• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಬೆಂಗಳೂರಿನಲ್ಲಿ ಕಾಲ್ತುಳಿತಕ್ಕೆ ಡಿಸಿಎಂ ಡಿಕೆಶಿಯೇ ಹೊಣೆ: ಹೆಚ್.ಡಿ ಕುಮಾರಸ್ವಾಮಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
June 4, 2025 - 11:24 pm
in ಕರ್ನಾಟಕ
0 0
0
Untitled design 2025 06 04t232333.525

ನವದೆಹಲಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಚಾತುರ್ಯ, ಆತುರ, ಅಪರಿಪಕ್ವ ವರ್ತನೆ ಹಾಗೂ ಅವಿವೇಕಿತನದಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ ಹನ್ನೊಂದು ಜನ ಕ್ರಿಕೆಟ್ ಪ್ರೇಮಿಗಳು ಧಾರುಣವಾಗಿ ಸಾವನ್ನಪ್ಪಿದ ಘಟನೆ ನಡೆಯಿತು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.

ನವದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ತಡರಾತ್ರಿ ಕರೆದಿದ್ದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಕೇಂದ್ರ ಸಚಿವರು ಮಾತನಾಡಿ; ಈ ದುರಂತಕ್ಕೆ ಕಾರಣನಾದ ಅವಿವೇಕಿಯನ್ನು ಸಂಪುಟದಿಂದ ಹೊರ ಹಾಕಬೇಕು ಎಂದು ಒತ್ತಾಯ ಮಾಡಿದರು.

RelatedPosts

KPSC ಹಗರಣಕ್ಕೆ ಬಿಗ್ ಟ್ವಿಸ್ಟ್; ಐಎಎಸ್ ಅಧಿಕಾರಿ ಜ್ಞಾನೇಂದ್ರ- ಕನ್ನಾಳೆಗೆ ಮತ್ತೊಂದು ಸಂಕಷ್ಟ!

ಮಸೀದಿ ಮುಂದೆ ಪಟಾಕಿ ಸಿಡಿಸಿ ಮೆರವಣಿಗೆ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೇಸ್‌‌ ದಾಖಲು

ರಾಯಚೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ; ಅಮ್ಮನ ಎದೆ ಮೇಲೆ ಮಲಗಿದ್ದ 2 ವರ್ಷದ ಕಂದಮ್ಮ

ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಬದ್ಧ: ಡಿಸಿಎಂ ಡಾ.ಜಿ. ಪರಮೇಶ್ವರ

ADVERTISEMENT
ADVERTISEMENT

ಕರ್ನಾಟಕದಲ್ಲಿ ಇರುವುದು ಕಟುಕರ ಸರಕಾರ. ಈ ಸರಕಾರದ ಮುಖ್ಯಮಂತ್ರಿಯ ಬಗ್ಗೆ ಈ ಪದ ಹೇಳಲು ನನಗೆ ಬೇಸರವಾಗುತ್ತದೆ. ಅವರೊಬ್ಬ ನಿಷ್ಕ್ರಿಯ ಮುಖ್ಯಮಂತ್ರಿ. ಡಿಸಿಎಂ ಮುಂದೆ ಅವರ ಆಟವೇನೂ ನಡೆಯುತ್ತಿಲ್ಲ. ಇನ್ನು ಗೃಹ ಸಚಿವರ ಬಗ್ಗೆ ಹೇಳುವುದೇ ಬೇಡ. ಈ ವ್ಯಕ್ತಿ ಕೂರು ಎಂದರೆ ಅವರು ಕೂರುತ್ತಾರೆ, ನಿಲ್ಲು ಎಂದರೆ ನಿಲ್ಲುತ್ತಾರೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದ ಮುಂಭಾಗದಲ್ಲಿ ಸನ್ಮಾನ ನಡೆಯುತ್ತಿರಬೇಕಾದರೆ ಅಗ್ಗೆಯೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಾಲ್ವರು ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಅದು ಗೊತ್ತಾದ ಮೇಲೆಯೂ ಇವರು ಸನ್ಮಾನ ಕಾರ್ಯಕ್ರಮ ಮುಂದುವರಿಸಿದ್ದಾರೆ. ಇನ್ನು ಇವರನ್ನು ಕಟುಕರು ಎಂದು ಕರೆಯದೇ ಇನ್ನೇನೆಂದು ಕರೆಯಬೇಕು ಎಂದು ಸಚಿವರು ಕಿಡಿಕಾರಿದರು.

