ಕಿಚ್ಚೋತ್ಸವ 2025..ಬಾದ್‌ಷಾ ಕಿಚ್ಚ ಸುದೀಪ್ ಕೊಟ್ರು ಬಿಸಿ ಬಿಸಿ ನ್ಯೂಸ್

ದರ್ಶನ ಸ್ನೇಹ, ಜಗಳ, ಮುನಿಸು & ಡೆವಿಲ್ ಬಗ್ಗೆ ಕಿಚ್ಚ ಟಾಕ್

Untitled design 2025 09 01t170048.558

54ನೇ ಕಿಚ್ಚೋತ್ಸವ ಹಿನ್ನೆಲೆ ಬಾದ್‌ಷಾ ಕಿಚ್ಚ ಸುದೀಪ್ ಸಾಕಷ್ಟು ಬ್ರೇಕಿಂಗ್ ಹಾಗೂ ಶಾಕಿಂಗ್ ನ್ಯೂಸ್‌‌ಗಳನ್ನ ನೀಡಿದ್ದಾರೆ. ಬರ್ತ್ ಡೇ ಸಂಭ್ರಮದಲ್ಲಿರೋ ಆಲ್ ಇಂಡಿಯಾ ಕಟೌಟ್, ದರ್ಶನ್ ಜೊತೆಗಿನ ಸ್ನೇಹ, ಹಾರ್ಸ್ ರೈಡಿಂಗ್, ಡೆವಿಲ್-45 ಚಿತ್ರಗಳ ಜೊತೆ ರಿಲೀಸ್ ಆಗ್ತಿರೋ ಸಿನಿಮಾ, ವಿಷ್ಣು ಸ್ಮಾರಕ, ರಾಜಕಾರಣ ಎಂಟ್ರಿ.. ಹೀಗೆ ಎಲ್ಲಾ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಆಲ್ ಇಂಡಿಯಾ ಕಟೌಟ್.. ಬಾದ್‌ಷಾ ಸುದೀಪ್‌ಗೆ 54ನೇ ಬರ್ತ್ ಡೇ ಸಂಭ್ರಮ. ಜನುಮ ದಿನ ಹಿನ್ನೆಲೆ K47 ಚಿತ್ರದ ಟೈಟಲ್ ಹಾಗೂ ಟೀಸರ್ ರಿಲೀಸ್ ಆಗ್ತಿದೆ. ಬಿಲ್ಲ ರಂಗ ಬಾಷ ಫಸ್ಟ್‌ಲುಕ್ ಕೂಡ ಹೊರಬರಲಿದೆ. ಇದರೊಟ್ಟಿಗೆ ಸೆಪ್ಟೆಂಬರ್ 28ರಿಂದಲೇ ಬಿಗ್‌ಬಾಸ್-12 ಶುಭಾರಂಭ ಅನ್ನೋದು ರಿವೀಲ್ ಆಗಿದೆ. ಸೋ.. ಹೀಗೆ ಸಾಲು ಸಾಲು ಸರ್‌‌ಪ್ರೈಸ್‌‌ಗಳ ಜೊತೆಗೆ ಸುದೀಪ್ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಲು ಸುದ್ದಿಗೋಷ್ಠಿ ನಡೆಸಿದ್ರು.

ಕಿಚ್ಚ-ದಚ್ಚು ಸ್ನೇಹ ಸಂಬಂಧ, ಮುನಿಸು ಬಗ್ಗೆ ಎಲ್ಲರಿಗೂ ಗೊತ್ತೇಯಿದೆ. ಈ ಬಗ್ಗೆ ಮಾತಾಡಿದ ಕಿಚ್ಚ, ನಾವು ದೂರ ಆಗಿರೋದ್ರಿಂದ ಬೇರೆಯವ್ರಿಗೆ ಖುಷಿ ಆಗಿದೆ ಅಂದ್ರೆ ಆಗಲಿ ಬಿಡಿ. ನಾವ್ಯಾಕೆ ದೂರ ಆಗಿದ್ದೀವಿ ಅನ್ನೋ ಸತ್ಯ ನಮಗೆ ಗೊತ್ತಿದೆ. ಅವರ ನೋವುಗಳು ಅವರಿಗಿರುತ್ತೆ. ಅವರದ್ದು ಏನೇ ಇದ್ರೂ ಕಾನೂನು, ಸರ್ಕಾರ ಇದೆ ನೋಡಿಕೊಳ್ಳುತ್ತೆ. ಸೂರ್ಯನೊಬ್ಬ, ಚಂದ್ರನೊಬ್ಬ. ಅವರು ಎಲ್ಲೆಲ್ಲಿರಬೇಕೋ ಅಲ್ಲಲ್ಲೇ ಇದ್ರೆ ಚೆಂದ ಎಂದಿದ್ದಾರೆ.

