ನಿಮ್ಮ ಜನ್ಮಸಂಖ್ಯೆಯ ಆಧಾರದಲ್ಲಿ 2025 ಜುಲೈ 17ರ ಗುರುವಾರದ ದಿನ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಜನ್ಮಸಂಖ್ಯೆ ತಿಳಿಯುವುದು ಹೇಗೆ? ನೀವು ಹುಟ್ಟಿದ ತಾರೀಕಿನ ಅಂಕಿಯನ್ನು ಒಂದೇ ಅಂಕಿಗೆ ಇಳಿಸಿ (ಉದಾಹರಣೆ: 19 = 1+9 = 10 = 1+0 = 1). ಈ ಆಧಾರದಲ್ಲಿ ಇಂದಿನ ಫಲಾಫಲ ಇಲ್ಲಿದೆ:
ಜನ್ಮಸಂಖ್ಯೆ 1 (1, 10, 19, 28ನೇ ತಾರೀಕು ಹುಟ್ಟಿದವರು)
ಆರ್ಥಿಕ ಯೋಜನೆಗೆ ಒತ್ತು ನೀಡಿ, ಹಣವನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಕೆಲವರು ವಾಹನ ಬದಲಾವಣೆಯ ಬಗ್ಗೆ ಯೋಚಿಸಲಿದ್ದೀರಿ. ಬ್ಯಾಂಕ್ ವ್ಯವಹಾರಗಳನ್ನು ಮುಗಿಸಲು ಒಳ್ಳೆಯ ದಿನ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುವವರಿಗೆ ಸ್ನೇಹಿತರಿಂದ ರೆಫರೆನ್ಸ್ ಮೂಲಕ ಸಂದರ್ಶನದ ಅವಕಾಶ ಸಿಗಬಹುದು. ದೂರದ ಸಂಬಂಧಿಕರಿಂದ ಸಹಾಯಕ್ಕಾಗಿ ಕೋರಿಕೆ ಬರಬಹುದು. ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುವವರಿಗೆ ಹಿರಿಯರ ಮಾರ್ಗದರ್ಶನ ಲಭ್ಯ. ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವಾಗ ಎಚ್ಚರಿಕೆ ವಹಿಸಿ, ಗಾಯದ ಸಾಧ್ಯತೆ ಇದೆ.
ಜನ್ಮಸಂಖ್ಯೆ 2 (2, 11, 20, 29ನೇ ತಾರೀಕು ಹುಟ್ಟಿದವರು)
ಕುಟುಂಬದೊಳಗೆ ಆಸ್ತಿ ಹಂಚಿಕೆಯ ಬಗ್ಗೆ ಚರ್ಚೆ ಜಗಳಕ್ಕೆ ಕಾರಣವಾಗಬಹುದು. ಮಾತುಕತೆಯಲ್ಲಿ ಸಂಯಮವಿರಲಿ, ತಪ್ಪು ತಿಳುವಳಿಕೆಯನ್ನು ತಪ್ಪಿಸಿ. 35 ವರ್ಷ ಮೀರಿದವರು ಆರೋಗ್ಯ ಪರೀಕ್ಷೆಗೆ ಒಳಗಾಗಬೇಕು. ಹೊಟ್ಟೆಯ ಸಮಸ್ಯೆ ಇರುವವರು ಆಹಾರದಲ್ಲಿ ಎಚ್ಚರಿಕೆ ವಹಿಸಿ. ಲೇವಾದೇವಿ ವ್ಯವಹಾರದವರು ವಿಸ್ತರಣೆಗೆ ಮೊದಲು ಎಚ್ಚರಿಕೆಯಿಂದ ಯೋಚಿಸಿ.
