ಕನ್ನಡ ಸಿನಿಮಾಗಳನ್ನ ನೋಡೋಕೆ ಜನ ಥಿಯೇಟರ್‌ಗೆ ಬರ್ತಿರಲಿಲ್ಲ. ಓಟಿಟಿಗೆ ಅಂತೂ ಕೇಳೋರೇ ಇರಲಿಲ್ಲ. ಆದ್ರೀಗ ಇತ್ತೀಚೆಗೆ ನಮ್ಮ ಕನ್ನಡದ ಚಿತ್ರಗಳಿಗೆ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಂದ ಡಿಮ್ಯಾಂಡ್ ಹೆಚ್ಚಿದೆ. ಸೂಪರ್ ಹಿಟ್ ಚಿತ್ರಗಳ ಜೊತೆ ಆವರೇಜ್ ಸಿನಿಮಾಗಳಿಗೂ ಕೂಡ ಬೇಡಿಕೆ ಬಂದಿರೋದು ಅಚ್ಚರಿ. ಅದಕ್ಕೆ ಎವಿಆರ್ ಸಿನಿಮ್ಯಾಕ್ಸ್ ಕಾರಣವಾಗಿರೋದು ಇಂಟರೆಸ್ಟಿಂಗ್.
- ಕನ್ನಡ ಚಿತ್ರಗಳಿಗೆ OTTಯಲ್ಲಿ ಡಿಮ್ಯಾಂಡೋ ಡಿಮ್ಯಾಂಡ್
- ಬೇಲ್, ಆಯೋಗ್ಯ-2ಗೆ ಕೈ ಹಾಕಿತ್ತು ‘AVR ಸಿನಿಮ್ಯಾಕ್ಸ್’..!
- ಮಾತುಕತೆ ಹಂತದಲ್ಲಿ ಪ್ರೇಮದ ಊರಲಿ.. ಯಾರಿಗೆ ಪಾಲು..?
- ನಥಿಂಗ್ to ಸಂಥಿಂಗ್.. ಹಳೆ ಟ್ರ್ಯಾಕ್‌ಗೆ ಮರಳಿದ ಚಂದನವನ
ಕೆಜಿಎಫ್, ಕಾಂತಾರದಿಂದ ಕನ್ನಡ ಸಿನಿಮಾಗಳಿಗೆ ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ಮನ್ನಣೆ ಸಿಕ್ಕಿತ್ತು. ನಮ್ಮ ಮಾರ್ಕೆಟ್ ಚಿಕ್ಕದು ಅಂತಿದ್ದವರೆಲ್ಲಾ ಬಾಯಿ ಮೇಲೆ ಬೆರಳಿಡುವಂತೆ ಮಾಡಿದ ಚಿತ್ರಗಳವು. ಅದ್ರಿಂದ ನಮ್ಮ ಭಾಷೆಯ ಚಿತ್ರಗಳು ಗ್ಲೋಬಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ರಾರಾಜಿಸಿದವು. ವಿದೇಶಿಗರು ಕೂಡ ಭೇಷ್ ಅಂತ ಮೆಚ್ಚಿಕೊಂಡು, ಕನ್ನಡ ಚಿತ್ರಗಳನ್ನ ನೋಡಲಾರಂಭಿಸಿದ್ರು. ಅದಾದ ಬಳಿಕ ಅದ್ಯಾಕೋ ಇದ್ದಕ್ಕಿದ್ದಂತೆ ಕನ್ನಡ ಚಿತ್ರಗಳನ್ನ ನೋಡಲು ಪ್ರೇಕ್ಷಕರು ಥಿಯೇಟರ್‌ಗೇ ಬಾರದಂತೆ ಆಗಿಬಿಟ್ರು. ಇನ್‌ಫ್ಯಾಕ್ಟ್ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಕೂಡ ಕನ್ನಡ ಚಿತ್ರಗಳನ್ನ ತಾತ್ಸಾರ ಮಾಡಿಬಿಟ್ಟವು.
