ನಟ ಅಜಯ್ ರಾವ್ ಹಾಗೂ ಪತ್ನಿ ಸ್ವಪ್ನ ರಾವ್ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ, ವಿಚ್ಚೇದನ ಕೋರಿ ನ್ಯಾಯಾಲಯದ ಮೆಟ್ಟಿಲು ಕೂಡ ಏರಿದ್ದಾರೆ ಎನ್ನಲಾಗಿತ್ತು. ಆದ್ರೀಗ ಆ ಬ್ಯಾಡ್‌ನ್ಯೂಸ್‌ಗೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಗಳಿಗಾಗಿ ಸಹಬಾಳ್ವೆ ನಡೆಸೋ ಸೂಚನೆ ನೀಡಿದ್ದಾರೆ ಸ್ವಪ್ನ.
- ಮಗಳ ಭವಿಷ್ಯಕ್ಕಾಗಿ ನಿಲುವು ಬದಲಿಸಿದ ಅಜಯ್ ದಂಪತಿ
- ಡಿವೋರ್ಸ್ ವಿಚಾರಕ್ಕೆ ಕೊನೆಗೂ ಬ್ರೇಕ್ ಹಾಕಿದ ಪತ್ನಿ ಸ್ವಪ್ನ
- ಖಾಸಗಿತನ ಗೌರವಿಸಲು ಅಜಯ್ ಮನವಿ.. ಸ್ವಪ್ನ ಸ್ಪಷ್ಟನೆ..!
- ಕೂಡಿ ಬಾಳುವ ಗುಡ್ ನ್ಯೂಸ್ ಕೊಟ್ಟ ಅಜಯ್ & ಸ್ವಪ್ನ..!
10 ವರ್ಷಗಳ ಹಿಂದೆ ಹೊಸಪೇಟೆಯಲ್ಲಿ ನಟ ಅಜಯ್ ರಾವ್ ಹಾಗೂ ಸ್ವಪ್ನ ರಾವ್ ಸರಳವಾಗಿ ಮದುವೆ ಆಗಿದ್ರು. ಇಬ್ಬರೂ ಪ್ರೀತಿಸಿ, ಪೋಷಕರನ್ನ ಒಪ್ಪಿಸಿ, ದಾಂಪತ್ಯಕ್ಕೆ ಕಾಲಿಟ್ಟಿದ್ದರು. ದಂಪತಿಗೆ ಒಬ್ಬ ಮುದ್ದಿನ ಮಗಳಿದ್ದಾಳೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪತಿ ಅಜಯ್ ರಾವ್ ವಿರುದ್ಧ ದೂರು ದಾಖಲಿಸುವ ಮೂಲಕ, ಪತ್ನಿ ಸ್ವಪ್ನ ರಾವ್ ವಿಚ್ಚೇದನ ಕೋರಿ ಕೌಟುಂಬಿಕ ಕೋರ್ಟ್ ಮೆಟ್ಟಿಲೇರಿದ್ರು. ಈ ಸುದ್ದಿ ಚಿತ್ರರಂಗ ಅಲ್ಲದೆ, ಇಡೀ ಕರುನಾಡಿನ ಮಂದಿಯನ್ನ ಘಾಸಿ ಗೊಳಿಸಿತ್ತು. ಆದ್ರೀಗ ಮನಸ್ಸು ಬಸಲಿಸಿಕೊಂಡು, ನಿರ್ಧಾರ ಬದಲಿಸಿದ್ದಾರೆ ಸ್ವಪ್ನ.