ಜನ್ಮಸಂಖ್ಯೆ 3 (3, 12, 21, 30ನೇ ತಾರೀಕು ಹುಟ್ಟಿದವರು)
ಪ್ರಮುಖ ವ್ಯಕ್ತಿಗಳ ಭೇಟಿಯಿಂದ ವೃತ್ತಿಜೀವನದಲ್ಲಿ ಪ್ರಗತಿ ಸಾಧ್ಯ. ಕುಟುಂಬದೊಳಗೆ ಆರ್ಥಿಕ ಚರ್ಚೆಯಲ್ಲಿ ಹಿಂದಿನ ಒಪ್ಪಂದಗಳನ್ನು ಪಾಲಿಸುವ ಒತ್ತಡ ಇರಲಿದೆ. ಧೈರ್ಯದ ಕೊರತೆ ಗೊಂದಲಕ್ಕೆ ಕಾರಣವಾಗಬಹುದು. ಕೆಲವರು ಸಣ್ಣ ಸಾಲ ತೆಗೆದುಕೊಳ್ಳಬಹುದು; ಅಗತ್ಯಕ್ಕಿಂತ ಹೆಚ್ಚಿನ ಸಾಲ ತೆಗೆದುಕೊಳ್ಳದಿರಿ.
ಜನ್ಮಸಂಖ್ಯೆ 4 (4, 13, 22, 31ನೇ ತಾರೀಕು ಹುಟ್ಟಿದವರು)
ಆಪ್ತರಿಗಾಗಿ ಉಡುಗೊರೆ ಖರೀದಿಯ ಯೋಗ. ಗೇಟೆಡ್ ಕಮ್ಯುನಿಟಿಯಲ್ಲಿ ಆಸ್ತಿ ಖರೀದಿಗೆ ಒಳ್ಳೆಯ ಅವಕಾಶ. ಇತರರ ಕೆಲಸಕ್ಕೆ ತೆರಳಿದಾಗ ನಿಮ್ಮ ಕೆಲಸವೂ ಮುಗಿಯಬಹುದು. ಸಾಕು ಪ್ರಾಣಿಗಳ ಆರೋಗ್ಯದ ಬಗ್ಗೆ ಗಮನವಿರಲಿ. ಮಕ್ಕಳ ಶಿಕ್ಷಣಕ್ಕಾಗಿ ಹೂಡಿಕೆ ಮಾಡಿದ ಹಣವನ್ನು ತುರ್ತು ಖರ್ಚಿಗೆ ಬಳಸಬಹುದು.
ಜನ್ಮಸಂಖ್ಯೆ 5 (5, 14, 23ನೇ ತಾರೀಕು ಹುಟ್ಟಿದವರು)
ಸ್ನೇಹಿತರಿಗೆ ಕೊಟ್ಟ ಮಾತಿಗೆ ಬದ್ಧರಾಗಿರಿ. ಕಟ್ಟಡ ನಿರ್ಮಾಣ/ರಿನೋವೇಷನ್‌ನಲ್ಲಿ ತೊಡಗಿರುವವರಿಗೆ ಹಲವು ಕೆಲಸಗಳು ಬರಲಿವೆ. ಉದ್ಯೋಗದಲ್ಲಿ ಆಪ್ತರು ಕೆಲಸ ಬಿಡಬಹುದು. ಮ್ಯಾನೇಜರ್‌ಗಳಿಗೆ ಸಂಸ್ಥೆಯಿಂದ ದೊಡ್ಡ ನಿರೀಕ್ಷೆ. ಹಣ್ಣು-ತರಕಾರಿ ವ್ಯಾಪಾರಿಗಳಿಗೆ ಹೂಡಿಕೆಗೆ ಒಳ್ಳೆಯ ದಿನ. ಪ್ರೀತಿಯಲ್ಲಿರುವವರು ಮನೆಯಲ್ಲಿ ವಿಷಯ ಪ್ರಸ್ತಾಪಿಸಬಹುದು.
ಜನ್ಮಸಂಖ್ಯೆ 6 (6, 15, 24ನೇ ತಾರೀಕು ಹುಟ್ಟಿದವರು)
ಚಾಲಕರಿಗೆ ಒತ್ತಡದ ದಿನ; ವಾಹನದ ಸ್ಥಿತಿಯನ್ನು ಪರಿಶೀಲಿಸಿ. ಸಾಧ್ಯವಾದರೆ ಹನುಮಂತ ದೇವಾಲಯಕ್ಕೆ ಭೇಟಿ ನೀಡಿ. ಬ್ಯಾಂಕ್ ಉದ್ಯೋಗಿಗಳಿಗೆ ಟಾರ್ಗೆಟ್ ಪರಿಷ್ಕರಣೆ ಸಾಧ್ಯ. ಕಾರು ಖರೀದಿಗೆ ಮುಂದುವರಿಯುವ ಯೋಗ. ಕ್ರೆಡಿಟ್ ಕಾರ್ಡ್ ಖರ್ಚಿನಲ್ಲಿ ಹತೋಟಿ ಇರಲಿ. ಹಳೆಯ ಆಸ್ತಿ ವಿವಾದಗಳು ಸಂಧಾನದಿಂದ ಬಗೆಹರಿಯದಿರಬಹುದು.
