ಲಖನೌ: ಉತ್ತರ ಪ್ರದೇಶದ ಬಿಲಾಸ್ಪುರದಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ. ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿರುವ ಅತಿಕ್ ಅಹ್ಮದ್ ಎಂಬಾತ, ಹಾಡಹಗಲೇ ಒಬ್ಬ ಮಹಿಳೆ ಮತ್ತು ಆಕೆಯ ಮಗನ ಮೇಲೆ ಚಪ್ಪಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ಆದ ವಿಡಿಯೊದಲ್ಲಿ ಅತಿಕ್ ಅಹ್ಮದ್, ಆ ಮಹಿಳೆ ಮತ್ತು ಆಕೆಯ ಮಗನನ್ನು ನಿಂದಿಸುತ್ತಾ, ಚಪ್ಪಲಿಯಿಂದ ಪದೇ ಪದೇ ಥಳಿಸುತ್ತಿರುವ ದೃಶ್ಯ ಸೆರೆಯಾಗಿದೆ. ಒಬ್ಬ ರಾಜಕೀಯ ನಾಯಕನಿಂದ ಇಂತಹ ಕೃತ್ಯ ನಡೆದಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಸಾಲದ ವಿವಾದದಿಂದ ಉಂಟಾದ ದೌರ್ಜನ್ಯ
ಸಾಲದ ವಿವಾದವೇ ಈ ಘಟನೆಗೆ ಕಾರಣ. ಸಂತ್ರಸ್ತ ಮಹಿಳೆ ಮತ್ತು ಆಕೆಯ ಮಗ ಅಸ್ಸಾಂ ಮೂಲದವರಾಗಿದ್ದು, ಅತಿಕ್‌ನ ಜಮೀನಿನಲ್ಲಿ ತಾತ್ಕಾಲಿಕ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದರು. ತ್ಯಾಜ್ಯ ಸಂಗ್ರಹಿಸಿ ಅವರು ಜೀವನೋಪಾಯ ಮಾಡಿಕೊಳ್ಳುತ್ತಿದ್ದರು. ಕಷ್ಟದ ಸಂದರ್ಭದಲ್ಲಿ ಅತಿಕ್‌ನಿಂದ ಸಾಲ ಪಡೆದಿದ್ದರು. ಆದರೆ, ಸಾಲದ ಮೊತ್ತವನ್ನು ಮರುಪಾವತಿಸಲು ಆಗದೇ ಇರುವ ಕಾರಣಕ್ಕೆ ಹಲ್ಲೆಗೆ ಒಳಗಾಗಿದ್ದಾರೆ.
ಅತಿಕ್ ಅಹ್ಮದ್, ತಾನು ನಿಗದಿಪಡಿಸಿದ ಸಮಯಕ್ಕೆ ಬಡ್ಡಿಯನ್ನು ಕಟ್ಟದಿದ್ದರೆ ಸುಮ್ಮನಿರುವವನಲ್ಲ ಎಂಬುದು ಈ ಘಟನೆಯಿಂದ ಸ್ಪಷ್ಟವಾಗಿದೆ. ಸಾಲದ ಬಡ್ಡಿಯನ್ನು ಸರಿಯಾಗಿ ಕಟ್ಟದ ಕಾರಣಕ್ಕೆ ಆತ ಈ ತಾಯಿ-ಮಗನ ಮೇಲೆ ದೌರ್ಜನ್ಯ ನಡೆಸಿದ್ದಾನೆ.
Obviously Uttar Pradesh
📍GautamBuddha Nagar
BJP Leader Violently assaulted a Laborer Woman, Sakina, and her Son, Shafiqur Rahman, using Slippers and Sticks.#UttarPradesh #ModiFailed #ModiDisaster #KheloBharatNiti pic.twitter.com/cs1pDIpKvX
— তন্ময় l T͞anmoy l (@tanmoyofc) July 1, 2025
ವಿಡಿಯೊ ವೈರಲ್
ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತಿಕ್‌ನ ಕ್ರೂರ ನಡವಳಿಕೆಯನ್ನು ಖಂಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಯ ಸುರಿಮಳೆಯೇ ಸುರಿದಿದೆ. ಜನರು ಈ ಘಟನೆಯನ್ನು ಖಂಡಿಸುವುದರ ಜೊತೆಗೆ, ರಾಜಕಾರಣಿಗಳಿಂದ ಜನರಿಗೆ ರಕ್ಷಣೆ ಒದಗಿಸುವ ಬದಲು ದೌರ್ಜನ್ಯ ನಡೆಯುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯಿಂದ ತಾಯಿ-ಮಗ ಪೊಲೀಸ್ ಠಾಣೆಗೆ ದೂರು ನೀಡಿರಲಿಲ್ಲ. ಆದರೆ, ವಿಡಿಯೊ ವೈರಲ್ ಆದ ಬಳಿಕ, ಸಾರ್ವಜನಿಕ ಒತ್ತಡದಿಂದಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ವಿಡಿಯೊ ವೈರಲ್ ಆದ ನಂತರ ಪೊಲೀಸರಿಗೆ ಕ್ರಮ ಕೈಗೊಳ್ಳಲು ಒತ್ತಡ ಹೇರಿತ್ತು. ಇದರಿಂದ ಅತಿಕ್ ಅಹ್ಮದ್‌ನನ್ನು ಬಂಧಿಸಲಾಗಿದ್ದು, ಈ ಘಟನೆಯ ಕುರಿತು ತನಿಖೆ ಆರಂಭವಾಗಿದೆ.