• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, November 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಗಿಜಿಗುಡುವ ಬೆಂಗಳೂರಿನಲ್ಲಿ ಪ್ರಶಾಂತ ಜೀವನ: ಯಲಹಂಕದಲ್ಲಿ ತಲೆ ಎತ್ತುತ್ತಿದೆ ‘ಲೋ-ಡೆನ್ಸಿಟಿ’ ವಸತಿ ಯೋಜನೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 5, 2026 - 1:14 pm
in ಕರ್ನಾಟಕ, ಬೆಂ. ನಗರ
0 0
0
Untitled Design 2026 11 05T131245.050

ಬೆಂಗಳೂರು: ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ ದಿವ್ಯಶ್ರೀ ಡೆವಲಪರ್ಸ್, ಉತ್ತರ ಬೆಂಗಳೂರಿನ ಯಲಹಂಕದಲ್ಲಿ ‘ದಿವ್ಯಶ್ರೀ ಕ್ವೈಟ್‌ ಸೈಡ್’ ಎಂಬ ಹೊಸ ವಸತಿ ಯೋಜನೆಯನ್ನು ಅನಾವರಣಗೊಳಿಸಿದೆ. ಸುಮಾರು 800 ಕೋಟಿ ರೂ.ಗೂ ಅಧಿಕ ಅಭಿವೃದ್ಧಿ ಮೌಲ್ಯದ (ಜಿಡಿವಿ) ಸಾಮರ್ಥ್ಯವನ್ನು ಹೊಂದಿರುವ ಈ ಯೋಜನೆಯು, ಕಂಪನಿಯ ವಸತಿ ವಲಯದ ಮುಂದಿನ ಹಂತದ ಬೆಳವಣಿಗೆಗೆ ಮುನ್ನುಡಿ ಬರೆದಿದೆ.

5 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಈ ಕಡಿಮೆ ಸಾಂದ್ರತೆಯ ಯೋಜನೆಯಲ್ಲಿ ಮೂರು ಟವರ್‌ಗಳು ಇರಲಿದ್ದು, ಕೇವಲ 260 3-BHK ಮನೆಗಳನ್ನು ನಿರ್ಮಿಸಲಾಗುತ್ತಿದೆ. ವಿಶೇಷವೆಂದರೆ, ಒಟ್ಟು ಜಾಗದಲ್ಲಿ ಶೇ. 85 ರಷ್ಟು ಪ್ರದೇಶವನ್ನು ಮುಕ್ತ ಸ್ಥಳಾವಕಾಶಕ್ಕಾಗಿ ಕಾಯ್ದಿರಿಸಲಾಗಿದೆ. ನಗರದ ಜನದಟ್ಟಣೆಯಿಂದ ದೂರವಾಗಿ, ಸಾಕಷ್ಟು ಸ್ಥಳಾವಕಾಶ, ಖಾಸಗಿತನ ಮತ್ತು ಪ್ರಶಾಂತತೆ ಬಯಸುವವರಿಗಾಗಿ ಈ ವಿನ್ಯಾಸ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

RelatedPosts

‘ಹಳ್ಳಿಗರೆಂದರೆ ಗುಗ್ಗುಗಳಲ್ಲ’: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಹೆಚ್‌ಡಿ ಕುಮಾರಸ್ವಾಮಿ ತಿರುಗೇಟು

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಕೈಕೊಟ್ಟ ಯುವಕ: ನ್ಯಾಯಕ್ಕಾಗಿ ಹೋರಾಟ

ಪಬ್‌ನಲ್ಲಿ ಯುವತಿಯ ಪರಿಚಯ..ಹೋಟೆಲ್‌ನಲ್ಲಿ ಅ*ತ್ಯಾಚಾರ: ಆರೋಪಿ ಅರೆಸ್ಟ್

ರಾಜ್ಯದ ಜನರಿಗೆ ಮತ್ತೊಂದು ಶಾಕ್: ನಂದಿನಿ ತುಪ್ಪ, ಬೆಣ್ಣೆ, ಪನ್ನೀರ್ ಬೆಲೆ ಭಾರೀ ಏರಿಕೆ

ADVERTISEMENT
ADVERTISEMENT
ಕ್ಲಬ್‌ಹೌಸ್, ಈಜುಕೊಳ, ಲೈಬ್ರರಿ, ಮಿನಿ ಥಿಯೇಟರ್

ಈ ಯೋಜನೆಯ ಪ್ರತಿಯೊಂದು ಮನೆಯನ್ನು ಸ್ವತಂತ್ರ ಗೋಡೆಗಳೊಂದಿಗೆ ನಿರ್ಮಿಸಲಾಗುತ್ತಿದ್ದು, ನೆರೆಹೊರೆಯವರೊಂದಿಗೆ ಯಾವುದೇ ಗೋಡೆಗಳನ್ನು ಹಂಚಿಕೊಳ್ಳುವ ವಿನ್ಯಾಸ ಇರುವುದಿಲ್ಲ. ಇದು ಶಬ್ದದ ಪ್ರಸರಣವನ್ನು ತಪ್ಪಿಸುವುದರ ಜೊತೆಗೆ ನಿವಾಸಿಗಳ ಖಾಸಗಿತನವನ್ನು ಕಾಪಾಡುತ್ತದೆ.