ಜನ್ಮಸಂಖ್ಯೆ 7 (7, 16, 25ನೇ ತಾರೀಕು ಹುಟ್ಟಿದವರು)
ವಿದೇಶದಲ್ಲಿ ಉದ್ಯೋಗ/ವ್ಯಾಸಂಗಕ್ಕೆ ಪ್ರಯತ್ನಿಸುವವರಿಗೆ ಶುಭ ಸುದ್ದಿ. ಹೋಟೆಲ್ ಉದ್ಯಮಿಗಳಿಗೆ ವಿಸ್ತರಣೆಯ ಯೋಚನೆ. ಸಾಲ ಪ್ರಕ್ರಿಯೆಗೆ ವೇಗ ಸಿಗಲಿದೆ. ಚಿನ್ನದ ಹೂಡಿಕೆಯನ್ನು ಹಿಂತೆಗೆದುಕೊಳ್ಳುವ ಆಲೋಚನೆ. ಮನೆಯ ಕೆಲಸಗಳಿಗೆ ಸಂಬಂಧಿತರೊಂದಿಗೆ ಚರ್ಚೆ. ಬಳಕೆಯಿಲ್ಲದ ವಸ್ತುಗಳ ಮಾರಾಟದ ಯೋಗ. ವಿವಾಹಕ್ಕೆ ಪ್ರಯತ್ನಿಸುವವರಿಗೆ ಯಶಸ್ಸು.
ಜನ್ಮಸಂಖ್ಯೆ 8 (8, 17, 26ನೇ ತಾರೀಕು ಹುಟ್ಟಿದವರು)
ಸಂಬಂಧಿಕರ ಕಾರ್ಯಕ್ರಮದಲ್ಲಿ ಸಹಾಯಕ್ಕಾಗಿ ಕೇಳಿಕೊಳ್ಳಬಹುದು. ಟೀವಿ/ಸ್ಪೀಕರ್ ಖರೀದಿಗೆ ಯೋಜನೆ. ಅಧ್ಯಾತ್ಮ ಕಾರ್ಯಕ್ರಮಗಳಿಗೆ ದೇಣಿಗೆ ನೀಡಿ. ಆಸ್ತಿ ದಾಖಲೆಗಳಿಗೆ ಸಹಾಯ ಸಿಗಲಿದೆ. ಹಳೇ ಪರಿಚಿತರಿಂದ ಉಡುಗೊರೆ/ಹಣ ಲಭ್ಯ. ಟೈಲ್ಸ್-ಗ್ರಾನೈಟ್ ಕೆಲಸಗಾರರಿಗೆ ದೊಡ್ಡ ಕೆಲಸದ ಆದಾಯ.
ಜನ್ಮಸಂಖ್ಯೆ 9 (9, 18, 27ನೇ ತಾರೀಕು ಹುಟ್ಟಿದವರು)
ಕುಟುಂಬ/ಸಹೋದ್ಯೋಗಿಗಳ ಆಲೋಚನೆಯನ್ನು ಗಂಭೀರವಾಗಿ ಪರಿಗಣಿಸಿ. ಶೈಕ್ಷಣಿಕ ಕ್ಷೇತ್ರದವರಿಗೆ ಆದಾಯ ವೃದ್ಧಿ. ಶ್ವಾಸಕೋಶದ ಸಮಸ್ಯೆಗೆ ವೈದ್ಯೋಪಚಾರಕ್ಕೆ ಆದ್ಯತೆ. ಕಾರ್ಯಕ್ರಮಕ್ಕಾಗಿ ಹೊಸ ಬಟ್ಟೆ ಖರೀದಿ. ದಂಪತಿಗಳ ಕಲಹದಲ್ಲಿ ಸಂಧಾನಕ್ಕೆ ಮಾತಿನಲ್ಲಿ ಎಚ್ಚರಿಕೆ. ವಕೀಲರಿಗೆ ಹೊಸ ಜನರ ನಿಯೋಜನೆಯ ಯೋಜನೆ.





