ರಾಕಿಭಾಯ್ ಈಸ್ ಬ್ಯಾಕ್.. ಕೆಜಿಎಫ್-2 ಕ್ಲೈಮ್ಯಾಕ್ಸ್‌ನಲ್ಲಿ ಕಣ್ಮರೆಯಾದ ಯಶ್ ಎಲ್ಲಿ ಹೋದ್ರು..? ಗೋಲ್ಡ್ ಜೊತೆ ತಾವೂ ನೀರು ಪಾಲಾದಾಗ ಅವ್ರನ್ನ ಕೈ ಹಿಡಿದಿದ್ದು ಯಾರು..? ಕೆಜಿಎಫ್-3 ಕಿಕ್‌ಸ್ಟಾರ್ಟ್ ಆಗುವ ಮೊದಲೇ ಸಖತ್ ಸದ್ದು ಮಾಡ್ತಿದೆ ಟ್ರೈಲರ್. ರಾಕಿಭಾಯ್ ವರ್ಸಸ್ ಡಾರ್ಲಿಂಗ್ ಪ್ರಭಾಸ್ ಕೆಜಿಎಫ್-3 ಝಲಕ್ ಇಲ್ಲಿದೆ. ಜಸ್ಟ್ ಹ್ಯಾವ್ ಎ ಲುಕ್.
- ಬಂದೇ ಬಿಡ್ತು KGF-3.. ಯಶ್- ಪ್ರಭಾಸ್ ರಾಕಿಂಗ್
- ಗೋಲ್ಡ್ ಜೊತೆ ರಾಕಿಭಾಯ್‌ನ ಕಾಪಾಡಿದ ಪ್ರಭಾಸ್
- AIನಲ್ಲಿ ಅರಳಿದೆ ಮೈಂಡ್ ಬ್ಲೋಯಿಂಗ್ ಚಾಪ್ಟರ್-3
- ವರ್ಲ್ಡ್ ಈಸ್ ಮಾನ್‌ಸ್ಟರ್ ರಾಕಿಭಾಯ್ ಟೆರಿಟರಿ..!
ವಿಶ್ವ ಸಿನಿದುನಿಯಾದಲ್ಲಿ ಕೆಜಿಎಫ್- 2ಗೆ ಸಿಕ್ಕ ಅಭೂತಪೂರ್ವ ಯಶಸ್ಸು ಚಾಪ್ಟರ್-3 ಕನಸನ್ನು ಮತ್ತಷ್ಟು ಜೀವಂತವಾಗಿಸಿದೆ ಹಾಗೂ ಎಲ್ಲಿಲ್ಲದ ಹೈಪ್ ಸೃಷ್ಠಿಸಿದೆ. ಕೆಜಿಎಫ್ ಸಿನಿಮಾ ಒಂದು ದೊಡ್ಡ ದಂತಕಥೆಯಾಗಿ ಇತಿಹಾಸದ ಪುಟಗಳಲ್ಲಿ ರಾರಾಜಿಸ್ತಿದೆ. ಅದ್ರಲ್ಲೂ ಮಾನ್‌ಸ್ಟರ್ ರಾಕಿಭಾಯ್ ಸ್ವ್ಯಾಗ್ಗೆ ಬಾಲಿವುಡ್ ಸೂಪರ್ ಸ್ಟಾರ್‌ಗಳೇ ಕ್ಲೀನ್ ಬೋಲ್ಡ್ ಅಗಿಬಿಟ್ಟಿದ್ದಾರೆ. ಅಷ್ಟೊಂದು ಸ್ಟೈಲಿಶ್ ಆಗಿ, ಯುನಿಕ್ ಸ್ಟೈಲು, ಮ್ಯಾನರಿಸಂನಿಂದ ಎಲ್ಲರ ಮನಸ್ಸು ಗೆದ್ದಿದ್ದಾರೆ ರಾಕಿಭಾಯ್ ಯಶ್.
