ಒಬ್ಬ ಅನ್ನದಾತನ ಕಷ್ಟವನ್ನು ಮತ್ತೊಬ್ಬ ಅನ್ನದಾತ ಮಾತ್ರ ಅರ್ಥ ಮಾಡಿಕೊಳ್ಳಬಲ್ಲ. ಹೌದು, ದರ್ಶನ್ ಜೈಲಲ್ಲಿದ್ದಾಗ ಸಾರಥಿ ಸಿನಿಮಾ ರಿಲೀಸ್ ಮಾಡಿ ಗೆದ್ದಿದ್ದ ನಿರ್ಮಾಪಕ ಸತ್ಯ ಪ್ರಕಾಶ್, ಇದೀಗ ಡೆವಿಲ್ ಚಿತ್ರದ ನಿರ್ಮಾಪಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇಷ್ಟಕ್ಕೂ ಗ್ಯಾರಂಟಿ ನ್ಯೂಸ್ ಜೊತೆ ಸಾರಥಿ ಮೇಕರ್ ಮಿಲನ ಪ್ರಕಾಶ್ ಬಗ್ಗೆ ಹೇಳಿದ್ದೇನು ಅನ್ನೋದನ್ನ ನೀವ್ ತಿಳಿಯಲೇ ಬೇಕು.
- ಡೆವಿಲ್ ಮೇಕರ್‌ಗೆ ಧೈರ್ಯ ತುಂಬಿದ ಸಾರಥಿ ಪ್ರೊಡ್ಯೂಸರ್
- ಸಾರಥಿ ರಿಲೀಸ್ ಟೈಮ್‌ನಲ್ಲೂ ಜೈಲು ಸೇರಿದ್ರು ನಟ ದರ್ಶನ್
- ಸಿಂಪಥಿ ಮೇಲೆ ಅಂದು ಬಾಕ್ಸ್ ಆಫೀಸ್ ಧೂಳೆಬ್ಬಿಸಿತ್ತು ಸಾರಥಿ
- ಇಂದು ಡೆವಿಲ್‌ಗೆ ವರ್ಕೌಟ್ ಆಗುತ್ತಾ ಅದೇ ಫಾರ್ಮುಲಾ..?!
ಸಾರಥಿ ಸಿನಿಮಾ, ದರ್ಶನ್ ಕರಿಯರ್‌ನ ಒನ್ ಆಫ್ ದಿ ಬಿಗ್ಗೆಸ್ಟ್ ಹಿಟ್ ಮೂವಿ. ಡಿಬಾಸ್‌ಗೆ ಅವ್ರ ಸಹೋದರ ದಿನಕರ್ ತೂಗುದೀಪ ಅವರೇ ಆ್ಯಕ್ಷನ್ ಕಟ್ ಹೇಳಿದ್ದ ಸಾರಥಿಗೆ ಸತ್ಯ ಪ್ರಕಾಶ್ ಬಂಡವಾಳ ಹೂಡಿದ್ದರು. ಆದ್ರೆ ಪತ್ನಿ ಜೊತೆ ಜಗಳ ಮಾಡಿದ ಹಿನ್ನೆಲೆ ದರ್ಶನ್ ಡೊಮೆಸ್ಟಿಕ್ ವಯಲೆನ್ಸ್ ಹಿನ್ನೆಲೆ ಅಂದು ಜೈಲು ಪಾಲಾಗಿದ್ದರು. ದರ್ಶನ್ ಜೈಲೂಟ ಸವಿಯುತ್ತಿದ್ದಂತೆಯೇ ಸಾರಥಿ ಸಿನಿಮಾ ರಿಲೀಸ್ ಆಗಿತ್ತು. ಇದೀಗ ಅದೇ ಪರಿಸ್ಥಿತಿ ಡೆವಿಲ್ ಚಿತ್ರದ ನಿರ್ಮಾಪಕರಿಗೂ ಎದುರಾಗಿದೆ.
ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಮತ್ತೆ ಜೈಲು ಸೇರಿದ್ದಾರೆ ದಾಸ ದರ್ಶನ್. ಆದ್ರೆ ಪರಿಸ್ಥಿತಿಗಳು ಆಗ ಇದ್ದಂತೆ ಈಗ ಇಲ್ಲ. ಯಾಕಂದ್ರೆ ಆಗ ಸೋಶಿಯಲ್ ಮೀಡಿಯಾ ಈಗಿನಷ್ಟು ಬೆಳೆದಿರಲಿಲ್ಲ. ಇನ್‌ಫ್ಯಾಕ್ಟ್ ಅಂಥದ್ದೊಂದು ಫ್ಲಾಟ್‌ಫಾರ್ಮ್ ಇರಲೇ ಇಲ್ಲ. ಅಲ್ಲದೆ, ಪತ್ನಿ ಕೂಡ ವಿರೋಧವಾಗಿದ್ರು. ಈಗ ಸೋಶಿಯಲ್ ಮೀಡಿಯಾ ಇದೆ. ಜೊತೆಗೆ ವಿಜಯಲಕ್ಷ್ಮೀ ದರ್ಶನ್ ಬೆಂಬಲ ಸಹ ಇದೆ. ಹೀಗಾಗಿ ಡೆವಿಲ್ ಸಿನಿಮಾದ ಪ್ರಕಾಶ್ ವೀರ್‌ಗೆ ಶುಭವಾಗಲಿದೆ ಎನ್ನಲಾಗ್ತಿದೆ.
