ರಾಜ್ ಬಿ ಶೆಟ್ಟಿ ಅದ್ಯಾಕೋ ಇತ್ತೀಚೆಗೆ ಸೈಲೆಂಟ್ ಆಗಿಬಿಟ್ರು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಶೆಟ್ರು ಸೈಲೆಂಟ್ ಆಗಿದ್ಯಾಕೆ..? ಇಷ್ಟಕ್ಕೂ ಅವರು ಯಾವ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ಅಂತ ಜನ ಗೂಗಲ್‌ನಲ್ಲಿ ಹುಡುಕೋಕೆ ಶುರುವಿಟ್ಟರು. ಅದಕ್ಕೆ ಖುದ್ದು ಶೆಟ್ರೇ ಆನ್ಸರ್ ನೀಡಿದ್ದು.. ವಿಜಯ್ ಸೇತುಪತಿ ಜೊತೆ ಪಾಕೆಟ್ ನಾವೆಲ್ ತರ್ತಿರೋದಾಗಿ ಹೇಳಿದ್ದಾರೆ.
- ಸೇತುಪತಿ ಜೊತೆ ಪಾಕೆಟ್ ನಾವೆಲ್ ತರ್ತಿದ್ದಾರೆ ರಾಜ್ ಶೆಟ್ಟಿ
- 7 ವರ್ಷಗಳ ನಂತರ ತ್ಯಾಗರಾಜನ್ ಕುಮಾರರಾಜ ಡೈರೆಕ್ಷನ್
- ಪಾಕೆಟ್ ನಾವೆಲ್ ಕುಂಬಳಕಾಯಿ.. ರಿಲೀಸ್‌ಗೆ ಕೌಂಟ್‌ಡೌನ್
- ಇಳಯರಾಜ ಮ್ಯೂಸಿಕ್.. ವರ್ಸಟೈಲ್ ಆ್ಯಕ್ಟರ್ಸ್ ಸಮಾಗಮ
ಸ್ಯಾಂಡಲ್‌ವುಡ್‌ನ ಜೀನಿಯಸ್ ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಈಗ ನೇರವಾಗಿ ಕಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದು, ತಮಿಳು ಚಿತ್ರರಂಗದ ಮೋಸ್ಟ್ ಅವೈಟೆಡ್ ಪ್ರಾಜೆಕ್ಟ್ ಪಾಕೆಟ್ ನಾವೆಲ್ ಮೂಲಕ ದೊಡ್ಡ ಮಟ್ಟದ ಸೌಂಡ್ ಮಾಡಲು ಹೊರಟಿದ್ದಾರೆ. ಕೇವಲ ಕನ್ನಡದ ಕಥೆಗಳು ಹಾಗೂ ರಗಡ್ ಪಾತ್ರಗಳ ಮೂಲಕ ಕರಾವಳಿ ಸೊಗಡನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದ ರಾಜ್ ಬಿ. ಶೆಟ್ಟಿ, ತ್ಯಾಗರಾಜನ್ ಕುಮಾರರಾಜ ನಿರ್ದೇಶನದ ಈ ಸಿನಿಮಾದಲ್ಲಿ ನಟಿಸುತ್ತಿರುವುದು ಕನ್ನಡಿಗರಲ್ಲಿ ಮತ್ತು ಸಿನಿರಸಿಕರಲ್ಲಿ ವಿಪರೀತ ಕುತೂಹಲ ಮೂಡಿಸಿದೆ. ಮಲಯಾಳಂ ನಂತರ ಈಗ ತಮಿಳು ಇಂಡಸ್ಟ್ರಿಗೂ ಎಂಟ್ರಿ ಕೊಡುತ್ತಿರುವ ರಾಜ್ ಬಿ. ಶೆಟ್ಟಿ ಅವರ ಈ ಹೆಜ್ಜೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ.
