ಮೈಸೂರಲ್ಲಿ ‘ಪೆದ್ದಿ’.. ರಾಮ್‌ಚರಣ್ ಚಿತ್ರಕ್ಕೆ ದಸರಾ ನಂಟು..?

ಅರಮನೆ ನಗರಿಯಲ್ಲಿ ಬೀಡು ಬಿಟ್ಟ ಚಿರು ತನಯ & ಟೀಂ ಪೆದ್ದಿ

Untitled design 2025 09 01t164614.904

ಗ್ಲೋಬಲ್ ಸ್ಟಾರ್ ರಾಮ್‌ಚರಣ್ ತೇಜಾ ನಟನೆಯ ಪೆದ್ದಿ ಚಿತ್ರದ ಶೂಟಿಂಗ್ ನಮ್ಮ ಅರಮನೆ ನಗರಿ ಮೈಸೂರಿನಲ್ಲಿ ಭರದಿಂದ ಸಾಗ್ತಿದೆ. ಕರುನಾಡ ಚಕ್ರವರ್ತಿ ಶಿವಣ್ಣ ಕೂಡ ಬಣ್ಣ ಹಚ್ಚಿರೋ ಈ ಬಿಗ್ ಪ್ರಾಜೆಕ್ಟ್‌‌‌ಗೆ ದಸರಾ ನಂಟಿದೆ ಎನ್ನಲಾಗ್ತಿದೆ. ಅದ್ಹೇಗೆ ಅನ್ನೋದ್ರ ಜೊತೆಗೆ ಚರಣ್ ಮೀಟ್ಸ್ ಸಿಎಂ ಸಿದ್ದು ಕಹಾನಿ ಕೂಡ ಇಲ್ಲಿದೆ ನೋಡಿ.

ಪೆದ್ದಿ.. ಗೇಮ್ ಚೇಂಜರ್ ಚಿತ್ರದ ಬಳಿಕ ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟಿಸ್ತಿರೋ ಬಹುನಿರೀಕ್ಷಿತ ಸಿನಿಮಾ. ತ್ರಿಬಲ್ ಆರ್ ಚಿತ್ರದಿಂದ ಹಾಲಿವುಡ್ ಮಂದಿಯ ಹುಬ್ಬೇರಿಸಿರೋ ರಾಮ್ ಚರಣ್, ಮೆಗಾಸ್ಟಾರ್ ಮೆಗಾ ಸಿನಿಮಾ ಲೆಗಸಿಯನ್ನ ಅವರ ಜೊತೆಯಲ್ಲೇ ಮುಂದುವರೆಸ್ತಿರೋದು ಇಂಟರೆಸ್ಟಿಂಗ್.

ಇದೀಗ ಉಪ್ಪೆನ ಡೈರೆಕ್ಟರ್ ಬುಚ್ಚಿಬಾಬು ಜೊತೆ ರಾಮ್ ಚರಣ್ ಪೆದ್ದಿ ಸಿನಿಮಾಗೆ ಕೈ ಹಾಕಿದ್ದು, ಒನ್ಸ್ ಅಗೈನ್ ರಂಗಸ್ಥಳಂ ಫ್ಲೇವರ್ ಚಿತ್ರವನ್ನು ಪ್ರೇಕ್ಷಕರು ನಿರೀಕ್ಷಿಸಬಹುದು. ಯಾಕಂದ್ರೆ ಚರಣ್ ಮಗದೊಮ್ಮೆ ಅಂಥದ್ದೇ ಗಡ್ಡ, ಕೂದಲು ಬಿಟ್ಟುಕೊಂಡು, ಹಳ್ಳಿ ಪೆದ್ದನಂತೆ ಕ್ರಿಕೆಟ್ ಆಡೋಕೆ ಗ್ರೌಂಡ್‌ಗೆ ಇಳಿಯೋ ಟೀಸರ್ ಝಲಕ್ ಸಖತ್ ಹಿಟ್ ಆಗಿದೆ.

