ಕೆಂಡಸಂಪಿಗೆ ಹಾಗೂ ಪಾಪ್‌ಕಾರ್ನ್ ಮಂಕಿ ಟೈಗರ್ ಬಳಿಕ ದುನಿಯಾ ಸೂರಿ ಸಿನಿಮ್ಯಾಟಿಕ್ ಯೂನಿವರ್ಸ್‌ನಿಂದ ಮತ್ಯಾವ ಕರಾಳ ಹಾಗೂ ವಿಭಿನ್ನ ಲೋಕ ತೆರೆದುಕೊಳ್ಳಲಿದೆ ಅನ್ನೋ ಕುತೂಹಲ ಇತ್ತು. ಅದಕ್ಕೀಗ ಉತ್ತರ ಸಿಕ್ಕಾಗಿದೆ. ಬಹು ವರ್ಷಗಳ ಕಾಗೆ ಬಂಗಾರ ಮುನ್ನೆಲೆಗೆ ಬಂದಿದೆ. ಸತ್ಯ-ಸುಳ್ಳಿನ ಆಟದಲ್ಲಿ ರಗಡ್ ಲುಕ್‌ನಲ್ಲಿ ಚಾಕ್ಲೇಟ್ ಬಾಯ್ ಸೂರ್ಯ ಪ್ರಖ್ಯಾತ್ ಮತ್ತು ರಿತನ್ಯಾ ವಿಜಯ್ ಲುಕ್ ರಿವೀಲ್ ಆಗಿದೆ.
11 ವರ್ಷಗಳ ಬಳಿಕ ಸೂರಿ ಕಾಗೆ ಬಂಗಾರದ ಬೇಟೆ ಶುರು
ಕೆಂಡಸಂಪಿಗೆ, ಪಾಪ್‌ಕಾರ್ನ್ ಮುಂದುವರೆದ ಭಾಗನಾ..?
ಸತ್ಯನಾ..? ಸುಳ್ಳಾ..? ಅಥ್ವಾ ಸೂರಿ ಸೃಷ್ಟಿಸಿದ ಭ್ರಮೆನಾ..?
ಸೂರ್ಯ ಪ್ರಖ್ಯಾತ್‌ಗೆ ನಟಿ ರಿತನ್ಯಾ ವಿಜಯ್ ಜೋಡಿ
ಸ್ಯಾಂಡಲ್‌ವುಡ್‌ನ ರಫ್ ಆ್ಯಂಡ್ ಟಫ್ ಡೈರೆಕ್ಟರ್ ದುನಿಯಾ ಸೂರಿ ಅಂದ್ರೆನೇ ಒಂದು ಥ್ರಿಲ್. ಬ್ಯಾಡ್ ಮ್ಯಾನರ್ಸ್ ನಂತ್ರ ಸಖತ್ ಕಮ್‌ಬ್ಯಾಕ್ ಮಾಡಿರೋ ಸೂರಿ, ಈಗ ತಮ್ಮ ಮೋಸ್ಟ್ ಅವೈಟೆಡ್ ಪ್ರಾಜೆಕ್ಟ್ ಕಾಗೆ ಬಂಗಾರದ ಫಸ್ಟ್‌ಲುಕ್ ಹಾಗೂ ಟೀಸರ್ ರಿಲೀಸ್ ಮಾಡಿ ಭರ್ಜರಿ ಸದ್ದು ಮಾಡ್ತಿದ್ದಾರೆ. ಕೆಂಡಸಂಪಿಗೆ ಹಾಗೂ ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾಗಳ ಮುಂದುವರಿದ ಭಾಗವಾಗಿರೋ ಈ ಸಿನಿಮಾ, 2016ರಲ್ಲೇ ರಿಲೀಸ್ ಆಗ್ಬೇಕಿತ್ತು. ಬಟ್, ಬರೋಬ್ಬರಿ 11 ವರ್ಷಗಳ ನಂತ್ರ ಈಗ ಕಾಗೆ ಬಂಗಾರ ಲೋಕದ ಅಬ್ಬರ ಶುರುವಾಗಿದೆ. ಸತ್ಯ ಮತ್ತು ಸುಳ್ಳಿನ ನಡುವೆ ಭ್ರಮೆ ಹುಟ್ಟಿಸುವುದೇ ಕಾಗೆ ಬಂಗಾರ ಅಂತ ಸೂರಿ ಹೇಳಿರೋದ್ರಿಂದ, ವಾಸ್ತವ ಮತ್ತು ಭ್ರಮಾ ಲೋಕದ ಅಸಲಿ ಆಟ ಹೇಗಿರುತ್ತೆ ಅನ್ನೋದು ಕ್ಯೂರಿಯಾಸಿಟಿ ಹುಟ್ಟಿಸಿದೆ.
