416 ವರ್ಷದ ಮೈಸೂರು ದಸರಾ ಇತಿಹಾಸದಲ್ಲೇ ಯಾವ ಸಿನಿಮಾಗೂ ಸಿಗದಂತ ಬಿಗ್ ಬ್ರೇಕ್, ನಮ್ಮ ‘ಕೊರಗಜ್ಜ’ 3D ಮೂವಿಗೆ ಸಿಕ್ಕಿಬಿಟ್ಟಿದೆ. ಬನ್ನಿಮಂಟಪದಲ್ಲಿ ಲಕ್ಷಾಂತರ ಜನರ ವಿಷಲ್ ಸದ್ದಿಗೆ ಚಿತ್ರದ ಟ್ರೈಲರ್ ಲಾಂಚ್ ಆಗಿ ಸೌಂಡ್ ಮಾಡ್ತಿದೆ. ಬನ್ನಿ, ಈ ಕರಾವಳಿಯ ಪವರ್ಫುಲ್ ಕಥೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…
- 416 ವರ್ಷಗಳ ದಸರಾ ಇತಿಹಾಸದಲ್ಲಿ ಕೊರಗಜ್ಜ ಚಿತ್ರದ ಹೊಸ ದಾಖಲೆ
- ಜಂಬೂಸವಾರಿಯಲ್ಲಿ ಕೊರಗಜ್ಜ ಚಿತ್ರದ ಸ್ತಬ್ಧಚಿತ್ರದ ಅಬ್ಬರ
- ಬನ್ನಿಮಂಟಪದಲ್ಲಿ ಕೊರಗಜ್ಜ ಟ್ರೈಲರ್ಗೆ ಅದ್ಧೂರಿ ಚಾಲನೆ
- 52ಕ್ಕೂ ಹೆಚ್ಚು ಸ್ತಬ್ಧಚಿತ್ರಗಳ ನಡುವೆ ಕೊರಗಜ್ಜ ಟ್ಯಾಬ್ಲೋ ಹೈಲೈಟ್
ಮೈಸೂರು ದಸರಾ ಅಂದ್ರೆ ಬರೀ ಆನೆಗಳ ಮೆರವಣಿಗೆ ಅಲ್ಲ, ಅದೊಂದು ರೋಮಾಂಚನದ ಹಬ್ಬ. ಆದ್ರೆ, ಈ ಬಾರಿಯ ಜಂಬೂಸವಾರಿಯಲ್ಲಿ ಇತಿಹಾಸದಲ್ಲೇ ಯಾರೂ ಮಾಡದ ಮ್ಯಾಜಿಕ್ ನಡೆದಿದೆ. ಕ್ರಿ.ಶ. 1610ರಿಂದ ನಡೆದುಕೊಂಡು ಬಂದಿರುವ ಈ ಸಾಂಪ್ರದಾಯಿಕ ಉತ್ಸವದಲ್ಲಿ, ಬರೋಬ್ಬರಿ 416 ವರ್ಷಗಳ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಚಿತ್ರವೊಂದರ ಸ್ತಬ್ಧಚಿತ್ರ ಭಾಗವಹಿಸಿ ಸೆನ್ಸೆಷನ್ ಸೃಷ್ಟಿಸಿದೆ. ಅದೂ ನಮ್ಮ ತುಳುನಾಡಿನ ದೈವಿಕ ನಂಬಿಕೆಯುಳ್ಳ ಹೈ-ವೋಲ್ಟೇಜ್ 3D ಸಿನಿಮಾ “ಕೊರಗಜ್ಜ” ಟ್ಯಾಬ್ಲೋ ನೇರವಾಗಿ ಅಂಬಾರಿಯ ಸಮೀಪವೇ ಸಾಗಿಬಂದು ಇಡೀ ರಾಜ್ಯದ ಕಣ್ಣು ಕುಕ್ಕುವಂತೆ ಮಾಡಿದೆ.