ಅಂದಹಾಗೆ ಈ ಪೆದ್ದಿ ಸಿನಿಮಾಗೆ ನಮ್ಮ ಕರುನಾಡ ಚಕ್ರವರ್ತಿ ಶಿವರಾಜ್‌‌ಕುಮಾರ್ ಕೂಡ ಕಾಲಿಟ್ಟಿದ್ದು, ಈಗಾಗ್ಲೇ ಶಿವಣ್ಣ ಲುಕ್ಸ್ ಸಖತ್ ಕಿಕ್ ಕೊಟ್ಟಿವೆ. ಅಲ್ಲದೆ, ಮಿರ್ಜಾಪುರ್ ವೆಬ್ ಸೀರೀಸ್ ಖ್ಯಾತಿಯ ಬಾಲಿವುಡ್ ನಟ ದಿವ್ಯೇಂದು ಕೂಡ ಈ ಸಿನಿಮಾದ ಅಡ್ಡಾಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಪೆದ್ದಿ ಸಿನಿಮಾದ ಶೂಟಿಂಗ್ ಅರಮನೆ ನಗರಿ ಮೈಸೂರಿನಲ್ಲಿ ಭರದಿಂದ ಸಾಗ್ತಿದ್ದು, ಇಡೀ ಟೀಂ ಹೆರಿಟೇಜ್ ಸಿಟಿಯಲ್ಲಿ ಬೀಡುಬಿಟ್ಟಿದೆ.

ಗೌರಿ-ಗಣೇಶ ಹಬ್ಬದ ದಿನ ಕೂಡ ಸಿನಿಮಾ ಶೂಟಿಂಗ್ ನಡೆಸಿರೋ ಚಿತ್ರತಂಡ, ಚಿತ್ರ ಪ್ರೇಮಿಗಳಿಗೆ ಶೂಟಿಂಗ್ ಸೆಟ್‌ನಿಂದಲೇ ಶುಭಾಶಯ ಕೂರುವ ವಿಡಿಯೋ ಬಿಡುಗಡೆ ಮಾಡಿತ್ತು. ಹಾಡೊಂದರ ಚಿತ್ರೀಕರಣ ಶುರು ಮಾಡಿದ್ದ ಟೀಂ, ಅದಕ್ಕಾಗಿ ಸಾಕಷ್ಟು ಮಂದಿ ಡ್ಯಾನ್ಸರ್ಸ್‌ನ ಕರೆತಂದು, ಕಲರ್‌‌ಫುಲ್ ಸೆಟ್‌‌ಗಳಲ್ಲಿ ಸೆರೆ ಹಿಡಿಯುತ್ತಿದೆ. ಇಂಟರೆಸ್ಟಿಂಗ್ ಅಂದ್ರೆ, ನಿನ್ನೆ ಮೈಸೂರಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿರೋ ರಾಮ್ ಚರಣ್, ಹೂ ಗುಚ್ಚ ನೀಡಿ, ಶಾಲು ಹೊದಿಸಿ, ಕುಶಲೋಪರಿ ಹಂಚಿಕೊಂಡಿದ್ದಾರೆ.

ಅಂದಹಾಗೆ ಪೆದ್ದಿ ಟಿಪಿಕಲ್ ಹಳ್ಳಿ ಸೊಗಡಿನ ಸಿನಿಮಾ ಆಗಿರೋದ್ರಿಂದ, ಮೈಸೂರು ಹಾಗೂ ಸುತ್ತಮುತ್ತಲು ಶೂಟಿಂಗ್ ನಡೆಸ್ತಿರೋದು ನೋಡಿದ್ರೆ ನಾಡಹಬ್ಬ ದಸರಾಗೆ ನಂಟಿರೋ ಸಾಧ್ಯತೆಯಿದೆ ಎನ್ನಲಾಗ್ತಿದೆ. ಈ ಬಾರಿಯ ದಸರಾಗಾಗಿ ಆನೆಗಳು ಕೂಡ ಬಂದು ತಾಲೀಮು ನಡೆಸ್ತಿರೋದು ಗೊತ್ತೇಯಿದೆ. ಹಾಗಾಗಿ ಪೆದ್ದಿ ಚಿತ್ರದಲ್ಲಿ ದಸರಾ ವೈಭವದ ಝಲಕ್ ಕಂಡರೂ ಅಚ್ಚರಿಯಿಲ್ಲ ಎನ್ನಲಾಗ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version