ಇನ್ನು ಈ ಪಾಕೆಟ್ ನಾವೆಲ್ ಸಿನಿಮಾದ ಹೈಲೈಟ್ ಅಂದ್ರೆ, ಕಲ್ಟ್ ಕ್ಲಾಸಿಕ್ ಸೂಪರ್ ಡಿಲಕ್ಸ್ ಸಿನಿಮಾ ಮೂಲಕ ಇಡೀ ದಕ್ಷಿಣ ಭಾರತದ ಸಿನಿಮಾವನ್ನೇ ಬೆರಗುಗೊಳಿಸಿದ್ದ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ಬರೋಬ್ಬರಿ ಏಳು ವರ್ಷಗಳ ಗ್ಯಾಪ್ ಬಳಿಕ ಮತ್ತೆ ಮೆಗಾಫೋನ್ ಹಿಡಿದಿದ್ದಾರೆ. ಅವರ ನಿರ್ದೇಶನದ ಮ್ಯಾಜಿಕ್ ಹೇಗಿರುತ್ತೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಜೊತೆಗೆ ರಾಜ್ ಬಿ. ಶೆಟ್ಟಿ ಮತ್ತು ಕನ್ನಡದ ಮತ್ತೊಬ್ಬ ಪ್ರತಿಭಟಾನ್ವಿತ ನಟ ಕಿಶೋರ್ ಕೂಡ ಸ್ಕ್ರೀನ್ ಶೇರ್ ಮಾಡುತ್ತಿರುವುದು ಸಿನಿಮಾದ ತೂಕವನ್ನು ಡಬಲ್ ಮಾಡಿದೆ. ಚಿತ್ರದ ನಟಿ ಮಾಳವಿಕಾ ಮೋಹನ್ ತಮ್ಮ ಭಾಗದ ಶೂಟಿಂಗ್ ಅನ್ನು ಯಶಸ್ವಿಯಾಗಿ ಕಂಪ್ಲೀಟ್ ಮಾಡಿದ್ದಾರೆ. ಪಕ್ಕಾ ವಿಂಟೇಜ್ ಕ್ರೈಮ್ ನಾವೆಲ್ ಶೈಲಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೇಲೆ ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಭಾರೀ ನಿರೀಕ್ಷೆಯಿದೆ.
ಪಾತ್ರವರ್ಗದ ಜತೆಗೆ ತಾಂತ್ರಿಕ ಬಳಗದಲ್ಲೂ ಈ ಸಿನಿಮಾ ಹೈ-ವೋಲ್ಟೇಜ್ ಮ್ಯಾಜಿಕ್ ಸೃಷ್ಟಿಸಿದೆ. ಮ್ಯೂಸಿಕ್ ಮಾಂತ್ರಿಕ ಇಳಯರಾಜ ಅವರ ಸಾಂಗ್ಸ್ ಹಾಗೂ ಬಿಜಿಎಂ ಈ ಸಿನಿಮಾಗೆ ಮತ್ತೊಂದು ಹಂತದ ಜೀವ ತುಂಬಲಿದೆ. ಇದರೊಂದಿಗೆ ವದಂತಿ ಖ್ಯಾತಿಯ ಆಂಡ್ರ್ಯೂ ಲೂಯಿಸ್ ಕಥೆ-ಚಿತ್ರಕಥೆ ಬರೆದಿದ್ದರೆ, ಕ್ಯಾಮೆರಾ ಹಿಂದೆ ನಿರಾವ್ ಶಾ ಹಾಗೂ ಸಾಹಸ ನಿರ್ದೇಶನದಲ್ಲಿ ದಿಲೀಪ್ ಸುಬ್ರಾಯನ್ ಕೈಜೋಡಿಸಿ ಬಾಲಿವುಡ್ ರೇಂಜ್‌ನ ಗ್ರಾಂಡ್ ವಿಶುವಲ್ಸ್ ನೀಡಿದ್ದಾರೆ. ಟೈಲರ್ ಡರ್ಡನ್ ಆಂಡ್ ಕಿನೋ ಫಿಸ್ಟ್ ಬ್ಯಾನರ್ ಅಡಿಯಲ್ಲಿ ಸ್ವತಃ ತ್ಯಾಗರಾಜನ್ ಕುಮಾರರಾಜ ಮತ್ತು ಎಸ್.