ಮಂಡ್ಯ: ಮಂಡ್ಯ ನಗರದ ಜನನಿಬಿಡ ಮಹಾವೀರ ವೃತ್ತದಲ್ಲಿ ಕೆಎಸ್ಆರ್ಟಿಸಿ (KSRTC) ಬಸ್ ಎದುರು ಬೈಕ್ ನಿಲ್ಲಿಸಿ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ ಯುವಕನ ವರ್ತನೆ ಕೆಲಕಾಲ ಸಾರ್ವಜನಿಕರ ಗಮನ ಸೆಳೆದಿದೆ. ಸಂಚಾರ ದಟ್ಟಣೆಯಿಂದಾಗಿ ರಸ್ತೆಯಲ್ಲಿ ನಿಂತಿದ್ದ ಸರ್ಕಾರಿ ಬಸ್ನ ಮುಂಭಾಗಕ್ಕೆ ಏಕಾಏಕಿ ಬೈಕ್ ತಂದು ನಿಲ್ಲಿಸಿದ ಯುವಕ, ಬಳಿಕ ಜೋರಾಗಿ ಧಾರ್ಮಿಕ ಘೋಷಣೆ ಕೂಗಿದ್ದಾನೆ.
ಟ್ರಾಫಿಕ್ನಲ್ಲಿ ನಿಂತಿದ್ದ ಬಸ್ ಮುಂದೆ ದಿಢೀರ್ ಪ್ರತ್ಯಕ್ಷ!
ಮಂಡ್ಯ ನಗರದ ಪ್ರಮುಖ ಸಂಚಾರ ಕೇಂದ್ರವಾಗಿರುವ ಮಹಾವೀರ ವೃತ್ತದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಈ ಹಿನ್ನೆಲೆ ಕೆಎಸ್ಆರ್ಟಿಸಿ ಬಸ್ ಕೂಡ ಟ್ರಾಫಿಕ್ನಲ್ಲಿ ಸಿಲುಕಿ ನಿಂತಿತ್ತು. ಇದೇ ಸಂದರ್ಭದಲ್ಲಿ ಬೈಕ್ನಲ್ಲಿ ಬಂದ ಯುವಕನೊಬ್ಬ ಏಕಾಏಕಿ ಬಸ್ನ ಮುಂಭಾಗಕ್ಕೆ ಬಂದು ತನ್ನ ವಾಹನವನ್ನು ನಿಲ್ಲಿಸಿದ್ದಾನೆ.
ಬಳಿಕ ಬೈಕ್ನಿಂದ ಇಳಿದು ಬಸ್ ಎದುರು ನಿಂತ ಯುವಕ, ‘ಅಲ್ಲಾಹು ಅಕ್ಬರ್’ ಎಂದು ಜೋರಾಗಿ ಘೋಷಣೆ ಕೂಗಲಾರಂಭಿಸಿದ್ದಾನೆ ಎನ್ನಲಾಗಿದೆ. ಈ ಘಟನೆಯಿಂದ ಬಸ್ನಲ್ಲಿದ್ದ ಪ್ರಯಾಣಿಕರು ಹಾಗೂ ರಸ್ತೆಯಲ್ಲಿದ್ದ ಸಾರ್ವಜನಿಕರು ಕೆಲಕಾಲ ಅಚ್ಚರಿಗೊಂಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಘೋಷಣೆ; ಜನರಲ್ಲಿ ಗೊಂದಲ!
ಸರ್ಕಾರಿ ಬಸ್ನ ಮುಂಭಾಗದಲ್ಲಿ ಬೈಕ್ ನಿಲ್ಲಿಸಿ ಘೋಷಣೆ ಕೂಗಿದ ಯುವಕನ ವರ್ತನೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಘಟನೆಯಿಂದ ಕೆಲಕಾಲ ಬಸ್ ಸಂಚಾರಕ್ಕೂ ಅಡ್ಡಿಯುಂಟಾಗಿದೆ. ಧಾರ್ಮಿಕ ಘೋಷಣೆ ಕೂಗುವುದು ವ್ಯಕ್ತಿಯ ಅಭಿವ್ಯಕ್ತಿಯ ವಿಚಾರವಾದರೂ, ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಯಾಗಿದೆ.
ಯುವಕನ ವರ್ತನೆಗೆ ಸಾರ್ವಜನಿಕರ ಆಕ್ರೋಶ!
ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಘಟನೆಗಳು ನಡೆದಾಗ ಅನಗತ್ಯ ಗೊಂದಲ ಹಾಗೂ ಆತಂಕ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸರ್ಕಾರಿ ಬಸ್ನ ಎದುರು ಬೈಕ್ ನಿಲ್ಲಿಸಿ ಘೋಷಣೆ ಕೂಗಿರುವುದು ಸರಿಯಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪೊಲೀಸರಿಂದ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ
ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವ ಮತ್ತು ಶಾಂತಿ ಕದಡುವಂತಹ ವರ್ತನೆಗಳಿಗೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಮಹಾವೀರ ವೃತ್ತದಲ್ಲಿ ನಡೆದ ಘಟನೆಯ ಕುರಿತು ಪೊಲೀಸರು ಪರಿಶೀಲನೆ ನಡೆಸಿ, ಯುವಕನ ಗುರುತು ಪತ್ತೆಹಚ್ಚಬೇಕು. ಕಾನೂನು ಉಲ್ಲಂಘನೆ ನಡೆದಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.





