ಸೂಪರ್ ಸ್ಟಾರ್ ರಜನೀಕಾಂತ್‌ಗೀಗ 74 ವರ್ಷ. ಇಳಿವಯಸ್ಸಿನಲ್ಲೂ ಸಖತ್ ಎನರ್ಜಿಟಿಕ್ ಆಗಿರೋ ತಲೈವಾ, ಇತ್ತೀಚೆಗೆ ತಮ್ಮ ಕಾಂಪೌಂಡ್‌ನಲ್ಲಿ ಕಾಲು ಜಾರಿ ಬಿದ್ದಿರೋ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇದನ್ನ ಕಂಡು ಫ್ಯಾನ್ಸ್ ಕೂಡ ಆತಂಕಗೊಂಡಿದ್ದಾರೆ. ಆದ್ರೆ ಇದರ ಅಸಲಿಯತ್ತು ಬೇರೇನೇ ಇದೆ. ಅದೇನು ಅನ್ನೋ ರಿಯಾಲಿಟಿ ಚೆಕ್ ಇಲ್ಲಿದೆ.
ಕೂಲಿ ರಜನೀಕಾಂತ್ ನಟನೆಯ 171 ಸಿನಿಮಾ. ಮೇಕಿಂಗ್ ಹಾಗೂ ಸಾಂಗ್ಸ್‌ನಿಂದ ಧೂಳೆಬ್ಬಿಸ್ತಿರೋ ಮಾಸ್ ವೆಂಚರ್ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಇದೇ ಆಗಸ್ಟ್ 14ಕ್ಕೆ ವರ್ಲ್ಡ್‌ವೈಡ್ ಸಿನಿಮಾ ತೆರೆಗಪ್ಪಳಿಸುತ್ತಿದ್ದು, ಎಲ್ಲರೂ ತಲೈವಾ ಖದರ್ ಹಾಗೂ ಲೋಕೇಶ್ ಕನಕರಾಜ್ ಮೇಕಿಂಗ್ ನೋಡೋಕೆ ಕಾತರರಾಗಿದ್ದಾರೆ.
74ರ ಇಳಿವಯಸ್ಸಿನಲ್ಲೂ ಸೂಪರ್ ಸ್ಟಾರ್ ರಜನೀಕಾಂತ್ ಸೂಪರ್ ಪರ್ಫಾಮೆನ್ಸ್ ನೀಡಿದ್ದಾರೆ. ಅವ್ರ ಯುನಿಕ್ ಸ್ಟೈಲು, ಮ್ಯಾನರಿಸಂ ಜೊತೆ ಮಾಸ್ ಪಲ್ಸ್ ನೋಡುಗರಿಗೆ ಕಿಕ್ ಕೊಡಲಿದೆ. ರಜನೀಕಾಂತ್ ವಯಸ್ಸು ಬರೋಬ್ಬರಿ 74 ವರ್ಷ ಅಂದ್ರೆ ನೀವು ನಂಬಲೇಬೇಕು. ಚಿತ್ರದಲ್ಲಿರೋ ಆಮೀರ್ ಖಾನ್, ಉಪೇಂದ್ರ, ನಾಗಾರ್ಜುನ್ ಸೇರಿದಂತೆ ಇಂದಿನ ಯಂಗ್‌ಸ್ಟರ್‌ಗಳನ್ನ ನಾಚಿಸುವಂತೆ ಆಕ್ಟೀವ್ ಆಗಿರ್ತಾರೆ ತಲೈವಾ.
ಒಂದ್ಕಡೆ ಸಿನಿಮಾ ದಿನದಿಂದ ದಿನಕ್ಕೆ ಹೈಪ್ ಕ್ರಿಯೇಟ್ ಮಾಡ್ತಿದೆ. ಚಿತ್ರತಂಡ ಭರ್ಜರಿ ಪ್ರೊಮೋಷನ್ಸ್ ಮಾಡ್ತಿದ್ದು, ತಲೈವಾ ರಜನೀಕಾಂತ್ ಮನೆಯಂಗಳದಲ್ಲಿ ನ್ಯೂಸ್ ಪೇಪರ್ ತರಲು ಹೋಗಿ ಜಾರಿಬಿದ್ದಿದ್ದಾರೆ ಅನ್ನೋ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ. ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರೋ ಆ ವಿಡಿಯೋದಲ್ಲಿ ಒದ್ದೆಯಾಗಿರೋ ಫ್ಲೋರ್ ಮೇಲೆ ಕಾಲು ಜಾರಿ ಕುಂಬಳಕಾಯಿ ಬಿದ್ದಂತೆ ಬೀಳ್ತಾರೆ. ಅದನ್ನ ಸಾಕಷ್ಟು ಸೋಶಿಯಲ್ ಮೀಡಿಯಾ ಪೇಜ್‌ಗಳು ಸ್ವತಃ ರಜನೀಕಾಂತ್ ಅವರೇ ಹೀಗೆ ಬಿದ್ದಿದ್ದಾರೆ ಅಂತ ಸುದ್ದಿ ಹಬ್ಬಿಸಿವೆ.