ವಿರಾಟ್ ಕೊಹ್ಲಿ ಹದಿನೆಂಟು ವರ್ಷಗಳ ಕಾಲ ತಂಡವನ್ನು ಗೆಲ್ಲಿಸಲು ಅವಿರತವಾಗಿ ಶ್ರಮಿಸಿದರು. ಆರ್ ಸಿಬಿ ಅದೊಂದು ಪ್ರಾಂಚೈಸಿ ಅಲ್ಲ, ಅದೊಂದು ಕರ್ನಾಟಕದ ಕ್ರಿಕೆಟ್ ತಂಡ ಎನ್ನುವ ನಂಬಿಕೆ ಕನ್ನಡಿಗರಲ್ಲಿದೆ. ಈ ಸಲ ಕಪ್ ನಮ್ದು ಎಂದು ಎಲ್ಲರೂ ಹೇಳುತ್ತಿದ್ದರು. ಆರ್ ಸಿಬಿ ಗೆಲ್ಲಲಿ ಎಂದು ಜನರು ದೇವರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದರು. ಜನರ ನಂಬಿಕೆಗೆ ಈ ಸರಕಾರ ಘಾಸಿ ಉಂಟು ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮಂಗಳವಾರ ರಾತ್ರಿ ಕುತೂಹಲ ಘಟ್ಟಕ್ಕೆ ತಲುಪಿ ಅಂತಿಮವಾಗಿ ಆರ್ ಸಿಬಿ ತಂಡ ಕಪ್ ಗೆದ್ದಿತು. ತರಾತುರಿಯಾಗಿ ಇಷ್ಟು ಬೇಗ ಅವರಿಗೆ ಅಭಿನಂದನೆ, ಸನ್ಮಾನ ಹಮ್ಮಿಕೊಂಡಿದ್ದು ಯಾಕೆ? ಆ ತಂಡಕ್ಕೆ ಆಹ್ವಾನ ಕೊಟ್ಟವರು ಯಾರು? ಇಷ್ಟು ಆತುರ ಯಾಕೆ? ಇಲ್ಲಿ ಡಿಸಿಎಂ ಅವರು ನಿರ್ವಹಿಸಿದ ಪಾತ್ರ ಏನು ಎಂಬುದು ಎಲ್ಲರೂ ಬಲ್ಲರು ಎಂದು ಅವರು ಕಟುವಾಗಿ ಟೀಕಿಸಿದರು.

