ಸ್ಯಾಂಡಲ್ವುಡ್ನ ನಟ, ನಿರ್ಮಾಪಕ ಡಾಲಿ ಧನಂಜಯ ಅಂದ್ರೇನೆ ಬಡವರ ಮಕ್ಕಳ ಪಾಲಿನ ಹೀರೋ. ತಮ್ಮ ಹೆಗ್ಗಣ ಮುದ್ದು ಸಿನಿಮಾ ಇತ್ತೀಚೆಗಷ್ಟೇ ತೆರೆಗೆ ಬಂದಿದ್ದರೂ, ಬಾಕ್ಸ್ ಆಫೀಸ್ನಲ್ಲಿ ಸಣ್ಣ ಸವಾಲು ಎದುರಾಗಿದ್ದು ನಿಜ. ಆದರೆ, ಅದೇ ದಿನ ರಿಲೀಸ್ ಆಗಿ ಗಿಟ್ಟಿಸಿಕೊಂಡ ಪ್ರೇಮದ ಊರಲ್ಲಿ ಸಿನಿಮಾಗೆ ಡಾಲಿ ನಿಂತು ಬೆನ್ತಟ್ಟಿರೋ ರೀತಿ ಇದೆಯಲ್ಲ… ದಿಸ್ ಈಸ್ ರಿಯಲ್ ಸ್ಪೋರ್ಟಿವ್. ತಮ್ಮ ಸಿನಿಮಾ ಸೋಲಲಿ-ಗೆಲ್ಲಲಿ, ಪಕ್ಕದ ಮನೆ ಸಿನಿಮಾಗೆ ಗೆಲುವಾಗಲಿ ಅಂತ ಹಾರೈಸುವ ಈ ದೊಡ್ಡ ಗುಣ, ಉದಾರತೆ ಪ್ರತಿಯೊಬ್ಬರಿಗೂ ಯಾಕಿಲ್ಲ ಅನ್ನೋ ಪ್ರಶ್ನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಅಷ್ಟಕ್ಕೂ ಡಾಲಿ ಧನಂಜಯ ಶೇರ್ ಮಾಡಿದ ಆ ಪೋಸ್ಟ್ನಲ್ಲೇನಿದೆ?
- ಬೆನ್ತಟ್ಟಿದ ಡಾಲಿ.. ಇವ್ರಿಗಿರೋ ಉದಾರತೆ ಎಲ್ರಿಗೂ ಯಾಕಿಲ್ಲ..?!
- ಪ್ರೇಮದ ಊರಲಿ ಗೆಲುವಿಗೆ ಡಾಲಿ ಧನಂಜಯ ಜೈಕಾರ
- ತಮ್ಮ ಸೋಲಿನ ನಡುವೆಯೂ.. ಇಂಡಸ್ಟ್ರಿ ಗೆಲ್ಲಲಿ ಅನ್ನೋ ಸ್ಟಾರ್
- ಪ್ರತಿ ಕನ್ನಡ ಸ್ಟಾರ್ ಗೂ ಈ ಸ್ಪೋರ್ಟಿವ್ ಬೇಕು.. ನೆಟ್ಟಿಗರ ಟಾಕ್..!!
ಸಾಮಾನ್ಯವಾಗಿ ಸ್ಯಾಂಡಲ್ವುಡ್ನಲ್ಲಿ ಒಂದೇ ದಿನ ಎರಡು ಸಿನಿಮಾಗಳು ರಿಲೀಸ್ ಆದರೆ ಬಾಕ್ಸ್ ಆಫೀಸ್ ಫೈಟ್ ಶುರುವಾಗುತ್ತದೆ. ಆದರೆ ಡಾಲಿ ಧನಂಜಯ ವಿಷಯದಲ್ಲಿ ಇದು ತದ್ವಿರುದ್ಧ. ತಮ್ಮ ಡಾಲಿ ಪಿಚ್ಚರ್ಸ್ ನಲ್ಲಿ ನಿರ್ಮಾಣದ ಹೆಗ್ಗಣ ಮುದ್ದು ಚಿತ್ರಕ್ಕೆ ಪ್ರೇಕ್ಷಕರಿಂದ ನಿರೀಕ್ಷಿತ ಮಟ್ಟದ ಪ್ರೀತಿ ಸಿಗದೇ ಹೋದರೂ, ಅದೇ ದಿನ ಬಿಡುಗಡೆಯಾದ ಪ್ರೇಮದ ಊರಲ್ಲಿ ಚಿತ್ರದ ಭರ್ಜರಿ ಸಕ್ಸಸ್ ನೋಡಿ ಡಾಲಿ ಮನಸ್ಪೂರ್ತಿಯಾಗಿ ಅಭಿನಂದಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರೇಮದ ಊರಲ್ಲಿ ಚಿತ್ರದ ಇಡೀ ತಂಡಕ್ಕೆ ಅಭಿನಂದನೆಗಳು. ಕನ್ನಡ ಚಿತ್ರರಂಗಕ್ಕೆ ತೀರಾ ಅಗತ್ಯವಿದ್ದ ಹಿಟ್ ಇದುಎಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ, ತಮ್ಮ ಸಹೋದ್ಯೋಗಿಗಳ ಗೆಲುವನ್ನು ಸಂಭ್ರಮಿಸಿದ್ದಾರೆ. ಈ ಉದಾರ ಮನಸ್ಸನ್ನು ಕಂಡ ಅಭಿಮಾನಿಗಳು ಧನಂಜಯ ಅಂದ್ರೆ ಬರೀ ಸ್ಟಾರ್ ಅಲ್ಲ, ಒಳ್ಳೆಯ ಮನಸ್ಸಿನ ಮನುಷ್ಯ ಎಂದು ಜೈಕಾರ ಕೂಗುತ್ತಿದ್ದಾರೆ.