1,900 ಮತ್ತು 2,200 ಚದರ ಅಡಿ ವಿಸ್ತೀರ್ಣದ ಈ 3-BHK ಮನೆಗಳ ಬೆಲೆ 2.99 ಕೋಟಿ ರೂ.ಗಳಿಂದ (ಎಲ್ಲಾ ವೆಚ್ಚ ಒಳಗೊಂಡಂತೆ) ಆರಂಭವಾಗಲಿದೆ. ಜತೆಗೆ, 15,000 ಚದರ ಅಡಿಯ ಕ್ಲಬ್‌ಹೌಸ್, ಈಜುಕೊಳ, ಲೈಬ್ರರಿ, ಮಿನಿ ಥಿಯೇಟರ್ ಸೇರಿದಂತೆ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಕರ್ಯಗಳನ್ನು ಇದು ಒಳಗೊಂಡಿರಲಿದೆ.

ಯೋಜನೆಗೆ ಚಾಲನೆ ನೀಡಿ ಮಾತನಾಡಿದ ದಿವ್ಯಶ್ರೀ ಡೆವಲಪರ್ಸ್‌ನ ಅಧ್ಯಕ್ಷ ಹಾಗೂ ಸಿಇಒ ಭಾಸ್ಕರ್ ಎನ್. ರಾಜು, “ನಗರಗಳು ಬೆಳೆದಂತೆಲ್ಲಾ ಪ್ರಸ್ತುತ ಹಾಗೂ ಮೌಲ್ಯಯುತವಾಗಿ ಉಳಿಯುವಂತಹ ಅಭಿವೃದ್ಧಿಗಳನ್ನು ಸೃಷ್ಟಿಸುವುದು ದಿವ್ಯಶ್ರೀಯ ಗುರಿ. ನಮ್ಮ ವ್ಯವಹಾರದ ಪ್ರತಿಯೊಂದು ವಿಭಾಗವೂ ಮುಂದಿನ ಹಂತದ ಬೆಳವಣಿಗೆಗೆ ಸಜ್ಜಾಗಿದೆ. ‘ಕ್ವೈಟ್‌ ಸೈಡ್’ ಮೂಲಕ ಮುಂದಿನ ಪೀಳಿಗೆಯ ಮನೆಗಳು ಹೇಗಿರಲಿವೆ, ವಿನ್ಯಾಸ ಮತ್ತು ದೀರ್ಘಕಾಲೀನ ಮೌಲ್ಯ ಹೇಗಿರಲಿದೆ ಎಂಬುದನ್ನು ನಾವು ತೋರಿಸುತ್ತಿದ್ದೇವೆ,” ಎಂದರು.

ವಸತಿ ವಿಭಾಗದ ಸಿಇಒ ಅವಿನಾಶ್ ಸುರೇಶ್ ವಿವರಿಸಿ, “ಇಂದಿನ ಗ್ರಾಹಕರು ಐಷಾರಾಮಿ ಸೌಲಭ್ಯಗಳಿಗಿಂತ ಹೆಚ್ಚಾಗಿ ಉಸಿರಾಡಲು ಮುಕ್ತ ಜಾಗ, ಹಸಿರು ಮತ್ತು ಖಾಸಗಿತನ ಬಯಸುತ್ತಿದ್ದಾರೆ. ನಾವು ನಗರ-ವ್ಯಾಪಿ ಸಮೀಕ್ಷೆ ನಡೆಸಿದಾಗಲೂ ಇದೇ ಅಂಶಗಳು ವ್ಯಕ್ತವಾಗಿದ್ದವು. ಗ್ರಾಹಕರ ಈ ನಿರೀಕ್ಷೆಗಳೇ ನಮ್ಮ ಈ ಪ್ರಾಜೆಕ್ಟ್‌ನ ಅಡಿಪಾಯ. ಭಾರತದ ವಸತಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದಿವ್ಯಶ್ರೀಯನ್ನು ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ಬೆಳೆಸುವುದು ನಮ್ಮ ಉದ್ದೇಶ,” ಎಂದು ತಿಳಿಸಿದರು.

ಎಚ್‌ಡಿಎಫ್‌ಸಿ ಜೊತೆ 1,500 ಕೋಟಿ ರೂ. ಪಾಲುದಾರಿಕೆ

ರಿಯಲ್ ಎಸ್ಟೇಟ್ ವಲಯದಲ್ಲಿ ತನ್ನ ವಿಸ್ತರಣೆಯನ್ನು ಚುರುಕುಗೊಳಿಸಿರುವ ದಿವ್ಯಶ್ರೀ, ಮುಂಬರುವ 3-4 ವರ್ಷಗಳಲ್ಲಿ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ 18 ದಶಲಕ್ಷ ಚದರ ಅಡಿಗಿಂತ ಹೆಚ್ಚಿನ ವಿಸ್ತಾರದ 14 ಹೊಸ ಯೋಜನೆಗಳನ್ನು ಆರಂಭಿಸುವ ಗುರಿ ಹೊಂದಿದೆ.