ವರ್ಷಕ್ಕೆ ಇನ್ನೂರೈವತ್ತು ಚಿತ್ರಗಳು ರಿಲೀಸ್ ಆದ್ರೆ ಆ ಪೈಕಿ ನಾಲ್ಕೈದು ಚಿತ್ರಗಳು ಓಟಿಟಿಗಳಿಗೆ ಸೇಲ್ ಆದ್ರೆ ಹೆಚ್ಚೆಚ್ಚು ಅನ್ನುವಂತಾಗಿತ್ತು. ಆದ್ರೆ ಯಾವಾಗ ಕನ್ನಡ ಸಿನಿಮಾಗಳಿಗಾಗಿಯೇ ಪ್ರತ್ಯೇಕವಾದ ಹಾಗೂ ಎಕ್ಸ್‌ಕ್ಲೂಸಿವ್ ಓಟಿಟಿ ಪ್ಲಾಟ್‌ಫಾರ್ಮ್ AVR ಸಿನಿಮ್ಯಾಕ್ಸ್ ಹುಟ್ಟಿಕೊಳ್ತೋ, ಆಗ ಮತ್ತೆ ದೊಡ್ಡ ದೊಡ್ಡ ಓಟಿಟಿಗಳು ಕನ್ನಡದತ್ತ ಮುಖ ಮಾಡುವಂತಾಗಿವೆ. ಹೌದು.. ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಇದೇ ಜೂನ್ 11ರಂದು ಕನ್ನಡ ಚಿತ್ರಗಳಿಗೆ AVR ಸಿನಿಮ್ಯಾಕ್ಸ್ ಆರಂಭಿಸಿದ್ರು. ಅವರೀಗ ಸಾಲು ಸಾಲು ಸಿನಿಮಾಗಳನ್ನ ಖರೀದಿಸೋಕೆ ಮುಂದಾಗಿದ್ದಾರೆ.
ಸಾಮಾನ್ಯವಾಗಿ ಬ್ಲಾಕ್ ಬಸ್ಟರ್ ಹಿಟ್ ಆದ ಚಿತ್ರಗಳನ್ನ ಓಟಿಟಿಗಳು ಖರೀದಿಸುವುದು ಸರ್ವೇ ಸಾಮಾನ್ಯ. ಆದ್ರೆ ಎವಿಆರ್ ಹಾಗೆ ಅಲ್ಲ. ಸಣ್ಣ ಪುಟ್ಟ ಚಿತ್ರಗಳಿಗೂ ಪ್ರಾಮುಖ್ಯತೆ ಕೊಡ್ತಿದ್ದಾರೆ. ಜೂನ್ 11ರಂದು ಲಾಂಚ್ ಆದ ಎವಿಆರ್ ಸಿನಿಮ್ಯಾಕ್ಸ್, ಈಗಾಗ್ಲೇ ಹತ್ತಾರು ಚಿತ್ರಗಳನ್ನ ಖರೀಸಿದೆ. ಆ ಮೂಲಕ ನಮ್ಮ ಕನ್ನಡದ ನಿರ್ಮಾಪಕರುಗಳ ಪಾಲಿಗೆ ಆಸರೆ ಆಗ್ತಿದೆ.
ಅಂದಹಾಗೆ ಇತ್ತೀಚೆಗೆ ಹಿಟ್ ಆದಂತಹ ಶಿವರಾಜ್‌ಕುಮಾರ್ ನಟನೆಯ ಬೇಲ್, ನೀನಾಸಂತ ಸತೀಶ್-ರಚಿತಾ ರಾಮ್ ಜೋಡಿಯ ಅಯೋಗ್ಯ-2 ಚಿತ್ರಗಳಿಗೂ ಕೈ ಹಾಕಿದ್ರು ಎವಿಆರ್. ಆದ್ರೆ ಎವಿಆರ್ ಕೋಟ್ ಮಾಡಿದ್ದ ಹಣಕ್ಕಿಂತ ಹೆಚ್ಚಿನ ಬೆಲೆಗೆ ಜಿಯೋ ಹಾಟ್‌ಸ್ಟಾರ್‌ಗೆ ಬೇಲ್ ಸೇಲ್ ಆದ್ರೆ, ಝೀ5ಗೆ ಅಯೋಗ್ಯ-2 ಸೋಲ್ಡ್ ಔಟ್ ಆಗುತ್ತೆ. ಅಲ್ಲಿಗೆ ಎವಿಆರ್ ಸಿನಿಮ್ಯಾಕ್ಸ್ ಕೈ ಹಾಕಿದ ಸಿನಿಮಾಗಳನ್ನ ಇತರೇ ಟಾಪ್ ಓಟಿಟಿ ಪ್ಲಾಟ್‌ಫಾರ್ಮ್‌ಗಳು ಖರೀದಿಸ್ತಿರೋದು ಒಂಥರಾ ಒಳ್ಳೆಯ ಬೆಳವಣಿಗೆ. ಟಾಪ್ ಓಟಿಟಿಗಳು ಎವಿಆರ್ ಸಿನಿಮ್ಯಾಕ್ಸ್ ಗೆ ಹೆದರಿರೋದು ಎದ್ದು ಕಾಣ್ತಿದೆ.
