ಈ ವರ್ಷ ಮೊದಲಾರ್ಧ ಸಿಕ್ಕಾಪಟ್ಟೆ ಡಲ್ ಹೊಡೆದಿದ್ದ ಸ್ಯಾಂಡಲ್‌ವುಡ್, ಇದೀಗ ಸೆಕೆಂಡ್ ಹಾಫ್ ಹೌಸ್‌ಫುಲ್ ಆಗೋ ಮೂಲಕ ಎಲ್ಲರ ಹುಬ್ಬೇರಿಸಿದೆ. ಮರುಭೂಮಿಯಂತಾಗಿದ್ದ ಚಿತ್ರರಂಗಕ್ಕೆ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳು ಓಯಾಸಿಸ್‌ಗಳಾಗಿ ಪರಿಣಮಿಸಿವೆ. ಈ ಕುರಿತ ಕಂಪ್ಲೀಟ್ ಕಹಾನಿ ಇಲ್ಲಿದೆ.
- ಈ ವರ್ಷ ಫಸ್ಟ್ ಹಾಫ್ ಡಲ್.. 2nd ಹಾಫ್ ಹೌಸ್‌ಫುಲ್..!!
- 7 ತಿಂಗಳು 150 ಪ್ಲಸ್ ಮೂವೀಸ್.. ಗೆದ್ದಿದ್ದು ನಾಲ್ಕೈದು ಅಷ್ಟೇ
- ಎಕ್ಕ, ಸು ಫ್ರಮ್ ಸೋ ಹಾಗೂ ಜೂನಿಯರ್.. ತ್ರಿಬಲ್ ಧಮಾಕ
- ಸೊರಗಿದ್ದ ಸ್ಯಾಂಡಲ್‌ವುಡ್, ಕೊನೆಗೂ ಸಿಕ್ತು ಬೂಸ್ಟರ್ ಡೋಸ್
ಈ ವಾರಾಂತ್ಯಕ್ಕೆ 2025ರ ಸಾಲಿನ ಏಳು ಮಾಸಗಳೇ ಕಂಪ್ಲೀಟ್ ಆಗ್ತಿದೆ. ಇನ್ನು ಉಳಿದಿರೋದು ಜಸ್ಟ್ ಐದೇ ತಿಂಗಳು. ಆದ್ರೆ ಇಷ್ಟರಲ್ಲೇ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸುಮಾರು 150ಕ್ಕೂ ಅಧಿಕ ಚಿತ್ರಗಳು ತೆರೆಗಪ್ಪಳಿಸಿವೆ. ಸಕ್ಸಸ್ ರೇಟ್ ಕೇಳಿದ್ರೆ ನೀವು ಶಾಕ್ ಆಗ್ತೀರಾ. ನಿರ್ಮಾಪಕರು ಸೇಫ್ ಅಂತೆ. ಲಾಭ ಬಂತಂತೆ. ಆ ಸಿನಿಮಾಗೆ ಏನ್ ಜನಾ ಗುರು. ಟಿಕೆಟ್ ಸಿಗ್ತಾನೇ ಇಲ್ಲ ಅಂತ ಹೇಳುವ ಒಂದು ಸಿನಿಮಾ ಕೂಡ ಇಲ್ಲಿಯವರೆಗೂ ಬಂದಿಲ್ಲ.
ಮೊದಲ ಆರು ತಿಂಗಳಲ್ಲಿ ಶರಣ್‌ರ ಛೂ ಮಂತರ್, ಸತ್ಯ ಪ್ರಕಾಶ್- ಬೃಂದಾ ಆಚಾರ್ಯ ಕಾಂಬೋನ ಎಕ್ಸ್ ಅಂಡ್ ವೈ, ವಿನೋದ್ ಪ್ರಭಾಕರ್ ನಟನೆಯ ಮಾದೇವ ಹಾಗೂ ರಂಗಾಯಣ ರಘುರ ಅಜ್ಞಾತವಾಸಿ ಈ ನಾಲ್ಕೇ ನಾಲ್ಕು ಸಿನಿಮಾಗಳು ತಕ್ಕಮಟ್ಟಿಗೆ ಸದ್ದು ಮಾಡಿದವು. ಆದ್ರೆ ನಿಜಕ್ಕೂ ನಿರ್ಮಾಪಕರಿಗೆ ನಿರೀಕ್ಷಿತ ಮಟ್ಟದಲ್ಲಿ ಜೋಳಿಗೆ ತುಂಬಿಸಿದ್ವಾ ಅಂದ್ರೆ ನೋ.