ಈ ವಿಸ್ತರಣಾ ಯೋಜನೆಯ ಭಾಗವಾಗಿ, ಸಂಸ್ಥೆಯು ಇತ್ತೀಚೆಗಷ್ಟೇ ‘ಎಚ್‌ಡಿಎಫ್‌ಸಿ ಕ್ಯಾಪಿಟಲ್ ಅಡ್ವೈಸರ್ಸ್’ ಜೊತೆ ಪಾಲುದಾರಿಕೆ ಘೋಷಿಸಿದ್ದು, 1,500 ಕೋಟಿ ರೂ. ಮೌಲ್ಯದ ವಸತಿ ವೇದಿಕೆಯನ್ನು ನಿರ್ಮಿಸಲಿದೆ. ಇದರ ಬೆಂಬಲದೊಂದಿಗೆ ಮುಂದಿನ ದಿನಗಳಲ್ಲಿ ವಿವಿಧ ನಗರಗಳಲ್ಲಿ ಸುಮಾರು 6,750 ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳಲು ಕಂಪನಿ ಸಜ್ಜಾಗಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled Design 2026 11 05T131245.050

ಗಿಜಿಗುಡುವ ಬೆಂಗಳೂರಿನಲ್ಲಿ ಪ್ರಶಾಂತ ಜೀವನ: ಯಲಹಂಕದಲ್ಲಿ ತಲೆ ಎತ್ತುತ್ತಿದೆ ‘ಲೋ-ಡೆನ್ಸಿಟಿ’ ವಸತಿ ಯೋಜನೆ

by ಶಾಲಿನಿ ಕೆ. ಡಿ
November 5, 2026 - 1:14 pm
0

Untitled design 2026 11 05T130454.386

ದೆಹಲಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾ*ವು

by ಶಾಲಿನಿ ಕೆ. ಡಿ
November 5, 2026 - 1:05 pm
0

Untitled design 2026 11 05T123745.625

‘ಹಳ್ಳಿಗರೆಂದರೆ ಗುಗ್ಗುಗಳಲ್ಲ’: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಹೆಚ್‌ಡಿ ಕುಮಾರಸ್ವಾಮಿ ತಿರುಗೇಟು

by ಶಾಲಿನಿ ಕೆ. ಡಿ
November 5, 2026 - 12:39 pm
0

38ನೇ ವಸಂತಕ್ಕೆ ಕಾಲಿಟ್ಟ ಕಿಂಗ್ ಕೊಹ್ಲಿ (1)

38ನೇ ವಸಂತಕ್ಕೆ ಕಾಲಿಟ್ಟ ಕಿಂಗ್ ಕೊಹ್ಲಿ: ‘ಚೇಸ್‌ ಮಾಸ್ಟರ್‌‌’ ಬರೆದ ದಾಖಲೆಗಳ ಪಟ್ಟಿ ಇಲ್ಲಿದೆ.!

by ಶಾಲಿನಿ ಕೆ. ಡಿ
November 5, 2026 - 12:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 11 05T123745.625
    ‘ಹಳ್ಳಿಗರೆಂದರೆ ಗುಗ್ಗುಗಳಲ್ಲ’: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಹೆಚ್‌ಡಿ ಕುಮಾರಸ್ವಾಮಿ ತಿರುಗೇಟು
    November 5, 2026 | 0
  • Untitled design 2026 11 05T112849.395
    ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಕೈಕೊಟ್ಟ ಯುವಕ: ನ್ಯಾಯಕ್ಕಾಗಿ ಹೋರಾಟ
    November 5, 2026 | 0
  • ಹಾಲಿನೊಂದಿಗೆ (2)
    ಪಬ್‌ನಲ್ಲಿ ಯುವತಿಯ ಪರಿಚಯ..ಹೋಟೆಲ್‌ನಲ್ಲಿ ಅ*ತ್ಯಾಚಾರ: ಆರೋಪಿ ಅರೆಸ್ಟ್
    November 5, 2026 | 0
  • Untitled Design 2026 11 05T080402.075
    ರಾಜ್ಯದ ಜನರಿಗೆ ಮತ್ತೊಂದು ಶಾಕ್: ನಂದಿನಿ ತುಪ್ಪ, ಬೆಣ್ಣೆ, ಪನ್ನೀರ್ ಬೆಲೆ ಭಾರೀ ಏರಿಕೆ
    November 5, 2026 | 0
  • Untitled Design 2026 11 05T074136.001
    ರಾಜ್ಯದಲ್ಲಿ ಮತ್ತೆ ವರುಣನ ಅಬ್ಬರ: ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸಾಧ್ಯತೆ
    November 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version