ಬೀದರ್: ತನ್ನ ತಂಗಿಯನ್ನ ಪ್ರೀತಿಸಿದ್ದಾನೆಂದು ಸಹೋದರರಿಬ್ಬರೂ ಯುವಕ ಬರ್ಬರವಾಗಿ ಹತ್ಯೆಗೈದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಿರಗೂಡಿ ಗ್ರಾಮದಲ್ಲಿ ನಡೆದಿದೆ.
ನಿರಗೂಡಿ ಗ್ರಾಮದ ಪ್ರಶಾಂತ್ ಬಿರಾದಾರ್ ಎಂಬಾತ ಯುವಕ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದನು. ಈ ವಿಷಯಕ್ಕೆ ಶುಕ್ರವಾರ ರಾತ್ರಿ 9 ಗಂಟೆಗೆ ಯುವತಿಯ ಸಹೋದರರಾದ ಯಲ್ಲಾಲಿಂಗ ಮೇತ್ರೆ, ಪ್ರಶಾಂತ್ ಮೇತ್ರೆ, ಮತ್ತು ಯುವಕ ಪ್ರಶಾಂತ್ ಬಿರಾದಾರ ಜೊತೆ ಗಲಾಟೆ ನಡೆದಿದೆ.
ನಮ್ಮ ಸಹೋದರಿ ಜೊತೆ ಸಂಬಂಧ ಮುಂದುವರಿಸಬೇಡ ಆಕೆಗೆ ಕರೆ ಮಾಡೋದು ಮಾತನಾಡೋದು ಬೇದ ಎಂದು ಆಕೆಯ ಸಹೋದರರು ಕಿರಿಕ್ ಮಾಡಿದ್ದಾರೆ. ನಂತರ ಮಾತಿಗೆ ಮಾತು ಬೆಳೆದು ಸಹೋದರರಿಬ್ಬರು ಪ್ರಶಾಂತ್ ಬಿರಾದಾರ್ ಗೆ ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತ್ಯೆಗೈದು ಇಬ್ಬರು ಪರಾರಿಯಾಗಿದ್ದಾರೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ನ್ಯಾಮೇಗೌಡ ಬಸವಕಲ್ಯಾಣ ಸಿಪಿಐ ಅಲಿಸಾಬ್ ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇನ್ನು ಕೊಲೆಗೈದ ಆರೋಪಿಗಳನ್ನ ಕೂಡಲೇ ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕೆಂದು ಮೃತ ಯುವಕನ ಕುಟುಂಬಸ್ಥರು ಆಗ್ರಹಿಸಿದ್ದಾರೆ.