ಇದೇ ಅಕ್ಟೋಬರ್ 31ಕ್ಕೆ ಬಹುನಿರೀಕ್ಷಿತ ಡೆವಿಲ್ ಸಿನಿಮಾನ ರಿಲೀಸ್ ಮಾಡೋಕೆ ಸಜ್ಜಾಗಿದ್ದಾರೆ ಡೈರೆಕ್ಟರ್ ಕಮ್ ಪ್ರೊಡ್ಯೂಸರ್ ಪ್ರಕಾಶ್. ಆದ್ರೆ ಆಗ ಅಪ್ಲೈ ಆದಂತಹ ಆ ಸಿಂಪಥಿ ಕಾರ್ಡ್ ಈಗಲೂ ಪ್ಲೇ ಮಾಡಿದ್ರೆ ವರ್ಕೌಟ್ ಆಗುತ್ತಾ ಅನ್ನೋದೇ ಯಕ್ಷ ಪ್ರಶ್ನೆ. ಯಾಕಂದ್ರೆ ರಿಯಲ್ ಲೈಫ್‌ನಲ್ಲಿ ವಿಲನ್ ಅನಿಸಿಕೊಂಡು ಜೈಲು ಸೇರಿರೋ ದರ್ಶನ್, ಸಿನಿಮಾದಲ್ಲಿ ಹೀರೋ ಆಗಿ ಸಮಾಜಕ್ಕೆ ಉಪದೇಶ ಕೊಟ್ರೆ ಜನ ನೋಡ್ತಾರಾ..? ಇಷ್ಟ ಪಡ್ತಾರಾ ಅನ್ನೋದೇ ಬಹುದೊಡ್ಡ ಪ್ರಶ್ನೆಯಾಗಿದೆ.
ಇನ್ನು ಡೆವಿಲ್ ಚಿತ್ರದ ನಿರ್ಮಾಪಕರ ಕಷ್ಟ ಅರ್ಥೈಸಿಕೊಂಡಿರೋ ಸಾರಥಿ ನಿರ್ಮಾಪಕ ಸತ್ಯಪ್ರಕಾಶ್, ಮಿಲನ ಪ್ರಕಾಶ್‌ಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ರಿಲೀಸ್ ಮಾಡಬಹುದು ಅನ್ನೋ ಭರವಸೆ ನೀಡಿದ್ದಾರೆ. ಇದು ನಿಜಕ್ಕೂ ಪಾಸಿಟಿವ್ ವೈಬ್ ಸೃಷ್ಠಿಸಿದೆ. ಇಷ್ಟಕ್ಕೂ ಸಾರಥಿ ಸಿನಿಮಾದ ಸಮಯದಲ್ಲಾದ ಆ ಸಂಕಷ್ಟ, ಈಗಿರೋ ದರ್ಶನ್ ಸ್ಥಿತಿ, ನಿರ್ಮಾಪಕರ ಬಗ್ಗೆ ಸತ್ಯಪ್ರಕಾಶ್ ಏನೆಲ್ಲಾ ಮಾತಾಡಿದ್ರು ಅನ್ನೋದನ್ನ ಅವ್ರ ಬಾಯಿಂದಲೇ ಎಕ್ಸ್‌ಕ್ಲೂಸಿವ್ ಆಗಿ ಕೇಳಿ.
ಅಂದಹಾಗೆ ಸತ್ಯ ಪ್ರಕಾಶ್ ಸಾರಥಿ ಸಿನಿಮಾ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ರು. ಇದೀಗ ದುನಿಯಾ ವಿಜಯ್ ಜೊತೆ ಲ್ಯಾಂಡ್‌ಲಾರ್ಡ್ ಸಿನಿಮಾ ಮಾಡ್ತಿದ್ದು, ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ. ರಿಲೀಸ್ ಡೇಟ್ ಕೂಡ ಸದ್ಯದಲ್ಲೇ ಅನೌನ್ಸ್ ಮಾಡುವ ಯೋಜನೆಯಲ್ಲಿದ್ದಾರೆ.