ರಮ್ಯಾ ಬರೀ ಸ್ಯಾಂಡಲ್‌ವುಡ್ ಕ್ವೀನ್ ಅಷ್ಟೇ ಅಲ್ಲ ಅನ್ಯಾಯ, ಅಧರ್ಮವನ್ನು ಎದುರಿಸೋ ರೆಬೆಲ್ ಕ್ವೀನ್ ಕೂಡ ಹೌದು. ಸದ್ಯ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಗಟ್ಟಿ ಧ್ವನಿ ಎತ್ತಿದ್ದಾರೆ. ಮೋಹಕತಾರೆಯ ಸ್ಟ್ಯಾಂಡ್ ಬಗ್ಗೆ ಚಕಾರ ಎತ್ತಿರೋ ಡಿಬಾಸ್ ಫ್ಯಾನ್ಸ್‌ಗೆ ಮಹಾ ಮಂಗಳಾರತಿ ಮಾಡ್ತಿದ್ದಾರೆ ರಮ್ಯಾ.
ಒಂದ್ಕಡೆ ಡಿಬಾಸ್ ದರ್ಶನ್ ಬೇಲ್ ಕ್ಯಾನ್ಸಲ್ ಆಗುವ ಸಾಧ್ಯತೆ ಜಾಸ್ತಿ ಇದೆ. ಈ ಬಗ್ಗೆ ಸಿಕ್ಕಾಪಟ್ಟೆ ಟೆನ್ಷನ್‌ನಲ್ಲಿ ದರ್ಶನ್‌ಗೆ ಅಭಿಮಾನಿಗಳು ನೆಮ್ಮದಿಯಿಂದ ಇರೋಕೆ ಬಿಡ್ತಿಲ್ಲ. ದಚ್ಚು ಬಿಪಿ ಶುಗರ್ ಜಾಸ್ತಿ ಆಗುವಂತಹ ಕಾರ್ಯಗಳನ್ನ ಮಾಡ್ತಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಂತ ಧ್ವನಿ ಎತ್ತಿರೋ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ವಿರುದ್ಧ ಕೆಟ್ಟದಾಗಿ ಕಮೆಂಟ್‌ಗಳನ್ನ ಮಾಡಿ ಮಂಗಳಾರತಿ ಎತ್ತಿಸಿಕೊಂಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ನೀಡಿದ್ದು, ಈ ವಿಷಯ ಪೊಲೀಸರು ಚಕಾರ ಎತ್ತಿ ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. ಹೈ ಕೋರ್ಟ್ ಜಾಮೀನು ನೀಡಿರೋದಕ್ಕೆ ಸುಪ್ರೀಂ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಮುಖ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಗೌಡ ವಕೀಲರಿಗೆ ಸಾಕಷ್ಟು ಪ್ರಶ್ನೆಗಳನ್ನ ಕೇಳುವ ಮೂಲಕ ಕೋರ್ಟ್ ಶಾಕ್ ನೀಡಿದೆ. ಆ ಕುರಿತ ವರದಿಯೊಂದನ್ನ ಹಂಚಿಕೊಂಡಿದ್ದ ರಮ್ಯಾ, ‘ಭಾರತದಲ್ಲಿ ಜನಸಾಮಾನ್ಯರಿಗೆ ಸುಪ್ರೀಂ ಕೋರ್ಟ್ ಭರವಸೆಯ ಬೆಳಕು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಅನ್ನೋ ವಿಶ್ವಾಸವಿದೆ’ ಎಂದಿದ್ದರು.