ಅಷ್ಟೇ ಅಲ್ಲ, ತಾನು ಐತಿಹಾಸಿಕ ಸಿನಿಮಾಗಳನ್ನ ಮಾಡಲ್ಲ. ಯಾಕಂದ್ರೆ ಒಮ್ಮೆ ಕುದುರೆಯಿಂದ ಕೆಳಗೆ ಬಿದ್ದಿದ್ದೆ ಎಂದ ಕಿಚ್ಚ, ಅದಾದ ಬಳಿಕ ದರ್ಶನ್ ತೋಟದ ಮನೆಯಲ್ಲಿ ಕುದುರೆ ಹತ್ತೋದನ್ನು ಹೇಳಿಕೊಟ್ಟಿದ್ದ ಪ್ರಸಂಗವನ್ನು ನೆನೆದರು. ಡೆವಿಲ್ ಚಿತ್ರಕ್ಕೆ ಶುಭವಾಗಲಿ ಎಂದರು.

ಈಗಾಗ್ಲೇ ಡಿಸೆಂಬರ್ 12ಕ್ಕೆ ದರ್ಶನ್ ನಟನೆಯ ಡೆವಿಲ್ ಸಿನಿಮಾ ಬರೋದು ಪಕ್ಕಾ ಆಗಿದೆ. ಡಿಸೆಂಬರ್ 25ಕ್ಕೆ ಶಿವಣ್ಣ-ಉಪೇಂದ್ರ ನಟನೆಯ 45 ಚಿತ್ರ ಬಿಡುಗಡೆ ಆಗ್ತಿದೆ. ಅವುಗಳ ನಡುವೆ ಡಿಸೆಂಬರ್ 25ಕ್ಕೆ ಕೆ47 ಸಿನಿಮಾ ಕೂಡ ರಿಲೀಸ್ ಆಗಲಿದೆ ಎನ್ನಲಾಗ್ತಿದೆ. ಈ ಬಗ್ಗೆ ಮಾತನಾಡಿದ ಕಿಚ್ಚ, ಅದೇ ಡೇಟ್‌ಗೆ ಬರೋ ಸೂಚನೆ ನೀಡಿದ್ದಾರೆ. ನಮಗೆ ಪೊಂಗಲ್ ಮುಖ್ಯ ಅಲ್ಲ. ಇಲ್ಲಿ ಸಂಕ್ರಾಂತಿ ಹಬ್ಬ ಒಂದೇ ದಿನ ಸೆಲೆಬ್ರೇಷನ್. ಹಾಗಾಗಿ ನೆಕ್ಸ್ಟ್ ಜುಲೈವರೆಗೂ ಕಾಯುವುದು ಕಷ್ಟ ಎಂದಿದ್ದಾರೆ ಸುದೀಪ್.

ಚಿತ್ರರಂಗದಲ್ಲಿ ಥಿಯೇಟರ್‌ಗಳು ಸಾಕಷ್ಟು ಇವೆ. ಬರೋರು ಬರಲಿ, ಅವರವರ ಅನುಕೂಲ ಅಂತ ಓಪನ್ ಆಗಿ ಮಾತನಾಡಿದ್ದಾರೆ. ಅಂದಹಾಗೆ ಈ ಹಿಂದೆ ಕಿಚ್ಚನ ಮ್ಯಾಕ್ಸ್ ಹಾಗೂ ಉಪ್ಪಿಯ ಯುಐ ಚಿತ್ರಗಳು ಒಟ್ಟೊಟ್ಟಿಗೆ ರಿಲೀಸ್ ಆಗಿ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗಿದ್ದವು. ಇದೀಗ ಮತ್ತೊಮ್ಮೆ ಅದು ಮರುಕಳಿಸೋ ಮುನ್ಸೂಚನೆ ಇದೆ. ಸೋ ಕ್ರಿಸ್‌ಮಸ್‌ಗೆ ಕೆ47 ಬರೋದು ಕನ್ಫರ್ಮ್‌.

