾಡ್ತಿದ್ದೀವಿ ಅಂದಾಗ, ನಮ್ಮ ಸಿನಿಮಾಗಳನ್ನ ಕೂಡ ನೀವು ಅದೇ ರೀತಿ ಸ್ವೀಕರಿಸೋದು ನಿಮ್ಮ ಕರ್ತವ್ಯ. ಸೋ ಇದು ಗೀವ್ ಅಂಡ್ ಟೇಕ್ ಪಾಲಿಸಿ. ಈಗ ಜಿದ್ದಿಗೆ ಬಿದ್ದು ದ್ವೇಷ ಸಾಧಿಸ್ತೀರೋ ಅಥ್ವಾ ಮುಂದೆ ಆಗುವ ಪರಿಣಾಮಗಳನ್ನ ಎದುರಿಸೋಕೆ ಸಜ್ಜಾಗ್ತೀರೋ ಅನ್ನೋದು ಮಾತ್ರ ನಿಮಗೇ ಬಿಟ್ಟಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (16)

ಗೋವಾದಲ್ಲಿ ನಡೆಯಲಿದೆ ಐಪಿಎಲ್‌ 2027ರ ಹರಾಜು

by ಕವಿತಾ
September 23, 2026 - 9:02 pm
0

Your paragraph text (15)

ನಾಳೆ ಚಿತ್ರದುರ್ಗಕ್ಕೆ ಸಿಎಂ ಡಿಕೆ ಶಿವಕುಮಾರ್ ಭೇಟಿ

by ಕವಿತಾ
September 23, 2026 - 8:40 pm
0

Your paragraph text (14)

ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಯನ್ನು ಹಿಂದಿಕ್ಕಿದ ಅದಾನಿ

by ಕವಿತಾ
September 23, 2026 - 8:31 pm
0

Your paragraph text (13)

ಲಂಡನ್‌ನಿಂದ ದೆಹಲಿಗೆ ಹೊರಟ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ.. ಮತ್ತೆ ವಾಪಸ್!

by ಕವಿತಾ
September 23, 2026 - 8:09 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (11)
    ‘ಬಾರ್ಡರ್‌ ಡೈರೀಸ್‌’ ಚಿತ್ರದ ‘ಯಾರೋ ನೀನು’ ಮೆಲೋಡಿ ಹಾಡು ರಿಲೀಸ್‌: ಕವಿರಾಜ್ ಮೆಚ್ಚುಗೆ
    September 23, 2026 | 0
  • Untitled design (36)
    ‘ರಣಬಾಲಿ’ ಚಿತ್ರದ ‘ಎಂದಯ್ಯಾ ಸಾಮಿ’ ಲಿರಿಕಲ್ ಸಾಂಗ್ ರಿಲೀಸ್
    September 23, 2026 | 0
  • Untitled design (25)
    ಯಶ್ ‘ಟಾಕ್ಸಿಕ್ ಡಿಸಾಸ್ಟರ್’.. ಆಡಿಕೊಂಡವ್ರ ವಿರುದ್ಧ ಕವಿರಾಜ್ ಕಿಡಿ
    September 23, 2026 | 0
  • Untitled design (21)
    155 ಕೋಟಿಗೆ ಡ್ರ್ಯಾಗನ್ OTT ರೈಟ್ಸ್.. NTR-ನೀಲ್ ಬಿಗ್ ಡೀಲ್
    September 23, 2026 | 0
  • ಅಲರ್ಟ್ (17)
    ಅನಂತ್‌‌ನಾಗ್‌ಗೆ ರಾಷ್ಟ್ರಪತಿಗಳಿಂದ ‘ಫಾಲ್ಕೆ’ ಪ್ರಶಸ್ತಿ ಪ್ರದಾನ
    September 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version