ಮೋಹಕತಾರೆ ರಮ್ಯಾ ಮಾಡಿದ ಈ ಪೋಸ್ಟ್ ನೋಡಿ ದರ್ಶನ್ ಫ್ಯಾನ್ಸ್ ಆಕೆಗೆ ಮುಗಿಬಿದ್ದಿದ್ದಾರೆ. ಆದ್ರೆ ರಮ್ಯಾ ಸಾಫ್ಟ್ ಆಗಿ ಗ್ಲಾಮರಸ್ ಆಗಿರೋ ಸ್ಯಾಂಡಲ್‌ವುಡ್ ಕ್ವೀನ್ ಮಾತ್ರ ಅಂತ ದರ್ಶನ್ ಫ್ಯಾನ್ಸ್ ಅಂದುಕೊಂಡಿದ್ರೆ ಅದು ಅವರ ದಡ್ಡತನ. ಅನ್ಯಾಯಕ್ಕಾಗಿ ಧ್ವನಿ ಎತ್ತುವುದರಲ್ಲಿ ಈಕೆ ರೆಬೆಲ್ ಕ್ವೀನ್. ಕೆಟ್ಟದಾಗಿ ಕಮೆಂಟ್ ಮಾಡೋರಿಗೆ ಮಹಾ ಮಂಗಳಾರತಿ ಮಾಡಿದ್ದಾರೆ. ಅಲ್ಲದೆ ‘ಎಲ್ಲಾ ಡಿಬಾಸ್ ಫ್ಯಾನ್ಸ್‌ಗೆ ನನ್ನ ಇನ್ಸ್‌ಟಾ ಖಾತೆಗೆ ಸ್ವಾಗತ. ರೇಣುಕಾಸ್ವಾಮಿ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಅನ್ನೋದಕ್ಕೆ ನಿಮ್ಮ ಕಮೆಂಟ್‌ಗಳೇ ಸಾಕ್ಷಿ’ ಅಂತ ತಿರುಗೇಟು ಕೊಡೋ ಮೂಲಕ ರೆಬೆಲ್ ಆಗಿದ್ದಾರೆ.
ಅಂದಹಾಗೆ ಈ ದರ್ಶನ್ ಫ್ಯಾನ್ಸ್ ಆಡುವ ಮಂಗಾಟಗಳಿಗೆ ಆತನ ಬೇಲ್ ಕ್ಯಾನ್ಸಲ್ ಆದ್ರೂ ಅಚ್ಚರಿಯಿಲ್ಲ. ಅಲ್ಲದೆ ದರ್ಶನ್ ವರ್ತನೆ ಕೂಡ ಮ್ಯಾಟರ್ ಆಗುತ್ತೆ. ಕೊಲೆಪಾತಕರು, ಹತ್ಯೆಯ ಸಾಕ್ಷಿದಾರರು, ರೌಡಿಗಳ ಜೊತೆ ಪಾರ್ಟಿ, ಮೋಜು ಮಸ್ತಿ ಮಾಡ್ತಿರೋದಕ್ಕೆ ಕೂಡ ಫೋಟೋ ಹಾಗೂ ವಿಡಿಯೋಗಳು ಸಾಕ್ಷಿಯಾಗಿದ್ದು, ಇದೆಲ್ಲವೂ ಕೋರ್ಟ್ ಗಮನಕ್ಕೆ ಬಂದ್ರೆ ಬೇಲ್ ಕ್ಯಾನ್ಸಲ್ ಆಗಿ ಮತ್ತೆ ಜೈಲೂಟ ಸವಿಯೋದ್ರಲ್ಲಿ ಯಾವುದೇ ಡೌಟ್ ಇಲ್ಲ ಅನ್ನಬಹುದು.
ಇನ್ನು ರಮ್ಯಾ ಸಂಸದೆಯಾಗಿ, ಆ ನಂತ್ರ ಕಾಂಗ್ರೆಸ್ ಪಕ್ಷದಲ್ಲಿದ್ದಾಗಿನಿಂದಲೂ ಸಹ ಅನ್ಯಾಯದ ವಿರುದ್ಧ ಪ್ರಶ್ನಿಸುತ್ತಲೇ ಬರ್ತಿದ್ದಾರೆ. ಅದು ಯಾರೇ ಆಗಿರಲಿ. ಪರಿಸ್ಥಿತಿ ಏನೇ ಇರಲಿ. ಹೀಗಿರುವಾಗ ರಮ್ಯಾ ಅವರು ರೇಣುಕಾಸ್ವಾಮಿ ಹತ್ಯೆ ಮಾಡಿದವರಿಗೆ ಶಿಕ್ಷೆ ಆಗಲಿ, ಆ ಕುಟುಂಬಕ್ಕೆ ನ್ಯಾಯ ಸಿಗಲಿ ಅಂದಿರೋದ್ರಲ್ಲಿ ತಪ್ಪೇನಿದೆ..? ಇನ್ ಕೇಸ್ ದರ್ಶನ್ ತಪ್ಪು ಮಾಡಿಲ್ಲ ಅಂದ್ರೆ ಅವ್ರ ಫ್ಯಾನ್ಸ್ ಯಾಕೆ ಕೂಗಾಡ್ತಾರೆ..? ಇದಕ್ಕೆಲ್ಲಾ ಸದ್ಯದಲ್ಲೇ ಕೋರ್ಟ್‌ನಿಂದ ಉತ್ತರ ಸಿಗಲಿದೆ.