ಒಬ್ಬ ಅನ್ನದಾತನ ಕಷ್ಟವನ್ನು ಮತ್ತೊಬ್ಬ ಅನ್ನದಾತ ಮಾತ್ರ ಅರ್ಥ ಮಾಡಿಕೊಳ್ಳಬಲ್ಲ. ಹೌದು, ದರ್ಶನ್ ಜೈಲಲ್ಲಿದ್ದಾಗ ಸಾರಥಿ ಸಿನಿಮಾ ರಿಲೀಸ್ ಮಾಡಿ ಗೆದ್ದಿದ್ದ ನಿರ್ಮಾಪಕ ಸತ್ಯ ಪ್ರಕಾಶ್, ಇದೀಗ ಡೆವಿಲ್ ಚಿತ್ರದ ನಿರ್ಮಾಪಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇಷ್ಟಕ್ಕೂ ಗ್ಯಾರಂಟಿ ನ್ಯೂಸ್ ಜೊತೆ ಸಾರಥಿ ಮೇಕರ್ ಮಿಲನ ಪ್ರಕಾಶ್ ಬಗ್ಗೆ ಹೇಳಿದ್ದೇನು ಅನ್ನೋದನ್ನ ನೀವ್ ತಿಳಿಯಲೇ ಬೇಕು.
- ಡೆವಿಲ್ ಮೇಕರ್‌ಗೆ ಧೈರ್ಯ ತುಂಬಿದ ಸಾರಥಿ ಪ್ರೊಡ್ಯೂಸರ್
- ಸಾರಥಿ ರಿಲೀಸ್ ಟೈಮ್‌ನಲ್ಲೂ ಜೈಲು ಸೇರಿದ್ರು ನಟ ದರ್ಶನ್
- ಸಿಂಪಥಿ ಮೇಲೆ ಅಂದು ಬಾಕ್ಸ್ ಆಫೀಸ್ ಧೂಳೆಬ್ಬಿಸಿತ್ತು ಸಾರಥಿ
- ಇಂದು ಡೆವಿಲ್ಗೆ ವರ್ಕೌಟ್ ಆಗುತ್ತಾ ಅದೇ ಫಾರ್ಮುಲಾ..?!
ಸಾರಥಿ ಸಿನಿಮಾ, ದರ್ಶನ್ ಕರಿಯರ್‌ನ ಒನ್ ಆಫ್ ದಿ ಬಿಗ್ಗೆಸ್ಟ್ ಹಿಟ್ ಮೂವಿ. ಡಿಬಾಸ್‌ಗೆ ಅವ್ರ ಸಹೋದರ ದಿನಕರ್ ತೂಗುದೀಪ ಅವರೇ ಆ್ಯಕ್ಷನ್ ಕಟ್ ಹೇಳಿದ್ದ ಸಾರಥಿಗೆ ಸತ್ಯ ಪ್ರಕಾಶ್ ಬಂಡವಾಳ ಹೂಡಿದ್ದರು. ಆದ್ರೆ ಪತ್ನಿ ಜೊತೆ ಜಗಳ ಮಾಡಿದ ಹಿನ್ನೆಲೆ ದರ್ಶನ್ ಡೊಮೆಸ್ಟಿಕ್ ವಯಲೆನ್ಸ್ ಹಿನ್ನೆಲೆ ಅಂದು ಜೈಲು ಪಾಲಾಗಿದ್ದರು. ದರ್ಶನ್ ಜೈಲೂಟ ಸವಿಯುತ್ತಿದ್ದಂತೆಯೇ ಸಾರಥಿ ಸಿನಿಮಾ ರಿಲೀಸ್ ಆಗಿತ್ತು. ಇದೀಗ ಅದೇ ಪರಿಸ್ಥಿತಿ ಡೆವಿಲ್ ಚಿತ್ರದ ನಿರ್ಮಾಪಕರಿಗೂ ಎದುರಾಗಿದೆ.
ಅಂದಹಾಗೆ ಸತ್ಯ ಪ್ರಕಾಶ್ ಸಾರಥಿ ಸಿನಿಮಾ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ರು. ಇದೀಗ ದುನಿಯಾ ವಿಜಯ್ ಜೊತೆ ಲ್ಯಾಂಡ್‌ಲಾರ್ಡ್ ಸಿನಿಮಾ ಮಾಡ್ತಿದ್ದು, ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ. ರಿಲೀಸ್ ಡೇಟ್ ಕೂಡ ಸದ್ಯದಲ್ಲೇ ಅನೌನ್ಸ್ ಮಾಡುವ ಯೋಜನೆಯಲ್ಲಿದ್ದಾರೆ.