ಇದನ್ನ ಕಂಡು ರಜನಿ ಡೈ ಹಾರ್ಡ್ ಫ್ಯಾನ್ಸ್ ಸಿಕ್ಕಾಪಟ್ಟೆ ಆತಂಕಕ್ಕೆ ಒಳಗಾಗಿದ್ದಾರೆ. ಅಯ್ಯೋ ಬಾಸ್ ನೀವ್ಯಾಕೆ ಹೀಗೆ ಬಿದ್ರಿ ಅಂತೆಲ್ಲಾ ಸಿಂಪಥಿ ಹೊರಹಾಕ್ತಿದ್ದಾರೆ. ಆದ್ರೆ ಈ ವಿಡಿಯೋ ರಜನೀಕಾಂತ್‌ರದ್ದು ಅಲ್ಲವೇ ಅಲ್ಲ ಅಂದ್ರೆ ನೀವು ನಂಬಲೇಬೇಕು. ಹಿರಿಯ ಪತ್ರಕರ್ತ ರಾಜಾರಾಮ್ ತಲ್ಲೂರ್ ಅನ್ನೋರು ನ್ಯೂಸ್ ಪೇಪರ್‌ಗಳ ಕಂತೆ ತೆರಳು ತಮ್ಮ ಮನೆಯಂಗಳದಲ್ಲಿ ನಡೆದು ಹೋಗಿ, ವಾಪಸ್ ಬರುವಾಗ ಜಾರಿ ಬಿದ್ದಿರೋದು. ಇದನ್ನ ಸ್ವತಃ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋ ಸಮೇತ ಬರೆದುಕೊಂಡಿದ್ದಾರೆ.
ಲಾಗ್ ಆರ್ಡರ್ ಅಂತ ಲಾಗ ಹಾಕಿದ ಕಥೆಯನ್ನ ಸವಿಸ್ತಾರವಾಗಿ ಬರೆದುಕೊಂಡಿದ್ದಾರೆ ಪತ್ರಕರ್ತರು. ಅಲ್ಲಿಗೆ ಇದು ರಜನೀಕಾಂತ್ ಅಲ್ಲ ಅನ್ನೋದು ಪಕ್ಕಾ ಆಗಿದೆ. ಜುಲೈ 24ರಂದೇ ರಾಜಾರಾಮ್ ತಲ್ಲೂರ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ರೂ ಸಹ ಇಂದಿಗೂ ಅದನ್ನ ರಜನೀಕಾಂತ್ ಅಂತಲೇ ಬಿಂಬಿಸುತ್ತಿರೋರನ್ನ ಏನನ್ನಬೇಕೋ ಗೊತ್ತಿಲ್ಲ. ಒಟ್ಟಾರೆ ತಲೈವಾ ಫ್ಯಾನ್ಸ್ ಆತಂಕ ಪಡುವ ಅವಶ್ಯಕತೆಯಿಲ್ಲ. ಅದು ಬೇರೆಯವರ ವಿಡಿಯೋ ಅನ್ನೋದು ಗ್ಯಾರಂಟಿ ರಿಯಾಲಿಟಿ ಚೆಕ್ ಮೂಲಕ ತಿಳಿದುಬಂದಿದೆ. ಹಾಗಾದ್ರೆ ಲಾಗ ಹಾಕಿದ ರಾಜಾರಾಮ್ ತಲ್ಲೂರ್ ಅವರಿಗೆ ಏನಾದ್ರು ಆಗಿದ್ರೆ ಪರವಾಗಿಲ್ವಾ ಅನ್ಬೇಡಿ. ಅವರಿಗೂ ಏನೂ ಆಗಿಲ್ಲ. ಅದನ್ನ ಸ್ವತಃ ಅವರೇ ಬರಹದಲ್ಲಿ ಸ್ಪಷ್ಟಪಡಿಸಿದ್ದಾರೆ.