ಬೆಂಗಳೂರು, ಸೆಪ್ಟೆಂಬರ್ 28, 2025: ಕನ್ನಡ ಟಿವಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಇಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ಮತ್ತು ಜಿಯೋ ಸಿನಿಮಾಯಲ್ಲಿ ಅದ್ಧೂರಿಯಾಗಿ ಪ್ರಾರಂಭವಾಗಿದೆ. ಚಾಕ್ರವರ್ತಿ ಕಿಚ್ಚ ಸುದೀಪ್ ಮತ್ತೊಮ್ಮೆ ಹೋಸ್ಟ್ ಆಗಿ ಕಾರ್ಯಕ್ರಮ ನಿರೂಪಿಸುತ್ತಿದ್ದಾರೆ. “ಎಕ್ಸ್‌ಪೆಕ್ಟ್ ದಿ ಅನ್‌ಎಕ್ಸ್‌ಪೆಕ್ಟೆಡ್” ಥೀಮ್‌ನೊಂದಿಗೆ ಈ ಬಾರಿಯ ಶೋ ಹೊಸ ಟ್ವಿಸ್ಟ್‌ಗಳು, ಡ್ರಾಮಾ ಮತ್ತು ಎಂಟರ್‌ಟೈನ್‌ಮೆಂಟ್‌ಗೆ ತುಂಬಿಕೊಂಡಿದೆ. ಬಿಗ್ ಬಾಸ್ ಮನೆಯ ಡಿಸೈನ್ ಮೈಸೂರು ಪ್ಯಾಲೇಸ್ ಮತ್ತು ಹಂಪಿಯ ರಥ ಥೀಮ್‌ನೊಂದಿಗೆ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಯಕ್ಷಗಾನ ಕಲಾವಿದರ ಚಿತ್ರಣ ಮತ್ತು ದೇವಿಯ ಚಿನ್ನದ ರೂಪವನ್ನು ಹೊಂದಿರುವ ಮನೆಯಲ್ಲಿ ಸ್ಪರ್ಧಿಗಳು ಒಂಟಿ vs ಜಂಟಿ ಟೀಮ್ ಆಗಿ ಸವಾಲುಗಳನ್ನು ಎದುರಿಸಲಿದ್ದಾರೆ.
ಕಾರ್ಯಕ್ರಮದ ಗ್ರ್ಯಾಂಡ್ ಲಾಂಚ್‌ನಲ್ಲಿ ಕಿಚ್ಚ ಸುದೀಪ್ ತಮ್ಮ ಹೊಸ ಕಾಸ್ಟ್ಯೂಮ್ ಲುಕ್‌ನೊಂದಿಗೆ ಎಂಟ್ರಿ ನೀಡಿ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. “ಇದು ಒಂದು ಹೊಸ ಅಧ್ಯಾಯ. ಸ್ಪರ್ಧಿಗಳು ಆಸಕ್ತಿಕರವಾಗಿ ಕಾಣುತ್ತಿದ್ದಾರೆ. ಎಲ್ಲರಿಗೂ ಶುಭಾಶಯಗಳು!” ಎಂದು ಸುದೀಪ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈಗಾಗಲೇ ಮನೆಗೆ ಪ್ರವೇಶಿಸಿದ ಸ್ಪರ್ಧಿಗಳು ಟೆಲಿವಿಷನ್, ಸಿನಿಮಾ, ಡಿಜಿಟಲ್ ಮೀಡಿಯಾ ಮತ್ತು ಸಾಮಾನ್ಯ ಜನರಿಂದ ಬಂದವರಾಗಿದ್ದು, ಡೈವರ್ಸ್ ಮಿಕ್ಸ್ ಆಗಿ ಇದೆ.
ಗ್ರ್ಯಾಂಡ್ ಓಪನಿಂಗ್ ಹೈಲೈಟ್ಸ್:
-
ಸುದೀಪ್‌ನ ಎಂಟ್ರಿ: ಕಾರ್ಯಕ್ರಮ ಸಂಜೆ 6 ಗಂಟೆಗೆ ಆರಂಭವಾಗಿ, ಸುದೀಪ್ ಬಿಗ್ ಬಾಸ್ ಮನೆಯ ಟೂರ್ ನಡೆಸಿದರು. ದೇವತೆಗೆ ಪೂಜೆ ಸಲ್ಲಿಸಿ, “ಬಿಗ್ ಬಾಸ್ ಎಂದರೆ ಏನು?” ಎಂದು ಸ್ಪರ್ಧಿಗಳಿಗೆ ಪ್ರಶ್ನೆ ಹಾಕಿದರು. ಮೊದಲ ಟಾಸ್ಕ್‌ನಲ್ಲಿ ಸ್ಪರ್ಧಿಗಳನ್ನು ಒಂಟಿ ಮತ್ತು ಜಂಟಿ ಗುಂಪುಗಳಾಗಿ ವಿಭಜಿಸಲಾಯಿತು.
-
ಕಾಕ್‌ರೋಚ್ ಸುಧಿ: ನಟ ಕಾಕ್‌ರೋಚ್ ಸುಧಿ ಮೊದಲಿಗರಾಗಿ ಮನೆಗೆ ಕಾಲಿಟ್ಟು, “ನಾನು ಮನೆಯಲ್ಲಿ ಕಾಕ್‌ರೋಚ್‌ನಂತೆ ತುಂಬಾಡುತ್ತೇನೆ!” ಎಂದು ಹಾಸ್ಯದ ಮಾತಿನೊಂದಿಗೆ ಪ್ರೇಕ್ಷಕರನ್ನು ನಗಿಸಿದರು. ಸುದೀಪ್ ಜೊತೆಗಿನ ಸಂಭಾಷಣೆಯಲ್ಲಿ ಕಾಮಿಡಿ ಜೋಕ್‌ಗಳು ಜನಪ್ರಿಯವಾಯಿತು.
-
ಡಾಗ್ ಬ್ರೀಡರ್ ಸತೀಶ್,ಇತ್ತೀಚಿಗೆ ಇವರು 50 ಕೋಟಿ ಡಾಗ್ ಬ್ರೀಡ್ ಅನ್ನು ಖಾರೀದಿ ಮಾಡಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಸಿ ಪೊಲೀಸರ ಅಥಿತಿಯಾಗಿದ್ದರು. ಹೀಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ.