ಸ್ವಪ್ನ ಕೈಹಿಡಿದ ಬಳಿಕ ನಟ ಅಜಯ್ ರಾವ್, ಶ್ರೀಕೃಷ್ಣ ಆರ್ಟ್ ಅಂಡ್ ಕ್ರಿಯೇಷನ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ರು. ನಿರ್ಮಾಣ ಮಾಡ್ಬೇಡಿ ಅಂತ ಸ್ವಪ್ನ, ಪತಿಯನ್ನು ಎಚ್ಚರಿಸುತ್ತಿದ್ರಂತೆ. ಯುದ್ಧಕಾಂಡ ಬಿಡುಗಡೆಯ ನಂತರವೂ ಕೌಟುಂಬದಲ್ಲಿ ಪದೇ ಪದೇ ಈ ವಿಚಾರವಾಗಿ ಕಲಹ ನಡೆಯುತ್ತಿತ್ತು. ವಿಪರೀತ ಸಾಲ ಮಾಡಿಕೊಂಡಿದ್ದೇ ದಾಂಪತ್ಯದಲ್ಲಿ ಬಿರುಕಿಗೆ ಕಾರಣವಾಯ್ತು. ಇದೇ ಕಾರಣಕ್ಕೆ ಸ್ವಪ್ನ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ರು ಎನ್ನಲಾಗ್ತಿದೆ. ಯುದ್ಧಕಾಂಡ ಚಿತ್ರಕ್ಕಾಗಿ ಅಜಯ್ ತಮ್ಮ ಮಗಳ ನೆಚ್ಚಿನ ದುಬಾರಿ BMW ಕಾರನ್ನ ಮಾರಾಟ ಮಾಡಿದ್ರು. ಮಗಳು ಅಳುವ ಆ ವಿಡಿಯೋ ಎಲ್ಲೆಡೆ ವೈರಲ್ ಕೂಡ ಆಗಿತ್ತು.
ಸಿನಿಮಾ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಈ ವಿಚಾರವಾಗಿ ಸಪ್ನ-ಅಜಯ್ ನಡುವೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತಂತೆ. ಸಣ್ಣ ಸಣ್ಣ ಜಗಳ ಮುನಿಸು, ಕೊನೆಗೆ ಡಿವೋರ್ಸ್ ಹಂತಕ್ಕೆ ತಲುಪಿದ್ದು ವಿಪರ್ಯಾಸ. ಇಬ್ಬರೋ ಬೇರೆ ಆಗುತ್ತಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದಂತೆ ಅಜಯ್ ಪೋಸ್ಟ್ ಮೂಲಕ ಸ್ಪಷ್ಟನೆ ಕೊಟ್ರು. ನಮ್ಮ ಖಾಸಗಿತನವನ್ನು ಎಲ್ಲರೂ ಗೌರವಿಸಿ ಎಂದಿದ್ರು. ಆದ್ರೆ ಈ ಡಿವೋರ್ಸ್ ವಿಚಾರಕ್ಕೆ ಬ್ರೇಕ್ ಹಾಕಿರೋ ಪತ್ನಿ ಸ್ವಪ್ನ, ಸಾಮಾಜಿಕ ಜಾಲತಾಣದಲ್ಲಿ, ತಾಯಿಯಾಗಿ ನನ್ನ ಮೊದಲ ಜವಾಬ್ದಾರಿ ನನ್ನ ಮಗಳ ಸುರಕ್ಷತೆ. ಅವಳ ಭವಿಷ್ಯಕ್ಕಾಗಿ ನಾನು ಪ್ರತಿದಿನ ಧೈರ್ಯವನ್ನು ಕೂಡಿಸಿ, ನನಗೆ ಬರ್ತಿರುವ ಸವಾಲುಗಳನ್ನು ಎದುರಿಸುತ್ತಿದ್ದೇನೆ. ಈ ಹಂತದಲ್ಲಿ ನಾನು ಮತ್ತು ನನ್ನ ಮಗಳು ನಮ್ಮ ಬದುಕನ್ನು ಪುನರ್ ನಿರ್ಮಿಸಿಕೊಳ್ಳಲು ನಿಮ್ಮ ಹಾರೈಕೆ ಮತ್ತು ಪ್ರಾರ್ಥನೆ ಬೇಕು, ಅಂತ ಎಲ್ಲಕ್ಕೂ ಇತಿಶ್ರೀ ಹಾಡಿದ್ದಾರೆ.
ಗಂಡ ಹೆಂಡ್ತಿ ಜಗಳ ಉಂಡು ಮಲಗೋ ತನಕ ಅನ್ನೋ ಮಾತಿನಂತೆ, ಈ ಮುದ್ದಾದ ಚರಿಷ್ಮಾಗಾಗಿ ಆದ್ರೂ ಇವರುಗಳು ಸಹಬಾಳ್ವೆ ನಡೆಸಿದ್ರೆ ಅದಕ್ಕಿಂತ ಖುಷಿಯ ವಿಚಾರ ಮತ್ತೇನಿದೆ ಅಲ್ಲವೇ..?
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್