ಚಾಪ್ಟರ್-2ನಲ್ಲಿ ಪ್ರಧಾನಿ ರಮಿಕಾ ಸೇನ್ ಮಾನ್‌ಸ್ಟರ್ ರಾಕಿಭಾಯ್ ವಿರುದ್ಧ ಯುದ್ಧ ಸಾರುತ್ತಾರೆ. ಚಿನ್ನವನ್ನು ಹೊತ್ತು ಸಮುದ್ರಮಾರ್ಗದಲ್ಲಿ ವಿದೇಶಕ್ಕೆ ಹೊರಟು ನಿಂತಿದ್ದ ರಾಕಿ ಮೇಲೆ ಇನ್ನಿಲ್ಲದೆ ದಾಳಿ ಮಾಡ್ತಾರೆ. ಆಗ ನೀರಿನಾಳಕ್ಕೆ ಜಾರುವ ರಾಕಿಯ ದೇಹ ಹಾಗೂ ಫಳಫಳನೆ ಹೊಳೆಯೋ ಚಿನ್ನದ ಬಿಸ್ಕೆಟ್ಗಳನ್ನ ತೋರಿಸುತ್ತಾ ಚಾಪ್ಟರ್-3 ಹಿಂಟ್ ನೀಡ್ತಾರೆ ಮೇಕರ್ಸ್.

ಅಷ್ಟಕ್ಕೇನೇ ರಾಕಿಭಾಯ್ ಯುಗಾಂತ್ಯವಾಗಿಲ್ಲ. ಎಲ್ ಡೊರಾಡೋ ಕಥೆಯೂ ಮುಗಿದಿಲ್ಲ. ಅದಿನ್ನೂ ಮುಂದುವರೆಯಲಿದೆ ಅನ್ನೋದ್ರ ಸೂಚನೆ ಸಿಕ್ಕಿತ್ತು. ಸಬ್ ಮರೇನ್ ಮುಖೇನ ರಾಕಿಭಾಯ್ ಚಿನ್ನದ ಸಮೇತ ವಿದೇಶಕ್ಕೆ ಎಸ್ಕೇಪ್ ಆಗ್ತಾರೆ. ರಾಕಿ ವರ್ಚಸ್ಸು ದುನಿಯಾದಲ್ಲಿ ಎಷ್ಟರ ಮಟ್ಟಿಗೆ ಇರಲಿದೆ ಅನ್ನೋದನ್ನ ಚಾಪ್ಟರ್-2ನಲ್ಲೇ ಡೈರೆಕ್ಟರ್ ಪ್ರಶಾಂತ್ ನೀಲ್ ತೋರಿಸಿದ್ರು. ಇನ್ನು ಅಷ್ಟು ದೊಡ್ಡ ವರ್ಚಸ್ಸು ಇರೋ ವ್ಯಕ್ತಿ ಸಬ್ ಮರೇನ್ನಿಂದ ತಪ್ಪಿಸಿಕೊಳ್ಳೋದ್ರಲ್ಲಿ ಅಚ್ಚರಿಯೂ ಇಲ್ಲ ಅನ್ನೋದು ಪ್ರೇಕ್ಷಕರಿಗೂ ಗೊತ್ತು.
ಕೆಜಿಎಫ್ ಚಾಪ್ಟರ್-3 ಕುರಿತ ಫ್ಯಾನ್ ಮೇಡ್ ಪೋಸ್ಟರ್ಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ದವು. ಆದ್ರೆ ಇದ್ಯಾವ ಪೋಸ್ಟರ್ ಕೂಡ ಚಿತ್ರತಂಡ ರಿವೀಲ್ ಮಾಡಿರೋ ಅಧಿಕೃತ ಫಸ್ಟ್ಲುಕ್ ಪೋಸ್ಟರ್ಗಳಲ್ಲ. ಕೆಜಿಎಫ್ ಹಾಗೂ ಯಶ್ ಅಭಿಮಾನಿಗಳೇ ತರಹೇವಾರಿ ಪೋಸ್ಟರ್ಗಳನ್ನ ಡಿಸೈನ್ ಮಾಡಿ ಅಪ್ಲೋಡ್ ಮಾಡಿದ್ರು. ಅದಕ್ಕೆ ಪೂರಕವಾಗಿ ಇದೀಗ ಕೆಜಿಎಪ್ ಚಾಪ್ಟರ್-3 ಟ್ರೈಲರ್ ಲಾಂಚ್ ಅಗಿದೆ. ಅದೂ ಕೂಡ AI ಟ್ರೈಲರ್ ಅನ್ನೋದು ಇಂಟರೆಸ್ಟಿಂಗ್.