ಡಿ. ಎಝಿಲ್‌ಮತಿ ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಸದ್ಯ ಪಾಕೆಟ್ ನಾವೆಲ್ ಚಿತ್ರದ ಶೂಟಿಂಗ್ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರಾಟೆಯಿಂದ ಸಾಗುತ್ತಿವೆ. ರಾಜ್ ಬಿ. ಶೆಟ್ಟಿ ಅವರ ವಿಭಿನ್ನ ಶೈಲಿಯ ಅಭಿನಯ ಮತ್ತು ತ್ಯಾಗರಾಜನ್ ವೆಲ್ ಕ್ರಾಫ್ಟ್ ಮಾಡಿರುವ ಸ್ಟೋರಿ ಟೆಲ್ಲಿಂಗ್ ಒಟ್ಟಿಗೆ ಸೇರಿ ಬಾಕ್ಸಾಫೀಸ್‌ನಲ್ಲಿ ಯಾವ ಥರ ಸುನಾಮಿ ಎಬ್ಬಿಸಲಿದೆ ಎಂಬುದನ್ನು ನೋಡಲು ಫ್ಯಾನ್ಸ್ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ತಮಿಳುನಾಡು ಅಖಾಡದಲ್ಲಿ ನಮ್ಮ ಕರುನಾಡಿನ ಹೆಮ್ಮೆಯ ನಟನ ಪ್ರತಾಪ ಹೇಗಿರಲಿದೆ ಎಂಬುದು ಸದ್ಯ ಕಾಲಿವುಡ್‌ನ ಹಾಟ್ ಟಾಪಿಕ್ ಆಗಿದೆ
ಸದ್ಯ ಪಾಕೆಟ್ ನಾವೆಲ್ ಚಿತ್ರದ ಜೊತೆಗೆ ಶೆಟ್ರು ಸದ್ದಿಲ್ಲದೆ ತಮ್ಮದೇ ನಿರ್ದೇಶನದ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಕರಾವಳಿ ಕರ್ನಾಟಕದ ವಿಶಿಷ್ಟ ಹಿನ್ನೆಲೆಯಲ್ಲಿ ಮೂಡಿಬರುತ್ತಿರುವ ಗ್ರಿಟ್ಟಿ ಥ್ರಿಲ್ಲರ್ ಸಿನಿಮಾದ ಚಿತ್ರೀಕರಣ ಭರದಿಂದ ಸಾಗ್ತಿದ್ದು, ಈಗಾಗಲೇ ಮಂಗಳೂರಿನಲ್ಲಿ 30 ದಿನಗಳಿಗೂ ಅಧಿಕ ಕಾಲದ ಶೂಟಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ತಮಿಳು ಹಾಗೂ ಕನ್ನಡ ಎರಡರಲ್ಲೂ ಏಕಕಾಲಕ್ಕೆ ಶೂಟ್ ಮಾಡಲಾಗ್ತಿದೆಯಂತೆ. ಒಟ್ಟಿನಲ್ಲಿ, ವಿಜಯ್ ಸೇತುಪತಿ ಅಬ್ಬರ, ರಾಜ್ ಬಿ. ಶೆಟ್ಟಿ ರಗಡ್ ಎಂಟ್ರಿ ಹಾಗೂ ಇಳಯರಾಜ ಸಂಗೀತದ ಹದವಾದ ಮಿಶ್ರಣವಿರುವ ಪಾಕೆಟ್ ನಾವೆಲ್ ರಿಲೀಸ್ ಡೇಟ್ ಶೀಘ್ರದಲ್ಲೇ ಫೈನಲ್ ಆಗಲಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





