ನಟ ದರ್ಶನ್ಗೆ ಸಂಬಂಧಿಸಿದಂತೆ ವಿಜಯಲಕ್ಷ್ಮೀ ಮೇಲೆ ಧನ್ವೀರ್ ಮಾಡಿದ್ದ ಎಲ್ಲಾ ಆರೋಪಗಳಿಗೂ ಪ್ರತಿಕ್ರಿಯೆ ಸಿಕ್ಕಿದೆ. ಆದ್ರೆ ದರ್ಶನ್ ಹಾಗೂ ವಿಜಿ ಪರವಾಗಿ ಜಮೀರ್ ಪುತ್ರ ಝೈದ್ ಖಾನ್ ಉತ್ತರಿಸಿದ್ದಾರೆ. ಜೈಲಿಂದಲೇ ಡಿಬಾಸ್ ದರ್ಶನ್ ಹದ್ದು ಮೀರಿದ ಧನ್ವೀರ್ಗೆ ವಾರ್ನಿಂಗ್ ಕೂಡ ಮಾಡಿದ್ದು, ಒಂದೊಂದು ಸ್ಟೇಟ್ಮೆಂಟ್ ಕೂಡ ಮುಖಕ್ಕೆ ಹೊಡೆದಂತಿವೆ.
ವಿಜಯಲಕ್ಷ್ಮಿ v/s ಧನ್ವೀರ್ ಫೈಟ್ಗೆ ಝೈದ್ ಎಂಟ್ರಿ..!
ಧನ್ವೀರ್ಗೆ ಜೈಲಿನಿಂದಲೇ ದರ್ಶನ್ ನೇರ ವಾರ್ನಿಂಗ್
ಅಭಿಮಾನಿಗಳಿಗೆ ರಾಂಗ್ ಮೆಸೇಜ್ ಕೊಡ್ತಾ ಇದ್ದಾನೆ
ಫ್ಯಾಮಿಲಿ ವಿಚಾರಕ್ಕೆ ಬಂದ್ರೆ ಸುಮ್ನಿರಲ್ಲ ಎಂದ ದಾಸ..!
ಧನ್ವೀರ್ ಮಾಡ್ತಿರೋ ಕಿರಿಕ್ಗಳಿಂದ ಬೇಸತ್ತ ನಟ ಝೈದ್ ಖಾನ್, ಸ್ವತಃ ವಿಜಯಲಕ್ಷ್ಮೀ ಅವರ ಜೊತೆ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ದರ್ಶನ್ರನ್ನು ಭೇಟಿಯಾಗಿದ್ದಾರೆ. ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಹೊರಬಂದ ಝೈದ್ ಖಾನ್ ಮಾಧ್ಯಮಗಳ ಮುಂದೆ ಧನ್ವೀರ್ ಬಣ್ಣವನ್ನು ಬಯಲು ಮಾಡಿದ್ದಾರೆ.
ಕುಟುಂಬದ ತಂಟೆಗೆ ಬಂದ ಧನ್ವೀರ್ಗೆ ಜೈಲಿನಿಂದಲೇ ದರ್ಶನ್ ನೀಡಿದ ವಾರ್ನಿಂಗ್ ಏನು ಈ ಬಗ್ಗೆ ಝೈದ್ ಖಾನ್ ಹೇಳಿದ್ದು ಹೀಗೆ
ಸಹಾಯ ಮಾಡ್ತೀನಿ ಅಂತ ಮನೆಗೆ ನುಗ್ಗಿ ಕ್ರೆಡಿಟ್ ತಗೊಳ್ತಿರೋ ಧನ್ವೀರ್ ಆಟದ ಬಗ್ಗೆ ಝೈದ್ ಖಾನ್ ಬಿಚ್ಚಿಟ್ಟ ಸತ್ಯವೇನು..?
ಧಮ್ ಇದ್ರೆ ಆಡಿಯೋ ಬಿಡ್ಲಿ.. ಝೈದ್ ಓಪನ್ ಚಾಲೆಂಜ್..!
CM, ಮಿನಿಸ್ಟರ್ ಬಗ್ಗೆ ಧನ್ವೀರ್ ಲೂಸ್ ಟಾಕ್.. ದಚ್ಚು ಬೇಸರ
ತಮ್ಮ ಬಗ್ಗೆ ವೈರಲ್ ಆಗಿರೋ ಆಡಿಯೋ ವಿಚಾರವಾಗಿ ಧನ್ವೀರ್ಗೆ ಝೈದ್ ಖಾನ್ ಕೊಟ್ಟ ಖಡಕ್ ಕೌಂಟರ್ ಏನು..?
ಸಿಎಂ, ಶಾಸಕರು ಹಾಗೂ ಮಾಧ್ಯಮಗಳ ವಿರುದ್ಧ ಧನ್ವೀರ್ ಲೂಸಾಗಿ ಮಾತಾಡಿದ್ದಕ್ಕೆ ಜೈಲಿನಲ್ಲಿ ದರ್ಶನ್ ಬೇಸರ ವ್ಯಕ್ತಪಡಿಸಿದ್ದು ಹೇಗೆ..?