ಹೀಗೆ ಈ ಇಡೀ ಮೊದಲಾರ್ಧ ವರ್ಷದಲ್ಲಿ ಸ್ಯಾಂಡಲ್‌ವುಡ್ ಡಲ್ಲೋ ಡಲ್ಲು. ಆದ್ರೀಗ ಸು ಫ್ರಮ್ ಸೋ, ಎಕ್ಕ ಹಾಗೂ ಜೂನಿಯರ್ ಸಿನಿಮಾಗಳಿಂದ ಹೌಸ್‌ಫುಲ್ ಮೂಲಕ ಚಿತ್ರರಂಗಕ್ಕೆ ಮರುಜೀವ ಬಂದಂತಾಗಿದೆ. ಯೆಸ್.. ಥಿಯೇಟರ್‌ಗಳಲ್ಲಿ ಜನ ಕಿಕ್ಕಿರಿದು ತುಂಬುತ್ತಿದ್ದಾರೆ. ಟೆಕೆಟ್ಸ್ ಸಿಗದೆ ಒದ್ದಾಡ್ತಿದ್ದಾರೆ. ಸ್ಟಾರ್‌ಡಮ್, ಮೇಕಿಂಗ್, ಬಜೆಟ್ ಯಾವುದೂ ವರ್ಕ್ ಆಗ್ತಿಲ್ಲ. ಕಂಟೆಂಟ್ ಒಂದೇ ಕಿಂಗ್. ಕಥೆ ಚೆನ್ನಾಗಿದ್ರೆ ಜನ ನೋಡ್ತಾರೆ. ಇಲ್ಲ ಅಂದ್ರೆ ಥಿಯೇಟರ್ ಕಡೆ ತಲೆ ಕೂಡ ಇಡಲ್ಲ.
ಸು ಫ್ರಮ್ ಸೋ ಜಸ್ಟ್ 75 ಲಕ್ಷ ಬಜೆಟ್‌ನಲ್ಲಿ ಮಾಡಿದ ಕಾಮಿಡಿ ಜಾನರ್ ಸಿನಿಮಾ. ರಾಮ ಶಾಮ ಭಾಮ ಚಿತ್ರದ ಬಳಿಕ ನೋಡುಗರನ್ನ ಅಷ್ಟರ ಮಟ್ಟಿಗೆ ಎಂಗೇಜ್ ಮಾಡ್ತಿರೋ ಚಿತ್ರ ಅನಿಸಿಕೊಂಡಿದೆ. ಇನ್ನು ಎಕ್ಕ ಕೂಡ ಯುವರಾಜ್ ಕುಮಾರ್ ನಟನೆಯಲ್ಲಿ ಮಾಸ್ ಜೊತೆ ಫ್ಯಾಮಿಲಿ ಆಡಿಯೆನ್ಸ್‌ಗೆ ರುಚಿಸಿದೆ. ಯುವ ನಟನೆಯಲ್ಲೂ ಮಾಗಿದ್ದಾರೆ. ಐದು ಜನ ನಿರ್ಮಾಪಕರಿಂದ ಜನ ಮೆಚ್ಚುವ ಸಿನಿಮಾ ಹೊರಬಂದಿದೆ.
ಜನಾರ್ದನ್ ರೆಡ್ಡಿ ಮಗ ಕಿರೀಟಿ ಚೊಚ್ಚಲ ಚಿತ್ರ ಜೂನಿಯರ್ ಸಹ ಕನ್ನಡದ ಜೊತೆ ತೆಲುಗಿನಲ್ಲಿ ಭರವಸೆ ಮೂಡಿಸಿತು. ಚಿತ್ರರಂಗಕ್ಕೆ ಒಬ್ಬ ಭರವಸೆಯ ಸ್ಟಾರ್ ಸಿಕ್ಕಂತಾಗಿದೆ. ಹೌದು.. ಡ್ಯಾನ್ಸ್, ಫೈಟ್ಸ್ ಹಾಗೂ ಅಭಿನಯದಲ್ಲಿ ಚೊಚ್ಚಲ ಚಿತ್ರದ ನವನಾಯಕನಟ ಅನಿಸಿಕೊಳ್ಳದೆ, ನುರಿತ ಕಲಾವಿದನಂತೆ ಕಿರೀಟಿ ಪರ್ಫಾಮ್ ಮಾಡಿರೋದು ನಿಜಕ್ಕೂ ಇಂಟರೆಸ್ಟಿಂಗ್.
ಈ ಮೂರೂ ಚಿತ್ರಗಳಿಂದ ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸಖತ್ ಸದ್ದು ಮಾಡ್ತಿದ್ದು, ಉಳಿದ ಐದು ತಿಂಗಳಲ್ಲಿ ಇಂಡಸ್ಟ್ರಿ ಹಿಟ್ ಆಗುವಂತಹ ಮತ್ತಷ್ಟು ಕಮರ್ಷಿಯಲ್ ಚಿತ್ರಗಳ ನಿರೀಕ್ಷೆಯಲ್ಲಿದ್ದಾರೆ ಪ್ರೇಕ್ಷಕರು. ಸಿನಿಮಾಗಳು ಸಕ್ಸಸ್ ಆದ್ರೆ ಮಾತ್ರ ಚಿತ್ರರಂಗದ ಏಳಿಗೆ. ಇಲ್ಲವಾದಲ್ಲಿ ಮತ್ತಷ್ಟು ಪ್ರಪಾತಕ್ಕೆ ಬೀಳಲಿದೆ ಸ್ಯಾಂಡಲ್‌ವುಡ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