ಬನ್ನಿಮಂಟಪದ ಮೈದಾನದಲ್ಲಿ ಲಕ್ಷಾಂತರ ಜನಸ್ತೋಮದ ಸಮ್ಮುಖದಲ್ಲಿ ನಡೆದ ಈ ಟ್ರೈಲರ್ ಲಾಂಚ್ ಯಾವುದೇ ಬಿಗ್-ಬಜೆಟ್ ಬಾಲಿವುಡ್ ಚಿತ್ರಕ್ಕೂ ಕಡಿಮೆ ಇರಲಿಲ್ಲ. ಮುಖ್ಮಮಂತ್ರಿಗಳ ಮಹತ್ವಾಕಾಂಕ್ಷೆಯ ಖಾಸಗಿ ಸಹಭಾಗಿತ್ವದ ಈ ಆಚರಣೆಯಲ್ಲಿ ತುಳು ಭಾಷೆಗೆ ಸಿಕ್ಕಿರುವ ಮನ್ನಣೆಯೂ ಹೈಲೈಟ್ ಆಗಿತ್ತು. ಮೆರವಣಿಗೆಯ ಹಾದಿಯುದ್ದಕ್ಕೂ “ತುಳುನಾಡು ಕಂಗೊಳಿಸುತ್ತಿದೆ… ಕರುನಾಡ ಕಂಪಿನಲ್ಲಿ…” ಎನ್ನುವ ಸಂಗೀತಮಯ ಘೋಷವಾಕ್ಯಗಳು ಮೊಳಗಿ, ಕರಾವಳಿಯ ಘಮವನ್ನು ಮೈಸೂರಿನಲ್ಲಿ ಹಬ್ಬುವಂತೆ ಮಾಡಿತ್ತು. ಒಟ್ಟು 52ಕ್ಕೂ ಹೆಚ್ಚು ಟ್ಯಾಬ್ಲೋಗಳಿದ್ದರೂ, ಎಲ್ಲರ ಕಣ್ಣು ಕೊರಗಜ್ಜ ಟ್ಯಾಬ್ಲೋ ಮೇಲೆಯೇ ನೆಟ್ಟಿತ್ತು.
ಈ ಭಕ್ತಿಭಾವದ ಸಂಭ್ರಮಕ್ಕೆ ಕರಾವಳಿಯ ದಿಗ್ಗಜರಷ್ಟೇ ಅಲ್ಲ, ಖುದ್ದು ಹಾಲಿವುಡ್-ಬಾಲಿವುಡ್ ಸ್ಟಾರ್ಗಳೂ ಸಾಕ್ಷಿಯಾಗಿದ್ದಾರೆ. ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಜತೆ ಖ್ಯಾತ ನಟ ಕಬೀರ್ ಬೇಡಿ, 90ರ ದಶಕದ ಸ್ಟಾರ್ ನಟಿ ಮಿನಾಕ್ಷಿ ಶೇಷಾದ್ರಿ, ಹಿರಿಯ ನಟಿ ಭವ್ಯ, ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಎಡಿಟರ್ ವಿದ್ಯಾಧರ್ ಶೆಟ್ಟಿ ಹಾಗೂ ಉದ್ಯಮಿ ಯು.ಟಿ. ಝುಲ್ಫಿಕರ್ ಸೇರಿ ಟ್ರೈಲರ್ ಲಾಂಚ್ ಮಾಡಿ ಹಬ್ಬದ ಮಜಾವನ್ನು ಡಬಲ್ ಮಾಡಿದರು.
ಚಿತ್ರ ತೆರೆಕಾಣುವುದಕ್ಕೂ ಮುನ್ನವೇ ಮೈಸೂರು ದಸರಾದಂತಹ ಐತಿಹಾಸಿಕ ವೇದಿಕೆಯಲ್ಲಿ ಈ ಮಟ್ಟದ ಹವಾ ಸೃಷ್ಟಿಸಿರುವುದು ಸ್ಯಾಂಡಲ್ವುಡ್ ಅಷ್ಟೇ ಅಲ್ಲದೆ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದೆ. ಕರಾವಳಿಯ ಮಣ್ಣಿನ ಕಥೆ ಗಡಿಯನ್ನು ಮೀರಿ ಸದ್ದು ಮಾಡುತ್ತಿರುವುದು ಕನ್ನಡಿಗರಿಗೆ ದೊಡ್ಡ ಹೆಮ್ಮೆಯ ವಿಚಾರ. ಸಿನಿಮಾ ರಿಲೀಸ್ಗೂ ಮುಂಚೆನೇ ಇಂಥದ್ದೊಂದು ಹಿಸ್ಟರಿ ಕ್ರಿಯೇಟ್ ಮಾಡಿದ್ರೆ, ಇನ್ನು ಥಿಯೇಟರ್ಗೆ ಬಂದ್ರೆ ಬಾಕ್ಸಾಫೀಸ್ ಕಥೆ ಯಾವ ಮಟ್ಟಕ್ಕೆ ಇರ್ಬೇಕು ನೀವೇ ಯೋಚಿಸಿ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