ಇನ್ನು ಈ ಸಿನಿಮಾದ ಕಾಸ್ಟಿಂಗ್ ಮಸ್ತ್ ಮಜಾವಾಗಿದೆ. ನಡುವೆ ಅಂತರವಿರಲಿ ಹಾಗೂ ಜೆಸಿ–ದಿ ಯೂನಿವರ್ಸಿಟಿ ನಂತ್ರ ಸೂರ್ಯ ಪ್ರಖ್ಯಾತ್ ನಟಿಸ್ತಿರೋ ಮೂರನೇ ಸಿನಿಮಾ ಇದು. ಚಾಕಲೇಟ್ ಬಾಯ್ ಇಮೇಜ್ ಪಕ್ಕಕ್ಕಿಟ್ಟು, ಇಲ್ಲಿ ಕಂಪ್ಲೀಟ್ ರಗಡ್ ಲುಕ್‌ನಲ್ಲಿ ಅಬ್ಬರಿಸ್ತಿದ್ದಾರೆ. ಮೊದಲು ಯುವ ರಾಜ್‌ಕುಮಾರ್ ಹೆಸರು ಕೇಳಿಬಂದಿದ್ರೂ, ಕೊನೆಗೆ ಸೂರ್ಯ ಆ ಜಾಗ ಗಿಟ್ಟಿಸಿಕೊಂಡಿದ್ದಾರೆ. ಇವರ ಜೊತೆ ದುನಿಯಾ ವಿಜಯ್ ಪುತ್ರಿ ರಿತನ್ಯಾ ನಾಯಕಿಯಾಗಿದ್ದಾರೆ. ಹಳೇ ಕಥೆಯ ಮುಂದುವರಿದ ಭಾಗವಾಗಿ ಕೆಂಡಸಂಪಿಗೆಯ ಪ್ರಶಾಂತ್ ಸಿದ್ದಿ ಕೂಡ ಅಭಿನಯಿಸಿದ್ದಾರೆ. ಇವರೊಂದಿಗೆ ಪೆದ್ರೊ ಖ್ಯಾತಿಯ ನಟೇಶ್ ಹೆಗಡೆ ಖಳನಾಯಕನಾಗಿದ್ರೆ, ನಂದಕಿಶೋರ್, ಅಶ್ವಿನ್ ಕುಮಾರ್ ಎಚ್.ಎಸ್., ಕಾರ್ತಿಕ್, ಪವನ್ ನಾಗೇಶ್, ಮಲ್ಲ ಮತ್ತು ದಿಲೀಪ್ ಸೇರಿದಂತೆ ಪ್ರತಿಭಾವಂತ ಯುವ ನಟರ ದೊಡ್ಡ ತಂಡವೇ ಸಿನಿಮಾದಲ್ಲಿದೆ.
ಮೂವಿಗೆ ಅಷ್ಟೇ ಅಲ್ಲ, ಟೆಕ್ನಿಕಲ್ ಟೀಮ್ ಕೂಡ ಪಕ್ಕಾ ಮಾಸ್ ಆಗಿದೆ. ಸುರೇಂದ್ರನಾಥ್ ಹಾಗೂ ಅಮ್ರಿ ಕೇಸರಿ ಕಥೆ ಬರೆದಿರೋ ಈ ಸಿನಿಮಾಗೆ ಚರಣ್ ರಾಜ್ ಮ್ಯೂಸಿಕ್ ಜಾದೂ ಸಖತ್ ಕಿಕ್ ಕೊಡಲಿದೆ. ಇನ್ನು ದೀಪು ಎಸ್. ಕುಮಾರ್ ಕತ್ತರಿ ಪ್ರಯೋಗ ಹಾಗೂ ಶೇಖರ್ ಕ್ಯಾಮೆರಾ ಕಣ್ಣು ಸೂರಿಯ ಮೈಂಡ್ ಬೆಂಡ್ ಲೋಕವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಲಿದೆ. ಹರ್ಷಿತ್ ಆರ್. ಗೌಡ ಈ ಸಿನಿಮಾವನ್ನು ಅದ್ಧೂರಿಯಾಗಿ ಪ್ರೊಡ್ಯೂಸ್ ಮಾಡ್ತಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





