ಚಂದನವನದ ಗ್ಲಾಮರಸ್ ಬ್ಯೂಟಿಗಳು ಸಡನ್ ಆಗಿ ಶಕ್ತಿಪೀಠದ ಕಡೆ ಮುಖ ಮಾಡಿದ್ದಾರೆ. ಲವ್ ಮಾಕ್ಟೇಲ್ ಖ್ಯಾತಿಯ ಅಮೃತಾ ಅಯ್ಯಂಗಾರ್, ದಿಯಾ ಬೆಡಗಿ ಖುಷಿ ರವಿ ಹಾಗೂ ‘ಅಯ್ಯನ ಮನೆ’ ನಟಿ ಅರ್ಚನಾ ಕೊಟ್ಟಿಗೆ… ಈ ಮೂವರು ತಾರೆಯರು ಅಸ್ಸಾಂನ ಗುವಾಹಾಟಿ ಗಲ್ಲಿಗಳಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ದೈವಿ ಪ್ರವಾಸದ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ…
- ಶಕ್ತಿಪೀಠದತ್ತ ಸ್ಯಾಂಡಲ್ವುಡ್ ಬೆಡಗಿಯರು..!
- ಕಾಮಾಕ್ಯ ದೇವಿಯ ಸನ್ನಿಧಿಯಲ್ಲಿ ಅಮೃತಾ-ಖುಷಿ-ಅರ್ಚನಾ
- ಶೂಟಿಂಗ್ ಬ್ರೇಕ್..ಬಹುದಿನದ ಆಸೆ..ಕೊನೆಗೂ ಕಾಮಾಕ್ಯ ದರ್ಶನ
- ‘ತಾಯಿಯ ದೈವಿಕ ಕರೆ’ ಎಂದ ಅಮೃತಾ ಅಯ್ಯಂಗಾರ್..!
ಚಿತ್ರರಂಗದ ತಾರೆಯರಿಗೆ ಹಾಗೂ ರಾಜಕಾರಣಿಗಳಿಗೆ ಅಸ್ಸಾಂನ ಗುವಾಹಾಟಿ ಬಳಿ ಇರುವ ಕಾಮಾಕ್ಯ ದೇವಿ ದೇವಸ್ಥಾನ ಅಂದ್ರೆ ಅಪಾರ ನಂಬಿಕೆ. ದೈವಿಕ ಶಕ್ತಿ ಹಾಗೂ ಹೆಣ್ಣಿನ ಶಕ್ತಿಯ ಪ್ರತೀಕ ಎಂದೇ ಹೆಸರುವಾಸಿಯಾಗಿರುವ ಈ ಮಹಾ ಶಕ್ತಿಪೀಠಕ್ಕೆ ಈಗ ಸ್ಯಾಂಡಲ್ವುಡ್ನ ಹಾಟ್ ಅಂಡ್ ಟ್ಯಾಲೆಂಟ್ ಬೆಡಗಿಯರಾದ ಅಮೃತಾ ಅಯ್ಯಂಗಾರ್, ಖುಷಿ ರವಿ ಹಾಗೂ ಅರ್ಚನಾ ಕೊಟ್ಟಿಗೆ ಒಟ್ಟಾಗಿ ಭೇಟಿ ನೀಡಿದ್ದಾರೆ. ಬಿಡುವಿಲ್ಲದ ಶೂಟಿಂಗ್ ಶೆಡ್ಯೂಲ್ ನಡುವೆ ಈ ಮೂವರು ನಟಿಯರು ಕಾಮಾಕ್ಯ ದೇವಿಯ ದರ್ಶನ ಪಡೆದು ಧನ್ಯತೆ ಮೆರೆದಿದ್ದಾರೆ.
ಬಹಳ ದಿನಗಳಿಂದ ಕಾಮಾಕ್ಯ ದೇವಿಯ ದರ್ಶನ ಪಡೆಯಬೇಕು ಎಂಬುದು ಈ ಕರಾವಳಿ ಹಾಗೂ ಸ್ಯಾಂಡಲ್ವುಡ್ ಬೆಡಗಿಯರ ದೊಡ್ಡ ಕನಸಾಗಿತ್ತು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿಕೊಂಡಿದ್ದ ನಟಿಯರು, ತಕ್ಷಣವೇ ಪ್ಲಾನ್ ಮಾಡಿ ಅಸ್ಸಾಂಗೆ ಹಾರಿದ್ದಾರೆ. “ಇದು ಖಂಡಿತವಾಗಿಯೂ ತಾಯಿ ಕಾಮಾಕ್ಯಳ ದೈವಿಕ ಕರೆಯಾಗಿತ್ತು, ಕೊನೆಗೂ ನಮ್ಮ ಆಸೆ ಈಡೇರಿದೆ” ಎಂದು ನಟಿ ಅಮೃತಾ ಅಯ್ಯಂಗಾರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರೆ, ನಟಿ ಖುಷಿ ರವಿ “ಹೊಸ ಚೈತನ್ಯ ಮತ್ತು ಧನ್ಯತೆಯ ಭಾವನೆ ಮೂಡಿದೆ” ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕೇವಲ ಕಾಮಾಕ್ಯ ದೇವಿ ದೇವಸ್ಥಾನ ಮಾತ್ರವಲ್ಲದೆ, ಬ್ರಹ್ಮಪುತ್ರ ನದಿಯ ಮಧ್ಯದಲ್ಲಿರುವ ಪ್ರಸಿದ್ಧ ಉಮಾನಂದ ದ್ವೀಪದ ಶಿವ ದೇವಸ್ಥಾನಕ್ಕೂ ಈ ನಟಿಯರ ಗ್ಯಾಂಗ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ. ದೇವಸ್ಥಾನದ ಮುಂದೆ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿರುವ ಈ ತಾರೆಯರ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ನಟಿಯರ ಈ ದೈವಿಕ ಪಯಣಕ್ಕೆ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆ ಗೈಯುತ್ತಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