-
ಗಿಲ್ಲಿನಟ, ನಟರಾಜ್ ಎಂಬುದು ಗಿಲ್ಲಿ ನಟನ ನಿಜವಾದ ಹೆಸರು. ಅವರು ಹುಟ್ಟಿ ಬೆಳೆದಿದ್ದು. ಮಂಡ್ಯ ಜಿಲ್ಲೆಯ ಮಳವಳ್ಳಿಯ ಮಟದಪುದಲ್ಲಿ. ನಟರಾಜ್ ಅವರಿಗೆ ರೈತಾಪಿ ಕುಟುಂಬದ ಹಿನ್ನೆಲೆ ಇದೆ. ಅವರು ಎಸ್ಎಸ್ಎಲ್ಸಿ ಪಾಸ್ ಮಾಡಿ ನಂತರ ಐಟಿಐ ಓದಿದರು. ಡೈಲಾಗ್ಗಳನ್ನು ಹೇಳಿಕೊಂಡು, ಅದರಲ್ಲೂ ಲವ್ ಸಂಬಂಧಿತ ಡೈಲಾಗ್ನ ಹೇಳಿ ಫೇಮಸ್ ಆದರು.

- ಜಾನ್ವಿ, ಅವರು ‘ಬಿಗ್ ಬಾಸ್’ ವೇದಿಕೆ ಏರಿದ್ದಾರೆ. ಈ ವೇಳೆ ಅವರು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ‘ನನಗೆ ಡಿಗ್ರೀ ಓದುವಾಗಲೇ ಮದುವೆ ಆಯ್ತು. ಆ ಬಳಿಕ ಬೇಗ ಮಗು ಕೂಡ ಆಯ್ತು. ಈಗ ಮಗನೇ ನನಗೆ ಪ್ರಪಂಚ. ಪತಿಯಿಂದ ನಾನು ವಿಚ್ಛೇದನ ಪಡೆದಿದ್ದೇನೆ’ ಎಂದು ಅವರು ಹೇಳಿದರು.

- ಧನುಶ್, ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಕೆಲ ಧಾರಾವಾಹಿ ನಟರು, ಕಾಮಿಡಿ ಶೋ ಸ್ಪರ್ಧಿಗಳು ಬಂದಿದ್ದಾರೆ. ಕಳೆದ ಬಾರಿ ‘ಗೀತಾ’ ಧಾರಾವಾಹಿಯ ನಾಯಕಿ ಬಿಗ್‌ಬಾಸ್ ಮನೆಗೆ ಬಂದಿದ್ದರು, ಈ ಬಾರಿ ‘ಗೀತಾ’ ಧಾರಾವಾಹಿಯ ನಾಯಕ ಧನುಶ್ ಅವರು ಈ ಬಾರಿ ಬಿಗ್ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಅಪ್ಪ-ಅಮ್ಮ, ಪತ್ನಿ, ಗೆಳೆಯರನ್ನು ಬಿಟ್ಟು ಬಿಗ್‌ಬಾಸ್ ಮನೆಗೆ ಬಂದಿದ್ದಾರೆ.
- ಇವರೊಟ್ಟಿಗೆ ಮತ್ತಷ್ಟು ಸ್ಪರ್ಧಿಗಳ ಆಗಮನವೂ ಕುತೂಹಲ ಕೆರಳಿಸಿವೆ.