ಬುಧವಾರ ಬೆಳಗ್ಗೆ ತಂಡವನ್ನು ಸ್ವಾಗತ ಕೋರಲು ವಿಮಾನ ನಿಲ್ದಾಣಕ್ಕೆ ಹೋದವರು ಯಾರು? ಅದನ್ನು ಇವೆಂಟ್ ರೀತಿಯಲ್ಲಿ ವೈಭವೀಕರಿಸಿದ್ದು ಯಾರು? ಡಿಸಿಎಂ ಅವರು ತಮ್ಮನ್ನು ತಾವು ವೈಭವೀಕರಿಸಿಕೊಳ್ಳಲು ಇಷ್ಟೆಲ್ಲಾ ಮಾಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಯಾರಿದ್ದರು? ಡಿಸಿಎಂ ಮತ್ತವರ ಪಟಾಲಂ ಮಾತ್ರ ಇತ್ತು. ಇದೇನು ಡಿಕೆಶಿ ಆರ್ ಸಿಬಿ ತಂಡವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಎರಡು ಕಡೆ ಕಾರ್ಯಕ್ರಮ ಮಾಡುವ ಅಗತ್ಯ ಏನಿತ್ತು? ಒಂದು ಕಡೆ ಮಾಡಿದ್ದರೆ ಸಾಕಿತ್ತು. ಅದಕ್ಕೆ ಸೂಕ್ತ ಕಾಲಾವಕಾಶ ತೆಗೆದುಕೊಂಡು ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಅಗತ್ಯ ಭದ್ರತೆ, ಮುನ್ನೆಚ್ಚರಿಕೆ ವಹಿಸಬೇಕಿತ್ತು. ಅದು ಯಾವುದನ್ನು ಮಾಡದೆ ಕೇವಲ ತಮ್ಮ ವೈಭವೀಕರಣಕ್ಕೆ ಡಿಸಿಎಂ ಇಷ್ಟೆಲ್ಲಾ ಮಾಡಿದರು. ಅವರ ಅವಿವೇಕಿತನದಿಂದ ಕ್ರೀಡಾಭಿಮಾನಿಗಳು ಜೀವ ಕಳೆದುಕೊಂಡರು ಎಂದು ಅವರು ಆರೋಪಿಸಿದರು.

ವಿಧಾನಸೌಧದ ಮುಂದೆ ಡಿಸಿಎಂ ಶೋ ಮುಗಿದ ಮೇಲೆ ಅವರು ಕ್ರೀಡಾಂಗಣಕ್ಕೆ ಬರುತ್ತಾರೆ. ಅಲ್ಲಿ ಕ್ರೀಡಾಂಗಣದ ಮುಂದೆ ಮೃತದೇಹಗಳು ಬಿದ್ದಿವೆ. ಈ ಡಿಸಿಎಂ ಎನ್ನುವ ವ್ಯಕ್ತಿ ಮೈದಾನಕ್ಕೆ ಬಂದು ಸನ್ಮಾನ ಕಾರ್ಯಕ್ರಮ ನಿಲ್ಲಿಸುವ ಬದಲು ಅಲ್ಲಿಯು ಟ್ರೋಫಿ ಹಿಡಿದು ಮೇಲಕ್ಕೆ ಎತ್ತಿ ಮುತ್ತು ಕೊಡುತ್ತಾರೆ. ಇವರು ಏನು ಮೈದಾನದಲ್ಲಿ ಆಟವಾಡಿ ಕಪ್ ಗೆದ್ದಿದ್ದಾರೆಯೇ? ಬಹುಶಃ ಆಟಗಾರರಿಗೂ ಕಪ್ ಗೆ ಮುತ್ತಿಕ್ಕಲು ಸಾಧ್ಯವಾಗಲಿಲ್ಲವೇನೋ? ಅಂತಹದ್ದರಲ್ಲಿ ಈ ವ್ಯಕ್ತಿ ಸಾವುಗಳ ನಡುವೆಯೂ ಪ್ರಚಾರ ಗಿಟ್ಟಿಸಲು, ಸ್ವಯಂ ವೈಭವೀಕರಿಸಿಕೊಳ್ಳಲು ಆರ್ ಸಿಬಿ ಗೆಲುವನ್ನು ಬಳಸಿಕೊಂಡರು ಎಂದು ಕುಮಾರಸ್ವಾಮಿ ಕೆಂಡ ಕಾರಿದರು.