ಪಾಲಿಟಿಕ್ಸ್ ಎಂಟ್ರಿ ಬಗ್ಗೆ ಮಾತನಾಡಿರೋ ಸುದೀಪ್, ಬರಬೇಕು ಅಂತೇನು ಇಲ್ಲ. ಕೆಲವೊಮ್ಮೆ ಕೆಲವೊಬ್ರು ಬರೋ ತರಹ ಮಾಡ್ತಿದ್ದಾರೆ. ಮುಂದೆ ನೋಡೋಣ ಅಂತ ರಾಜಕಾರಣ ಎಂಟ್ರಿ ಬಗ್ಗೆ ಪಾಸಿಟಿವ್ ಆಗಿಯೇ ಹಿಂಟ್ ನೀಡಿದ್ರು.

ಇನ್ನು ಡಿಕೆಶಿ ನಟ್ಟು ಬೋಲ್ಟು ವಿಚಾರ ಅದೆಲ್ಲಾ ಸಾಧುಕೋಕಿಲಾ ಕಿತಾಪತಿ. ನಟ್ಟು ಬೋಲ್ಟು ಟೈಟ್ ಬಗ್ಗೆ ಹೇಳಿಕೊಟ್ಟಿರೋದು ಸಾಧು. ಡಿಕೆ ಬೇಕು ಅಂತ ಮಾತಾಡಿಲ್ಲ. ಕಲಾವಿದರು ಯಾಕೆ ಬಂದಿಲ್ಲ ಅನ್ನೋದು ಅವರಿಗೆ ಗೊತ್ತಿಲ್ಲ. ನಾನು ಪಾಲಿಟಿಕ್ಸ್‌ಗೆ ಬಂದ್ರೆ ಬದಲಾಗದ ಹಾಗೆ ನನ್ನ ನಟ್ಟು ಬೋಲ್ಟು ಟೈಟ್ ಮಾಡ್ಕೋತೀನಿ ಅಂತ ಸುದೀಪ್ ಆ ಸೆನ್ಸೇಷನಲ್ ವಿಚಾರಕ್ಕೂ ಪ್ರತಿಕ್ರಿಯಿಸಿದ್ದಾರೆ.

ಅಮ್ಮನ ಹೆಸರಲ್ಲಿ ಪಾರ್ಕ್‌ವೊಂದನ್ನು ದತ್ತು ಪಡೆದಿರೋ ಸುದೀಪ್, ಸಸಿ ನೆಡುವ ಮೂಲಕ ಹಸಿರೇ ಉಸಿರು ಅನ್ನೋ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅಷ್ಟೇ ಅಲ್ಲ, ವಿಷ್ಣು ಸ್ಮಾರಕ ಪುನರ್ ನಿರ್ಮಿಸಲು ಅರ್ಧ ಎಕರೆ ಜಾಗ ಖರೀದಿಸಿದ್ದು, ಸ್ಮಾರಕ ಹೇಗಿರಲಿದೆ ಅನ್ನೋದ್ರ ಬ್ಲೂ ಪ್ರಿಂಟ್ ವಿಡಿಯೋ ಸದ್ಯದಲ್ಲೇ ರಿಲೀಸ್ ಮಾಡಲಾಗುವುದು ಎಂದಿದ್ದಾರೆ. ಒಂದ್ಕಡೆ ಕಿತ್ತಾಣ, ಮತ್ತೊಂದ್ಕಡೆ ಹೋರಾಟ ನಡೀತಿದೆ. ಅದ್ರ ಪಾಡಿಗೆ ಅದು ನಡೆಯಲಿ, ನಮ್ಮ ಪಾಡಿಗೆ ನಾವು ಕೆಲಸ ಮಾಡ್ತೀವಿ ಎಂದಿದ್ದಾರೆ.

ಇನ್ನು ಪತ್ನಿ ಪ್ರಿಯಾ ಸುದೀಪ್ ಸರ್‌ಪ್ರೈಸ್ ನೀಡುವುದು ಬೇಡ ಅಂತ ಸ್ವತಃ ಕಿಚ್ಚನೇ ಅವರಿಗೆ ಹೇಳಿದ್ರಂತೆ. ಕಾರಣ ಸುಮ್ಮನೆ ಹಣ ಖರ್ಚು ಮಾಡೋದು ಬೇಡ ಅನ್ನೋದು ಅವ್ರ ಆಶಯ. ಅಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ಬಂದಂತಹ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ದರ್ಶನ ನೀಡಿ, ನಂದಿ ಲಿಂಕ್ಸ್ ಗ್ರೌಂಡ್‌‌ನಲ್ಲಿ ಅರ್ಥಪೂರ್ಣವಾಗಿ ಜನುಮ ದಿನ ಸೆಲೆಬ್ರೇಟ್ ಮಾಡಿಕೊಳ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version