ಒಬ್ಬ ವ್ಯಕ್ತಿಯು ನಾಯಿಯೊಂದನ್ನು ಕ್ರೂರವಾಗಿ ಗುಂಡಿಕ್ಕಿ ಕೊಂದಿರುವ ಘಟನೆ ಪಂಜಾಬ್‌ನ ಹೋಶಿಯಾರ್ಪುರದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯು ಪ್ರಾಣಿ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದು, ಜೊತೆಗೆ ಕಾನೂನು ಕ್ರಮಕ್ಕಾಗಿ ಒತ್ತಾಯವೂ ಜೋರಾಗಿದೆ.
ವಿಡಿಯೋದಲ್ಲಿ, ಡಬಲ್ ಬ್ಯಾರೆಲ್ ಗನ್ ಹಿಡಿದಿರುವ ವ್ಯಕ್ತಿಯೊಬ್ಬ ಮಲಗಿದ್ದ ನಾಯಿಯ ಮೇಲೆ ಗುಂಡು ಹಾರಿಸುವ ದೃಶ್ಯ ಸ್ಪಷ್ಟವಾಗಿ ಕಾಣಿಸುತ್ತದೆ. ಗುಂಡಿನ ದಾಳಿಯಿಂದ ನಾಯಿ ನೋವಿನಿಂದ ನರಳುತ್ತಿದ್ದರೂ, ಆ ವ್ಯಕ್ತಿಯು ಯಾವುದೇ ಕರುಣೆ ತೋರದೆ ಮತ್ತೆ ಗುಂಡು ಹಾರಿಸಿ ನಾಯಿಯನ್ನು ಕೊಂದಿದ್ದಾನೆ.
⚠️🚨ये वीडियो पंजाब के होशियारपुर का बताया जा रहा है। एक सो रहे कुत्ते को इसने गोली मार दी। आप लोग चाहो तो ये पकड़ा जा सकता है इस वीडियो को इतना शेयर करो ताकि इसका पता लगाया जा सके😢 @PunjabPoliceInd @PP_Hoshiarpur pic.twitter.com/HZPyqYeWFN
— Sanatani Vishal (@sanataniVishall) July 7, 2025
ಪ್ರಾಣಿ ಕಾರ್ಯಕರ್ತರೊಬ್ಬರು “@jaspreetsays” ಎಂಬ X ಖಾತೆಯಲ್ಲಿ ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹೈಲೈಟ್ ಮಾಡಿದ್ದಾರೆ. “ದಯವಿಟ್ಟು ಈ ಆಘಾತಕಾರಿ ಪ್ರಾಣಿ ಹಿಂಸೆಯ ವಿಷಯವನ್ನು ಗಂಭೀರವಾಗಿ ಪರಿಶೀಲಿಸಿ ಮತ್ತು ತ್ವರಿತ ಕಾನೂನು ಕ್ರಮ ಕೈಗೊಳ್ಳಿ” ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಸಾವಿರಾರು ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.