ಇಂಥ ಅವಿವೇಕಿಯನ್ನು ಕೂಡಲೇ ಸಂಪುಟದಿಂದ ಹೊರಕ್ಕೆ ಹಾಕಬೇಕು. ಈ ಮುಖ್ಯಮಂತ್ರಿಗೆ ನಿಜಕ್ಕೂ ಶಕ್ತಿ, ದಮ್ಮು ತಾಕತ್ತು ಎನ್ನುವುದು ಇದ್ದರೆ ಮೊದಲು ಇಂಥಹ ವ್ಯಕ್ತಿಯನ್ನು ಮಂತ್ರಿ ಮಂಡಲದಿಂದ ಹೊರ ಹಾಕಲಿ ಎಂದು ಕೇಂದ್ರ ಸಚಿವರು ಒತ್ತಾಯ ಮಾಡಿದರು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 09 19T221248.967

KPSC ಹಗರಣಕ್ಕೆ ಬಿಗ್ ಟ್ವಿಸ್ಟ್; ಐಎಎಸ್ ಅಧಿಕಾರಿ ಜ್ಞಾನೇಂದ್ರ- ಕನ್ನಾಳೆಗೆ ಮತ್ತೊಂದು ಸಂಕಷ್ಟ!

by ಶಾಲಿನಿ ಕೆ. ಡಿ
September 19, 2026 - 10:14 pm
0

Untitled design 2026 09 19T215804.442

“ಬೆಂಗಳೂರಿಗೆ ಬಂದರೆ ಸ್ವಂತ ಮನೆಗೆ ಬಂದಂತೆ ಭಾಸವಾಗುತ್ತದೆ”; ನ್ಯಾಚುರಲ್ ಸ್ಟಾರ್ ನಾನಿ

by ಶಾಲಿನಿ ಕೆ. ಡಿ
September 19, 2026 - 9:59 pm
0

Untitled design 2026 09 19T214531.387

ಮಸೀದಿ ಮುಂದೆ ಪಟಾಕಿ ಸಿಡಿಸಿ ಮೆರವಣಿಗೆ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೇಸ್‌‌ ದಾಖಲು

by ಶಾಲಿನಿ ಕೆ. ಡಿ
September 19, 2026 - 9:46 pm
0

Untitled design 2026 09 19T212541.422

ಪಾ. ರಂಜಿತ್ ನಿರ್ದೇಶನದ ‘ವೆಟ್ಟುವಮ್’ ಸಿನಿಮಾಗೆ ಕನ್ನಡದಲ್ಲಿ ಕಿಚ್ಚ ಸುದೀಪ್ ಧ್ವನಿ

by ಶಾಲಿನಿ ಕೆ. ಡಿ
September 19, 2026 - 9:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 19T221248.967
    KPSC ಹಗರಣಕ್ಕೆ ಬಿಗ್ ಟ್ವಿಸ್ಟ್; ಐಎಎಸ್ ಅಧಿಕಾರಿ ಜ್ಞಾನೇಂದ್ರ- ಕನ್ನಾಳೆಗೆ ಮತ್ತೊಂದು ಸಂಕಷ್ಟ!
    September 19, 2026 | 0
  • Untitled design 2026 09 19T214531.387
    ಮಸೀದಿ ಮುಂದೆ ಪಟಾಕಿ ಸಿಡಿಸಿ ಮೆರವಣಿಗೆ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೇಸ್‌‌ ದಾಖಲು
    September 19, 2026 | 0
  • Untitled design 2026 09 19T192255.811
    ರಾಯಚೂರಿನಲ್ಲಿ ಮಹಿಳೆಯ ಬರ್ಬರ ಹತ್ಯೆ; ಅಮ್ಮನ ಎದೆ ಮೇಲೆ ಮಲಗಿದ್ದ 2 ವರ್ಷದ ಕಂದಮ್ಮ
    September 19, 2026 | 0
  • Untitled design 2026 09 19T181256.745
    ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಬದ್ಧ: ಡಿಸಿಎಂ ಡಾ.ಜಿ. ಪರಮೇಶ್ವರ
    September 19, 2026 | 0
  • Untitled design 2026 09 19T153658.306
    ಡಿ.ಕೆ ಶಿವಕುಮಾರ್ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ
    September 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version