ಇವು ನಿಜಕ್ಕೂ ಸಖತ್ ಕ್ರಿಯೇಟಿವ್ ಆಗಿದ್ದು, ಬಹುಶಃ ಚಿತ್ರತಂಡ ಕೂಡ ಈ ಟ್ರೈಲರ್‌ನ ರೆಫರೆನ್ಸ್ ಆಗಿ ಬಳಸಿಕೊಂಡು ಚಾಪ್ಟರ್-3 ಫಸ್ಟ್ ಲುಕ್ ಡಿಸೈನ್ ಮಾಡಬಹುದು ಅನಿಸ್ತಿದೆ. ಒಟ್ಟಾರೆ ಕೆಜಿಎಫ್-3 ನೀರಿನಿಂದಲೇ ಶುರುವಾಗಲಿದೆ ಅನ್ನೋದು ಪಕ್ಕಾ ಆಗಿದೆ. ಮೂಲಗಳ ಪ್ರಕಾರ ನಟ ಯಶ್ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳನ್ನು ಮುಗಿಸಿ, ಕೆಜಿಎಫ್-3 ಶುರು ಮಾಡ್ತಾರೆ ಎನ್ನಲಾಗಿದೆ.
ಇಂಟರೆಸ್ಟಿಂಗ್ ವಿಚಾರ ಏನಪ್ಪಾಂದ್ರೆ ರಾಕಿಭಾಯ್ ಯಶ್‌ನ ಸಮುದ್ರದಿಂದ ಕಾಪಾಡೋದು ಬೇರಾರೂ ಅಲ್ಲ ಬಾಹುಬಲಿ ಖ್ಯಾತಿಯ ಡಾರ್ಲಿಂಗ್ ಪ್ರಭಾಸ್. ಹೌದು.. ಗೋಲ್ಡ್ ಜೊತೆ ಗೋಲ್ಡ್‌ಮ್ಯಾನ್‌ನ ಬಚಾವ್ ಮಾಡಿಸೋದೇ ಪ್ರಭಾಸ್. ಈ ಎಐ ಟ್ರೈಲರ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಪ್ರಭಾಸ್ ತೋಳಲ್ಲಿ ಯಶ್ ಮಲಗಿರೋ ದೃಶ್ಯ ನೋಡೋಕೆ ಮಜಬೂತಾಗಿದೆ. ಅಲ್ಲದೆ, ಇವರಿಬ್ಬರ ಮುಖಾಮುಖಿಯ ದೃಶ್ಯ ಡೆಡ್ಲಿ ಹಾಗೂ ಡೇರಿಂಗ್ ಆಗಿದೆ.
ಯಶ್ ಹಾಗೂ ಪ್ರಶಾಂತ್ ನೀಲ್ ಇಬ್ಬರೂ ಸಹ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಹೊಂಬಾಳೆ ಫಿಲಂಸ್ ಕೂಡ ಕಾಂತಾರ ಚಾಪ್ಟರ್-1 ನಿರ್ಮಾಣ ಮಾಡ್ತಿದೆ. ಈ ಮೂವರೂ ಮತ್ತೆ ರೀ-ಯುನೈಟ್ ಆಗಿ ಕಮಾಲ್ ಮಾಡೋ ದಿನಗಳು ದೂರ ಉಳಿದಿಲ್ಲ. ಈ ಬಾರಿಯ ಮೇಕಿಂಗ್ ಹಾಲಿವುಡ್ ಸಿನಿಮಾಗಳನ್ನ ಮೀರಿಸೋ ರೇಂಜ್ಗಿರಲಿದೆ. ಬಜೆಟ್ ಕೂಡ ದುಬಾರಿ ಆಗಲಿದ್ದು, ಬಾಕ್ಸ್ ಆಫೀಸ್ ಲೆಕ್ಕಾಚಾರಗಳು ಡಬಲ್, ತ್ರಿಬಲ್ ಆಗಲಿವೆ. ಕ್ರಿಯೇಟರ್ ನೀಲ್ ಹಾಗೂ ಯಶ್ ಅವ್ರು ಚಾಪ್ಟರ್-2ನಲ್ಲಿ ಸಾಕಷ್ಟು ಸೀಕ್ವೆನ್ಸ್ಗಳನ್ನ ಮಾಡಲಾಗಲಿಲ್ಲವಂತೆ. ಅವೆಲ್ಲವುಗಳನ್ನ ಚಾಪ್ಟರ್-3ನಲ್ಲಿ ಮಾಡಲು ಯೋಜನೆ ರೂಪಿಸಿದ್ದಾರೆ ಅನ್ನೋದು ಗ್ಯಾರಂಟಿ.s