ಸೆಪ್ಟೆಂಬರ್ 25ರಂದು ಬೆಳ್ಳಿಪರೆಗೆ ಅಪ್ಪಳಿಸಿದ ಪ್ರೇಮದ ಊರಲ್ಲಿ ಸಿನಿಮಾ, ಈಗ ಥಿಯೇಟರ್ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಮನೋಜ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ಈ ಸುಂದರ ಗ್ರಾಮೀಣ ಹಿನ್ನೆಲೆಯ ಕೌಟುಂಬಿಕ ಹಾಗೂ ಪ್ರೇಮಕಥಾ ಚಿತ್ರಕ್ಕೆ ಪ್ರೇಕ್ಷಕರಿಂದ ಬ್ಲಾಕ್ಬಸ್ಟರ್ ರೆಸ್ಪಾನ್ಸ್ ಸಿಗುತ್ತಿದೆ. ನಟ ರಂಗಾಯಣ ರಘು, ಶ್ರೀ ರಾಮ್, ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶ್ರೇಷ್ಠ ಅಭಿನಯದ ಈ ಚಿತ್ರಕ್ಕೆ ಬುಕ್ಮೈಶೋನಲ್ಲಿ 9.6 ರೇಟಿಂಗ್ಸ್ನೊಂದಿಗೆ ಕನ್ನಡಿಗರು ಭರ್ಜರಿ ಥಂಬ್ಸ್-ಅಪ್ ಕೊಟ್ಟಿದ್ದಾರೆ. ಸೂಪರ್ ಡೈರೆಕ್ಷನ್, ಅದ್ಭುತ ಮ್ಯೂಸಿಕ್ ಹಾಗೂ ಫ್ಯಾಮಿಲಿ ಜೊತೆ ಕೂತು ನೋಡೋ ಮಾಸ್ಟರ್ಪೀಸ್ ಅಂತ ಆಡಿಯನ್ಸ್ ಸೋಶಿಯಲ್ ಮೀಡಿಯಾದಲ್ಲಿ ಕೊಂಡಾಡುತ್ತಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಈಗಿರುವುದು ಇಂತಹ ಗೆಲುವಿನ ಅಗತ್ಯ. ಪ್ರೇಮದ ಊರಲ್ಲಿ ಸಿನಿಮಾದ ಸಕ್ಸಸ್ಗೆ ಸಾಥ್ ಕೊಟ್ಟು ಡಾಲಿ ತೋರಿದ ಈ ದೊಡ್ಡತನವನ್ನು ನೆಟ್ಟಿಗರು ನೆನೆದು ಬೆನ್ತಟ್ಟಿದ ಡಾಲಿ.. ಇವ್ರಿಗಿರೋ ಉದಾರತೆ ಎಲ್ರಿಗೂ ಯಾಕಿಲ್ಲ..? ಎಂದು ಅಭಿನಂದಿಸುತ್ತಿದ್ದಾರೆ. ತಾವೊಬ್ಬ ನಟನಾಗಿ, ನಿರ್ಮಾಪಕನಾಗಿ ಇಂಡಸ್ಟ್ರಿಯ ಪ್ರತಿಯೊಂದು ಸಿನಿಮಾವೂ ಗೆಲ್ಲಬೇಕು ಎಂದು ಬಯಸುವ ಧನಂಜಯ ಅವರ ಈ ನಿಲುವು ನಿಜಕ್ಕೂ ಪ್ರತಿಯೊಬ್ಬರಿಗೂ ಮಾದರಿ. ತಮ್ಮ ಬ್ಯಾನರ್ನ ಸೋಲು-ಗೆಲುವನ್ನು ಬದಿಗೊತ್ತಿ, ಸಹ-ಕಲಾವಿದರ ಗೆಲುವನ್ನು ತನ್ನದೇ ಗೆಲುವಂತೆ ಆಚರಿಸುವ ಡಾಲಿಯ ಈ ಹೆಜ್ಜೆ ಸ್ಯಾಂಡಲ್ವುಡ್ನಲ್ಲಿ ಒಗ್ಗಟ್ಟಿನ ಟ್ರ್ಯಾಕ್ ಓಪನ್ ಮಾಡ್ತಿದೆ.





