ಪಾಡುತಾ ತೀಯಗಾ ಜನಪ್ರಿಯ ಟಿವಿ ಕಾರ್ಯಕ್ರಮವಾಗಿದ್ದು, ಸಂಗೀತ ಪ್ರಿಯರ ಗಮನ ಸೆಳೆಯುತ್ತದೆ. ಆದರೆ, ಗಾಯಕಿ ಪ್ರವಸ್ತಿ ಆರಾಧ್ಯ ಈ ಕಾರ್ಯಕ್ರಮದ ತೀರ್ಪುಗಾರರು ಮತ್ತು ನಿರ್ಮಾಣ ತಂಡದ ತಾರತಮ್ಯವನ್ನು ಒಂದು ವೀಡಿಯೊದಲ್ಲಿ ಬಹಿರಂಗಪಡಿಸಿದ್ದಾರೆ.
ಪ್ರವಸ್ತಿ, ಸ್ಟಾರ್ ಮಾ ಸೂಪರ್ ಸಿಂಗರ್ 2024ರ ವಿಜೇತೆ, ಜಡ್ಜ್‌ಗಳಾದ ಕೀರವಾಣಿ, ಸುನೀತಾ, ಮತ್ತು ಚಂದ್ರಬೋಸ್ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. “ಜಡ್ಜ್‌ಗಳು ನನ್ನನ್ನು ಕೀಟದಂತೆ ಕಾಣುತ್ತಾರೆ, ಬಾಡಿ ಶೇಮಿಂಗ್ ಮಾಡಿದ್ದಾರೆ. ಸುನೀತಾ ನನ್ನ ಬಗ್ಗೆ ಕಲ್ಪಿತ ಕಥೆಗಳನ್ನು ಹೇಳಿದ್ದಾರೆ,” ಎಂದು ಅವರು ವೀಡಿಯೊದಲ್ಲಿ ತಿಳಿಸಿದ್ದಾರೆ.
ಕಾಸ್ಟ್ಯೂಮ್ ವಿಭಾಗದ ಕರಾಳತೆಯೂ ಬಯಲಾಗಿದೆ. “ಸೀರೆಯನ್ನು ಸೊಂಟದ ಕೆಳಗೆ ಉಡಬೇಕು, ಎಕ್ಸ್ಪೋಸ್ ಮಾಡಬೇಕು ಎಂದು ಹೇಳುತ್ತಾರೆ. ಕಾಸ್ಟ್ಯೂಮ್ ಡಿಸೈನರ್ ಅಸಭ್ಯವಾಗಿ ಮಾತನಾಡಿದ್ದಾರೆ,” ಎಂದು ಪ್ರವಸ್ತಿ ಹೇಳಿದ್ದಾರೆ. ಇದರಿಂದ ಆತ್ಮವಿಶ್ವಾಸ ಕಳೆದುಕೊಂಡು ಖಿನ್ನತೆಗೆ ಒಳಗಾದರಂತೆ.
ಸುನೀತಾ ಅವರಿಗೆ ತಾನು ಇಷ್ಟವಿಲ್ಲ ಎಂದು ಪ್ರವಸ್ತಿ ಆರೋಪಿಸಿದ್ದಾರೆ. “ನನ್ನ ಹಾಡಿನ ಬಗ್ಗೆ ನಕಾರಾತ್ಮಕ ಕಾಮೆಂಟ್‌ಗಳನ್ನು ಉದ್ದೇಶಪೂರ್ವಕವಾಗಿ ನೀಡುತ್ತಾರೆ. ಒಮ್ಮೆ ಮೈಕ್ ಆಫ್ ಮಾಡದೆ, ನನ್ನ ಧ್ವನಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ಕೇಳಿದೆ,” ಎಂದು ಬಹಿರಂಗಪಡಿಸಿದ್ದಾರೆ.
“ಶ್ರೀ ರಾಮದಾಸು ಚಿತ್ರದ ‘ಅಂತ ರಾಮಮಯಂ’ ಹಾಡನ್ನು ಹಾಡಿದೆ. ಆದರೆ ಜಡ್ಜ್‌ಗಳು ಕೆಟ್ಟ ಕಾಮೆಂಟ್ ಮಾಡಿದರು. ಬೇರೆ ಸ್ಪರ್ಧಿಯೊಬ್ಬಳು ಸಾಹಿತ್ಯ ಮರೆತರೂ ಏನೂ ಹೇಳಲಿಲ್ಲ,” ಎಂದು ಪ್ರವಸ್ತಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಆರೋಪಗಳು ಕಾರ್ಯಕ್ರಮದ ಬಗ್ಗೆ ಭಾರೀ ಕೋಲಾಹಲಕ್ಕೆ ಕಾರಣವಾಗಿವೆ.