ಎಲ್ಲರ ಮುಖವಾಡ ಬಯಲು ಮಾಡ್ತೀನಿ ಅನ್ನೋ ಧನ್ವೀರ್ ವೈರಲ್ ಆಡಿಯೋ ಸವಾಲಿಗೆ ಝೈದ್ ಖಾನ್ ಕೊಟ್ಟ ಓಪನ್ ಚಾಲೆಂಜ್ ಏನು..?
ದರ್ಶನ್ ಹೊರಗೆ ಬಾರದಿರಲು ವಿಜಯಲಕ್ಷ್ಮೀ ಕಾರಣ ಅನ್ನೋ ಆರೋಪದ ಹಿಂದೆ ಧನ್ವೀರ್ ಗೂಬೆ ಕೂರಿಸ್ತಿರೋ ತಂತ್ರವೇನು..?
2028 ಎಲೆಕ್ಷನ್ ಹೈಡ್ರಾಮಾಗೆ ಝೈದ್ ಬಿಗ್ ಕೌಂಟರ್
ಫ್ಯಾನ್ಸ್ಗೆ ಜೈಲಿನಿಂದಲೇ ಡಿಬಾಸ್ ಅಭಯದ ಸಂದೇಶ..!
2028ರ ಚುನಾವಣೆಗೆ ವಿಜಯಲಕ್ಷ್ಮೀ ರೆಡಿಯಾಗ್ತಿದ್ದಾರೆ ಎನ್ನುವ ಆಡಿಯೋಗೆ ಖಡಕ್ ರಿಯಾಕ್ಷನ್
ದರ್ಶನ್ ರಿಲೀಸ್ ಆಗೋದು ಯಾವಾಗ..? ಅಭಿಮಾನಿಗಳಿಗೆ ದಾಸನ ಸಂದೇಶ
ಗಂಡ ಜೈಲಲ್ಲಿ ಚೆನ್ನಾಗಿ ಊಟ ಮಾಡ್ದೇ ಇರುವಾಗ ನಾನು ಹೇಗೆ ಆಚೆ ಊಟ ಮಾಡ್ಲಿ ಎಂದು ಝೈದ್ ಖಾನ್ ಮುಂದೆ ವಿಜಯಲಕ್ಷ್ಮೀ ತೊಡಿಕೊಂಡ ನೋವೇನು..?
ಮನೆಗೆ ಹೋಗಿ ಬೆದರಿಕೆ ಹಾಕಿದ್ರು ಅನ್ನೋ ಆರೋಪಕ್ಕೆ ಹಾಗೂ ಧನ್ವೀರ್ ವಿರುದ್ಧ ಮುಂದಿನ ಲೀಗಲ್ ಪ್ಲಾನ್ ಬಗ್ಗೆ ಝೈದ್ ಹೇಳಿದ್ದೇನು..?
ಡಿ ಕ್ಯಾಂಪ್ನಿಂದ ಧನ್ವೀರ್ ಔಟ್.. ಝೈದ್ ರೀ-ಎಂಟ್ರಿ
ಝೈದ್ ಸ್ಟೇಟ್ಮೆಂಟ್ ದರ್ಶನ್ಗೆ ಉರುಳಾಗುವ ಸಾಧ್ಯತೆ
ಒಟ್ಟಾರೆ ಡಿ ಕ್ಯಾಂಪ್ನಿಂದ ಧನ್ವೀರ್ಗೆ ಗೇಟ್ ಪಾಸ್ ನೀಡಿರೋದು ಬಹುತೇಕ ಖಚಿತ. ಡಿ ಗ್ಯಾಂಗ್ನಿಂದ ದೂರ ಉಳಿದಿದ್ದ ಝೈದ್ ಖಾನ್.. ಇದೀಗ ಮತ್ತೆ ರೀ ಎಂಟ್ರಿ ಕೊಟ್ಟಾಗಿದೆ. ಆದ್ರೆ ಝೈದ್ ನೀಡಿರೋ ಒಂದು ಸ್ಟೇಟ್ಮೆಂಟ್ ನಟ ದರ್ಶನ್ಗೆ ಉರುಳಾಗುವ ಸಾಧ್ಯತೆಯಿದೆ. ಜೈಲಿನಲ್ಲಿರೋ ಆರೋಪಿ ದರ್ಶನ್ ಅದ್ಹೇಗೆ ಹೊರಗಿರೋ ವ್ಯಕ್ತಿಗೆ ವಾರ್ನ್ ಮಾಡೋಕೆ ಸಾಧ್ಯ..? ಅದು ದರ್ಶನ್ ಕೇಸ್ಗೆ ಕಾನೂನು ತೊಡಕಾಗುವ ಸಾಧ್ಯತೆ ಹೆಚ್ಚಾಗಿದೆ. ಧಮ್ ಇದ್ರೆ ದರ್ಶನ್ ಸರ್ ಹೊರಗೆ ಬಂದ ಮೇಲೆ ಮಾತಾಡಲಿ ಎಂದಿರುವ ಝೈದ್ ಸವಾಲಿಗೆ ಧನ್ವೀರ್ ಮುಂದಿನ ನಡೆಯೇನು ಅನ್ನೋದೇ ಈಗ ಕುತೂಹಲ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