- 10 ಕೋಟಿಗೆ ಎವಿಆರ್ ಪಾಲಾಗುತ್ತಾ ಪ್ರೇಮದ ಊರಲಿ..?!
- AVR ಸಿನಿಮ್ಯಾಕ್ಸ್ ತೆಕ್ಕೆಗೆ ರಿಲೀಸ್ ಆಗದ ಕನ್ನಡ ಚಿತ್ರಗಳು..!
ಸದ್ಯ ಈ ವರ್ಷದ ಸೀಕ್ರೆಟ್ ಹಿಟ್ ಆಗಿರೋ ಫ್ಯಾಮಿಲಿ ಹಿಟ್ ಪ್ರೇಮದ ಊರಲಿ ಸಿನಿಮಾನ ಎವಿಆರ್ ಸಿನಿಮ್ಯಾಕ್ಸ್ ಮಾತುಕತೆ ಮಾಡ್ತಿದೆ. ಎಲ್ಲಾ ಓಕೆ ಆದ್ರೆ ಮಾರ್ಕೆಟ್‌ನಲ್ಲಿ ಹರಿದಾಡ್ತಿರೋ 10 ಕೋಟಿ ಬೃಹತ್ ಮೊತ್ತಕ್ಕೆ ಅಚ್ಚ ಕನ್ನಡದ ಪ್ರೇಮದ ಊರಲಿ ಸಿನಿಮಾ ನಮ್ಮ ಕನ್ನಡದ ಓಟಿಟಿ ಎವಿಆರ್ ಸಿನಿಮ್ಯಾಕ್ಸ್ ಪಾಲಾಗಲಿದೆ. ಈಗಾಗ್ಲೇ ಎವಿಆರ್ ಆರ್ ಚಂದ್ರು ನಿರ್ಮಾಣದ ಹಾಗೂ ಡಾರ್ಲಿಂಗ್ ಕೃಷ್ಣ ನಟನೆಯ ಫಾದರ್ ಚಿತ್ರ ಖರೀದಿಗೂ ಮುಂದಾಗಿದ್ದಾರೆ.
ಗುರುತ್ವಾಕರ್ಷಣೆ ಸಿನಿಮಾ ಸೇರಿದಂತೆ ಇನ್ನೂ ಥಿಯೇಟರ್‌ನಲ್ಲಿ ರಿಲೀಸ್ ಆಗದ ಸಿನಿಮಾಗಳನ್ನ ಕೂಡ ಎವಿಆರ್ ಖರೀದಿ ಮಾಡ್ತಿದೆ. ಥಿಯೇಟರ್‌ನಲ್ಲಿ ರಿಲೀಸ್ ಆಗದ ಐ ಆ್ಯಮ್ ಪ್ರೆಗ್ನೆಂಟ್ ಸಿನಿಮಾನ ಡೈರೆಕ್ಟ್ ಓಟಿಟಿಗೆ ಖರೀದಿಸಿದ್ದಾರೆ ಎವಿಆರ್. ಸಹರ ಸಿನಿಮಾ ಕೂಡ ಎವಿಆರ್ ಸಿನಿಮ್ಯಾಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗ್ತಿದ್ದು, ಕನ್ನಡ ಚಿತ್ರರಂಗದ ಪಾಲಿಗೆ ಒಂದು ದೊಡ್ಡ ಭರವಸೆಯಾಗಿ ತಲೆ ಎತ್ತುತ್ತಿದೆ ಎವಿಆರ್ ಓಟಿಟಿ ಸಂಸ್ಥೆ. ಅಂದಹಾಗೆ ಅರವಿಂದ್ ವೆಂಕಟೇಶ್ ರೆಡ್ಡಿ ಬರೀ ಓಟಿಟಿಗಷ್ಟೇ ಸೀಮಿತ ಆಗಿಲ್ಲ.. ಅನುರಾಗ್ ಕಶ್ಯಪ್ ಜೊತೆ 8 ಅನ್ನೋ ಸ್ಪೋರ್ಟ್ಸ್ ಸಿನಿಮಾನ ನಿರ್ಮಾಣ ಮಾಡ್ತಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





